ಭಾರತದಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟ ಸ್ಥಗಿತಕ್ಕೆ ನಿರ್ಧರಿಸಿದ ಫೋಕ್ಸ್‌ವ್ಯಾಗನ್

ಜರ್ಮನ್ ಕಾರು ಕಂಪನಿ ಫೋಕ್ಸ್‌ವ್ಯಾಗನ್ ತನ್ನ ಭವಿಷ್ಯದ ಯೋಜನೆಗಳಿಗಾಗಿ ಕಾರು ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಭಾರತದಲ್ಲಿನ ತನ್ನ ಪೊಲೊ ಹೊಸ ತಲೆಮಾರಿನ ಆವೃತ್ತಿಯನ್ನು ಬಿಡುಗಡೆ ಮಾಡದಿರಲು ನಿರ್ಧರಿಸಿದೆ.

ಭಾರತದಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟ ಸ್ಥಗಿತಕ್ಕೆ ನಿರ್ಧರಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಾರು ಮಾರಾಟ ಪಟ್ಟಿಯಲ್ಲಿ ಜಾಗತಿಕವಾಗಿ ಅಗ್ರಸ್ಥಾನದಲ್ಲಿರುವ ಪೊಲೊ ಹ್ಯಾಚ್‌ಬ್ಯಾಕ್ ಮಾದರಿಯು ಭಾರತದಲ್ಲೂ ಉತ್ತಮ ಬೇಡಿಕೆ ಹೊಂದಿದ್ದರೂ ಪ್ರತಿಸ್ಪರ್ಧಿ ಮಾದರಿಗಳ ಅಬ್ಬರದ ನಡುವೆ ಇತ್ತೀಚೆಗೆ ಬೇಡಿಕೆಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಹೊಸ ತಲೆಮಾರಿನ ಪೊಲೊ ಮಾದರಿಯನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದರೂ ಭಾರತದಲ್ಲಿ ಸದ್ಯಕ್ಕೆ ಹಳೆಯ ಮಾದರಿಯನ್ನೇ ಮಾರಾಟ ಮಾಡುತ್ತಿದೆ.

ಭಾರತದಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟ ಸ್ಥಗಿತಕ್ಕೆ ನಿರ್ಧರಿಸಿದ ಫೋಕ್ಸ್‌ವ್ಯಾಗನ್

2010ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಪೊಲೊ ಹ್ಯಾಚ್‌ಬ್ಯಾಕ್ ಮಾದರಿಯು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸದ್ಯ 6ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಭಾರತದಲ್ಲಿ ಸದ್ಯ ಪೊಲೊ ಕಾರು 5ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳುತ್ತಿದೆ.

ಭಾರತದಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟ ಸ್ಥಗಿತಕ್ಕೆ ನಿರ್ಧರಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಳೆದ ವರ್ಷವೇ ಪೊಲೊ ಹೊಸ ತಲೆಮಾರಿನ ಆವೃತ್ತಿಯನ್ನು ಉನ್ನತೀಕರಿಸಿದ್ದರೂ ಭಾರತದಲ್ಲಿ ಮಾತ್ರ ಹಳೆಯ ಆವೃತ್ತಿಯ ಮಾರಾಟವನ್ನೇ ಮುಂದುವರಿಸಿದ್ದು, ಹೊಸ ತಲೆಮಾರಿನ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡದಿರಲು ನಿರ್ಧರಿಸಿದೆ.

ಭಾರತದಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟ ಸ್ಥಗಿತಕ್ಕೆ ನಿರ್ಧರಿಸಿದ ಫೋಕ್ಸ್‌ವ್ಯಾಗನ್

ವರದಿಗಳ ಪ್ರಕಾರ ಪೊಲೊ ಕಾರು ಭಾರತದಲ್ಲಿ ಮುಂದಿನ ಏಪ್ರಿಲ್ ಅಥವಾ ಮೇ ಹೊತ್ತಿಗೆ ಅಧಿಕೃತವಾಗಿ ಉತ್ಪಾದನೆ ಸ್ಥಗಿತಗೊಳ್ಳುವ ಸಾಧ್ಯತೆಗಳಿದ್ದು, ಕಂಪನಿಯು ಭಾರತದಲ್ಲಿ ಎಸ್‌ಯುವಿ ಮತ್ತು ಸೆಡಾನ್ ಮಾದರಿಗಳ ಮೇಲೆ ಹೆಚ್ಚಿನ ಗಮನಹರಿಸಲು ನಿರ್ಧರಿಸಿದೆ.

ಭಾರತದಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟ ಸ್ಥಗಿತಕ್ಕೆ ನಿರ್ಧರಿಸಿದ ಫೋಕ್ಸ್‌ವ್ಯಾಗನ್

ಭಾರತದಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಸ್ಥಗಿತದ ಕುರಿತಾಗಿ ಕಂಪನಿಯೇ ಮಾಹಿತಿ ನೀಡಿದ್ದು, ಹೊಸ ತಲೆಮಾರಿನ ಬಿಡುಗಡೆಯು ಭಾರತದಲ್ಲಿ ಹೆಚ್ಚಿನ ಮಟ್ಟದ ಬೆಲೆ ಪಡೆದುಕೊಳ್ಳುವ ಕಾರಣಕ್ಕೆ ಕಂಪನಿಯು ಹೊಸ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಿಂದ ಹಿಂದೆ ಸರಿದಿದೆ.

ಭಾರತದಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟ ಸ್ಥಗಿತಕ್ಕೆ ನಿರ್ಧರಿಸಿದ ಫೋಕ್ಸ್‌ವ್ಯಾಗನ್

ಪ್ರತಿಸ್ಪರ್ಧಿ ಮಾದರಿಗಳಿಗೆ ಅನುಗುಣವಾಗಿ ಫೀಚರ್ಸ್, ಎಂಜಿನ್ ಆಯ್ಕೆಯೊಂದಿಗೆ ಸ್ಥಳೀಯಕರಣ ಮಾಡಿದರೂ ಹೊಸ ತಲೆಮಾರಿನ ಮಾದರಿಯೂ ದುಬಾರಿಯಾಗುತ್ತಿರುವ ಕಾರಣಕ್ಕೆ ಹೊಸ ಕಾರು ಬಿಡುಗಡೆ ಮಾಡಲಾಗುತ್ತಿಲ್ಲ ಎನ್ನಲಾಗಿದೆ.

ಭಾರತದಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟ ಸ್ಥಗಿತಕ್ಕೆ ನಿರ್ಧರಿಸಿದ ಫೋಕ್ಸ್‌ವ್ಯಾಗನ್

ಪೊಲೊ ಮಾದರಿಯು ಸದ್ಯ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಇದರಲ್ಲಿ 1.0-ಲೀಟರ್ ಎಂಪಿಐ ನ್ಯಾಚುರಲಿ ಆಸ್ಪೆರೆಟೆಡ್ ಮತ್ತು ಹೆಚ್ಚು ಶಕ್ತಿಶಾಲಿಯುಳ್ಳ 1.0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ.

ಭಾರತದಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟ ಸ್ಥಗಿತಕ್ಕೆ ನಿರ್ಧರಿಸಿದ ಫೋಕ್ಸ್‌ವ್ಯಾಗನ್

ಆರಂಭಿಕ ಪೊಲೊ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 74 ಬಿಎಚ್‌ಪಿ ಮತ್ತು 95 ಎನ್ಎಂ ಟಾರ್ಕ್ ಅನ್ನು ಉತ್ಪಾದನಾ ಗುಣಹೊಂದಿದ್ದರೆ ಎರಡನೆಯ ಎಂಜಿನ್ ಮಾದರಿಯಾದ ಟರ್ಬೊ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್‌ನೊಂದಿಗೆ 109 ಬಿಎಚ್‌ಪಿ ಮತ್ತು 174 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟ ಸ್ಥಗಿತಕ್ಕೆ ನಿರ್ಧರಿಸಿದ ಫೋಕ್ಸ್‌ವ್ಯಾಗನ್

ಪೊಲೊ ಮಾದರಿಯು ಟ್ರೆಂಡ್‌ಲೈನ್, ಕಂಫರ್ಟ್‌ಲೈನ್, ಹೈಲೈನ್ ಪ್ಲಸ್ ಮತ್ತು ಜಿಟಿ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.45 ಲಕ್ಷದಿಂದ ಟಾಪ್ ಎಂಡ್ ಮಾದರಿಯು 10.25 ಲಕ್ಷಕ್ಕೆ ಮಾರಾಟಗೊಳ್ಳುತ್ತಿದ್ದು, ಮಾರುತಿ ಬಲೆನೊ, ಹುಂಡೈ ಐ20, ಟಾಟಾ ಅಲ್‌ಟ್ರೊಜ್ ಮತ್ತು ಹೋಂಡಾ ಜಾಝ್ ಸೇರಿದಂತೆ ಇತರೆ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ಭಾರತದಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟ ಸ್ಥಗಿತಕ್ಕೆ ನಿರ್ಧರಿಸಿದ ಫೋಕ್ಸ್‌ವ್ಯಾಗನ್

ಆದರೆ ಹೊಸ ತಲೆಮಾರಿನ ಪೊಲೊ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದರೆ ಪ್ರಸ್ತುತ ಮಾದರಿಗಿಂತಲೂ ರೂ. 1.50 ಲಕ್ಷದಿಂದ ರೂ.2 ಲಕ್ಷದಷ್ಟು ದುಬಾರಿಯಾಗಬಹುದಾಗಿದ್ದೂ, ಪ್ರತಿಸ್ಪರ್ಧಿ ಮಾದರಿಗಿಂತೂ ಹೆಚ್ಚಿನ ದರ ಹೊಂದಿದರೆ ಸಹಜವಾಗಿ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಭಾರತದಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟ ಸ್ಥಗಿತಕ್ಕೆ ನಿರ್ಧರಿಸಿದ ಫೋಕ್ಸ್‌ವ್ಯಾಗನ್

ಹೀಗಾಗಿ ಮುಂದಿನ ಕೆಲ ದಿನಗಳ ವರೆಗೆ ಹಳೆಯ ತಲೆಮಾರಿನ ಪೊಲೊ ಮಾದರಿಯನ್ನೇ ಮಾರಾಟ ಮಾಡಿ ಸ್ಥಗಿತಗೊಳಿಸಲು ನಿರ್ಧರಿಸಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಪೊಲೊ ಮಾದರಿಯನ್ನು ಆಧರಿಸಿರುವ ವೆಂಟೊ ಮಾದರಿಯನ್ನು ಸಹ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿದೆ.

ಭಾರತದಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟ ಸ್ಥಗಿತಕ್ಕೆ ನಿರ್ಧರಿಸಿದ ಫೋಕ್ಸ್‌ವ್ಯಾಗನ್

ವೆಂಟೊ ಬದಲಾಗಿ ಭಾರತದಲ್ಲಿ ಸ್ಕೋಡಾ ಜೊತೆಗೂಡಿ ಹೊಸ ಸೆಡಾನ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ವೆಂಟೊ ಬದಲಾಗಿ ವಿರ್ಟಸ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ವಿರ್ಟಸ್ ಮಾದರಿಯು ಸ್ಕೋಡಾ ಕಂಪನಿಯು ಹೊಸದಾಗಿ ಬಿಡುಗಡೆ ಮಾಡುತ್ತಿರುವ ಸ್ಲಾವಿಯಾ ಮಾದರಿಯನ್ನು ಆಧರಿಸಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಎರಡು ಕಾರು ತಾಂತ್ರಿಕವಾಗಿ ಒಂದೇ ಆಗಿದ್ದರೂ ಬ್ರಾಂಡ್‌ಗೆ ಅನುಗುಣವಾಗಿ ಬದಲಿ ಹೆಸರಿನೊಂದಿಗೆ ಕೆಲವು ಹೊಸ ವಿನ್ಯಾಸಗಳನ್ನು ಪಡೆದುಕೊಳ್ಳಲಿವೆ.

ಭಾರತದಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟ ಸ್ಥಗಿತಕ್ಕೆ ನಿರ್ಧರಿಸಿದ ಫೋಕ್ಸ್‌ವ್ಯಾಗನ್

ಭಾರತದಲ್ಲಿ ಹೊಸ ಯೋಜನೆ ಅಡಿ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಗಳು ಒಟ್ಟು ನಾಲ್ಕು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದ್ದು, ಹೊಸ ಯೋಜನೆ ಅಡಿ ಈಗಾಗಲೇ ಸ್ಕೋಡಾ ಕುಶಾಕ್ ಮಾದರಿಯನ್ನು ಮತ್ತು ಫೋಕ್ಸ್‌ವ್ಯಾಗನ್ ಕಂಪನಿಯು ಟೈಗುನ್ ಕಂಪ್ಯಾಕ್ಟ್ ಎಸ್‍ಯುವಿ ಬಿಡುಗಡೆ ಮಾಡಿವೆ.

ಭಾರತದಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟ ಸ್ಥಗಿತಕ್ಕೆ ನಿರ್ಧರಿಸಿದ ಫೋಕ್ಸ್‌ವ್ಯಾಗನ್

ಇದೀಗ ಮೂರನೇ ಕಾರು ಮಾದರಿಯಾಗಿ ಸ್ಕೋಡಾ ಸ್ಲಾವಿಯಾ ಬಿಡುಗಡೆ ಮಾಡುತ್ತಿದ್ದರೆ ಸ್ಲಾವಿಯಾ ಬಿಡುಗಡೆ ನಂತರ ನಾಲ್ಕನೇ ಕಾರು ಮಾದರಿಯಾಗಿ ಫೋಕ್ಸ್‌ವ್ಯಾಗನ್ ವಿರ್ಟಸ್ ಸೆಡಾನ್ ಬಿಡುಗಡೆಯಾಗಲಿದೆ. ಒಟ್ಟಿನಲ್ಲಿ ಲಾಭದಾಯಕ ಯೋಜನೆಗಾಗಿ ಹೊಸ ಕಾರು ಮಾದರಿಗಳತ್ತ ಗಮನಹರಿಸುತ್ತಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿ ನಿರ್ಮಾಣಗೊಳ್ಳಲಿರುವ ಮುಂಬರುವ ಹೊಸ ಕಾರುಗಳು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಗಳಿವೆ.

More from DriveSpark

Article Published On: Saturday, February 26, 2022, 21:25 [IST]
English summary
Volkswagen confirms new gen polo will not launch in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+