ದೇಶಿಯ ಮಾರುಕಟ್ಟೆಯಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟಕ್ಕೆ ಗುಡ್‌ಬೈ ಹೇಳಿದ ಫೋಕ್ಸ್‌ವ್ಯಾಗನ್

ಜರ್ಮನ್ ಕಾರು ತಯಾರಿಕ ಕಂಪನಿ ಫೋಕ್ಸ್‌ವ್ಯಾಗನ್ ತನ್ನ ಭವಿಷ್ಯದ ಯೋಜನೆಗಳಿಗಾಗಿ ಕಾರು ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಭಾರತದಲ್ಲಿ ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಮಾದರಿಯಾದ ಪೊಲೊ ಆವೃತ್ತಿಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟಕ್ಕೆ ಗುಡ್‌ಬೈ ಹೇಳಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಾರು ಮಾರಾಟ ಪಟ್ಟಿಯಲ್ಲಿ ಜಾಗತಿಕವಾಗಿ ಅಗ್ರಸ್ಥಾನದಲ್ಲಿರುವ ಪೊಲೊ ಹ್ಯಾಚ್‌ಬ್ಯಾಕ್ ಮಾದರಿಯು ಭಾರತದಲ್ಲೂ ಉತ್ತಮ ಬೇಡಿಕೆ ಹೊಂದಿದ್ದರೂ ಪ್ರತಿಸ್ಪರ್ಧಿ ಮಾದರಿಗಳ ಅಬ್ಬರದ ನಡುವೆ ಇತ್ತೀಚೆಗೆ ಬೇಡಿಕೆಯಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಹೀಗಾಗಿ ಪೊಲೊ 2022ರ ಮಾದರಿಯನ್ನು ಬಿಡುಗಡೆ ಮಾಡದೆ ಅಧಿಕೃತವಾಗಿ ಭಾರತದಲ್ಲಿ ಸ್ಥಗಿತಗೊಳಿಸಿರುವ ಬಗೆಗೆ ಮಾಹಿತಿ ಹಂಚಿಕೊಂಡಿದ್ದು, ಪೊಲೊ ಸ್ಥಗಿತಗೊಳಿಸಿರುವ ಬಗೆಗೆ ತನ್ನ ಗ್ರಾಹಕರಿಗೆ ಭಾವನಾತ್ಮಕ ಪತ್ರ ಬರೆದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟಕ್ಕೆ ಗುಡ್‌ಬೈ ಹೇಳಿದ ಫೋಕ್ಸ್‌ವ್ಯಾಗನ್

ಭಾರತದಲ್ಲಿ ಪೊಲೊ ಮಾದರಿಯನ್ನು ಬಿಡುಗಡೆ ಮಾಡಿ 12 ವರ್ಷಗಳ ಯಶಸ್ವಿ ಪ್ರಯಾಣದ ಬಗೆಗೆ ಹೆಮ್ಮೆ ವ್ಯಕ್ತಪಡಿಸಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಭಾರತೀಯ ಗ್ರಾಹಕರಿಗೆ ಧನ್ಯವಾದಗಳನ್ನು ತಿಳಿಸಿದ್ದು, ಸದ್ಯ ಸ್ಟಾಕ್ ಲಭ್ಯವಿರುವ ತನಕ ಮಾತ್ರವೇ ಖರೀದಿಗೆ ಅವಕಾಶ ನೀಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟಕ್ಕೆ ಗುಡ್‌ಬೈ ಹೇಳಿದ ಫೋಕ್ಸ್‌ವ್ಯಾಗನ್

ಸ್ಟಾಕ್ ಮುಕ್ತಾಯದ ನಂತರ ಪೊಲೊ ಮಾರಾಟ ಮುಕ್ತಾಯಗೊಳ್ಳಲಿದ್ದು, ಪೊಲೊ ಸ್ಥಗಿತಗೊಳಿಸುವುದಕ್ಕೂ ಮುನ್ನ ಕಂಪನಿಯು ಲೆಜೆಂಡ್ ಎಡಿಷನ್ ಬಿಡುಗಡೆ ಮಾಡಿದೆ. ಪೊಲೊ ಲೆಜೆಂಡ್ ವಿಶೇಷ ಮಾದರಿಯನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಸೀಮಿತ ಅವಧಿಗಾಗಿ ಕೇವಲ 700 ಯುನಿಟ್ ಮಾತ್ರ ಉತ್ಪಾದನೆ ಮಾಡಲು ನಿರ್ಧರಿಸಿದೆ. ಹೀಗಾಗಿ ನಿಗದಿತ ಪ್ರಮಾಣದ ಕಾರು ಮಾರಾಟದ ನಂತರ ಲೆಜೆಂಡ್ ಎಡಿಷನ್ ಮಾರಾಟವು ಅಧಿಕೃತವಾಗಿ ಮುಕ್ತಾಯಗೊಳ್ಳಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟಕ್ಕೆ ಗುಡ್‌ಬೈ ಹೇಳಿದ ಫೋಕ್ಸ್‌ವ್ಯಾಗನ್

ಹೊಸ ಪೊಲೊ ಲೆಜೆಂಡ್ ಮಾದರಿಯು ಜಿಟಿ ಟಿಎಸ್ಐ ಟಾಪ್ ಎಂಡ್ ಮಾದರಿಯನ್ನು ಆಧರಿಸಿ ಬಿಡುಗಡೆಗೊಂಡಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10.25 ಲಕ್ಷ ಬೆಲೆ ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟಕ್ಕೆ ಗುಡ್‌ಬೈ ಹೇಳಿದ ಫೋಕ್ಸ್‌ವ್ಯಾಗನ್

ಪೊಲೊ ಲೆಜೆಂಡ್ ಮಾದರಿಯಲ್ಲಿ ಕಂಪನಿಯು ಕೆಲವು ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ನೀಡಿದ್ದು, ಕಾರಿನ ಫೆಂಡರ್ ಮತ್ತು ಹಿಂಬದಿಯಲ್ಲಿ ಲೆಜೆಂಡ್ ಬೂಟ್ ಬ್ಯಾಜ್ಡ್ ಹೊಂದಿದೆ. ಹಾಗೆಯೇ ಹೊಸ ಮಾದರಿಯಲ್ಲಿ ಸೈಡ್ ಬಾಡಿ ಗ್ರಾಫಿಕ್ಸ್, ಬ್ಲ್ಯಾಕ್ ಟ್ರಂಕ್ ಗಾರ್ನಿಶ್, ಬ್ಲ್ಯಾಕ್ ರೂಫ್ ಫಾಯ್ಲ್ ಸೌಲಭ್ಯಗಳು ಮತ್ತಷ್ಟು ಸ್ಪೋರ್ಟಿ ಲುಕ್ ನೀಡಿದ್ದು, ದೇಶಾದ್ಯಂತ ಕಾರ್ಯನಿರ್ವಹಣೆಯಲ್ಲಿ 151 ಫೋಕ್ಸ್‌ವ್ಯಾಗನ್ ಡೀಲರ್ಸ್‌ಗಳಲ್ಲೂ ಹೊಸ ಕಾರು ಖರೀದಿಗೆ ಲಭ್ಯವಿದೆ.

ದೇಶಿಯ ಮಾರುಕಟ್ಟೆಯಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟಕ್ಕೆ ಗುಡ್‌ಬೈ ಹೇಳಿದ ಫೋಕ್ಸ್‌ವ್ಯಾಗನ್

ಇನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಪೊಲೊ ಹ್ಯಾಚ್‌ಬ್ಯಾಕ್ ಮಾದರಿಯೊಂದಿಗೆ ಜಾಗತಿಕವಾಗಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಭಾರತದಲ್ಲೂ ಉತ್ತಮ ಬೇಡಿಕೆ ಹೊಂದಿರುವ ಪೊಲೊ ಕಾರು ಇತ್ತೀಚೆಗೆ ಪ್ರತಿಸ್ಪರ್ಧಿ ಮಾದರಿಗಳ ಅಬ್ಬರದ ನಡುವೆ ಬೇಡಿಕೆಯಲ್ಲಿ ಹಿನ್ನಡೆ ಅನುಭವಿಸುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟಕ್ಕೆ ಗುಡ್‌ಬೈ ಹೇಳಿದ ಫೋಕ್ಸ್‌ವ್ಯಾಗನ್

ಈ ನಡುವೆ ಪೊಲೊ ಹೊಸ ತಲೆಮಾರಿನ ಮಾದರಿಯನ್ನು ಫೋಕ್ಸ್‌ವ್ಯಾಗನ್ ಕಂಪನಿಯು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದರೂ ಭಾರತದಲ್ಲಿ ಸದ್ಯಕ್ಕೆ ಹಳೆಯ ಮಾದರಿಯನ್ನೇ ಮಾರಾಟ ಮಾಡುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟಕ್ಕೆ ಗುಡ್‌ಬೈ ಹೇಳಿದ ಫೋಕ್ಸ್‌ವ್ಯಾಗನ್

2010ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಗೊಂಡಿದ್ದ ಪೊಲೊ ಹ್ಯಾಚ್‌ಬ್ಯಾಕ್ ಮಾದರಿಯು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸದ್ಯ 6ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಭಾರತದಲ್ಲಿ ಸದ್ಯ ಪೊಲೊ ಕಾರು 5ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟಕ್ಕೆ ಗುಡ್‌ಬೈ ಹೇಳಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಳೆದ ವರ್ಷವೇ ಪೊಲೊ ಹೊಸ ತಲೆಮಾರಿನ ಆವೃತ್ತಿಯನ್ನು ಉನ್ನತೀಕರಿಸಿದ್ದರೂ ಭಾರತದಲ್ಲಿ ಮಾತ್ರ ಹಳೆಯ ಆವೃತ್ತಿ ಲಭ್ಯವಿದ್ದು, ಮುಂಬರುವ ಜೂನ್ ಹೊತ್ತಿಗೆ ಪೊಲೊ ಕಾರುಗಳ ಮಾರಾಟ ಪೂರ್ಣವಾಗಿ ಮಕ್ತಾಯಗೊಳ್ಳಬಹುದಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟಕ್ಕೆ ಗುಡ್‌ಬೈ ಹೇಳಿದ ಫೋಕ್ಸ್‌ವ್ಯಾಗನ್

ಇದಕ್ಕೂ ಮುನ್ನ ಕಂಪನಿಯು ಲೆಜೆಂಡ್ ಎಡಿಷನ್ ಮೂಲಕ ಪೊಲೊ ಖರೀದಿಗಾಗಿ ಕೊನೆಯ ಅವಕಾಶ ನೀಡಿದ್ದು, ಬದಲಾಗುತ್ತಿರುವ ಮಾರುಕಟ್ಟೆ ಬೇಡಿಕೆ ಆಧರಿಸಿ ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ಎಸ್‌ಯುವಿ ಮತ್ತು ಸೆಡಾನ್ ಮಾದರಿಗಳ ಮೇಲೆ ಹೆಚ್ಚಿನ ಗಮನಹರಿಸಲು ನಿರ್ಧರಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟಕ್ಕೆ ಗುಡ್‌ಬೈ ಹೇಳಿದ ಫೋಕ್ಸ್‌ವ್ಯಾಗನ್

ಪ್ರತಿಸ್ಪರ್ಧಿ ಮಾದರಿಗಳಿಗೆ ಅನುಗುಣವಾಗಿ ಫೀಚರ್ಸ್, ಎಂಜಿನ್ ಆಯ್ಕೆಯೊಂದಿಗೆ ಸ್ಥಳೀಯಕರಣ ಮಾಡಿದರೂ ಸಹ ಹೊಸ ತಲೆಮಾರಿನ ಪೊಲೊ ಮಾದರಿಯೂ ದುಬಾರಿಯಾಗುತ್ತಿರುವ ಕಾರಣಕ್ಕೆ ಹೊಸ ಕಾರು ಬಿಡುಗಡೆ ಮಾಡಲಾಗುತ್ತಿಲ್ಲ ಎನ್ನಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟಕ್ಕೆ ಗುಡ್‌ಬೈ ಹೇಳಿದ ಫೋಕ್ಸ್‌ವ್ಯಾಗನ್

ಪೊಲೊ ಮಾದರಿಯು ಸದ್ಯ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಇದರಲ್ಲಿ 1.0-ಲೀಟರ್ ಎಂಪಿಐ ನ್ಯಾಚುರಲಿ ಆಸ್ಪೆರೆಟೆಡ್ ಮತ್ತು ಹೆಚ್ಚು ಶಕ್ತಿಶಾಲಿಯುಳ್ಳ 1.0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟಕ್ಕೆ ಗುಡ್‌ಬೈ ಹೇಳಿದ ಫೋಕ್ಸ್‌ವ್ಯಾಗನ್

ಆರಂಭಿಕ ಪೊಲೊ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 74 ಬಿಎಚ್‌ಪಿ ಮತ್ತು 95 ಎನ್ಎಂ ಟಾರ್ಕ್ ಅನ್ನು ಉತ್ಪಾದನಾ ಗುಣಹೊಂದಿದ್ದರೆ ಎರಡನೆಯ ಎಂಜಿನ್ ಮಾದರಿಯಾದ ಟರ್ಬೊ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್‌ನೊಂದಿಗೆ 109 ಬಿಎಚ್‌ಪಿ ಮತ್ತು 174 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟಕ್ಕೆ ಗುಡ್‌ಬೈ ಹೇಳಿದ ಫೋಕ್ಸ್‌ವ್ಯಾಗನ್

ಪೊಲೊ ಮಾದರಿಯು ಟ್ರೆಂಡ್‌ಲೈನ್, ಕಂಫರ್ಟ್‌ಲೈನ್, ಹೈಲೈನ್ ಪ್ಲಸ್ ಮತ್ತು ಜಿಟಿ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.45 ಲಕ್ಷದಿಂದ ಟಾಪ್ ಎಂಡ್ ಮಾದರಿಯು 10.25 ಲಕ್ಷಕ್ಕೆ ಮಾರಾಟಗೊಳ್ಳುತ್ತಿದ್ದು, ಮಾರುತಿ ಬಲೆನೊ, ಹುಂಡೈ ಐ20, ಟಾಟಾ ಅಲ್‌ಟ್ರೊಜ್ ಮತ್ತು ಹೋಂಡಾ ಜಾಝ್ ಸೇರಿದಂತೆ ಇತರೆ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟಕ್ಕೆ ಗುಡ್‌ಬೈ ಹೇಳಿದ ಫೋಕ್ಸ್‌ವ್ಯಾಗನ್

ಆದರೆ ಹೊಸ ತಲೆಮಾರಿನ ಪೊಲೊ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದರೆ ಪ್ರಸ್ತುತ ಮಾದರಿಗಿಂತಲೂ ರೂ. 1.50 ಲಕ್ಷದಿಂದ ರೂ.2 ಲಕ್ಷದಷ್ಟು ದುಬಾರಿಯಾಗಬಹುದಾಗಿದ್ದೂ, ಪ್ರತಿಸ್ಪರ್ಧಿ ಮಾದರಿಗಿಂತೂ ಹೆಚ್ಚಿನ ದರ ಹೊಂದಿದರೆ ಸಹಜವಾಗಿ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಪೊಲೊ ಹ್ಯಾಚ್‌ಬ್ಯಾಕ್ ಮಾರಾಟಕ್ಕೆ ಗುಡ್‌ಬೈ ಹೇಳಿದ ಫೋಕ್ಸ್‌ವ್ಯಾಗನ್

ಹೀಗಾಗಿ ಮುಂದಿನ ಕೆಲ ದಿನಗಳ ವರೆಗೆ ಹಳೆಯ ತಲೆಮಾರಿನ ಪೊಲೊ ಮಾದರಿಯನ್ನು ಸ್ಟಾಕ್ ಮುಕ್ತಾಯದ ತನಕ ಮಾರಾಟ ಮಾಡಿ ಸ್ಥಗಿತಗೊಳಿಸಲು ನಿರ್ಧರಿಸಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಪೊಲೊ ಜೊತೆಗೆ ವೆಂಟೊ ಮಾದರಿಯನ್ನು ಸಹ ಉತ್ಪಾದನೆಯಿಂದ ಸ್ಥಗಿತಗೊಳಿಸುತ್ತಿದೆ.

Most Read Articles

Kannada
English summary
Volkswagen polo hatchback says good bye to india details
Story first published: Friday, April 8, 2022, 20:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X