ಭಾರತದಲ್ಲಿ ಮಾನ್ಸೂನ್ ಕಾರು ಸೇವಾ ಶಿಬಿರವನ್ನು ಪ್ರಾರಂಭಿಸಿದ ಫೋಕ್ಸ್‌ವ್ಯಾಗನ್
ಫೋಕ್ಸ್‌ವ್ಯಾಗನ್ ಕಂಪನಿಯು ಭಾರತದಲ್ಲಿ ಮಾನ್ಸೂನ್ ಕಾರು ಸೇವಾ ಶಿಬಿರವನ್ನು ಆರಂಭಿಸಿದ್ದು, ಹೊಸ ಸೇವಾ ಅಭಿಯಾನದಡಿಯಲ್ಲಿ ಕಂಪನಿಯು ಭಾರತದಾದ್ಯಂತ ತನ್ನ 120 ಸೇವಾ ಮಳಿಗೆಗಳಲ್ಲಿ ವಾರ್ಷಿಕ ಅಭಿಯಾನಕ್ಕೆ ಚಾಲನೆ ನೀಡಿದೆ.

ಫೋಕ್ಸ್‌ವ್ಯಾಗನ್ ಮಾನ್ಸೂನ್ ಸೇವಾ ಅಭಿಯಾನದಲ್ಲಿ ವಿಸ್ತೃತ ವಾರಂಟಿ, ಉತ್ಪನ್ನಗಳ ಮೌಲ್ಯ ಪ್ಯಾಕೇಜ್ ಮತ್ತು ಕಾರಿನ ಮೌಲ್ಯವರ್ಧಿತ ಸೇವಾ ಪ್ಯಾಕೇಜ್‌ಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ಒಳಗೊಂಡಿದ್ದು, ಇದರ ಜೊತೆಗೆ ಕಂಪನಿಯು ಸ್ಟ್ಯಾಂಡರ್ಡ್ ವಾರಂಟಿ ಹೊರತುಪಡಿಸಿ 3, 4 ಮತ್ತು 5 ವರ್ಷಗಳ ವ್ಯಾಪ್ತಿಯನ್ನು ನೀಡುವ ಹೊಸ ರಸ್ತೆಬದಿಯ ಅಸಿಸ್ಟ್ ಪ್ಯಾಕೇಜ್‌ಗಳನ್ನು ಸಹ ಪರಿಚಯಿಸಿದೆ.

ಫೋಕ್ಸ್‌ವ್ಯಾಗನ್ ಪೋಲೊ ಹ್ಯಾಚ್‌ಬ್ಯಾಕ್‌ಗಾಗಿ ಎರಡು ಹೊಸ ಸೇವಾ ಮೌಲ್ಯದ ಪ್ಯಾಕೇಜ್‌ಗಳನ್ನು ನೀಡಲಾಗುತ್ತಿದ್ದು, ಗ್ರಾಹಕರು ಕಾರಿನ ಬಾಡಿ ಮತ್ತು ಪೇಂಟ್ ಮೌಲ್ಯದ ಪ್ಯಾಕೇಜ್‌ಗಳನ್ನು ಪಡೆದುಕೊಳ್ಳಬಹುದು.

ಜೊತೆಗೆ ಹೊಸ ಉಪಕ್ರಮದ ಭಾಗವಾಗಿ ಫೋಕ್ಸ್‌ವ್ಯಾಗನ್‌ನ ಸೇವಾ ಶಿಬಿರಗಳಲ್ಲಿ ಪ್ರತಿ ಕಾರು ಮಾದರಿಯಲ್ಲೂ 40-ಪಾಯಿಂಟ್ ಕಾಂಪ್ಲಿಮೆಂಟರಿ ತಪಾಸಣಾ ಸೇವೆಯನ್ನು ನೀಡಲಿದ್ದು, ಈ ಸೇವೆಯು ಕಾರಿನ ಯಾವುದೇ ದುರಸ್ತಿ, ನಿರ್ವಹಣೆ ಮತ್ತು ಸೇವಾ ಅವಶ್ಯಕತೆಗಳಿಗಾಗಿ ಪರಿಶೀಲಿಸುತ್ತದೆ.

ಫೋಕ್ಸ್‌ವ್ಯಾಗನ್ ಗ್ರಾಹಕರಿಗೆ ಕಾರಿನಲ್ಲಿರುವ ದೋಷಗಳ ಬಗ್ಗೆ ಪಾರದರ್ಶಕ ಮಾಹಿತಿಯನ್ನು ಒದಗಿಸುವುದನ್ನು ಇದು ಖಚಿತಪಡಿಸಲಿದ್ದು, ಅದನ್ನು ಸರಿಪಡಿಸಿದ ನಂತರವೇ ಕಾರನ್ನು ಪೂರ್ಣ ಚಾಲನೆಯಲ್ಲಿರುವ ಸ್ಥಿತಿಯಲ್ಲಿ ಹಸ್ತಾಂತರಿಸಲಾಗುತ್ತದೆ.

ಭಾರತದಾದ್ಯಂತ ತನ್ನ 120 ಸೇವಾ ಮಳಿಗೆಗಳಲ್ಲಿ ವಾರ್ಷಿಕ ಕಾರ್ ಸೇವಾ ಅಭಿಯಾನವನ್ನು ನಡೆಸುತ್ತಿರುವ ಫೋಕ್ಸ್‌ವ್ಯಾಗನ್ ಕಂಪನಿಯು ಈ ತಿಂಗಳು ಜುಲೈ 31 ರವರೆಗೆ ಹಮ್ಮಿಕೊಂಡಿದ್ದು, ಪ್ರಮುಖ ತಾಂತ್ರಿಕ ಸೌಲಭ್ಯಗಳ ಮೇಲೆ ವಿವಿಧ ಆಫರ್‌ಗಳನ್ನು ಪಡೆಯಬಹುದಾಗಿದೆ.

ಫೋಕ್ಸ್‌ವ್ಯಾಗನ್ ಇಂಡಿಯಾ ತನ್ನ ಗ್ರಾಹಕರ ಸುರಕ್ಷತೆ ಮತ್ತು ತೊಂದರೆ-ಮುಕ್ತ ಗ್ರಾಹಕ ಸೇವೆಗೆ ಒತ್ತು ನೀಡುವ ಮೂಲಕ ತನ್ನ 'ಗ್ರಾಹಕ-ಮೊದಲ' ವಿಧಾನವನ್ನು ನಿರ್ವಹಿಸುತ್ತಿದ್ದು, ಆಸಕ್ತ ಗ್ರಾಹಕರು ಹೊಸ ಸೇವೆಗಳನ್ನು ನಿಗದಿತ ಅವಧಿಯೊಳಗೆ ಹೆಚ್ಚಿನ ಉಳಿತಾಯದೊಂದಿಗೆ ಪಡೆಯಬಹುದಾಗಿದೆ.

ಇನ್ನು ಜೂನ್ ಮೊದಲ ವಾರದಲ್ಲಿ ಹೊಸ ವರ್ಟಸ್ ಬಿಡುಗಡೆ ಮಾಡಿರುವ ಫೋಕ್ಸ್‌ವ್ಯಾಗನ್ ಕಂಪನಿಯು ವಿತರಣೆಗೆ ಚಾಲನೆ ನೀಡಿದ್ದು, ದೇಶಾದ್ಯಂತ ಹೊಸ ಕಾರು ಮಾದರಿಗಾಗಿ ಭಾರೀ ಪ್ರಮಾಣದ ಬೇಡಿಕೆ ದಾಖಲಿಸುತ್ತಿದೆ.

2.0 ಇಂಡಿಯಾ ಯೋಜನೆಯ ಅಡಿಯಲ್ಲಿ ಹೊಸ ಕಾರುಗಳನ್ನು ಪರಿಚಯಿಸಿರುವ ಸ್ಕೋಡಾ ಮತ್ತು ಫೋಕ್ಸ್‌ವ್ಯಾಗನ್ ಕಂಪನಿಯು ಸಹಭಾಗಿತ್ವ ಯೋಜನೆ ಅಡಿ ಒಟ್ಟು ನಾಲ್ಕು ಕಾರುಗಳನ್ನು ಬಿಡುಗಡೆ ಮಾಡಿದ್ದು, ಸ್ಕೋಡಾ ಕಂಪನಿಯು ಕುಶಾಕ್, ಸ್ಲಾವಿಯಾ ಮಾದರಿಯನ್ನು ಮತ್ತು ಫೋಕ್ಸ್‌ವ್ಯಾಗನ್ ಕಂಪನಿಯು ಟೈಗನ್, ವರ್ಟಸ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಿದೆ.

ನಾಲ್ಕು ಮಾದರಿಗಳಲ್ಲೂ ಒಂದೇ ಮಾದರಿಯ ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದು, ವಿಭಿನ್ನವಾದ ತಾಂತ್ರಿಕ ಸೌಲಭ್ಯದೊಂದಿಗೆ ತಮ್ಮದೆ ಗ್ರಾಹಕರ ವರ್ಗವನ್ನು ಹೊಂದಿವೆ. ಅದರಲ್ಲೂ ಹೊಸದಾಗಿ ಬಿಡುಗಡೆಯಾಗಿರುವ ಹೊಸ ವರ್ಟಸ್ ಮಾದರಿಯು ಮಧ್ಯಮ ಕ್ರಮಾಂಕದ ಸೆಡಾನ್ ಮಾದರಿಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಅನ್ನು ಡೈನಾಮಿಕ್ ಲೈನ್ ಮತ್ತು ಪರ್ಫಾರ್ಮೆನ್ಸ್ ಲೈನ್ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದ್ದು, ಡೈನಾಮಿಕ್ ಲೈನ್‌ನಲ್ಲಿ ಕಂಫರ್ಟ್‌ಲೈನ್, ಹೈಲೈನ್ ಮತ್ತು ಟಾಪ್‌ಲೈನ್ ಎಂಬ ಮೂರು ರೂಪಾಂತರಗಳನ್ನು ಮತ್ತು ಪರ್ಫಾಮೆನ್ಸ್ ಲೈನ್‌ನಲ್ಲಿ ಜಿಟಿ ಪ್ಲಸ್ ವೆರಿಯೆಂಟ್ ನೀಡಲಾಗಿದೆ.

ಕಂಫರ್ಟ್‌ಲೈನ್, ಹೈಲೈನ್ ಮತ್ತು ಟಾಪ್‌ಲೈನ್, ಇವುಗಳ ಬೆಲೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.22 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಯು ರೂ. 15.71 ಲಕ್ಷ ಬೆಲೆ ಹೊಂದಿದ್ದರೆ ಟಾಪ್-ಎಂಡ್ ಪರ್ಫಾರ್ಮೆನ್ಸ್ ಲೈನ್‌ನಲ್ಲಿರುವ ಜಿಟಿ ಲೈನ್ ಎಕ್ಸ್‌ಶೋರೂಂ ಪ್ರಕಾರ ರೂ. 17.92 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರು ಫೋಕ್ಸ್‌ವ್ಯಾಗನ್ ಕಂಪನಿಯ ಹೊಸ MQB A0 IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಇದು ಬ್ರ್ಯಾಂಡ್‌ನ ಮಾಡ್ಯುಲರ್ ಆರ್ಕಿಟೆಕ್ಚರ್‌ನ ಸ್ಥಳೀಯ ಆವೃತ್ತಿಯಾಗಿದೆ. ವಿಶೇಷವಾಗಿ ಭಾರತದಲ್ಲಿ ಉತ್ಪಾದನೆಗೊಳ್ಳುವ ಮಾದರಿಗಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದ್ದು, ಇದೇ ಪ್ಲಾಟ್‌ಫಾರ್ಮ್‌ನಲ್ಲಿ ಟೈಗನ್ ಕೂಡಾ ಅಭಿವೃದ್ದಿಗೊಂಡಿದೆ.

ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ವರ್ಟಸ್ ಕಾರು ಮಾದರಿಯನ್ನು ಈ ಹಿಂದಿನ ವೆಂಟೊ ಮಾದರಿಯ ಸ್ಥಾನಕ್ಕೆ ಬದಲಿಸಿದ್ದು, ಇದು ವೆಂಟೊ ಮಾದರಿಗಿಂತಲೂ ಹೆಚ್ಚು ಬಲಿಷ್ಠ ಮತ್ತು ಹೆಚ್ಚಿನ ಮಟ್ಟದ ಉದ್ದಳತೆ ಹೊಂದಿದೆ. ಹೊಸ ಕಾರು 4,561 ಎಂಎಂ ಉದ್ದ, 1,752 ಎಂಎಂ ಅಗಲ ಮತ್ತು 1,507 ಎಂಎಂ ಎತ್ತರ ಮತ್ತು 2,651 ಎಂಎಂ ವ್ಹೀಲ್‌ಬೆಸ್ ಅನ್ನು ಒಳಗೊಂಡಿದೆ.

ವರ್ಟಸ್ ಸೆಡಾನ್ ಮಾದರಿಯಲ್ಲಿ ಕಂಪನಿಯು ಒಟ್ಟು ಎರಡು ಎಂಜಿನ್ ಆಯ್ಕೆಗಳನ್ನು ನೀಡುತ್ತದೆ. ಇದರಲ್ಲಿ 1.0 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಮಾದರಿಯು 113 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಇದರಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನ್ವಾಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಿದೆ.


Click it and Unblock the Notifications