ಫೆಬ್ರವರಿ ತಿಂಗಳ ಮಾರಾಟದಲ್ಲಿ ಸ್ಕೋಡಾ ಕುಶಾಕ್ ಎಸ್‍ಯುವಿಯನ್ನು ಹಿಂದಿಕ್ಕಿದ ಫೋಕ್ಸ್‌ವ್ಯಾಗನ್ ಟೈಗನ್
ವಿಡಬ್ಲ್ಯು ಗ್ರೂಪ್ 'MQB A0 IN' ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಮೊದಲ ಕಾರಾಗಿ ಸ್ಕೋಡಾ ಕುಶಾಕ್ ಅನ್ನು 2021ರ ಜೂನ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಟೈಗನ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು.

2022ರ ಫೆಬ್ರವರಿ ತಿಂಗಳ ಮಾರಾಟದಲ್ಲಿ ಸ್ಕೋಡಾ ಕುಶಾಕ್ ಎಸ್‍ಯುವಿಯನ್ನು ಫೋಕ್ಸ್‌ವ್ಯಾಗನ್ ಟೈಗನ್ ಅನ್ನು ಹಿಂದಿಕ್ಕಿದೆ. ಕಳೆದ ತಿಂಗಳಿನಲ್ಲಿ ಫೋಕ್ಸ್‌ವ್ಯಾಗನ್ ಟೈಗನ್ ಮಾದರಿಯ 2,388 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ, ಆದರೆ ಸ್ಕೋಡಾ ಕುಶಾಕ್ ಮಾದರಿಯ 2,307 ಯುನಿಟ್‌ಗಳಷ್ಟಿದೆ. ಕೇವಲ 81 ಯುನಿಟ್‌ಗಳ ವ್ಯತ್ಯಾಸದೊಂದಿಗೆ, ಈ ಎರಡರ ಮಾಸಿಕ ಮಾರಾಟಗಳ ನಡುವಿನ ಅಂತರವು ತುಂಬಾ ವಿಸ್ತಾರವಾಗಿಲ್ಲ. ಅದರ ಸ್ಕೋಡಾ ಸೋದರಸಂಬಂಧಿಯಂತೆ ಅದೇ ಫ್ಲಾಟ್ ಫಾರ್ಮ್ ಮತ್ತು ಮೆಕ್ಯಾನಿಕಲ್‌ಗಳನ್ನು ಒಳಗೊಂಡಿದೆ.

ಈ ಎರಡು ಎಸ್‍ಯುವಿಗಳು ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ತಮ್ಮ ಬ್ರ್ಯಾಂಡ್‌ಗಳಿಗೆ ಹೆಚ್ಚು ಮಾರಾಟವಾಗುವ ಕಾರುಗಳಾಗಿವೆ. ಟೈಗನ್ ಭಾರತದ ಫೋಕ್ಸ್‌ವ್ಯಾಗನ್‌ನಿಂದ ಅತ್ಯಂತ ಕೈಗೆಟುವ ದರದ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ.

ಫೋಕ್ಸ್‌ವ್ಯಾಗನ್ ಟೈಗನ್‌ನ ಉತ್ಪಾದನಾ ಆವೃತ್ತಿಯು ಎಕ್ಸ್‌ಪೋದಲ್ಲಿ ತೋರಿಸಿರುವಂತೆಯೇ ಇದೆ, ಇದು MQB A0-IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಎಸ್‌ಯುವಿಯು ಫೋಕ್ಸ್‌ವ್ಯಾಗನ್ ಎಸ್‌ಯುವಿ ಗ್ರಿಲ್ ಸಿಗ್ನೇಚರ್ ಪಡೆಯುತ್ತದೆ ಅದು ಹೆಡ್‌ಲ್ಯಾಂಪ್‌ಗಳನ್ನು ಪೂರೈಸಲು ವಿಸ್ತರಿಸುತ್ತದೆ.

ಟೈಗನ್‌ನ ಟಾಪ್-ಎಂಡ್ ಆವೃತ್ತಿಯು ಎಲ್ಲಾ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಡಿಆರ್‌ಎಲ್ ಅನ್ನು ಪಡೆಯುತ್ತದೆ. ಕೆಳಗೆ ಬರುತ್ತಿರುವಾಗ, ಬಂಪರ್ ಒಂದು ಮಸ್ಕಲರ್ ವಿನ್ಯಾಸವನ್ನು ಪಡೆಯುತ್ತದೆ, ಕ್ರೋಮ್ ಸ್ಟ್ರಿಪ್ ಒಂದು ತುದಿಯಿಂದ ಇನ್ನೊಂದು ತುದಿಗೆ ಚಲಿಸುತ್ತದೆ.

ಈ ಎಸ್‍ಯುವಿಯ ಸೈಡ್ ಪ್ರೊಫೈಲ್‌ಗೆ ಬಂದರೆ, ಎಸ್‌ಯುವಿಯು ಡ್ಯುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಪಡೆಯುತ್ತದೆ ಮತ್ತು ವೀಲ್ ಆರ್ಚ್‌ಗಳ ಸುತ್ತಲೂ ಕಪ್ಪು ಕ್ಲಾಡಿಂಗ್ ಹೊಂದಿದೆ. ಟೈಗನ್ ತೀಕ್ಷ್ಣವಾದ ಅಕ್ಷರ ರೇಖೆಗಳನ್ನು ಪಡೆಯುತ್ತದೆ, ಅದು ಮುಂಭಾಗದ ಫೆಂಡರ್‌ನಿಂದ ಪ್ರಾರಂಭವಾಗುತ್ತದೆ ಮತ್ತು ಹಿಂಭಾಗದಲ್ಲಿ ಟೈಲ್ ಲ್ಯಾಂಪ್ ಅನ್ನು ಭೇಟಿ ಮಾಡುತ್ತದೆ.

ಟೈಗನ್‌ನ ಕ್ರಿಯಾತ್ಮಕ ರೂಫ್ ರೈಲ್ ಗಳು, ಶಾರ್ಕ್ ಫಿನ್ ಆಂಟೆನಾ ಮತ್ತು ರೂಫ್ ಮೌಂಟೆಡ್ ಸ್ಪಾಯ್ಲರ್ ಅನ್ನು ಸಹ ಪಡೆಯುತ್ತದೆ. ಹಿಂಭಾಗದಲ್ಲಿ, ಮೈನ್ ಹೈಲೈಟ್ ಟೈಲ್ ಲ್ಯಾಂಪ್‌ಗಳು. ಎಸ್‌ಯುವಿಯು ಎಲ್‌ಇಡಿ ಟೈಲ್ ಲ್ಯಾಂಪ್ಸ್ ಸೆಟಪ್ ಅನ್ನು ಹೊಂದಿದ್ದು, ಲ್ಯಾಂಪ್ ಗಳ ನಡುವೆ ರಿಫ್ಲೆಕ್ಟರ್ ಎಲ್ಇಡಿ ಲ್ಯಾಂಪ್ ಚಾಲನೆಯಲ್ಲಿದೆ. ಹಿಂಭಾಗದ ಬಂಪರ್ ಮುಂಭಾಗದಲ್ಲಿರುವಂತೆಯೇ ಕೆಳಗಿನ ಭಾಗದಲ್ಲಿ ಕ್ರೋಮ್ ಅಲಂಕಾರವನ್ನು ಪಡೆಯುತ್ತದೆ.

ಈ ಎಸ್‍ಯುವಿಯ ಒಳಭಾಗದಲ್ಲಿ, ಟಾಪ್ ಎಂಡ್ ಜಿಟಿ ಪ್ಲಸ್ ಲೈನ್ ಆವೃತ್ತಿಯು ಡ್ಯಾಶ್‌ಬೋರ್ಡ್‌ನಲ್ಲಿ ಕಾರ್ಬನ್ ಫೈಬರ್ ಫಿನಿಶ್ಡ್ ಇನ್‌ಸರ್ಟ್‌ಗಳನ್ನು ಪಡೆಯುತ್ತದೆ, ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಕ್ರೂಸ್ ಕಂಟ್ರೋಲ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ವೈರ್‌ಲೆಸ್ ಫೋನ್ ಚಾರ್ಜರ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ಸ್ ಅನ್ನು ಒಳಗೊಂಡಿದೆ.

ಇನ್ನು ಎಲೆಕ್ಟ್ರಿಕ್ ಸನ್ ರೂಫ್, ವೆಂಟಿಲೆಟೆಡ್ ಫ್ರಂಟ್ ಸೀಟ್ ಹೀಗೆ. ಟೈಗನ್‌ನಲ್ಲಿರುವ ಕೆಲವು ಅಂಶಗಳು ನಿಮಗೆ ಸ್ಕೋಡಾ ಕುಶಾಕ್ ಅನ್ನು ನೆನಪಿಸುತ್ತವೆ. ಟೈಗನ್‌ನ ಒಂದು ಡೈನಾಮಿಕ್ ಮತ್ತು ಇನ್ನೊಂದು ಪರ್ಫಾಮೆನ್ಸ್ ಮಾದರಿಯಾಗಿ ಲಭ್ಯವಿದೆ. ಡೈನಾಮಿಕ್ ಮಾದರಿಯು ರೂಪಾಂತರಗಳನ್ನು ಪಡೆಯುತ್ತದೆ. ಇದು ಕಂಫರ್ಟ್‌ಲೈನ್, ಹೈಲೈನ್ ಮತ್ತು ಟಾಪ್‌ಲೈನ್.ಆಗಿದೆ. ಇನ್ನು ಪರ್ಫಾಮೆನ್ಸ್ ಮಾದರಿಯು ಜಿಟಿ ಮತ್ತು ಜಿಟಿ ಪ್ಲಸ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

ಈ ಟೈಗನ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಡೈನಾಮಿಕ್ ಟ್ರಿಮ್ ಅಡಿಯಲ್ಲಿರುವ ರೂಪಾಂತರಗಳು 1.0 ಲೀಟರ್, ಮೂರು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದರೆ, ಪರ್ಫಾರ್ಮೆನ್ಸ್ ಮಾದರಿಯು 1.5 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ.

ಇದರಲ್ಲಿ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 115 ಬಿಹೆಚ್‍ಪಿ ಪವರ್ ಮತ್ತು 178 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.0 ಲೀಟರ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ. ಇದರೊಂದಿಗೆ 1.5 ಲೀಟರ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು DSG ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬರುತ್ತದೆ

ಇನ್ನು ಸ್ಕೋಡಾ ಕುಶಾಕ್ ಎಸ್‌ಯುವಿ ಭಾರತದಲ್ಲಿ ಹೆಚ್ಚು ಸ್ಪರ್ಧಾತ್ಮಕ ಮಿಡ್ ಸೈಜ್ ಎಸ್‍ಯುವಿ ವಿಭಾಗ ಮಾದರಿಯಾಗಿದೆ.ಈ ಫೋಕ್ಸ್‌ವ್ಯಾಗನ್ ಗ್ರೂಪ್ ಭಾರತದಲ್ಲಿ ತಯಾರಿಸಿದ ಮೊದಲ ಎಸ್‍ಯುವಿ ಸ್ಕೋಡಾ ಕುಶಾಕ್ ಕುಶಾಕ್ ಆಗಿ, ಇಂಡಿಯಾ 2.0 ಯೋಜನೆಯಡಿ ಉತ್ಪಾದಿಸಲ್ಪಟ್ಟ ಮೊದಲ ವಾಹನ ಇದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಸ್ಕೋಡಾ ಪ್ರೀಮಿಯಂ ಮತ್ತು ಕೈಗೆಟುಕುವ ಕಾರು ಬ್ರ್ಯಾಂಡ್ ಆಗಿ ಮಾಡಲು ಕುಶಾಕ್ ಸಹಾಯ ಮಾಡುತ್ತದೆ.

ಈ ಕುಶಾಕ್ ಎಸ್‍ಯುವಿಯು 2,651 ಎಂಎಂ ವ್ಹೀಲ್ ಬೇಸ್ ಹೊಂದಿದ್ದು, ಇದು ತನ್ನ ವಿಭಾಗದಲ್ಲಿ ದೊಡ್ಡದಾಗಿದೆ. ಈ ಹೊಸ ಸ್ಕೋಡಾ ಎಸ್‍ಯುವಿಯು ಒಟ್ಟಾರೆ ಆಯಾಮಗಳ ದೃಷ್ಟಿಯಿಂದ ತನ್ನ ಪ್ರತಿಸ್ಪರ್ಧಿಗಳಿಗಿಂತ ಚಿಕ್ಕದಾಗಿದೆ; ಇದರ ಉದ್ದ 4,221 ಎಂಎಂ, ಅಗಲ 1,760 ಎಂಎಂ ಮತ್ತು 1,612 ಎಂಎಂ ಎತ್ತರವನ್ನು ಹೊದಿದೆ. ಇನ್ನು 188 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇನ್ನು ಕುಶಾಕ್ ಮಾದಗಿಂತ ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇನ್ನು ಫೋಕ್ಸ್‌ವ್ಯಾಗನ್ ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ.


Click it and Unblock the Notifications








