ಅಕ್ಟೋಬರ್ 1ರಿಂದ ಮತ್ತಷ್ಟು ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್

ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ತನ್ನ ಹೊಸ ಕಾರು ಮಾದರಿಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಮುಂದಿನ ತಿಂಗಳು ಅಕ್ಟೋಬರ್ 1ರಿಂದ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್

ಆಟೋ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಬೆಲೆಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್

ಹೀಗಾಗಿ ದುಬಾರಿ ಬಿಡಿಭಾಗಗಳ ಪರಿಣಾಮ ಫೋಕ್ಸ್‌ವ್ಯಾಗನ್ ಕಂಪನಿಯು ಮುಂದಿನ ತಿಂಗಳು 1ರಿಂದ ಟೈಗುನ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ವರ್ಟಸ್ ಸೆಡಾನ್ ಬೆಲೆಗಳ ಹೆಚ್ಚಳಕ್ಕೆ ಸಿದ್ದವಾಗಿದ್ದು, ಬೆಲೆಗೆ ಅನುಗುಣವಾಗಿ ಶೇ.1.50 ರಿಂದ ಶೇ. 2 ರಷ್ಟು ಹೆಚ್ಚಳಕ್ಕೆ ನಿರ್ಧರಿಸಲಾಗಿದೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್

ಕಳೆದ ಜೂನ್ ತಿಂಗಳಿನಲ್ಲಿ ಹೊಸ ಕಾರುಗಳ ಬೆಲೆ ಹೆಚ್ಚಿಸಿದ್ದ ಫೋಕ್ಸ್‌ವ್ಯಾಗನ್ ಕಂಪನಿಯು ಇದೀಗ ಮತ್ತೊಮ್ಮೆ ಬೆಲೆ ಹೆಚ್ಚಳಕ್ಕೆ ಮುಂದಾಗಿದ್ದು, ಅಕ್ಟೋಬರ್ 1ರಿಂದ ಹೊಸ ಕಾರು ಖರೀದಿಯು ತುಸು ದುಬಾರಿಯಾಗಲಿದೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್

ಇನ್ನು ಟೈಗುನ್ ಮತ್ತು ವರ್ಟಸ್ ಕಾರು‌ಗಳು ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ ಕಂಪನಿಗಳ ಸಹಭಾಗೀತ್ವದ ಎಂಕ್ಯೂಬಿ-ಎ0-ಇನ್(MQB-AO-IN) ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಬಿಡುಗಡೆಗೊಂಡಿದ್ದು, ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾ ಮಾದರಿಯಲ್ಲಿ ಅಭಿವೃದ್ದಿಗೊಂಡಿರುವ ಟೈಗುನ್ ಮತ್ತು ವರ್ಟಸ್ ಕಾರುಗಳು ಕೆಲವು ವಿಶೇಷ ಫೀಚರ್ಸ್ ಮೂಲಕ ತನ್ನದೆ ಆದ ಗ್ರಾಹಕ ವರ್ಗವನ್ನು ಸೆಳೆಯುತ್ತಿವೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್

ಹೊಸ ಕಾರುಗಳಲ್ಲಿ ಕಂಪನಿಯು 1.0-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದಲ್ಲಿ ಟಾಪ್ ಎಂಡ್ ಮಾದರಿಗಳಲ್ಲಿ 1.5-ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್

ಟೈಗುನ್ ಕಾರಿನಲ್ಲಿರುವ ಡೈನಾಮಿಕ್ ಲೈನ್ ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.40 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.20 ಲಕ್ಷ ಬೆಲೆ ಹೊಂದಿದ್ದರೆ ಜಿಟಿ ಲೈನ್ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.80 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.60 ಲಕ್ಷ ಬೆಲೆ ಹೊಂದಿದೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್

ಟೈಗುನ್ ಆರಂಭಿಕ ವೆರಿಯೆಂಟ್‌ಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್‌ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಿದ್ದಲ್ಲಿ ಟಾಪ್ ಎಂಡ್ ವೆರಿಯೆಂಟ್‌ಗಳು 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಎಸ್‌ಜಿ ಡ್ಯಯುಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿವೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್

1.0-ಲೀಟರ್ ಟಿಎಸ್ಐ ಪೆಟ್ರೋಲ್ ಮಾದರಿಯು 113-ಬಿಎಚ್‌ಪಿ, 175 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದರೆ 1.5-ಲೀಟರ್ ಪೆಟ್ರೋಲ್ ಮಾದರಿಯು 148-ಬಿಎಚ್‌ಪಿ, 250 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿದ್ದು, 1.0-ಲೀಟರ್ ಟಿಎಸ್ಐ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 18.47 ಕಿ.ಮೀ ಮೈಲೇಜ್ ಹಿಂದಿರುಗಿಸಿದ್ದಲ್ಲಿ 1.5-ಲೀಟರ್ ಮಾದರಿಯು ಪ್ರತಿ ಲೀಟರ್‌ಗೆ 17.88 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್

ಹೊಸ ಟೈಗುನ್ ಕಾರಿನಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಎಲ್‍ಇಡಿ ಮ್ಯಾಟ್ರಿಕ್ಸ್ ಹೆಡ್‌ಲ್ಯಾಂಪ್ಸ್ ಇಂಟ್ರಾಗ್ರೆಟೆಡ್ ಡಿಆರ್‌ಎಲ್ಎಸ್ ಜೋಡಣೆ ಹೊಂದಿದ್ದು, ಫಂಕ್ಷನಲ್ ಟರ್ನ್ ಇಂಡಿಕೇಟರ್, ಎಲ್‍ಇಡಿ ಲೈಟ್ ಬಾರ್‌, ಮುಂಭಾಗದಲ್ಲಿ ಸ್ಕಫ್ ಪ್ಲೇಟ್, 17-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್ಹ್, ವಿಂಡೋ ಹಾಗೂ ಡೋರ್ ಹ್ಯಾಂಡಲ್ ಮೇಲೆ ಕ್ರೋಮ್ ವಿನ್ಯಾಸ ಮತ್ತು ಕಾರಿನ ಸುತ್ತಲೂ ಬಾಡಿ ಕ್ಲ್ಯಾಡಿಂಗ್ ನೀಡಲಾಗಿದೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್

ಕಾರಿನ ಒಳಭಾಗದ ವಿನ್ಯಾಸವು ಸಹ ಸಾಕಷ್ಟು ಪ್ರೀಮಿಯಂ ಫೀಚರ್ಸ್‌ಗಳಿಂದ ಕೂಡಿದ್ದು, ಅಡ್ವಾನ್ಸ್ ಟೆಕ್ನಿಕಲ್ ಫೀಚರ್ಸ್‌ಗಳಾದ 10.1-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ ಹಾಗೂ 8-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌‌, ಅಂಡ್ರಾಯಿಡ್ ಆಟೋ ಮತ್ತು ಕಾರ್‌ಪ್ಲೇಯೊಂದಿಗೆ ಕಾರ್ ಕನೆಕ್ಟ್ ಟೆಕ್ನಾಲಜಿ ಹೊಂದಿದೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್

ಹಾಗೆಯೇ ಹೊಸ ಕಾರು ವರ್ಚುವಲ್ ಕಾಕ್‌ಪಿಟ್‌ನೊಂದಿಗೆ ಬ್ಲ್ಯಾಕ್ ಆ್ಯಂಡ್ ಗ್ರೇ ಡ್ಯುಯಲ್ ಕಲರ್ ಡ್ಯಾಶ್‌ಬೋರ್ಡ್ ಹೊಂದಿದ್ದು, ಮುಂಭಾಗದಲ್ಲಿ ವೆಂಟಿಲೆಟೆಡ್ ಸೀಟ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್, ಸೆಂಟ್ರಲ್ ಆರ್ಮ್ ರೆಸ್ಟ್, ರಿಯರ್ ಎಸಿ ವೆಂಟ್ಸ್, ಕೀ ಲೆಸ್ ಎಂಟ್ರಿ, ವೈರ್‌ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್ ಹೊಂದಿದೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್

ಸುರಕ್ಷತೆಗೂ ಹೊಸ ಕಾರಿನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಕಾರ್ ಕನೆಕ್ಟ್ ಟೆಕ್ನಾಲಜಿ ಸೇರಿದಂತೆ ಒಟ್ಟು 40 ಸುರಕ್ಷಾ ಫೀಚರ್ಸ್‌ಗಳು ಟೈಗನ್ ಕಾರಿನಲ್ಲಿವೆ. 6 ಏರ್‌ಬ್ಯಾಗ್(ಟಾಪ್ ಎಂಡ್ ಮಾದರಿಯಲ್ಲಿ) ಎಬಿಎಸ್ ಜೊತೆ ಇಬಿಡಿ, ಮಲ್ಟಿ ಕೂಲಿಷನ್ ಬ್ರೇಕ್ಸ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, ರಿಯರ್ ವ್ಯೂ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಕ್ರೂಸ್ ಕಂಟ್ರೊಲ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಸೇರಿ ಹಲವು ಸೌಲಭ್ಯಗಳಿವೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್

ಇನ್ನು ವರ್ಟಸ್ ಅನ್ನು ಡೈನಾಮಿಕ್ ಲೈನ್ ಮತ್ತು ಪರ್ಫಾರ್ಮೆನ್ಸ್ ಲೈನ್ ಎಂಬ ಎರಡು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದ್ದು, ಡೈನಾಮಿಕ್ ಲೈನ್‌ನಲ್ಲಿ ಕಂಫರ್ಟ್‌ಲೈನ್, ಹೈಲೈನ್ ಮತ್ತು ಟಾಪ್‌ಲೈನ್ ಎಂಬ ಮೂರು ರೂಪಾಂತರಗಳನ್ನು ಮತ್ತು ಪರ್ಫಾಮೆನ್ಸ್ ಲೈನ್‌ನಲ್ಲಿ ಜಿಟಿ ಪ್ಲಸ್ ವೆರಿಯೆಂಟ್ ನೀಡಲಾಗಿದೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್

ಕಂಫರ್ಟ್‌ಲೈನ್, ಹೈಲೈನ್ ಮತ್ತು ಟಾಪ್‌ಲೈನ್, ಇವುಗಳ ಬೆಲೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.22 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಯು ರೂ. 15.71 ಲಕ್ಷ ಬೆಲೆ ಹೊಂದಿದ್ದರೆ ಟಾಪ್-ಎಂಡ್ ಪರ್ಫಾರ್ಮೆನ್ಸ್ ಲೈನ್‌ನಲ್ಲಿರುವ ಜಿಟಿ ಲೈನ್‌ ಎಕ್ಸ್‌ಶೋರೂಂ ಪ್ರಕಾರ ರೂ. 17.92 ಲಕ್ಷ ಬೆಲೆ ಹೊಂದಿದೆ.

ದುಬಾರಿಯಾಗಲಿವೆ ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ವರ್ಟಸ್

ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ವರ್ಟಸ್ ಕಾರು ಮಾದರಿಯನ್ನು ಈ ಹಿಂದಿನ ವೆಂಟೊ ಮಾದರಿಯ ಸ್ಥಾನಕ್ಕೆ ಬದಲಿಸಿದ್ದು, ಇದು ವೆಂಟೊ ಮಾದರಿಗಿಂತಲೂ ಹೆಚ್ಚು ಬಲಿಷ್ಠ ಮತ್ತು ಹೆಚ್ಚಿನ ಮಟ್ಟದ ಉದ್ದಳತೆ ಹೊಂದಿದೆ. ಹೊಸ ಕಾರು 4,561 ಎಂಎಂ ಉದ್ದ, 1,752 ಎಂಎಂ ಅಗಲ ಮತ್ತು 1,507 ಎಂಎಂ ಎತ್ತರ ಮತ್ತು 2,651 ಎಂಎಂ ವ್ಹೀಲ್‌ಬೆಸ್ ಅನ್ನು ಒಳಗೊಂಡಿದೆ.

Most Read Articles

Kannada
English summary
Volkswagen taigun virtus price hike from october 1 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X