4ನೇ ಜನರೇಷನ್ ಮಾರುತಿ ಸ್ವಿಫ್ಟ್ ಬಿಡುಗಡೆ ಯಾವಾಗ? ಸದ್ಯಕ್ಕಿರುವ ಪೈಪೋಟಿಗೆ ಈ ಫೀಚರ್ಸ್ ನೀಡಬಹುದು...

ಭಾರತದಲ್ಲಿ ಬಿಡುಗಡೆಯಾದ ಅತಿಕಡಿಮೆ ಸಮಯದಲ್ಲೇ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಭಾರೀ ಸದ್ದು ಮಾಡಿದ್ದ ಮಾರುತಿ ಸುಜುಕಿ ಸ್ವಿಫ್ಟ್, ತನ್ನ ಪರಂಪರೆ ಉಳಿಸಿಕೊಳ್ಳಲು ಕಾಲ ಕಾಲಕ್ಕೆ ನವೀಕರಣಗೊಂಡು ಇದೀಗ ಮೂರನೇ ಜನರೇಷನ್ ಮಾರುತಿ ಸ್ವಿಫ್ಟ್ ಸದ್ಯ ಮಾರಾಟದಲ್ಲಿದೆ. ಭಾರತ ಸದ್ಯ ನಾಲ್ಕನೇ ತಲೆಮಾರಿನ ಮಾಡಲ್‌ಗಾಗಿ ಕಾಯುತ್ತಿದೆ.

4ನೇ ಜನರೇಷನ್ ಮಾರುತಿ ಸ್ವಿಫ್ಟ್ ಬಿಡುಗಡೆ ಯಾವಾಗ? ಸದ್ಯಕ್ಕಿರುವ ಪೈಪೋಟಿಗೆ ಈ ಫೀಚರ್ಸ್ ನೀಡಬಹುದು...

1 ನೇ ತಲೆಮಾರಿನ ಹ್ಯಾಚ್‌ಬ್ಯಾಕ್ ಭಾರತದಲ್ಲಿ 2005 ರಲ್ಲಿ ಪ್ರಾರಂಭವಾಯಿತು. 6 ವರ್ಷಗಳ ನಂತರ, ಮಾರುತಿ ಸುಜುಕಿ 2 ನೇ ತಲೆಮಾರಿನ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಿತು. ಬಳಿಕ 2018 ರ ಆರಂಭದಲ್ಲಿ ಮಾರುತಿ ಸುಜುಕಿ 3 ನೇ ತಲೆಮಾರಿನ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ಬಿಡುಗಡೆ ಮಾಡುವವರೆಗೆ ಈ ಮಾದರಿಯನ್ನು 7 ವರ್ಷಗಳವರೆಗೆ ದೇಶದಲ್ಲಿ ಮಾರಾಟ ಮಾಡಲಾಗಿತ್ತು.

4ನೇ ಜನರೇಷನ್ ಮಾರುತಿ ಸ್ವಿಫ್ಟ್ ಬಿಡುಗಡೆ ಯಾವಾಗ? ಸದ್ಯಕ್ಕಿರುವ ಪೈಪೋಟಿಗೆ ಈ ಫೀಚರ್ಸ್ ನೀಡಬಹುದು...

3 ನೇ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ಪರಿಚಯಿಸಿದ ಕೇವಲ 4 ವರ್ಷಗಳ ನಂತರ, 4 ನೇ ತಲೆಮಾರಿನ ಮಾದರಿಯನ್ನು ಈಗಾಗಲೇ ಯುರೋಪ್‌ನಲ್ಲಿ ವ್ಯಾಪಕವಾಗಿ ಪರೀಕ್ಷಿಸಲಾಗುತ್ತಿದೆ. ಅಂತೆಯೇ, ಈ ಮಾದರಿಯು 2024 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ನಿರೀಕ್ಷಿಸಲಾಗಿದೆ.

4ನೇ ಜನರೇಷನ್ ಮಾರುತಿ ಸ್ವಿಫ್ಟ್ ಬಿಡುಗಡೆ ಯಾವಾಗ? ಸದ್ಯಕ್ಕಿರುವ ಪೈಪೋಟಿಗೆ ಈ ಫೀಚರ್ಸ್ ನೀಡಬಹುದು...

4ನೇ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ಇದೀಗ ಕೆಲವು ಬಾರಿ ಪರೀಕ್ಷಿಸಲಾಗಿದೆ. ಮುಂಬರುವ ಹ್ಯಾಚ್‌ಬ್ಯಾಕ್‌ನ ಹಲವು ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿವೆ. ಮುಂದಿನ ಪೀಳಿಗೆಯ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಮುಂದಿನ ವರ್ಷಾಂತ್ಯದೊಳಗೆ ತನ್ನ ಜಾಗತಿಕ ಚೊಚ್ಚಲ ಪ್ರವೇಶ ಮಾಬಹುದು. ಈ ನಾಲ್ಕನೇ ತಲೆಮಾರಿನ ಸ್ವಿಫ್ಟ್ ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು ಎಂಬುದನ್ನು ಇಲ್ಲಿ ನೋಡೋಣ.

4ನೇ ಜನರೇಷನ್ ಮಾರುತಿ ಸ್ವಿಫ್ಟ್ ಬಿಡುಗಡೆ ಯಾವಾಗ? ಸದ್ಯಕ್ಕಿರುವ ಪೈಪೋಟಿಗೆ ಈ ಫೀಚರ್ಸ್ ನೀಡಬಹುದು...

ಮುಂಬರುವ 4 ನೇ ತಲೆಮಾರಿನ ಸುಜುಕಿ ಸ್ವಿಫ್ಟ್ ಗಮನಾರ್ಹ ಬದಲಾವಣೆಗಳಲ್ಲಿ LED DRL ಗಳೊಂದಿಗಿನ ಪುಲ್ಡ್-ಬ್ಯಾಕ್ ಹೆಡ್‌ಲ್ಯಾಂಪ್‌ಗಳು, ಟೈಲ್ ಲ್ಯಾಂಪ್‌ನೊಂದಿಗೆ ಅಂದವಾಗಿ ವಿಲೀನಗೊಳ್ಳುವ ಸ್ಟ್ರಾಂಗ್ ಶೋಲ್ಡರ್ ಲೈನ್, ಹೊಸ SUV ತರಹದ ಕ್ಲಾಮ್‌ಶೆಲ್ ಬಾನೆಟ್, ದೊಡ್ಡ ಮುಂಭಾಗದ ಗ್ರಿಲ್, ಕಡಿಮೆ ಮತ್ತು ಅಗಲವಾದ ಏರ್‌ ಇನ್‌ಟೇಕ್‌ಗಳು ಒಳಗೊಂಡಿರಬಹುದು.

4ನೇ ಜನರೇಷನ್ ಮಾರುತಿ ಸ್ವಿಫ್ಟ್ ಬಿಡುಗಡೆ ಯಾವಾಗ? ಸದ್ಯಕ್ಕಿರುವ ಪೈಪೋಟಿಗೆ ಈ ಫೀಚರ್ಸ್ ನೀಡಬಹುದು...

ಉಳಿದಂತೆ ಚಕ್ರ ಕಮಾನುಗಳು, ದೊಡ್ಡ ಅಲಾಯ್ ವೀಲ್‌ಗಳು ಮತ್ತು ದೊಡ್ಡ ರೂಫ್-ಮೌಂಟೆಡ್ ಸ್ಪಾಯ್ಲರ್ ಇರಬಹುದು ಎನ್ನಲಾಗಿದೆ. ಮುಂದಿನ-ಪೀಳಿಗೆಯ ಸ್ವಿಫ್ಟ್‌ನ ಹಿಂಭಾಗವು ಮೊದಲ ತಲೆಮಾರಿನ ಸುಜುಕಿ ಸ್ವಿಫ್ಟ್‌ನಂತೆಯೇ ಹೋಲುತ್ತದೆ ಎಂದು ಸಹ ಉಲ್ಲೇಖಿಸಬೇಕಾದ ಅಂಶವಾಗಿದೆ.

4ನೇ ಜನರೇಷನ್ ಮಾರುತಿ ಸ್ವಿಫ್ಟ್ ಬಿಡುಗಡೆ ಯಾವಾಗ? ಸದ್ಯಕ್ಕಿರುವ ಪೈಪೋಟಿಗೆ ಈ ಫೀಚರ್ಸ್ ನೀಡಬಹುದು...

ಸ್ವಿಫ್ಟ್‌ನ ವೀಲ್‌ಬೇಸ್ ಅನ್ನು ಆಂತರಿಕ ಸ್ಥಳಾವಕಾಶ ಮತ್ತು ಹೆಚ್ಚಿನ ವೇಗದ ಸ್ಥಿರತೆಯನ್ನು ಸುಧಾರಿಸಲು ಸ್ವಲ್ಪ ವಿಸ್ತರಿಸಲಾಗಿದೆ. ಇದಲ್ಲದೆ ಈ ಮಾದರಿಯು ಸ್ವಲ್ಪ ಅಗಲವಾಗಿ ಮತ್ತು ಸ್ವಲ್ಪ ಕಡಿಮೆಯಾಗಿ ಕಾಣುತ್ತದೆ. ಈ ಎಲ್ಲಾ ಗುಣಲಕ್ಷಣಗಳು ಮುಂಬರುವ ಸುಜುಕಿ ಸ್ವಿಫ್ಟ್‌ಗೆ ಹೆಚ್ಚು ಆಕರ್ಷಕ ಲುಕ್‌ ಅನ್ನು ನೀಡುತ್ತದೆ.

4ನೇ ಜನರೇಷನ್ ಮಾರುತಿ ಸ್ವಿಫ್ಟ್ ಬಿಡುಗಡೆ ಯಾವಾಗ? ಸದ್ಯಕ್ಕಿರುವ ಪೈಪೋಟಿಗೆ ಈ ಫೀಚರ್ಸ್ ನೀಡಬಹುದು...

ವಿನ್ಯಾಸದ ಕುರಿತು ಬಗ್ಗೆ ಮಾತನಾಡುವುದಾದರೆ, ಮುಂಬರುವ 4 ನೇ ತಲೆಮಾರಿನ ಸ್ವಿಫ್ಟ್ ಹಿಂದಿನ ಬಾಗಿಲಿನ ಮೇಲೆ ಹೆಚ್ಚು ಸಾಂಪ್ರದಾಯಿಕ ರೀತಿಯ ಡೋರ್ ಹ್ಯಾಂಡಲ್‌ಗಳನ್ನು ಹೊಂದಿದೆ.

4ನೇ ಜನರೇಷನ್ ಮಾರುತಿ ಸ್ವಿಫ್ಟ್ ಬಿಡುಗಡೆ ಯಾವಾಗ? ಸದ್ಯಕ್ಕಿರುವ ಪೈಪೋಟಿಗೆ ಈ ಫೀಚರ್ಸ್ ನೀಡಬಹುದು...

ವೈಶಿಷ್ಟ್ಯಗಳ ವಿಷಯದಲ್ಲಿ, ಮುಂಬರುವ 4 ನೇ ತಲೆಮಾರಿನ ಸುಜುಕಿ ಸ್ವಿಫ್ಟ್ ಸುಧಾರಿತ ಸುರಕ್ಷತಾ ವ್ಯವಸ್ಥೆಗಳೊಂದಿಗೆ ಬರುತ್ತದೆ ಎಂದು ನಿರೀಕ್ಷಿಸಲಾಗಿದೆ. ಏಕೆಂದರೆ ಹ್ಯಾಚ್‌ಬ್ಯಾಕ್ ಸುಜುಕಿಯ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ನ ಸುಧಾರಿತ ಆವೃತ್ತಿಯನ್ನು ಆಧರಿಸಿದ್ದು, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತದೆ.

4ನೇ ಜನರೇಷನ್ ಮಾರುತಿ ಸ್ವಿಫ್ಟ್ ಬಿಡುಗಡೆ ಯಾವಾಗ? ಸದ್ಯಕ್ಕಿರುವ ಪೈಪೋಟಿಗೆ ಈ ಫೀಚರ್ಸ್ ನೀಡಬಹುದು...

ಅಂತೆಯೇ, 4 ನೇ ತಲೆಮಾರಿನ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನಲ್ಲಿನ ವೈಶಿಷ್ಟ್ಯಗಳ ಪಟ್ಟಿಯು ಹೊಸದಾಗಿ ಬಿಡುಗಡೆಯಾದ ಮಾರುತಿ ಸುಜುಕಿ ಬಲೆನೊ ಹ್ಯಾಚ್‌ಬ್ಯಾಕ್ ಮತ್ತು ಗ್ರ್ಯಾಂಡ್ ವಿಟಾರಾ SUV ಅನ್ನು ಅನುಕರಿಸುತ್ತದೆ ಎಂದು ಹೇಳಲಾಗುತ್ತಿದೆ. ಜೊತೆಗೆ 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ, ಹೆಡ್ಸ್-ಅಪ್ ಡಿಸ್ಪ್ಲೇ, ಹಿಂಭಾಗದ AC ವೆಂಟ್‌ಗಳು, Apple CarPlay ಮತ್ತು Android Auto ಸಂಪರ್ಕದೊಂದಿಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಪಡೆಯಬಹುದು.

4ನೇ ಜನರೇಷನ್ ಮಾರುತಿ ಸ್ವಿಫ್ಟ್ ಬಿಡುಗಡೆ ಯಾವಾಗ? ಸದ್ಯಕ್ಕಿರುವ ಪೈಪೋಟಿಗೆ ಈ ಫೀಚರ್ಸ್ ನೀಡಬಹುದು...

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸುಜುಕಿ ಸ್ವಿಫ್ಟ್ ಎರಡು ಎಂಜಿನ್‌ಗಳ ಆಯ್ಕೆಯೊಂದಿಗೆ ಲಭ್ಯವಿದ್ದರೆ, ಭಾರತದಲ್ಲಿ ಮಾರಾಟವಾಗುವ 3 ನೇ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಕೇವಲ ಒಂದು ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. ಈ ಪವರ್‌ಟ್ರೇನ್ 89bhp ಪವರ್ ಮತ್ತು 113Nm ಪೀಕ್ ಟಾರ್ಕ್‌ನೊಂದಿಗೆ 1.2-ಲೀಟರ್, ನ್ಯಾಚುರಲ್ಲಿ-ಆಸ್ಪಿರೇಟೆಡ್ ಎಂಜಿನ್ ಆಗಿದೆ.

4ನೇ ಜನರೇಷನ್ ಮಾರುತಿ ಸ್ವಿಫ್ಟ್ ಬಿಡುಗಡೆ ಯಾವಾಗ? ಸದ್ಯಕ್ಕಿರುವ ಪೈಪೋಟಿಗೆ ಈ ಫೀಚರ್ಸ್ ನೀಡಬಹುದು...

ಅಲ್ಲದೆ, ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಂಜಿನ್ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿದ್ದರೂ, ಸುಜುಕಿಯು 110bhp ಪವರ್ ಮತ್ತು 160Nm ಟಾರ್ಕ್ನೊಂದಿಗೆ ಹೆಚ್ಚು ಶಕ್ತಿಶಾಲಿ 1.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಸಹ ನೀಡುತ್ತದೆ.

4ನೇ ಜನರೇಷನ್ ಮಾರುತಿ ಸ್ವಿಫ್ಟ್ ಬಿಡುಗಡೆ ಯಾವಾಗ? ಸದ್ಯಕ್ಕಿರುವ ಪೈಪೋಟಿಗೆ ಈ ಫೀಚರ್ಸ್ ನೀಡಬಹುದು...

ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 1.2-ಲೀಟರ್ ಪವರ್‌ಟ್ರೇನ್‌ನೊಂದಿಗೆ ಹ್ಯಾಚ್‌ಬ್ಯಾಕ್‌ನ 4 ನೇ ಪೀಳಿಗೆಯನ್ನು ನೀಡಲಾಗುವುದು. ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಹೆಚ್ಚು ಶಕ್ತಿಶಾಲಿ 1.4-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೊತೆಗೆ 128bhp ಪೀಕ್ ಪವರ್ ಮತ್ತು 230Nm ಟಾರ್ಕ್ ಅನ್ನು ಹೊಂದಿದೆ.

Most Read Articles

Kannada
English summary
When will the 4th generation Maruti Swift launch Expect these features
Story first published: [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X