Just In
- 1 hr ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 2 hrs ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 2 hrs ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
- 2 hrs ago
ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!
Don't Miss!
- Sports
ಟಿ20 ಕ್ರಿಕೆಟ್ನಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ಟಾಪ್ 3 ಬ್ಯಾಟ್ಸ್ಮನ್ಗಳು
- Movies
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
- News
ಉದ್ಯೋಗ ನೀಡುತ್ತೇನೆ ಎಂದು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಬೆಂಗಳೂರಿನಲ್ಲಿ ಟೆಕ್ಕಿ ಬಂಧನ
- Technology
ಹರಾಜಿನಲ್ಲಿರುವ ಈ ಹಳೆಯ ಐಫೋನ್ ಬೆಲೆ ಅರ್ಧಕೋಟಿ ದಾಟಿದ್ರೂ ಅಚ್ಚರಿಯಿಲ್ಲ!
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೋಂಡಾದಿಂದ ಬಿಡುಗಡೆಯಾಗಲಿರುವ ಈ 3 ಹೊಸ ಕಾರುಗಳಿಗಾಗಿ ನೀವು ಕಾಯಲೇಬೇಕು: ಇದರಲ್ಲಿ 2 SUVಗಳು...
ಹೋಂಡಾ ಕಾರ್ಸ್ ಇಂಡಿಯಾ ಮುಂದಿನ 12 ತಿಂಗಳುಗಳಲ್ಲಿ 2 ಹೊಸ ಎಸ್‌ಯುವಿಗಳನ್ನು ಒಳಗೊಂಡಂತೆ 3 ಕಾರುಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹಾಗೆಯೇ ಭಾರತದಲ್ಲಿ ತನ್ನ ಡೀಸೆಲ್ ಆವೃತ್ತಿಗಳನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ.

ಹೋಂಡಾ ಇಂಡಿಯಾ ಕೊನೆಯ ಬಾರಿಗೆ ಹೊಸ ಉತ್ಪನ್ನವನ್ನು ದೇಶದಲ್ಲಿ ಬಿಡುಗಡೆ ಮಾಡಿ ದೀರ್ಘ ಸಮಯವಾಗಿದೆ. ಈ ಬಾರಿ ಬಿಡುಗಡೆ ಮಾಡುವ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಬಲವಾದ ಬೇಡಿಕೆಯನ್ನು ಪಡೆದುಕೊಳ್ಳಲು ಜಪಾನಿನ ಕಾರು ತಯಾರಕರು ಹೊಸ ಮಾದರಿಗಳಿಗೆ ವಿಶಿಷ್ಟ್ ವಿನ್ಯಾಸ, ಉನ್ನತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳಿಸುತ್ತಿದ್ದಾರೆ.

ನಮಗಿರುವ ಮಾಹಿತಿಯ ಪ್ರಕಾರ ಮುಂದಿನ ವರ್ಷ ದೇಶದಲ್ಲಿ ಮೂರು ಉತ್ಪನ್ನಗಳನ್ನು ಬಿಡುಗಡೆ ಮಾಡಲು ಹೋಂಡಾ ಸಜ್ಜಾಗಿದೆ. ಭಾರತದಲ್ಲಿ ಹೋಂಡಾದಿಂದ ಮುಂಬರುವ ಕಾರುಗಳ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿವರಗಳು ಇಲ್ಲಿವೆ.

1. ಹೊಸ ಹೋಂಡಾ ಕಾಂಪ್ಯಾಕ್ಟ್ SUV
ಭಾರತೀಯ ಮಾರುಕಟ್ಟೆಯಲ್ಲಿ WR-V ಅನ್ನು ಬದಲಿಸುವ ಹೊಸ ಕಾಂಪ್ಯಾಕ್ಟ್ SUV ನಲ್ಲಿ ಹೋಂಡಾ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತದೆ. ಹೊಸ ಅಮೇಜ್‌ನ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ, ಈ ಕಾಂಪ್ಯಾಕ್ಟ್ ಎಸ್‌ಯುವಿ ತನ್ನ ಪವರ್‌ಟ್ರೇನ್ ಆಯ್ಕೆಗಳನ್ನು ಭಾರತದಲ್ಲಿ ಹೋಂಡಾ ಸಿಟಿಯೊಂದಿಗೆ ಹಂಚಿಕೊಳ್ಳುವ ನಿರೀಕ್ಷೆಯಿದೆ.

ಈ ಹೊಸ SUV ಪ್ರತಿಸ್ಪರ್ಧಿಗಳಾದ ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರಾ XUV300, ಟಾಟಾ ನೆಕ್ಸಾನ್ ಮತ್ತು ಮಾರುತಿ ಬ್ರೆಝಾಗಳಿಗೆ ಸವಾಲು ಹಾಕಲಿದೆ. ಇದನ್ನು 1.5L ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡುವ ಸಾಧ್ಯತೆಯಿದ್ದು, ಬಲವಾದ ಹೈಬ್ರಿಡ್ ಎಂಜಿನ್ ಆಯ್ಕೆಯು ಇರಬಹುದು.

ವೈಶಿಷ್ಟ್ಯಗಳ ವಿಷಯದಲ್ಲಿ, ಈ ಹೊಸ SUV ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಯೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಪುಶ್-ಬಟನ್ ಸ್ಟಾರ್ಟ್ ಸೇರಿದಂತೆ ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

2. ಹೊಸ ಹೋಂಡಾ ಮಧ್ಯಮ ಗಾತ್ರದ SUV
ಕಾಂಪ್ಯಾಕ್ಟ್ SUV ಜೊತೆಗೆ ಮಿಡ್ ಸೈಜ್ ಎಸ್‌ಯುವಿ ವಿಭಾಗದಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರಾಂಡ್ ವಿಟಾರ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ನಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲು ಹೋಂಡಾ ಶೀಘ್ರದಲ್ಲೇ ಹೊಸ ಮಧ್ಯಮ ಗಾತ್ರದ SUV ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಈ ಹೊಸ ಎಸ್‌ಯುವಿಯು ಹೋಂಡಾ ಸಿಟಿ 5ನೇ-ಜನ್‌ಗೆ ಆಧಾರವಾಗಿರುವ ಅದೇ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಳ್ಳುತ್ತದೆ. ಇದರ ಜೊತೆಗೆ ಅದೇ ಪವರ್‌ಟ್ರೇನ್ ಆಯ್ಕೆಗಳನ್ನು ಬಳಸುವ ಸಾಧ್ಯತೆಯಿದೆ. ಆದರೆ ನಾವು 1.5L ಅಟ್ಕಿನ್ಸನ್ ಸೈಕಲ್ ಎಂಜಿನ್‌ನಿಂದ e:HEV ಟೆಕ್ನೊಂದಿಗೆ ಚಾಲಿತವಾಗುವ ಪ್ರಬಲ-ಹೈಬ್ರಿಡ್ ರೂಪಾಂತರವನ್ನು ಪಡೆಯಬಹುದು.

ಈ ಹೊಸ SUV ದೊಡ್ಡ ಸನ್‌ರೂಫ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಕೂಲ್ಡ್ ಗ್ಲೋವ್‌ಬಾಕ್ಸ್, ಪುಶ್-ಬಟನ್ ಸ್ಟಾರ್ಟ್, ಕನೆಕ್ಟೆಡ್ ಕಾರ್ ಟೆಕ್, ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

3. ಹೋಂಡಾ ಸಿಟಿ ಫೇಸ್ ಲಿಫ್ಟ್
ಹೋಂಡಾ ಸಿಟಿ 5ನೇ-ಜೆನ್ ಸಹ 2023 ರ ಕೊನೆಯಲ್ಲಿ ಮಿಡ್-ಲೈಫ್ ಫೇಸ್‌ಲಿಫ್ಟ್ ಅನ್ನು ಪಡೆಯುವ ನಿರೀಕ್ಷೆಯಿದೆ. ನವೀಕರಿಸಿದ ಬಾಹ್ಯ ಸ್ಟೈಲಿಂಗ್, ಹೊಸ ವೈಶಿಷ್ಟ್ಯಗಳು ಮತ್ತು ನವೀಕರಿಸಿದ ಎಂಜಿನ್ ಆಯ್ಕೆಗಳನ್ನು ನೀಡಲಿದೆ. ಭಾರತದಲ್ಲಿ ಇದು ಹ್ಯುಂಡೈ ವೆರ್ನಾ, ವಿಡಬ್ಲ್ಯೂ ವರ್ಟಸ್, ಸ್ಕೋಡಾ ಸ್ಲಾವಿಯಾ ಮತ್ತು ಮಾರುತಿ ಸಿಯಾಜ್‌ನಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲಿದೆ.

ನಮಗೆ ಇಲ್ಲಿಯವರೆಗೆ ತಿಳಿದಿರುವಂತೆ ಸಿಟಿ ಫೇಸ್‌ಲಿಫ್ಟ್ ಅನ್ನು ಪೆಟ್ರೋಲ್ ಮತ್ತು ಬಲವಾದ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಮಾತ್ರ ನೀಡಲಾಗುವುದು. ಡೀಸೆಲ್ ಆವೃತ್ತಿಯನ್ನು ಕೈಬಿಡುವ ಸಾಧ್ಯತೆಯಿದ್ದು, ಹೆಚ್ಚಿನ ವಿವರಗಳನ್ನು ಹೋಂಡಾ ಇನ್ನೂ ಹಂಚಿಕೊಳ್ಳಬೇಕಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಅನಾವರಣ
ಹೋಂಡಾ ತನ್ನ ಹೊಸ ಪ್ರೊಲೋಗ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅನಾವರಣಗೊಳಿಸಿದೆ. ಈ ಹೊಸ ಹೋಂಡಾ ಪ್ರೋಲಾಗ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಜನರಲ್ ಮೋಟಾರ್ಸ್ ಅಲ್ಟಿಯಮ್ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಅಲ್ಟಿಯಮ್ ಪ್ಲಾಟ್‌ಫಾರ್ಮ್ ಚೆವ್ರೊಲೆಟ್ ಬ್ಲೇಜರ್ ಇವಿ ಮತ್ತು ಕ್ಯಾಡಿಲಾಕ್ ಲೈರಿಕ್ ಮಾದರಿಗಳಿಗೆ ಆಧಾರವಾಗಿದೆ. ಹೊಸ ಹೋಂಡಾ ಪ್ರೋಲಾಗ್ ಎಲೆಕ್ಟ್ರಿಕ್ ಎಸ್‍ಯುವಿಯು ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 2 ವರ್ಷಗಳಲ್ಲಿ ಮಾರಾಟವಾಗಲಿದೆ.

ಹೊಸ ಪ್ರೊಲೊಗ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಲಾಸ್ ಏಂಜಲೀಸ್‌ನಲ್ಲಿರುವ ಹೋಂಡಾ ಡಿಸೈನ್ ಸ್ಟುಡಿಯೋ ವಿನ್ಯಾಸಗೊಳಿಸಿದೆ. ಇದು ಸಿಆರ್-ವಿ ಮೇಲೆ ಮತ್ತು ಪಾಸ್‌ಪೋರ್ಟ್ ಎಸ್‍ಯುವಿಯ ಪಕ್ಕದಲ್ಲಿರುತ್ತದೆ. ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಭಾರತದಲ್ಲಿ ಸೆಡಾನ್ ಮಾದರಿಗಳಿಂದಲೇ ಹೋಂಡಾ ಕಂಪನಿಯು ಜನಪ್ರಿಯತೆ ಪಡೆದಿದೆ. ಅದರೆ ಪ್ರಸ್ತುತ ದೇಶದಲ್ಲಿ ಎಸ್‌ಯುವಿಗಳ ಪ್ರಭಾವ ಹೆಚ್ಚಾಗಿದೆ. ಹಾಗಾಗಿ ಹೋಂಡಾ ಕೂಡ ಹೊಸ ಎಸ್‌ಯುವಿಗಳ ಮೂಲಕ ತನ್ನ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಲು ಸಜ್ಜಾಗಿದೆ.