ಭಾರತದಲ್ಲಿ ಮಿಂಚುತ್ತಿರುವ ಹ್ಯುಂಡೈ ಕಾರುಗಳಿಗೆ ಸೆಡ್ಡು ಹೊಡೆಯಲು ಬರುತ್ತಿದೆ ಹೊಸ ಹೋಂಡಾ ಕಾರುಗಳು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ ಮುಂಬರುವ ತಿಂಗಳಿಗೆ ಎರಡು ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲಿದೆ. ಇದರಲ್ಲಿ ನವೀಕರಿಸಿದ ಹೊಸ ಹೋಂಡಾ ಸಿಟಿ ಕಾರು ಮುಂದಿನ ತಿಂಗಳು ಮಾರ್ಚ್ 2 ರಂದು ಶೋರೂಮ್‌ಗಳನ್ನು ತಲುಪಲಿದೆ. ಇದರ ಜೊತಗೆ ಕಂಪನಿಯು ಹೊಸ ಮಿಡ್ ಸೈಜ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ.
ಹೊಸ ಹೋಂಡಾ ಸಿಟಿ ಫೇಸ್‌ಲಿಫ್ಟ್ ಒಳಗೆ ಮತ್ತು ಹೊರಗೆ ಸಣ್ಣ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಇದು ಈ ವರ್ಷದ 2023ರ ಮೇ ತಿಂಗಳಿನಲ್ಲಿ ಮಾರಾಟವಾಗಲಿರುವ ಹೊಸ ತಲೆಮಾರಿನ ಹ್ಯುಂಡೈ ವೆರ್ನಾ ಕಾರಿಗೆ ಪೈಪೋಟಿಯನ್ನು ನೀಡುತ್ತದೆ. ಇನ್ನು ಹೊಸ ಹೋಂಡಾ ಎಸ್‍ಯುವಿಯು ಈ ವರ್ಷದ ಹಬ್ಬದ ಸೀಸನ್ ನಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಹ್ಯುಂಡೈ ಕ್ರೆಟಾ ಎಸ್‍ಯುವಿಗೆ ಪೈಪೋಟಿ ನೀಡುತ್ತದೆ. ಇನ್ನು ಹೋಂಡಾ ಕಂಪನಿಯು ಭಾರತದಲ್ಲಿ ಬಿಡುಗಡೆಗಳಿಸಲಿರುವ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೋಂಡಾ ಸಿಟಿ ಫೇಸ್‌ಲಿಫ್ಟ್
ಬಿಡುಗಡೆಗೆ ಸಜ್ಜಾದ ಈ ಹೊಸ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರು ಪ್ರಸ್ತುತ ಎಂಜಿನ್ ಅನ್ನು ಉಳಿಸಿಕೊಂಡು ಮಾದರಿಯು ಒಳಗೆ ಮತ್ತು ಹೊರಗೆ ಕೆಲವು ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಕಾರಿನ ಕೆಲವು ಹೊಸ ರೂಪಾಂತರಗಳನ್ನು ತೆಗೆದುಹಾಕಬಹುದು ಅಥವಾ ಸೇರಿಸಬಹುದು. ಕಾಸ್ಮೆಟಿಕ್ ಬದಲಾವಣೆಗಳು ಮತ್ತು ವೈಶಿಷ್ಟ್ಯದ ನವೀಕರಣಗಳೊಂದಿಗೆ, ಫೇಸ್‌ಲಿಫ್ಟೆಡ್ ಆವೃತ್ತಿಯು ಸಣ್ಣ ಬೆಲೆ ಏರಿಕೆಗೆ ಸಾಕ್ಷಿಯಾಗಬಹುದು. ಹೊಸ ಹೋಂಡಾ ಸಿಟಿ ಇ:ಎಚ್‌ಇವಿ ಸೆಡಾನ್ ತನ್ನ ಹೋಂಡಾ ಸೆನ್ಸಿಂಗ್ ತಂತ್ರಜ್ಞಾನ ಅಥವಾ ADAS ವೈಶಿಷ್ಟ್ಯಗಳನ್ನು ಭಾರತಕ್ಕೆ ತಂದ ಮೊದಲ ಹೋಂಡಾ ಕಾರು.
ಹೊಸ 2023ರ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರು ಎರಡು ಎಂಜಿನ್ ಗಳ ಆಯ್ಕೆಗಳೊಂದಿಗೆ ಬರುತ್ತದೆ. ಇದು 1.5 ಲೀಟರ್ ನ್ಯಾಚುರಲ್ ಆಸ್ಪರರ್ಡ್ ಪೆಟ್ರೋಲ್ ಮತ್ತು 1.5 ಲೀಟರ್ ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಹೈಬ್ರಿಡ್ ಅನ್ನು ಹೊಂದಿದೆ. ಮೊದಲನೆಯದು 126 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮೈಲೇಜ್ ಅಂಕಿಅಂಶಗಳು ಬದಲಾಗದೆ ಉಳಿಯುತ್ತವೆ. ಅಂದರೆ 18.4 ಕಿ.ಮೀ (ಪೆಟ್ರೋಲ್‌ಗಾಗಿ) ಮತ್ತು 26.5 ಕಿ.ಮೀ (ಪೆಟ್ರೋಲ್ ಹೈಬ್ರಿಡ್‌ಗಾಗಿ) ಮೈಲೇಜ್ ಅನ್ನು ನೀಡಬಹುದು.

ಮುಂಬರುವ ಹೊಸ ಹೊರಸೂಸುವಿಕೆ ಮಾನದಂಡಗಳೊಂದಿಗೆ, ಈ ಹೋಂಡಾ 100 ಬಿಹೆಚ್‍ಪಿ ಪವರ್ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು e-CVT (ಪೆಟ್ರೋಲ್ ಹೈಬ್ರಿಡ್ ರೂಪಾಂತರಕ್ಕೆ ಮಾತ್ರ) ಒಳಗೊಂಡಿರುತ್ತದೆ. ಹೋಂಡಾ ಸಿಟಿ ಇ:ಎಚ್‌ಇವಿ ಹೈಬ್ರಿಡ್ 1.5 ಲೀಟರ್, ನಾಲ್ಕು-ಸಿಲಿಂಡರ್, ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ ಮತ್ತು ಎರಡು ಎಲೆಕ್ಟ್ರಿಕ್ ಮೋಟರ್‌ಗಳಿಂದ ಚಾಲಿತವಾಗಿದೆ.
ಇವುಗಳು 124 ಬಿಹೆಚ್‍ಪಿ ಪವರ್ ಮತ್ತು 253 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸಿಟಿ ಹೈಬ್ರಿಡ್ ತನ್ನ ಪೆಟ್ರೋಲ್ ಪ್ರತಿರೂಪಕ್ಕಿಂತ 40 ಪ್ರತಿಶತ ಹೆಚ್ಚು ಇಂಧನ-ಸಮರ್ಥವಾಗಿದೆ. ಈ ಹೊಸ ಹೋಂಡಾ ಸಿಟಿ ಇ:ಎಚ್‌ಇವಿ ಹೈಬ್ರಿಡ್ ಸೆಡಾನ್ ಅನ್ನು ಭಾರತದಲ್ಲಿ ರಾಜಸ್ಥಾನದಲ್ಲಿರುವ ಹೋಂಡಾದ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತಿದೆ. ಪ್ರಸ್ತುತ ಮಾದರಿಯು 26.5 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಹೈಬ್ರಿಡ್ ಸಿಟಿಯು ತನ್ನ ಪೆಟ್ರೋಲ್ ಚಾಲಿತ ಆವೃತ್ತಿಗಿಂತ 110 ಕೆಜಿ ಭಾರವಾಗಿದೆ.

ಹೊಸ ಹೋಂಡಾ ಎಸ್‍ಯುವಿ
ಈ ಹೊಸ ಹೋಂಡಾ ಎಸ್‍ಯುವಿಯನ್ನು ಮಾರ್ಪಡಿಸಿದ ಅಮೇಜ್‌ನ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುವುದು ಮತ್ತು ಅದರ ಕೆಲವು ವಿನ್ಯಾಸ ಅಂಶಗಳನ್ನು ಹೋಂಡಾದ ಜಾಗತಿಕ CR-V ಮತ್ತು HR-V ಎಸ್‍ಯುವಿಗಳಿಂದ ಪ್ರೇರೇಪಿಸಲಾಗುವುದು. ಇನ್ನು ಈ ಹೊಸ 10.2-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಏರ್‌ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್‌ನೊಂದಿಗೆ ಹೋಂಡಾ ಸೆನ್ಸಿಂಗ್ (ADAS -ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ) ತಂತ್ರಜ್ಞಾನದೊಂದಿಗೆ ಮಾದರಿಯು ಬರುವ ಸಾಧ್ಯತೆಯಿದೆ.
ಈ ಹೊಸ ಹೋಂಡಾ ಎಸ್‍ಯುವಿಯು 1.5 ಲೀಟರ್ i-VTEC ಪೆಟ್ರೋಲ್ ಮತ್ತು 1.5 ಲೀಅರ್ ಅಟ್ಕಿನ್ಸನ್ ಸೈಕಲ್ ಎಂಜಿನ್ ಗಳೊಂದಿಗೆ ಬರಲಿದೆ. ಈ ಕಾರಿನ 1.5-ಲೀಟರ್ i-VTEC ಪೆಟ್ರೋಲ್ ಎಂಜಿನ್ 121 bhp ಮತ್ತು 145 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಹೈಬ್ರಿಡ್ ಆವೃತ್ತಿಯು 1.5-ಲೀಟರ್ ಅಟ್ಕಿನ್ಸನ್ ಸೈಕಲ್ ಎಂಜಿನ್ ಅನ್ನು ಇ: HEV ಹೈಬ್ರಿಡ್ ಟೆಕ್ನೊಂದಿಗೆ ಎರಡು ಎಲೆಕ್ಟ್ರಿಕ್ ಮೋಟಾರ್ ಗಳೊಂದಿಗೆ ಅಳವಡಿಸಲಾಗಿರುತ್ತದೆ.


Click it and Unblock the Notifications