ಕೆಲವೇ ತಿಂಗಳು.. ಆ ಮೇಲೆ ಮಾರುತಿ ಸುಜುಕಿಯ ಈ ಕಾರುಗಳೇ ಅಬ್ಬರಿಸಲಿವೆ, ಮೈಲೇಜ್‌ನಲ್ಲಿ ಬೆಂಕಿ!

ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಆಕ್ರಮಕಾರಿ ಮಾರಾಟ ತಂತ್ರವನ್ನು ಅನುಸರಿಸುತ್ತಿದೆ. ಆ ಕಾರಣಕ್ಕೆ ಸೇಲ್ಸ್ ನಲ್ಲಿ ಹಲವು ವರ್ಷಗಳಿಂದ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದು, ಮತ್ತಷ್ಟು ಹೊಸ ಗ್ರಾಹಕರನ್ನು ಆಕರ್ಷಿಸಲು 2023-24ರಲ್ಲಿ ಮೂರು ಹೈಬ್ರಿಡ್ ಹಾಗೂ ಒಂದು ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ.

ಮೊದಲಿಗೆ ಮಾರುತಿ ಸುಜುಕಿಯ ಕೈಗೆಟುಕುವ ಬೆಲೆಯ ಕಾರುಗಳ ಬಗ್ಗೆ ಮಾತನಾಡೋಣ. ಕಂಪನಿಯು ನೆಕ್ಸ್ಟ್ ಜನರೇಷನ್ ಸಬ್ 4 ಮೀಟರ್ ಸೆಡಾನ್ ಸ್ವಿಫ್ಟ್ ಹಾಗೂ ಡಿಜೈರ್ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಇವೆರೆಡು ಕಾರುಗಳು ಬಲೆನೊ ಹಾಗೂ ಫ್ರಾಂಕ್ಸ್ ಎಸ್‌ಯುವಿ ಹೊಂದಿರುವ HEARTECT ಪ್ಲಾಟ್‌ಫಾರ್ಮ್ ಆಧರಿಸಿದ್ದು, ಒಳಭಾಗ ಹಾಗೂ ಹೊರಭಾಗದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಪಡೆದುಕೊಂಡಿರುವ ಸಾಧ್ಯತೆಯಿದೆ.

ಕೆಲವೇ ತಿಂಗಳು.. ಆ ಮೇಲೆ ಮಾರುತಿ ಸುಜುಕಿಯ ಈ ಕಾರುಗಳೇ ಅಬ್ಬರಿಸಲಿವೆ, ಮೈಲೇಜ್‌ನಲ್ಲಿ ಬೆಂಕಿ!

ಮಾಹಿತಿ ಪ್ರಕಾರ, ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಕಾರು ದೊರೆಯಬೇಕೆಂಬ ಸಲುವಾಗಿ ಈ ಕಾರುಗಳಲ್ಲಿ ಹೊಸದಾದ 1.2 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಕಂಪನಿ ಬಳಕೆ ಮಾಡಲಿದೆಯಂತೆ. ಒಂದೊಮ್ಮೆ ಇದು ನಿಜವಾದರೇ, ಸ್ವಿಫ್ಟ್ ಮತ್ತು ಡಿಜೈರ್ 35 kmpl ಮೈಲೇಜ್ ನೀಡಲಿವೆ. ಪ್ರಸ್ತುತ, ಸ್ವಿಫ್ಟ್ ರೂ.5.99 - 9.03 ಲಕ್ಷ, ಡಿಜೈರ್ ರೂ.6.51 - 9.39 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.

ಮಾರುತಿ ಸುಜುಕಿ, ಟೊಯೊಟಾ ಇನ್ನೋವಾ ಹೈಕ್ರಾಸ್‌ ಆಧಾರಿತ ನೂತನ 'ಇನ್ವಿಕ್ಟೊ' ಎಂಪಿವಿ ಬುಕ್ಕಿಂಗ್ ಅನ್ನು ರೂ.25,000 ಮೊತ್ತಕ್ಕೆ ಇಂದಿನಿಂದ ಆರಂಭಿಸಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಜುಲೈ 5ರಂದು ಅನಾವರಣ ಮಾಡಲಿದೆ. ಏಳರಿಂದ ಎಂಟು ಆಸನ ಆಯ್ಕೆಯಲ್ಲಿ ಖರೀದಿಗೆ ದೊರೆಯುವ ಈ ಎಂಪಿವಿ ಮೇಲೆ ಗ್ರಾಹಕರಿಗೆ ನೀರಿಕ್ಷೆಗಳು ಹೆಚ್ಚಾಗಿದ್ದು, ರೂ.20 ಲಕ್ಷ ದರದಲ್ಲಿ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಕೆಲವೇ ತಿಂಗಳು.. ಆ ಮೇಲೆ ಮಾರುತಿ ಸುಜುಕಿಯ ಈ ಕಾರುಗಳೇ ಅಬ್ಬರಿಸಲಿವೆ, ಮೈಲೇಜ್‌ನಲ್ಲಿ ಬೆಂಕಿ!

ಈ ಇನ್ವಿಕ್ಟೊ, ಇನ್ನೋವಾ ಹೈಕ್ರಾಸ್‌ ಎಂಪಿವಿಯಂತೆ 2.0-ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿರಲಿದ್ದು, ಕನಿಷ್ಠವೆಂದರೂ 21 kmplಗಿಂತ ಹೆಚ್ಚಿನ ಮೈಲೇಜ್ ನೀಡುತ್ತದೆ ಎಂದು ಹೇಳಲಾಗಿದೆ. ಆದರೆ, ವಿನ್ಯಾಸ ಹಾಗೂ ವೈಶಿಷ್ಟ್ಯದ ವಿಚಾರದಲ್ಲಿ ಇನ್ನೋವಾ ಹೈಕ್ರಾಸ್‌ ಗಿಂತ ಭಿನ್ನವಾಗಿರಲಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿರಬಹುದು.

ದೇಶದಲ್ಲಿ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಮೊದಲ ಸ್ಥಾನದಲ್ಲಿದ್ದರೂ, ಈವರೆಗೆ ಯಾವುದೇ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿಲ್ಲ. ಇತರೆ ಕಂಪನಿಗಳಿಗೆ ಹೋಲಿಸಿದರೆ, ಮಾರುತಿ ಸುಜುಕಿ ಈ ವಿಭಾಗದಲ್ಲಿ ಹಿನ್ನೆಡೆ ಅನುಭವಿಸುತ್ತಿತ್ತು. ಇದನ್ನು ನೀಗಿಸಲು ಕಂಪನಿ ಕಳೆದ ಜನವರಿಯಲ್ಲಿ ನಡೆದ ದೆಹಲಿ ಆಟೋ ಎಕ್ಸ್‌ಪೋದಲ್ಲಿ eVX ಎಲೆಕ್ಟ್ರಿಲ್ ಕಾನ್ಸೆಪ್ಟ್ ಕಾರನ್ನು ಪ್ರದರ್ಶನ ಮಾಡಿತ್ತು.

ಕಂಪನಿಯ ನೂತನ ಎಲೆಕ್ಟ್ರಿಕ್ ಕಾರು, 2024ರ ಕೊನೆಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗುವ ನೀರಿಕ್ಷೆ ಇದ್ದು, ಸರಿ ಸುಮಾರು 25 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಹೇಳಲಾಗಿದೆ. ಈ ಎಲೆಕ್ಟ್ರಿಕ್ ಕಾರಿಗಾಗಿ ಕಂಪನಿಯೇ ತನ್ನದೇ ಸ್ವಂತ ಪ್ಲಾಟ್‌ಫಾರ್ಮ್ ಅಭಿವೃದ್ಧಿಪಡಿಸಿದೆಯಂತೆ. ಇದರಲ್ಲಿ 60kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 550 km ರೇಂಜ್ ನೀಡುತ್ತದೆ.

ಮಾರುತಿ ಸುಜುಕಿ ಬಿಡುಗಡೆ ಮಾಡಲು ಹೊರಟಿರುವ ಕಾರುಗಳನ್ನು ಗಮನಿಸಿದಾಗ, ಇವೆಲ್ಲವೂ ಭಾರತದ ಮಾರುಕಟ್ಟೆಯಲ್ಲಿ ಸೂಪರ್ ಕಮಲ್ ಮಾಡುತ್ತವೆ ಎಂದು ಸುಲಭವಾಗಿ ಹೇಳಬಹುದು. ಅದರಲ್ಲೂ ಮುಂದಿನ ತಿಂಗಳೇ ಟೊಯೊಟಾ ಇನ್ನೋವಾ ಹೈಕ್ರಾಸ್‌ ಆಧಾರಿತ ನೂತನ 'ಇನ್ವಿಕ್ಟೊ' ಎಂಪಿವಿ ಅನಾವರಣಗೊಳ್ಳಲಿದ್ದು, ಇದರ ಮೇಲೆ ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ನೀರಿಕ್ಷೆಗಳು ಹೆಚ್ಚಾಗಿವೆ.

Article Published On: Tuesday, June 20, 2023, 8:30 [IST]
English summary
2023 24 maruti suzuki launch 3 hybrid 1 electric car details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+