ಬಿಡುಗಡೆಗೂ ಮುನ್ನ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರಿನ ಮಾಹಿತಿಗಳು ಬಹಿರಂಗ

ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಅತ್ಯಂತ ಜನಪ್ರಿಯ ಸಿಟಿ ಸೆಡಾನ್‌ಗೆ ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಹೊಸ 2023ರ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರು ಈ ವರ್ಷದ ಮಾರ್ಚ್ 2 ರಂದು ಬಿಡುಗಡೆಯಾಗಲಿದೆ.

ಹೊಸ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗುವ ಮುನ್ನ, ಈ ಹೊಸ ಕಾರಿನ ಸ್ಪಷ್ಟ ಚಿತ್ರಗಳು ಇಂಟರ್ನೆಟ್‌ನಲ್ಲಿ ಲೀಕ್ ಆಗಿದೆ. ಲೀಕ್ ಆದ ಚಿತ್ರಗಳಲ್ಲಿ, ನವೀಕರಿಸಿದ ಮಿಡ್ ಸೈಜ್ ಗ್ರಾತ್ರದ ಹೋಂಡಾ ಸಿಟಿ ಕಾರಿನ ವಿನ್ಯಾಸ ಸ್ಪಷ್ಟವಾಗಿ ತಿಳಿಯುತ್ತದೆ. ಹೊಸ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರು ಕಾಸ್ಮೆಟಿಕ್ ವಿನ್ಯಾಸ ಬದಲಾವಣೆಗಳೊಂದಿಗೆ ಬರುತ್ತದೆ. ಈ ಹೊಸ ಕಾರು ಸ್ವಲ್ಪ ಪರಿಷ್ಕೃತ ಬಂಪರ್ ಮತ್ತು ಗ್ರಿಲ್ ವಿಭಾಗಕ್ಕೆ ಸ್ಲಿಮ್ಮರ್ ಕ್ರೋಮ್ ಬಾರ್ ಅನ್ನು ಒಳಗೊಂಡಿದೆ.

ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರಿನ ಮಾಹಿತಿಗಳು ಬಹಿರಂಗ

ಈ ಹೊಸ ಕಾರು ಅಗ್ರೇಸಿವ್ ಶೈಲಿಯ ಹೆಡ್‌ಲ್ಯಾಂಪ್‌ಗಳ ಸುತ್ತ ಗ್ರಿಲ್ ಅನ್ನು ಹೊಂದಿದೆ. ಗ್ರಿಲ್ ಈಗ ಹೆಚ್ಚಿನ ರೂಪಾಂತರಗಳಲ್ಲಿ ಹನಿಕಾಂಬ್ ಮಾದರಿಯನ್ನು ಹೊಂದಿದೆ. ಈ ಹೊಸ ಕಾರಿನ ಲೋ ವೆರಿಯೆಂಟ್ ಗಳು, ಲಂಬವಾದ ಸ್ಲ್ಯಾಟ್‌ಗಳನ್ನು ಹೊಂದಿವೆ. ಲೀಕ್ ಆದ ಚಿತ್ರಗಳಲ್ಲಿ ಈ ಹೊಸ ಹೋಂಡಾ ಸಿಟಿ ಕಾರು ನೀಲಿ ಬಣ್ಣವನ್ನು ಹೊಂದಿದೆ. ಈ ಹೊಸ ಕಾರಿನ ಸೈಡ್ ಪ್ರೊಫೈಲ್ ಪ್ರಸ್ತುತ ಮಾರಾಟವಾಗುತ್ತಿರುವ ಮಾದರಿಗೆ ಹೋಲುತ್ತದೆ. ಈ ಹೊಸ ಕಾರಿನ ಹಿಂಭಾಗದಲ್ಲಿ ಹೊಸ ಬಂಪರ್‌ಗಳನ್ನು ಹೊಂದಿವೆ.

ಈ 2023ರ ಹೋಂಡಾ ಸಿಟಿ ಫೇಸ್‌ಲಿಫ್ಟ್ ಪ್ರಸ್ತುತ ಮಾರಾಟದಲ್ಲಿರುವ ಮಾದರಿಯಂತೆಯೇ ಕಾಣುತ್ತದೆ. ಈ ಹೊಸ ಕಾರಿನಲ್ಲಿ ವೈರ್‌ಲೆಸ್ ಚಾರ್ಜರ್ ಮತ್ತು ವೆಂಟಿಲೇಟೆಡ್ ಸೀಟ್‌ಗಳಂತಹ ಹೊಸ ಫೀಚರ್ಸ್ ಗಳನ್ನು ಪಡೆದುಕೊಂದಿವೆ. ಹೋಂಡಾ ಕಂಪನಿಯು ಸಿಟಿ ಸೆಡಾನ್‌ನ ವೇರಿಯಂಟ್ ಲೈನ್-ಅಪ್ ಅನ್ನು ಮತ್ತೆ ಪರಿಚಯಿಸಬಹುದು. ಇದಲ್ಲದೆ ಹೊಸ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರಿನಲ್ಲಿ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗೆ ಪರಿಷ್ಕೃತ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್ ಅನ್ನು ಪಡೆಯಬಹುದು ಎಂದು ಹೇಳಲಾಗುತ್ತಿದೆ.

ಈ ಹೊಸ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರಿನ ಹೈಬ್ರಿಡ್ ಪವರ್‌ಟ್ರೇನ್ ಹೊಂದಿರುವ ಮಾದರಿಯು ಟಾಪ್-ಸ್ಪೆಕ್ ZX ಟ್ರಿಮ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಹೋಂಡಾ ಸಿಟಿ ಹೈಬ್ರಿಡ್‌ ಮಾದರಿಯನ್ನು ಹೊಸ ಕೈಗೆಟುಕುವ ರೂಪಾಂತರವನ್ನು ಪರಿಚಯಿಸಲಿದೆ ಎಂದು ವರದಿಯಾಗಿದೆ, ಇದು ಪೆಟ್ರೋಲ್ ಮತ್ತು ಬಲವಾದ ಹೈಬ್ರಿಡ್ ರೂಪಾಂತರಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹೊಸ ಹೋಂಡಾ ಸಿಟಿ ಸೆಡಾನ್ ಅನ್ನು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ನೀಡಲಾಗುವುದಿಲ್ಲ,

ವರದಿಗಳ ಪ್ರಕಾರ, ಪ್ರಸ್ತುತ 1.5 ಲೀಟರ್ ಎಂಜಿನ್ ಮುಂಬರುವ ರಿಯಲ್ ಡ್ರೈವಿಂಗ್ ಎಮಿಷನ್ಸ್ (RDE) ಮಾನದಂಡಗಳನ್ನು ಪೂರೈಸಲು ನವೀಕರಿಸಲಾಗುವುದಿಲ್ಲ. ಪ್ರಸ್ತುತ ಪೆಟ್ರೋಲ್ ಮತ್ತು ಪೆಟ್ರೋಲ್ ಹೈಬ್ರಿಡ್ ಪವರ್‌ಟ್ರೇನ್‌ಗಳನ್ನು E20 (20 ಪ್ರತಿಶತ ಎಥೆನಾಲ್ ಮಿಶ್ರಣ) ಅನುಸರಣೆಯೊಂದಿಗೆ RDE ಮಾನದಂಡಗಳನ್ನು ಪೂರೈಸಲು ನವೀಕರಿಸಲಾಗುತ್ತದೆ. 2023ರ ಹೋಂಡಾ ಸಿಟಿ ಕಾರಿನಲ್ಲಿ 1.5 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 121 ಬಿಹೆಚ್‍ಪಿ ಪವರ್ 145 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಹಾಗೂ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಪ್ರಬಲವಾದ ಹೈಬ್ರಿಡ್ ಆವೃತ್ತಿಯು ಹೋಂಡಾದ e:HEV ಹೈಬ್ರಿಡ್ ತಂತ್ರಜ್ಞಾನದ ಮಾದರಿಯಲ್ಲಿ 1.5 ಲೀಟರ್ ಅಟ್ಕಿನ್ಸನ್ ಸೈಕಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 126 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರಸ್ತುತ, ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹೋಂಡಾ ಸಿಟಿ ಸೆಡಾನ್ ರೂ. 11.87 ಲಕ್ಷ ಮತ್ತು ರೂ. 15.62 ಲಕ್ಷ ಬೆಲೆಯ ವ್ಯಾಪ್ತಿಯಲ್ಲಿ ಲಭ್ಯವಿದೆ.

ಹೈಬ್ರಿಡ್ ZX eHEV ರೂಪಾಂತರದ ಬೆಲೆ ರೂ.19.89 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಪ್ರಸ್ತುತ ಮಾದರಿಯು 26.5 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಹೋಂಡಾ ಕಾರಿನ ಸುರಕ್ಷತಾ ಫೀಚರ್ಸ್ ಗಳಲ್ಲಿ ಕಾಲಿಷನ್ ಮೆಟಿಗೇಷನ್ ಬ್ರೇಕಿಂಗ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ರೋಡ್ ಡಿಪರ್ಚರ್ ಮೆಟಿಗೇಷನ್ ಒಳಗೊಂಡಿವೆ. ಹೋಂಡಾ ಸೆನ್ಸಿಂಗ್ ಸೂಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋ ಹೈ ಬೀಮ್ ಅಸಿಸ್ಟ್ ಅನ್ನು ಹೊಂದಿದೆ.

Article Published On: Monday, February 20, 2023, 16:50 [IST]
English summary
2023 honda city facelift images leaked more details in kannada
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+