ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಹ್ಯುಂಡೈ ವೆರ್ನಾ: ಬುಕ್ಕಿಂಗ್ ಪ್ರಾರಂಭ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹುಂಡೈ ಮೋಟಾರ್ ಇಂಡಿಯಾ ಇದೀಗ ಹ್ಯುಂಡೈ ವೆರ್ನಾ ಸೆಡಾನ್ ಅನ್ನು 2023ರ ಹ್ಯುಂಡೈ ವೆರ್ನಾ ಸೆಡಾನ್ ಅನ್ನು ಮಾರ್ಚ್ 21 ರಂದು ಬಿಡುಗಡೆಗೊಳಿಸಿದೆ. ದಕ್ಷಿಣ ಕೊರಿಯಾದ ಕಾರು ತಯಾರಕರು ಈ ಹ್ಯುಂಡೈ ವೆರ್ನಾ ಕಾರಿನ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ.

ಈ ಹೊಸ ಹ್ಯುಂಡೈ ವೆರ್ನಾ ಕಾರಿನ ಬುಕ್ಕಿಂಗ್ ಗಾಗಿ ಟೋಕನ್ ಮೊತ್ತ ರೂ.25,000 ಆಗಿದೆ. ಮುಂಬರುವ 2023ರ ಹ್ಯುಂಡೈ ವೆರ್ನಾ ಸೆಡಾನ್ ಕಾರಿನ ಬಗ್ಗೆ ಹೇಳುವುದಾದರೆ, ಈ ಸೆಡಾನ್ ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳು, ಪೂರ್ಣ-ಅಗಲ LED DRL ಗಳು ಮತ್ತು ಶಾರ್ಪ್ ಸ್ಟೈಲಿಂಗ್ ಅನ್ನು ಒಳಗೊಂಡಿರುವ ಹೊಸ ವಿನ್ಯಾಸದ ಶೈಲಿಯನ್ನು ಹೊಂದಿದೆ. ಇದರ ಹೊರತಾಗಿ, 2023ರ ಹ್ಯುಂಡೈ ವೆರ್ನಾ ಕಾರಿನ ಹಿಂಭಾಗದಲ್ಲಿ LED ಲೈಟ್ ಬಾರ್ ಮತ್ತು ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ ಹ್ಯುಂಡೈ ವೆರ್ನಾ

ಈ ಹೊಸ ಹ್ಯುಂಡೈ ಸೆಡಾನ್ ವಿಶಾಲವಾದ ಮುಂಭಾಗದ ಗ್ರಿಲ್‌ನಂತಹ ಗಮನಾರ್ಹ ವಿನ್ಯಾಸ ಅಂಶಗಳೊಂದಿಗೆ ಬರುತ್ತದೆ. ಈ 2023ರ ಹ್ಯುಂಡೈ ವೆರ್ನಾ ಕಾರು EX, S, SX, ಮತ್ತು SX(O) ಸೇರಿದಂತೆ 4 ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಜೊತೆಗೆ ವೆರ್ನಾ ಸೆಡಾನ್ ಅನ್ನು 7 ಸಿಂಗಲ್-ಟೋನ್ ಮತ್ತು 2 ಡ್ಯುಯಲ್-ಟೋನ್ ಬಾಹ್ಯ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಈ ಬಣ್ಣದ ಆಯ್ಕೆಗಳಲ್ಲಿ, ಹೊಸದಾಗಿ ಟೆಲ್ಲುರಿಯನ್ ಬ್ರೌನ್, ಅಟ್ಲಾಸ್ ವೈಟ್ ಮತ್ತು ಅಬಿಸ್ ಬ್ಲ್ಯಾಕ್ ಎಂಬ ಬಾಹ್ಯ ಬಣ್ಣ ಆಯ್ಕೆಗಳಿವೆ.

ಹೊಸ ಹ್ಯುಂಡೈ ವೆರ್ನಾ ಕಾರಿನ ಪವರ್‌ಟ್ರೇನ್ ಆಯ್ಕೆಗಳ ವಿಷಯದಲ್ಲಿ, ಮುಂಬರುವ 2023ರ ಹ್ಯುಂಡೈ ವೆರ್ನಾ ಸೆಡಾನ್ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರಲಿದೆ. ಈ ಕಾರಿನ 1.5-ಲೀಟರ್, ನ್ಯಾಚುರಲ್ ಆಸ್ಪೈರರ್ಡ್ ಪೆಟ್ರೋಲ್ ಎಂಜಿನ್ ಆಗಿರುತ್ತದೆ. ಈ ಎಂಜಿನ್ 113.18 ಬಿಹೆಚ್‍ಪಿ ಪವರ್ ಮತ್ತು 143.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು CVT ಗೇರ್ ಬಾಕ್ಸ್ ನಡುವೆ ಆಯ್ಕೆ ಮಾಡಬಹುದು.

ಎರಡನೇ ಎಂಜಿನ್ ಆಯ್ಕೆಯು ಹೆಚ್ಚು ಪವರ್ ಫುಲ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ ಸುಮಾರು 160 bhp ಪವರ್ ಮತ್ತು 320 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಮುಂಬರುವ 2023ರ ಹ್ಯುಂಡೈ ವೆರ್ನಾ ಕಾರಿನ ಎರಡೂ ಎಂಜಿನ್ ಆಯ್ಕೆಗಳು ಇತ್ತೀಚಿನ ಮತ್ತು ಹೆಚ್ಚು ಕಟ್ಟುನಿಟ್ಟಾದ ಬಿಎಸ್ 6 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ.

ಇದಲ್ಲದೆ, ಈ ಎಂಜಿನ್‌ಗಳು E20 ಇಂಧನ (20 ಪ್ರತಿಶತ ಎಥೆನಾಲ್) ಜೊತೆಗೆ ಸಹ ಹೊಂದಿಕೊಳ್ಳುತ್ತವೆ.ಈ ಮುಂಬರುವ 2023ರ ಹ್ಯುಂಡೈ ವೆರ್ನಾ ಕಾರಿನಲ್ಲಿ ತಿದೊಡ್ಡ USP ಗಳಲ್ಲಿ ಒಂದೆಂದರೆ, ಸೆಡಾನ್ ADAS ಅನ್ನು ಸಹ ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ಹ್ಯುಂಡೈ ವೆರ್ನಾ ಕಾರಿನಲ್ಲಿ ಆಕ್ಟಿವ್ ಸುರಕ್ಷತಾ ವೈಶಿಷ್ಟ್ಯವು ಟಾಪ್-ಸ್ಪೆಕ್ ಟ್ರಿಮ್ ಹಂತಗಳಲ್ಲಿ ಮಾತ್ರ ಸಜ್ಜುಗೊಳ್ಳುವ ಸಾಧ್ಯತೆಯಿದೆ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್ (AEB), ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್-ಸ್ಪಾಟ್ ಮಾನಿಟರಿಂಗ್ ಸಿಸ್ಟಮ್, ಲೇನ್-ನಂತಹ ಸುರಕ್ಷತಾ ವೈಶಿಷ್ಟ್ಯಗಳ ದೀರ್ಘ ಪಟ್ಟಿಯೊಂದಿಗೆ ಬರುವ ನಿರೀಕ್ಷೆಯಿದೆ.

ಮುಂಬರುವ 2023ರ ಹ್ಯುಂಡೈ ವೆರ್ನಾ ಸೆಡಾನ್ ಕಾರಿನಲ್ಲಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಕನೆಕ್ಟೆಡ್ ಕಾರ್ ಟೆಕ್, ಸ್ಮಾರ್ಟ್ ಬೂಟ್ ಲಿಡ್‌ನಂತಹ ಫೀಚರ್ಸ್ ಗಳೊಂದಿಗೆ ಲೋಡ್ ಆಗುವ ನಿರೀಕ್ಷೆಯಿದೆ. ಈ ಕಾರಿನಲ್ಲಿ ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಎಲೆಕ್ಟ್ರಿಕ್ ಸನ್‌ರೂಫ್ ಮತ್ತು ಇನ್ನೂ ಕೆಲವು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

2023ರ ಹ್ಯುಂಡೈ ವೆರ್ನಾ ಕಾರು ಮುಂದಿನ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ದಕ್ಷಿಣ ಕೊರಿಯಾದ ಕಾರು ತಯಾರಕರಿಗೆ ಸ್ಥಿರವಾದ ಮಾರಾಟ ಅಂಕಿಅಂಶಗಳೊಂದಿಗೆ ಸಹಾಯ ಮಾಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಮುಂಬರುವ 2023ರ ಹ್ಯುಂಡೈ ವೆರ್ನಾ ಸೆಡಾನ್ ಅದರ ವ್ಯಾಪಕ ವೈಶಿಷ್ಟ್ಯಗಳ ಪಟ್ಟಿ ಮತ್ತು ADAS ತಂತ್ರಜ್ಞಾನಳನ್ನು ಒಳಗೊಂಡಿವೆ. ಈ ಹ್ಯುಂಡೈ ವೆರ್ನಾ ಹೊಸ ನವೀಕರಣಗಳೊಂದಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಇದಕ್ಕೆ ಪೈಪೋಟಿಯಾಗಿ ಹೋಂಡಾ ಸಿಟಿ ಹೊಸ ನವೀಕರಣಗಳೊಂದಿಗೆ ಬರಲಿದೆ.

Article Published On: Friday, February 17, 2023, 17:15 [IST]
English summary
2023 hyundai verna bookings open launch on 21 march details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+