2023ರ ಹ್ಯುಂಡೈ ವೆರ್ನಾ ಕಾರಿನ ಆಕರ್ಷಕ ಟೀಸರ್ ಬಿಡುಗಡೆ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹುಂಡೈ ಮೋಟಾರ್ ಇಂಡಿಯಾ ಇದೀಗ ಹ್ಯುಂಡೈ ವೆರ್ನಾ ಸೆಡಾನ್ ಅನ್ನು 2023ರ ಹ್ಯುಂಡೈ ವೆರ್ನಾ ಸೆಡಾನ್ ಅನ್ನು ಮಾರ್ಚ್ 21 ರಂದು ಬಿಡುಗಡೆಗೊಳಿಸಿದೆ.ಇದೀಗ ಹ್ಯುಂಡೈ ಕಂಪನಿಯು ಈ ಹೊಸ ವೆರ್ನಾ ಕಾರಿನ ಆಕರ್ಷಕ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಟೀಸರ್ ವೀಡಿಯೊ ಎಲ್ಇಡಿ ಹೆಡ್ ಲೈಟ್ ಗಳೊಂದಿಗೆ ಮುಂಭಾಗ ಮತ್ತು ಹಿಂಭಾಗದಲ್ಲಿ ಪೂರ್ಣ ಅಗಲದ ಎಲ್ಇಡಿ ಲೈಟ್ಬಾರ್ ಅನ್ನು ಹೈಲೈಟ್ ಮಾಡಿದೆ, ಆಶ್ಚರ್ಯಕರ ಸಂಗತಿಯೆಂದರೆ, ದಕ್ಷಿಣ ಕೊರಿಯಾದ ವಾಹನ ತಯಾರಕರು ಮುಂಬರುವ ವೆರ್ನಾ ಸೆಡಾನ್‌ನ ಹಿಂಭಾಗದ ಲೆಗ್‌ರೂಮ್ ಅನ್ನು ಹೈಲೈಟ್ ಮಾಡಿದ್ದಾರೆ. ಹ್ಯುಂಡೈ ವೆರ್ನಾ ಸೆಡಾನ್‌ನ ಹಿಂದಿನ ಮಾದರಿಗಳು ಅದರ ಹಿಂದಿನ ಸೀಟಿನ ಪ್ರಯಾಣಿಕರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿಲ್ಲ.

2023ರ ಹ್ಯುಂಡೈ ವೆರ್ನಾ ಕಾರಿನ ಆಕರ್ಷಕ ಟೀಸರ್ ಬಿಡುಗಡೆ

ಹೊಸ ಹ್ಯುಂಡೈ ವೆರ್ನಾ ಯುವ ಖರೀದಿದಾರರನ್ನು ಆಕರ್ಷಿಸುವ ವೈಶಿಷ್ಟ್ಯಗಳು ಮತ್ತು ಪಂಚ್ ಪವರ್‌ಟ್ರೇನ್‌ಗಳಿಂದ ತುಂಬಿರುತ್ತದೆ ಎಂದು ತಿಳಿದುಬಂದಿದೆ. ಇತ್ತೀಚಿನ ಟೀಸರ್‌ನೊಂದಿಗೆ, 2023ರ ಹ್ಯುಂಡೈ ವೆರ್ನಾ ಸೆಡಾನ್ ಅತ್ಯಂತ ವಿಶಾಲವಾದ ಹಿಂಬದಿಯ ಸೀಟಿನೊಂದಿಗೆ ಬರಲಿದೆ ಎಂಬ ವಿಶ್ವಾಸವಿದೆ. ವಿನ್ಯಾಸದ ವಿಷಯದಲ್ಲಿ, ಮುಂಬರುವ 2023ರ ಹ್ಯುಂಡೈ ವೆರ್ನಾ ಸೆಡಾನ್ ದಕ್ಷಿಣ ಕೊರಿಯಾದ ವಾಹನ ತಯಾರಕರ ಸೆನ್ಸುಯಸ್ ಸ್ಪೋರ್ಟಿನೆಸ್ ವಿನ್ಯಾಸದ ತತ್ವವನ್ನು ಆಧರಿಸಿದೆ.

ಈ ಹೊಸ ಹ್ಯುಂಡೈ ವೆರ್ನಾ ಮಾದರಿಯ ವಿನ್ಯಾಸವು ನ್ಯೂ ಜನರೇಷನ್ ಹ್ಯುಂಡೈ ಎಲಾಂಟ್ರಾ ಮತ್ತು ಗ್ರ್ಯಾಂಡಿಯರ್ ಸೇರಿದಂತೆ ಹ್ಯುಂಡೈನ ಜಾಗತಿಕ ಸೆಡಾನ್‌ಗಳಿಂದ ಹೆಚ್ಚು ಪ್ರೇರಿತವಾಗಿದೆ. ಈ ಹೊಸ ಹ್ಯುಂಡೈ ವೆರ್ನಾ ಕಾರಿನಲ್ಲಿ ಸ್ಪ್ಲಿಟ್ ಹೆಡ್‌ಲ್ಯಾಂಪ್ ವಿನ್ಯಾಸ, ಪೂರ್ಣ-ಅಗಲ LED DRL ಗಳು, ಹಿಂಭಾಗದಲ್ಲಿ LED ಲೈಟ್ ಬಾರ್, ಅಗಲವಾದ ಮುಂಭಾಗದ ಗ್ರಿಲ್ ಮತ್ತು ಹೆಚ್ಚಿನವುಗಳೊಂದಿಗೆ ಬರುತ್ತದೆ.

ಈ ಹೊಸ ವೆರ್ನಾ ಸೆಡಾನ್ ಶಾರ್ಪ್ ಲೈನ್ ಗಳು ಮತ್ತು ಕ್ರೀಸ್‌ಗಳೊಂದಿಗೆ ಮಸ್ಕಲರ್ ಬಾನೆಟ್ ಅನ್ನು ಹೊಂದಿದೆ. ಈ ಹೊಸ ಹ್ಯುಂಡೈ ವೆರ್ನಾ ಕಾರಿನ ಶಾರ್ಪ್ ರೂಫ್ ನೊಂದಿಗೆ ಫಾಸ್ಟ್‌ಬ್ಯಾಕ್ ತರಹದ ಶೈಲಿಯನ್ನು ಹೊಂದಿದೆ. ಈ ಸೆಡಾನ್‌ನ ಉದ್ದಕ್ಕೂ ಬಲವಾದ ಲೈನ್ ಗಳನ್ನು ಹೊಂದಿವೆ. ಈ ಕಾರಿನಲ್ಲಿ ಮಲ್ಟಿ-ಸ್ಪೋಕ್ ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಈ ಕಾರಿನ ಹಿಂಭಾಗದಲ್ಲಿ ಹೊಸ ಹೈಟೆಕ್ "H-ಟೈಲ್ ಲ್ಯಾಂಪ್" ಅನ್ನು ಹೊಂದಿದ್ದು. ಅದು H ಲೋಗೋ ತರಹದ ಆಕಾರವನ್ನು ಹೊಂದಿದೆ, ಈ ಕಾರಿನಲ್ಲಿ ವಿಂಗ್ ತರಹದ ಆಕಾರವನ್ನು ರಚಿಸುತ್ತದೆ. ಒಟ್ಟಾರೆಯಾಗಿ ಈ ಹೊಸ ಹ್ಯುಂಡೈ ವೆರ್ನಾ ಕಾರು ಕೂಪ್ ಶೈಲಿಯನ್ನು ಹೊಂದಿದೆ. ಈ ಹೊಸ ಹ್ಯುಂಡೈ ವೆರ್ನಾ ಕಾರಿನ ಪವರ್‌ಟ್ರೇನ್ ಆಯ್ಕೆಗಳ ವಿಷಯದಲ್ಲಿ, ಮುಂಬರುವ 2023ರ ಹ್ಯುಂಡೈ ವೆರ್ನಾ ಸೆಡಾನ್ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರಲಿದೆ.

ಈ ಕಾರಿನ 1.5-ಲೀಟರ್, ನ್ಯಾಚುರಲ್ ಆಸ್ಪೈರರ್ಡ್ ಪೆಟ್ರೋಲ್ ಎಂಜಿನ್ ಆಗಿರುತ್ತದೆ. ಈ ಎಂಜಿನ್ 113.18 ಬಿಹೆಚ್‍ಪಿ ಪವರ್ ಮತ್ತು 143.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು CVT ಗೇರ್ ಬಾಕ್ಸ್ ನಡುವೆ ಆಯ್ಕೆ ಮಾಡಬಹುದು. ಎರಡನೇ ಎಂಜಿನ್ ಆಯ್ಕೆಯು ಹೆಚ್ಚು ಪವರ್ ಫುಲ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದೆ.

ಈ ಎಂಜಿನ್ ಸುಮಾರು 160 bhp ಪವರ್ ಮತ್ತು 320 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಮುಂಬರುವ 2023ರ ಹ್ಯುಂಡೈ ವೆರ್ನಾ ಕಾರಿನ ಎರಡೂ ಎಂಜಿನ್ ಆಯ್ಕೆಗಳು ಇತ್ತೀಚಿನ ಮತ್ತು ಹೆಚ್ಚು ಕಟ್ಟುನಿಟ್ಟಾದ ಬಿಎಸ್ 6 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ.

Article Published On: Saturday, March 4, 2023, 12:15 [IST]
English summary
2023 hyundai verna teaser out new benchmark for luxury space details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+