ಹೆಚ್ಚಿನ ಮೈಲೇಜ್‌ನೊಂದಿಗೆ 2023ರ ಮಾರುತಿ ಟೂರ್ ಎಸ್ ಕಾರು ಬಿಡುಗಡೆ
ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಭಾರತದಲ್ಲಿ ತನ್ನ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್‌ನ ಫ್ಲೀಟ್-ಓನ್ಲಿ ಆವೃತ್ತಿಯಾದ ಟೂರ್ ಎಸ್ ಅನ್ನು ಬಿಡುಗಡೆ ಮಾಡಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಡಿಜೈರ್ ಸೆಡಾನ್‌ನ ವಾಣಿಜ್ಯ (commercial) ಆವೃತ್ತಿಯಾಗಿದೆ.
ಈ ಹೊಸ 2023ರ ಮಾರುತಿ ಸುಜುಕಿ ಟೂರ್ ಎಸ್ ಸುಧಾರಿತ 1.2 ಲೀಟರ್ K15 C DualJet ಪೆಟ್ರೋಲ್ ಎಂಜಿನ್, ವರ್ಧಿತ ಸುರಕ್ಷತೆ ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಹೊಸ ಮಾರುತಿ ಟೂರ್ ಎಸ್ ಸೆಡಾನ್ ಪೆಟ್ರೋಲ್ ಮತ್ತು ಸಿಎನ್‌ಜಿ ಇಂಧನ ಆಯ್ಕೆಗಳಲ್ಲಿ ಲಭ್ಯವಿದೆ. ಈ 2023ರ ಮಾರುತಿ ಟೂರ್ ಎಸ್ ಕಾರು ಎರಡೂ ರೂಫಾಂತರಗಳಲ್ಲಿ ಲಭ್ಯವಿದೆ. ಇದು ಟೂರ್ S STD (O) ಮತ್ತು ಟೂರ್ S STD (O) CNG ಆಗಿದೆ.

ಈ ಹೊಸ ಮಾರುತಿ ಸುಜುಕಿ ಟೂರ್ ಎಸ್ ಕಾರಿನ ಟೂರ್ S STD (O) ರೂಪಾಂತರದ ಬೆಲೆಯು ರೂ.6.51 ಲಕ್ಷವಾದರೆ, ಟೂರ್ S STD (O) CNG ರೂಪಾಂತರದ ಬೆಲೆಯು ರೂ.7.36 ಲಕ್ಷವಾಗಿದೆ. 2023ರ ಮಾರುತಿ ಸುಜುಕಿ ಟೂರ್ ಎಸ್ ಕಾರಿನ ಹೊಸ ಮುಂಭಾಗದ ಫಾಸಿಕ ಮತ್ತು ಹಿಂಭಾಗದಲ್ಲಿ ಸೊಗಸಾದ ಎಲ್ಇಡಿ ಟೈಲ್ ಲ್ಯಾಂಪ್ ಗಳು ಮತ್ತು ಸಿಗ್ನೇಚರ್ 'ಟೂರ್ ಎಸ್' ಬ್ಯಾಡ್ಜಿಂಗ್ ನೊಂದಿಗೆ ಬರುತ್ತದೆ.
ಹೊಸ 2023ರ ಮಾರುತಿ ಟೂರ್ ಎಸ್ ಕಾರು ಮಾದರಿಯು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಜೊತೆಗೆ ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ (EBD) ಮತ್ತು ಬ್ರೇಕ್ ಅಸಿಸ್ಟ್, ಸ್ಪೀಡ್ ಲಿಮಿಟಿಂಗ್ ಸಿಸ್ಟಮ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ರಕ್ಷತಾ ವೈಶಿಷ್ಟ್ಯಗಳೊಂದಿಗೆ ಅಳವಡಿಸಲಾಗಿದೆ. ಇನ್ನು ಈ ಹೊಸ 2023ರ ಮಾರುತಿ ಟೂರ್ ಎಸ್ ಕಾರು 1.2-ಲೀಟರ್ K15C ಡ್ಯುಯಲ್-ಜೆಟ್, ಡ್ಯುಯಲ್ VVT ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ,
ಈ ಎಂಜಿನ್ 89 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು CNG ಮೋಡ್‌ನಲ್ಲಿ, ಪವರ್‌ಟ್ರೇನ್ 6,000 rpm ನಲ್ಲಿ 77 ಬಿಹೆಚ್‍ಪಿ ಮತ್ತು 4300 rpm ನಲ್ಲಿ 98.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದು ಮುಂಭಾಗದ ವ್ಹೀಲ್ ಗಳಿಗೆ ಪವರ್ ಕಳುಹಿಸುತ್ತದೆ,
2023ರ ಮಾರುತಿ ಟೂರ್ ಎಸ್ ಪೆಟ್ರೋಲ್ ಆವೃತ್ತಿಯು 23.15 ಕಿ.ಮೀ ನಷ್ಟು ಮೈಲೇಜ್ ಅನ್ನು ನೀಡುತ್ತದೆ. ಇನ್ನು ಮಾರುತಿ ಟೂರ್ ಎಸ್ CNG ಕಾರು 32.12 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಸೆಡಾನ್ ಟಿಲ್ಟ್-ಅಡ್ಜಸ್ಟಬಲ್ ಸ್ಟೀರಿಂಗ್ ವೀಲ್, ಮುಂಭಾಗದ ಪರಿಕರ ಸಾಕೆಟ್, ISOFIX ಸೀಟ್ ಆಂಕಾರೇಜ್‌ಗಳು ಮತ್ತು ವೇಗದ ಸೆನ್ಸಿಟಿವ್ ಡೋರ್ ಲಾಕಿಂಗ್ ಅನ್ನು ಪಡೆಯುತ್ತದೆ. ಈ 2023ರ ಮಾರುತಿ ಟೂರ್ ಎಸ್ ಕಾರು ಆರ್ಕ್ಟಿಕ್ ವೈಟ್, ಮಿಡ್ನೈಟ್ ಬ್ಲಾಕ್ ಮತ್ತು ಸಿಲ್ಕಿ ಸಿಲ್ವರ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಅವರು ಮಾತನಾಡಿ, ಆಧುನಿಕ ವಿನ್ಯಾಸ, ಹೊಸ ಯುಗದ ಸುರಕ್ಷತೆ ವೈಶಿಷ್ಟ್ಯಗಳು, ಹೆಚ್ಚಿನ ಪ್ರಾಯೋಗಿಕತೆ ಮತ್ತು ಸುಧಾರಿತ 1.2 ಲೀಟರ್ ಹೊಂದಿರುವ ಆಲ್-ಹೊಸ ಟೂರ್ ಎಸ್ ಕೆ-ಸೀರೀಸ್ ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ ಎಂಜಿನ್ ಕಮರ್ಷಿಯಲ್ ಸೆಡಾನ್ ವಿಭಾಗಕ್ಕೆ ಒಂದು ಕ್ರಾಂತಿಕಾರಿ ಮಾದರಿಯಾಗಿದೆ. ನಾವು ನಮ್ಮ ಕಮರ್ಷಿಯಲ್ ವಿಭಾಗದ ಗ್ರಾಹಕರ ನಿರೀಕ್ಷೆಗಳನ್ನು ಮತ್ತೊಮ್ಮೆ ಮೀರುವ ವಿಶ್ವಾಸ ಹೊಂದಿದ್ದೇವೆ,
ಏಕೆಂದರೆ ನಾವು ಆಲ್-ಹೊಸ ಟೂರ್ ಎಸ್‌ನೊಂದಿಗೆ ಪರಿಪೂರ್ಣ ಸೆಡಾನ್ ಅನುಭವವನ್ನು ನೀಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದರು. ಇನ್ನು ಮಾರುತಿ ಸುಜುಕಿ ಭಾರತದಲ್ಲಿ ಹೊಸ ಸೇಫ್ಟಿ ಫೀಚರ್ಸ್ ಗಳೊಂದಿಗೆ ಜನಪ್ರಿಯ ಮತ್ತು ಬಹುಬೇಡಿಕೆಯ ಬಲೆನೊ ಕಾರನ್ನು ನವೀಕರಿಸಿದೆ. ಈ ಮಾರುತಿ ಸುಜುಕಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಈಗ ESP ಮತ್ತು ಹಿಲ್ ಹೋಲ್ಡ್ ಅನ್ನು ಎಲ್ಲಾ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ESP ಫೀಚರ್ ಸೇರ್ಪಡೆಯು ಮಾರುತಿ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಮೂಲ ರೂಪಾಂತರಗಳನ್ನು ಸ್ಕಿಡ್ಡಿಂಗ್ ಅಪಾಯವನ್ನು ಕಡಿಮೆ ಮಾಡುವ ಮೂಲಕ ಹೆಚ್ಚು ಸುರಕ್ಷಿತಗೊಳಿಸುತ್ತದೆ.


Click it and Unblock the Notifications