2024 Renault Duster: ನನ್ನ ಕಥೆ ಇನ್ನು ಮುಗಿದಿಲ್ಲ... ಹೊಸ ರೆನಾಲ್ಟ್ ಡಸ್ಟರ್ ಚಿತ್ರಗಳು ಸೋರಿಕೆ!

ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಜನಪ್ರಿಯತೆ ಪಡೆದಿದ್ದ ರೆನಾಲ್ಟ್ ಡಸ್ಟರ್, ಭಾರತದಲ್ಲಿನ SUV ಉತ್ಸಾಹಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಅದರ ದೃಢವಾದ ಸಸ್ಪೆನ್ಷನ್ ಮತ್ತು AWD ಸಾಮರ್ಥ್ಯಗಳು ಅತ್ಯಂತ ಸಮರ್ಥವಾದ ಕಾಂಪ್ಯಾಕ್ಟ್ SUV ಎಂದು ಸಾಭೀತು ಪಡಿಸಿವೆ. ಇದೀಗ ತನ್ನ ಗತವೈಭವವನ್ನು ಮರಳಿಪಡೆಯಲು ಡಸ್ಟರ್ ಹೊಸ ಲುಕ್‌ನಲ್ಲಿ ಬರಲಿದೆ.

ಎಲ್ಲರಿಗೂ ತಿಳಿದಿರುವಂತೆ ಮೊದಲ ರೆನಾಲ್ಟ್ ಡಸ್ಟರ್ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡಿತ್ತು. ಬಳಿಕ ಎರಡನೇ ತಲೆಮಾರಿನ (2nd Gen) ಮಾದರಿಯು ನಮಗೆ ಸಿಗಲಿಲ್ಲವಾದರೂ, ಮೂರನೇ ಪೀಳಿಗೆಯ (3rd Gen) ಆಗಮನದ ನಿರೀಕ್ಷೆಯು 2025 ರ ಸುಮಾರಿಗೆ ನಿರೀಕ್ಷಿಸಲಾಗಿದೆ. ಹೊಸ ಟೀಸರ್ ಚಿತ್ರಗಳಲ್ಲಿ ಏನಿದೆ ಎಂಬುದರ ಒಂದು ನೋಟವನ್ನು ಇಲ್ಲಿ ನೋಡೋಣ.

2024-renault-duster-images-leaked-full-details

ಮುಂಬರುವ ಮೂರನೇ ತಲೆಮಾರಿನ ಡಸ್ಟರ್, ನವೆಂಬರ್ 29, 2024 ರಂದು ಪೋರ್ಚುಗಲ್‌ನಲ್ಲಿ ರೆನಾಲ್ಟ್‌ನ ಅಂಗಸಂಸ್ಥೆಯಾದ ಡೇಸಿಯಾದಿಂದ ಅನಾವರಣಗೊಳ್ಳಲಿದೆ. 2025 ರ ಸುಮಾರಿಗೆ ರೆನಾಲ್ಟ್ ಬ್ರ್ಯಾಂಡ್‌ನ ಅಡಿಯಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಡಸ್ಟರ್ ತನ್ನ ಕೈಗೆಟಕುವ ಬೆಲೆ, ಸರಳತೆ, ದೃಢವಾದ ವಿನ್ಯಾಸ, ರಸ್ತೆ ಉಪಸ್ಥಿತಿ ಮತ್ತು ವಿಶ್ವಾಸಾರ್ಹತೆಯಿಂದಾಗಿ ವಿವಿಧ ಮಾರುಕಟ್ಟೆಗಳಲ್ಲಿ ಬೇಡಿಕೆಯಿದೆ.

ಇದೀಗ ಸೋರಿಕೆಯಾದ ಟಿಸರ್ ಚಿತ್ರಗಳು ಮೊದಲ ಮತ್ತು ಎರಡನೇ ತಲೆಮಾರಿನ ಡಸ್ಟರ್ ಮಾದರಿಗಳಿಗೆ ಸ್ಪಷ್ಟವಾದ ಗೌರವವನ್ನು ನೀಡುತ್ತವೆ. ಡಸ್ಟರ್ ಅನ್ನು ಅದರ ಪ್ರಾರಂಭದಿಂದಲೂ ವ್ಯಾಖ್ಯಾನಿಸಿರುವ ಒರಟಾದ ಲುಕ್‌ ಅನ್ನು ಈಗಲೂ ಬಿಟ್ಟುಕೊಟ್ಟಿಲ್ಲ. ಮುಂಭಾಗದ ಗ್ರಿಲ್, ಹೆಡ್‌ಲೈಟ್‌ಗಳು ಮತ್ತು ಇಂಟಿಗ್ರೇಟೆಡ್ ಡಿಆರ್‌ಎಲ್‌ಗಳನ್ನು ಹೊಂದಿರುವ ಏಕೀಕೃತ ಕಪ್ಪು ಅಂಶದೊಂದಿಗೆ ಫ್ಲಾಟ್ ಬಾನೆಟ್ ಅನ್ನು ಹೊಂದಿದೆ.

2024-renault-duster-images-leaked-full-details

ಬುಲ್ ಬಾರ್-ಪ್ರೇರಿತ ಬಂಪರ್ ಇನ್ಸರ್ಟ್ ಮತ್ತು ಪ್ರಮುಖ ಸಿಲ್ವರ್ ಫಾಕ್ಸ್ ಸ್ಕಿಡ್ ಪ್ಲೇಟ್ ಅದರ ದೃಢವಾದ ಲುಕ್‌ಗೆ ಇನ್ನೂ ಆಕರ್ಷತೆಯನ್ನು ಹೆಚ್ಚಿಸಿದೆ. ಫಾಗ್ ಲ್ಯಾಂಪ್‌ಗಳ ಕೊರತೆಯಿದ್ದರೂ, ಡಸ್ಟರ್ ಏರ್‌ ಕರ್ಟನ್‌ಗಳನ್ನು ಸಂಯೋಜಿಸುತ್ತದೆ, ವೀಲ್‌ಗಳ ಮೂಲಕ ಗಾಳಿಯ ಹರಿವನ್ನು ನಿರ್ದೇಶಿಸುತ್ತದೆ. ಗಮನಾರ್ಹವಾಗಿ, ರೆನಾಲ್ಟ್‌ನ ಬಿಗ್‌ಸ್ಟರ್ ಪರಿಕಲ್ಪನೆಗೆ ಗಮನಾರ್ಹವಾದ ಹೋಲಿಕೆಯಿದೆ.

ಅದರ ಪ್ರೊಫೈಲ್ ಅನ್ನು ಪರಿಶೀಲಿಸಿದಾಗ ಹೊಸ 10-ಸ್ಪೋಕ್ ಅಲಾಯ್ ವೀಲ್‌ಗಳು, ಗಣನೀಯ ಡೋರ್ ಕ್ಲಾಡಿಂಗ್, ಕ್ಲಾಡಿಂಗ್‌ನೊಂದಿಗೆ ಸ್ಕ್ವೇರ್-ಆಫ್ ವೀಲ್ ಆರ್ಚ್‌ಗಳು, ರೂಫ್ ರೈಲ್ಸ್, ವಿಸ್ತಾರವಾದ ಗಾಜಿನ ಪ್ರದೇಶಗಳು ಮತ್ತು ಗಟ್ಟಿಮುಟ್ಟಾದ ಹಿಂಭಾಗದ ಕ್ವಾರ್ಟರ್ ಪ್ಯಾನೆಲ್‌ಗಳನ್ನು ಬಹಿರಂಗಪಡಿಸುತ್ತದೆ. ಹಿಂಭಾಗವು ತಲೆಕೆಳಗಾದ Y-ಆಕಾರದ LED ಟೈಲ್ ಲೈಟ್‌ಗಳು, ಚಿಕ್ಕದಾದ ಹಿಂಭಾಗದ ವಿಂಡ್‌ಶೀಲ್ಡ್ ಮತ್ತು ಬೂಟ್‌ಗಾಗಿ ಹೆಚ್ಚಿನ ಲೋಡ್ ಲಿಪ್ ಅನ್ನು ನೀಡಲಾಗಿದೆ.

2024-renault-duster-images-leaked-full-details

ಹಿಂಭಾಗದ ಸಿಲ್ವರ್ ಅಂಶ ಮತ್ತು ಹೆಚ್ಚು ಎದ್ದುಕಾಣುವ ಸ್ಪ್ಲಿಟ್ ರೂಫ್ ಸ್ಪಾಯ್ಲರ್ ಗಮನ ಸೆಳೆಯುತ್ತದೆ, ಇದು ಕಿಗರ್‌ನ ಹಿಂಭಾಗವನ್ನು ನೆನಪಿಸುತ್ತದೆ. ಹೆಚ್ಚುವರಿಯಾಗಿ, ಹಿಂಭಾಗದ ಬಾಗಿಲಿನ ಹಿಡಿಕೆಗಳು (ಡೋರ್ ಹ್ಯಾಂಡಲ್) ತಮ್ಮ ಸಾಮಾನ್ಯ ಸ್ಥಳಕ್ಕಿಂತ ಹೆಚ್ಚಾಗಿ ಸಿ-ಪಿಲ್ಲರ್‌ಗಳ ಮೇಲೆ ಮರುಸ್ಥಾಪಿಸಲ್ಪಟ್ಟಿವೆ. ಹೀಗಾಗಿ ಹೊಸ ಲುಕ್ ಅನ್ನು ನಿಡುತ್ತದೆ.

ಪವರ್‌ಟ್ರೇನ್ ಸಂಬಂಧಿಸಿದಂತೆ, ಮುಂಬರುವ ಡಸ್ಟರ್‌ಗೆ ಸಂಭಾವ್ಯ ಆಯ್ಕೆಗಳ ಸುತ್ತ ವಿವಿಧ ವದಂತಿಗಳು ಸುತ್ತುತ್ತಿದ್ದು ಉತ್ಸಾಹಿಗಳು ಊಹಿಸುವಂತೆ ಮಾಡಿದೆ. ವೈಶಿಷ್ಟ್ಯಗಳ ಕುರಿತು ವಿವರಗಳು ಇನ್ನೂ ಬಹಿರಂಗಪಡಿಸಿಲ್ಲ, ನಾಳೆ ನವೆಂಬರ್ 29 ರಂದು ರೆನಾಲ್ಟ್ ಡಸ್ಟರ್ ಕುರಿತು ಇನ್ನಷ್ಟು ಸಮಗ್ರ ಮಾಹಿತಿಯು ಅನಾವರಣಗೊಳ್ಳುವ ನಿರೀಕ್ಷೆಯಿದೆ.

2024-renault-duster-images-leaked-full-details

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

Article Published On: Tuesday, November 28, 2023, 11:46 [IST]
English summary
2024 renault duster images leaked full details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+