Hyundai Exter: 27 Km ಮೈಲೇಜ್‌ನ ಹ್ಯುಂಡೈ ಎಕ್ಸ್‌ಟರ್‌ಗೆ 1 ಲಕ್ಷ ಬುಕ್ಕಿಂಗ್: ಇದೇ ಯಶಸ್ಸಿನ ಗುಟ್ಟು!

ಭಾರತದ ಕಾರು ಮಾರುಕಟ್ಟೆಯ ಮೈಕ್ರೋ ಎಸ್‌ಯುವಿ ವಿಭಾಗದಲ್ಲಿ ಟಾಟಾ ಪಂಚ್ ತನಗೆ ಸರಿ ಸಾಟಿ ಇಲ್ಲವೆಂಬಂತೆ ಮಾರಾಟವಾಗುತ್ತಿತ್ತು. ಅದಕ್ಕೆ ತೀವ್ರ ಪ್ರತಿಸ್ಪರ್ಧೆಯೊಡ್ಡಲು ಹ್ಯುಂಡೈ (Hyundai) ಜುಲೈ ತಿಂಗಳು ಎಕ್ಸ್‌ಟರ್‌ (Exter) ಎಸ್‌ಯುವಿಯನ್ನು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೊಳಿಸಿ, ಅಂದಿನಿಂದಲೇ ದೊಡ್ಡಮಟ್ಟದಲ್ಲಿ ಗ್ರಾಹಕರನ್ನು ಸೆಳೆದಿತ್ತು.

ಈ ವರ್ಷ ಹ್ಯುಂಡೈ ಕಾರುಗಳಲ್ಲಿಯೇ ಎಕ್ಸ್‌ಟರ್‌ 1 ಲಕ್ಷ ಆರ್ಡರ್ ಪಡೆಯುವ ಮೂಲಕ ದೊಡ್ಡದೊಂದು ದಾಖಲೆಯನ್ನು ನಿರ್ಮಾಣ ಮಾಡಿದೆ. ಭಾರತದಲ್ಲಿ ಹ್ಯುಂಡೈ ತನ್ನ ಕಾರ್ಯಾಚರಣೆಯನ್ನು ಶುರು ಮಾಡಿ, 27 ವರ್ಷಗಳು ಕಳೆದಿದ್ದು, ಜನಪ್ರಿಯ ಐ10 ಹಾಗೂ ಸ್ಯಾಂಟ್ರೊ ಮಾರಾಟದಿಂದ ಕಂಪನಿಗೆ ಬಲವಾದ ಅಡಿಪಾಯ ಹಾಕಲಾಗಿದೆ. ಕ್ರೆಟಾ, ವೆನ್ಯೂ ಎಸ್‌ಯುವಿಗಳು ಕೂಡ ಯಶಸ್ವಿಯಾಗಿ ಸೇಲ್ ಆಗುತ್ತಿವೆ. ಇವುಗಳೊಂದಿಗೆ 'ಎಕ್ಸ್‌ಟರ್‌' ಕೂಡ ಭಾರೀ ಜನಪ್ರಿಯತೆಗಳಿಸುತ್ತಿದೆ.

Hyundai Exter: 27 Km ಮೈಲೇಜ್‌ನ ಹ್ಯುಂಡೈ ಎಕ್ಸ್‌ಟರ್‌ಗೆ 1 ಲಕ್ಷ ಬುಕ್ಕಿಂಗ್: ಇದೇ ಯಶಸ್ಸಿನ ಗುಟ್ಟು!

ದೇಶೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಎಕ್ಸ್‌ಟರ್‌ ಎಸ್‌ಯುವಿ ಈ ಮಟ್ಟಿಗೆ ಪ್ರಖ್ಯಾತಿ ಪಡೆಯಲು ಕಾರಣವೇನೆಂಬುದು ವಿವರಿಸಿದ್ದೇವೆ. ಈ ಕಾರಿನ ಬೆಲೆ ಕೈಟೆಟುಕುವಂತೆ ಇದ್ದು, ಬಹುತೇಕ ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗಿದೆ. ಕಂಪನಿಯು ಎಕ್ಸ್‌ಟರ್‌ನ್ನು ರೂ.6 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಾಂಚ್ ಮಾಡಿತ್ತು. ಟಾಪ್ ಎಂಡ್ ಮಾದರಿ ರೂ.10.5 ಲಕ್ಷ ದರವನ್ನು ಹೊಂದಿದೆ.

ನೂತನ ಹ್ಯುಂಡೈ ಎಕ್ಸ್‌ಟರ್‌ ಭರಪೂರ ವೈಶಿಷ್ಟ್ಯಗಳನ್ನು ಪಡೆದಿದ್ದು, ಹೆಚ್ಚಿನ ಖರೀದಿದಾರನ್ನು ಆಕರ್ಷಿಸಲು ಕಾರಣವಾಗಿದೆ. ಈ ಕಾರು, 8 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಎಲೆಕ್ಟ್ರಿಕ್ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋ ಎಸಿ ಸೇರಿದಂತೆ ನವೀನ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Hyundai Exter: 27 Km ಮೈಲೇಜ್‌ನ ಹ್ಯುಂಡೈ ಎಕ್ಸ್‌ಟರ್‌ಗೆ 1 ಲಕ್ಷ ಬುಕ್ಕಿಂಗ್: ಇದೇ ಯಶಸ್ಸಿನ ಗುಟ್ಟು!

ಈಗಿನ ದಿನಗಳಲ್ಲಿ ಹೊಸ ಕಾರು ಖರೀದಿಸುವವರೂ ಬೆಲೆಗಿಂತ ಸುರಕ್ಷತೆಯ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆ ವಿಚಾರದಲ್ಲಿ ಹ್ಯುಂಡೈ ಎಕ್ಸ್‌ಟರ್‌ ಸಾಕಷ್ಟು ಸೇಫ್ಟಿ ಫೀಚರ್ಸ್ ಪಡೆದುಕೊಂಡಿದೆ. ಮುಖ್ಯವಾಗಿ, 6 ಏರ್‌ಬ್ಯಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಸೀಟ್‌ಬೆಲ್ಟ್ ರಿಮೈಂಡರ್‌, ISOFIX ಚೈಲ್ಡ್ ಸೀಟ್ ಆಂಕರ್‌ ಅನ್ನು ಹೊಂದಿದೆ.

ಹ್ಯುಂಡೈ ಎಕ್ಸ್‌ಟರ್‌ ಈ ಮಟ್ಟಿಗೆ ಯಶಸ್ವಿಯಾಗಲು, ಅದರ ಕಾರ್ಯಕ್ಷಮತೆಯೂ ಪ್ರಮುಖವಾಗಿದೆ. ಇದು, 1.2 - ಲೀಟರ್, 4 - ಸಿಲಿಂಡರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್ ಟ್ರೈನ್ ಆಯ್ಕೆಯನ್ನು ಒಳಗೊಂಡಿದೆ. 5 - ಸ್ವೀಡ್ ಮ್ಯಾನುವಲ್ ಹಾಗೂ 5 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ದೊರೆಯಲಿದ್ದು, ಪೆಟ್ರೋಲ್ ರೂಪಾಂತರ, 19.2kmpl ರಿಂದ 19.4kmpl, ಸಿಎನ್‌ಜಿ ವೇರಿಯೆಂಟ್ 27.1 km/kg ಮೈಲೇಜ್ ಕೊಡುತ್ತದೆ.

ಭಾರತದ ಮಾರುಕಟ್ಟೆಯಲ್ಲಿ ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರನ್ನು ಮಾರಾಟ ಮಾಡುತ್ತಿದೆ. ಸರಿ ಸುಮಾರು ಅದೇ ಬೆಲೆಯ ಆಸುಪಾಸಿನಲ್ಲಿ ಎಕ್ಸ್‌ಟರ್‌ ಕೂಡ ಇದ್ದು, ಅಧಿಕ ಗ್ರಾಹಕರನ್ನು ಸೆಳೆಯುವಲ್ಲಿ ಸಹಾಯಕವಾಗಿದೆ. ಜೊತೆಗೆ ನಗರದ ಯುವ ಜನರನ್ನು ಗುರಿಯಾಗಿಸಿಕೊಂಡು ಕಂಪನಿಯು ಈ ಕಾರನ್ನು ಅಭಿವೃದ್ಧಿಪಡಿಸಿರುವುದು ಪ್ಲಸ್ ಪಾಯಿಂಟ್ ಆಗಿದೆ ಎಂದು ಹೇಳಬಹುದು.

ಇವೆಲ್ಲ ಒಂದು ಕಡೆಯಾದರೆ, ಹ್ಯುಂಡೈ ದೇಶಾದ್ಯಂತ ಬಲವಾದ ಮಾರಾಟ ಜಾಲವನ್ನು ಹೊಂದಿರುವುದು ಕೂಡ ಎಕ್ಸ್‌ಟರ್‌ ಯಶಸ್ಸಿಗೆ ಮತ್ತೊಂದು ಕಾರಣವಾಗಿದೆ. ಈ ನವೆಂಬರ್ ತಿಂಗಳು ದೀಪಾವಳಿ ಹಬ್ಬವಿದ್ದ ಹಿನ್ನೆಲೆ, ಎಕ್ಸ್‌ಟರ್‌ನ್ನು ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸಿರಬಹುದು ಎಂದು ಅಂದಾಜಿಸಲಾಗಿದ್ದು, ಹೊಸ ವರ್ಷಕ್ಕೆ ಈ ಕಾರಿಗೆ ಮತ್ತಷ್ಟು ಡಿಮ್ಯಾಂಡ್ ಬರಬಹುದು ಎನ್ನಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, November 20, 2023, 14:06 [IST]
English summary
27 km mileage hyundai exter suv receives 1 lakh booking it is the success factors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+