Just In
- 43 min ago
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- 1 hr ago
ಈ ಕಾರು ಮಾರುಕಟ್ಟೆಗೆ ಬಂದ್ರೆ ಯಾರೂ ದ್ವಿಚಕ್ರ ವಾಹನವನ್ನು ಖರೀದಿಸುವುದಿಲ್ಲ.. ಭಾರತದಲ್ಲಿ ಸಿಗುತ್ತಾ?
- 1 hr ago
ಡೀಲರ್ ಬಳಿ ತಲುಪಿದ ಹೊಸ ಮಾರುತಿ ಗ್ರ್ಯಾಂಡ್ ವಿಟಾರಾ S-CNG
- 2 hrs ago
ಧೂಳೆಬ್ಬಿಸುತ್ತಿರುವ ಮಹೀಂದ್ರಾ XUV400 EV ಬುಕಿಂಗ್ಸ್... ನೆಕ್ಸಾನ್ ಇವಿಗೆ ಸೆಡ್ಡು ಹೊಡಿಯಲಿದೆಯೇ?
Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ಯೂಟ್ಯೂಬ್ ನೋಡಿ ಕಳ್ಳತನ ಕಲಿತ ಜೋಡಿ: ಶಶಿಕಲಾ ಜೊಲ್ಲೆ ಮಾಲೀಕತ್ವದ ಬ್ಯಾಂಕ್ಗೆ ಕನ್ನ
- Movies
ಬಾಲನಟಿಯರಾಗಿ ಬಂದು ನಾಯಕಿಯರಾಗಿ ರಂಜಿಸುತ್ತಿರುವ ಚೆಂದುಳ್ಳಿ ಚೆಲುವೆಯರ ಜರ್ನಿ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮುಂಬರಲಿರುವ ಮಾರುತಿ ಸುಜುಕಿ ಎಸ್‌ಯುವಿಗಳು: ನೋಡಲು ಭರ್ಜರಿಯಾಗಿವೆ..
ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಾರುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಅದರಂತೆ ಕಂಪನಿಯು ವಿವಿಧ ಮಾದರಿಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಬಿಡುಗಡೆ ಮಾಡುತ್ತಿರುತ್ತದೆ. ಈ ಕಾರುಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳು ಆಕರ್ಷಕವಾಗಿದ್ದು, ಪ್ರತಿಯೊಬ್ಬರು ಖರೀದಿ ಮಾಡಲು ಇಷ್ಟಪಡುತ್ತಾರೆ.
ಮಾರುತಿ ಸುಜುಕಿ ಇಂಡಿಯಾ ಮುಂದಿನ ಎರಡು ವರ್ಷಗಳಲ್ಲಿ ತನ್ನ ಎಸ್‌ಯುವಿ ವಿಭಾಗವನ್ನು ಮತ್ತಷ್ಟು ವಿಸ್ತರಿಸಲು ಯೋಜಿಸುತ್ತಿದೆ. ಈ ವರ್ಷವು ಕಂಪನಿಯ ಎರಡು ಹೊಸ ಮಾದರಿಗಳು ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಎಲ್ಲರನ್ನು ಆಕರ್ಷಿಸಿದವು. ಬಹುನೀರಿಕ್ಷಿತ 5 ಡೋರ್ ಜಿಮ್ನಿ ಜೊತೆಗೆ ಫ್ರಾಂಕ್ಸ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಅನಾವರಣ ಮಾಡಲಾಯಿತು. ಜಿಮ್ನಿ, ಮಾರ್ಚ್ ಅಥವಾ ಏಪ್ರಿಲ್‌ನಿಂದ ಖರೀದಿಗೆ ದೊರೆಯಲಿದ್ದು, ಮೇ ತಿಂಗಳಿನಿಂದ ಫ್ರಾಂಕ್ಸ್ ಎಸ್‌ಯುವಿ ಮಾರಾಟವಾಗಲಿದೆ. ಇಲ್ಲಿ ಮುಂಬರಲಿರುವ ಮಾರುತಿ ಸುಜುಕಿ ಎಸ್‌ಯುವಿಗಳ ಬಗ್ಗೆ ತಿಳಿಸಲಾಗಿದೆ.
ಮಾರುತಿ ಸುಜುಕಿ ಫ್ರಾಂಕ್ಸ್:
ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಧಾರಿತ ಈ ಎಸ್‌ಯುವಿ, ಗ್ರ್ಯಾಂಡ್ ವಿಟಾರಾವನ್ನು ಕೂಡ ಹೋಲುತ್ತದೆ. ಇದು ಎರಡು ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. 1.2-ಲೀಟರ್, ನ್ಯಾಚುರಲ್-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 88.5 bhp ಗರಿಷ್ಠ ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1.0-ಲೀಟರ್, ಟರ್ಬೋಚಾರ್ಜ್ಡ್ ಎಂಜಿನ್ 98.6 bhp ಪವರ್ ಮತ್ತು 147.6Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.
ಈ ಎಸ್‌ಯುವಿ, 5 ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೇ ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ. ಫ್ರಾಂಕ್ಸ್ ಎಸ್‌ಯುವಿ ಬೆಲೆ ರೂ.10 ಲಕ್ಷದಿಂದ ರೂ.14 ಲಕ್ಷ ಇರಬಹುದು. ಎಂದು ಅಂದಾಜಿಸಲಾಗಿದೆ. ಇದರ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, 7-ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್, ವೈರ್‌ಲೆಸ್ ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ, ವಾಯ್ಸ್ ಅಸಿಸ್ಟೆಂಟ್, USB, ಬ್ಲೂಟೂತ್, OTA ಅಪ್‌ಡೇಟ್, 4-ಸ್ಪೀಕರ್ ಆಡಿಯೊ ಸಿಸ್ಟಮ್ ಸೇರಿದಂತೆ ಹತ್ತು ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿರಲಿದೆ.
ಮಾರುತಿ ಸುಜುಕಿ ಜಿಮ್ನಿ:
ಬಹುನಿರೀಕ್ಷಿತ 5 ಡೋರ್ ಮಾರುತಿ ಸುಜುಕಿ ಜಿಮ್ನಿಯ ಬುಕಿಂಗ್‌ಗಳು ದೇಶಾದ್ಯಂತ ಪ್ರಾರಂಭವಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಮುಂಬರುವ 5 ಡೋರ್ ಮಹೀಂದ್ರಾ ಥಾರ್‌ಗೆ ಭಾರೀ ಪೈಪೋಟಿ ನೀಡಲಿದೆ. ಜಿಮ್ನಿ 5 ಡೋರ್ ಹಿಂದಿನ ಮಾದರಿಯಂತೆ K15B ಎಂಜಿನ್ ಹೊಂದಿದ್ದು,105 hp ಗರಿಷ್ಠ ಪವರ್ ಮತ್ತು 134 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ಬೆಲೆ ಸುಮಾರು 12 ಲಕ್ಷ ರೂಪಾಯಿ (ಎಕ್ಸ್ ಶೋರೂಂ) ಇರಬಹುದು ಎಂದು ಹೇಳಲಾಗಿದೆ.
7-ಸೀಟರ್ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ:
ಮಾರುತಿ ಸುಜುಕಿಯು ಗ್ರ್ಯಾಂಡ್ ವಿಟಾರಾದ 3-ರೋ ಆವೃತ್ತಿಯನ್ನು ಸದ್ಯ ಅಭಿವೃದ್ಧಿ ಪಡಿಸುತ್ತಿದೆ. ಇದು 2025ರ ವೇಳೆಗೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಇದು Y17 ಎಂಬ ಕೋಡ್ ನೇಮ್ ಹೊಂದಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಗ್ರ್ಯಾಂಡ್ ವಿಟಾರಾ ಆವೃತ್ತಿಗೆ ಹೋಲಿಸಿದರೆ, ಇದು ಸ್ವಲ್ಪ ಉದ್ದವಾದ ವೀಲ್‌ಬೇಸ್ ಅನ್ನು ಹೊಂದಿರಬಹುದು. ಅಲ್ಲದೆ, 1.5-ಲೀಟರ್ ಮೈಲ್ಡ್ - ಹೈಬ್ರಿಡ್ ಪೆಟ್ರೋಲ್ ಮತ್ತು 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಲಿದೆ ಎಂದು ಹೇಳಲಾಗಿದೆ.
ಮಾರುತಿ ಸುಜುಕಿ YY8:
ಇತರೆ ವಾಹನ ತಯಾರಕ ಕಂಪನಿಗಳಂತೆ ಮಾರುತಿ ಸುಜುಕಿ ಸಹ ಎಲೆಕ್ಟ್ರಿಕ್ ಕಾರು ತಯಾರಿಕೆಗೆ ಒಲವನ್ನು ತೋರಿಸುತ್ತಿದೆ. ಇತ್ತೀಚೆಗೆ ಮುಕ್ತಾಯಗೊಂಡ ಆಟೋ ಎಕ್ಸ್‌ಪೋದಲ್ಲಿ eVX ಪರಿಕಲ್ಪನೆಯನ್ನು (CONCEPT) ಪ್ರದರ್ಶಿಸಿತು. ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದ್ದು, YY8 ಕೋಡ್ ನೇಮ್ ಹೊಂದಿದೆ. ಇದು 2WD (ಟೂ ವೀಲ್ ಡ್ರೈವ್) ಮತ್ತು 4WD (ಫೋರ್ ವೀಲ್ ಡ್ರೈವ್) ಕಾನ್ಫಿಗರೇಶನ್‌ಗಳಲ್ಲಿ ಖರೀದಿಗೆ ಲಭ್ಯವಾಗಬಹುದು. ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಮಾರುತಿ ಸುಜುಕಿ ಬಹಿರಂಗಪಡಿಸಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.