ಕೈಗೆಟುಕವ ಬೆಲೆಯ MG Comet EV ಡೀಲರ್‌ಶಿಪ್‌ಗೆ ಆಗಮನ... ವಿತರಣೆಗೆ ದಿನಗಣನೆ
ಭಾರತದಲ್ಲಿ ಅತಿ ಚಿಕ್ಕ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಎಂಜಿ ಅವರ ಕಾಮೆಟ್ ಇವಿ ಕಾರು ಈಗ ಮೊದಲ ಹಂತವಾಗಿ ಡೀಲರ್‌ಶಿಪ್‌ಗಳಿಗೆ ಆಗಸಿದೆ. ವಿತರಣೆಯ ಪ್ರಾರಂಭದ ಮೊದಲು, MG Comet EV ಯ ಮೊದಲ ಬ್ಯಾಚ್ ಭಾರತದಾದ್ಯಂತ ಡೀಲರ್ ಶೋರೂಮ್‌ಗಳಿಗೆ ಆಗಮಿಸಲು ಪ್ರಾರಂಭಿಸಿದೆ.
ಇದು ಸದ್ಯ ಅತ್ಯಂತ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರು ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಇದರ ಬೆಲೆಗಳನ್ನು ಪರಿಚಯಿಸಿದ್ದು, MG ಕಾಮೆಟ್ EV ರೂ. 7.98 ಲಕ್ಷ (ಎಕ್ಸ್ ಶೋರೂಂ) ಪರಿಚಯಾತ್ಮಕ ಬೆಲೆಯಾಗಿದೆ. ಸದ್ಯ ಬುಕಿಂಗ್‌ಗಳು ನಡೆಯುತ್ತಿದ್ದು, ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಅಥವಾ ಡೀಲರ್‌ಶಿಪ್‌ಗಳ ಮೂಲಕ ರೂ. 11,000 ಡೌನ್ ಪೇಮೆಂಟ್ ಮಾಡಬಹುದು.

ಇದನ್ನು ಅತ್ಯಂತ ಕೈಗೆಟುಕುವ ಬೆಲೆ ಎಂದು ಹೇಳಿದ್ರೆ ಎಲ್ಲರೂ ತಲ್ಲಿ ಹಾಕುತ್ತಿದ್ದಾರೆ. ಇದೇ ಬೆಲೆಗೆ ಇನ್ನೂ ದೊಡ್ಡ ಕಾರು ಬರುತ್ತದೆ ಎಂದು ಈ ಹಿಂದೆ ಪೋಸ್ಟ್ ಮಾಡಲಾದ ನಮ್ಮ ಸುದ್ದಿಗೆ ಕಮೆಂಟ್‌ಗಳು ಬಂದಿದ್ದವು. ನಮ್ಮ ಲೆಕ್ಕದಲ್ಲಿ ಈ ಬೆಲೆಗೆ ಇನ್ಯಾವುದೇ ಎಲೆಕ್ಟ್ರಿಕ್ ಕಾರು ಸದ್ಯ ಭಾರತೀಯ ಮಾರುಕಟ್ಟಯಲ್ಲಿ ಲಭ್ಯವಿಲ್ಲ. ನಮ್ಮ ಲೆಕ್ಕದಲ್ಲಿ ಇವಿ ಕಾರರೆಂದರೆ ದುಬಾರಿಯೇ ಹೌದು, ಈ ಬೆಲೆಯಲ್ಲಿ ಇವಿ ಕಾರು ಸಿಕ್ಕರೆ ಅದು ಖಂಡಿತ ಅಗ್ಗದ ಬೆಲೆ.
ಎಲೆಕ್ಟ್ರಿಕ್ ಕಾರುಗಳು ಎಂದಾಕ್ಷಣ ಗ್ರಾಹಕರು ತುಂಬಾ ಸುಲಭವಾಗಿ ಇದು ದುಬಾರಿ ಎಂದು ಬಿಡುತ್ತಾರೆ. ಆದ್ರೆ ಇವಿ ಕಾರು ಖರೀದಿಯ ಬಳಿಕ ಇಂಧನ ಖರ್ಚನ್ನು ಉಳಿಸಬಹುದು ಎಂಬುದನ್ನು ಏಕೆ ಮರೆಯುತ್ತೀರಿ. ಹಾಗೆಯೇ ನಿರ್ವಹಣಾ ವೆಚ್ಚ ಕೂಡ ಪೆಟ್ರೋಲ್ ಎಂಜಿನ್ ಕಾರುಗಳಿಗೆ ಹೋಲಿಸಿಕೊಂಡರೆ ತೀರಾ ಕಡಿಮೆಯಿರುತ್ತದೆ. ಜೊತೆಗೆ ಬ್ಯಾಟರಿಗಳ ಬೆಲೆ ದುಬಾರಿಯಾದ್ದರಿಂದ ಕಾರಿನ ಒಟ್ಟಾರೆ ಬೆಲೆ ಕೂಡ ಹೆಚ್ಚಾಗುತ್ತದೆ.

ಮುಂಬರುವ ದಿನಗಳಲ್ಲಿ ಭಾರತದಲ್ಲಿಯೇ ಬ್ಯಾಟರಿಗಳ ನಿರ್ಮಾಣವಾದರೆ ಎಲೆಕ್ಟ್ರಿಕ್ ಕಾರುಗಳು ಇನ್ನೂ ಅಗ್ಗದ ಬೆಲೆಗೆ ಲಭ್ಯವಾಗುವುದರಲ್ಲಿ ಸಂಶಯವೇ ಇಲ್ಲ. ಈ ಎಂಜಿ ಕಾಮೆಟ್ ಇವಿ ಕಾರು ಸದ್ಯಕ್ಕೆ ಮಾತ್ರ ದೇಶದ ಅತ್ಯಂತ ಸಣ್ಣ ಎಲೆಕ್ಟ್ರಿಕ್ ಕಾರಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕಿಂತ ಸಣ್ಣ ಎಲೆಕ್ಟ್ರಿಕ್ ಕಾರುಗಳು ಅಗ್ಗದ ಬೆಲೆಗೆ ಲಭ್ಯವಾಗಬಹುದು. ಉದಾಹರಣೆಗೆ ಈ ಹಿಂದೆ ಇದ್ದ ಮಹೀಂದ್ರಾ ಇ20 ದೇಶದ ಅತ್ಯಂತ ಸಣ್ಣ ಎಲೆಕ್ಟ್ರಿಕ್ ಕಾರಾಗಿದೆ.
ಎಂಜಿ ಕಾಮೆಟ್ ಇವಿ ಕುರಿತು ಹೇಳುವುದಾದರೆ ಇದರಲ್ಲಿ ಮೂರು ವೇರಿಯೆಂಟ್ ಗಳು ಇವೆ. ಮೂರು ಕೂಡ ವಿಭಿನ್ನ ಬೆಲೆಗಳನ್ನು ಹೊಂದಿದ್ದು, ಪೇಸ್ ವೇರಿಯೆಂಟ್ 7.98 ಲಕ್ಷ ರೂ., ಪ್ಲೇ ವೇರಿಯೆಂಟ್ 9.28 ಲಕ್ಷ ರೂ., ಪ್ಲಷ್ ವೇರಿಯೆಂಟ್ 9.98 ರೂ. ಬೆಲೆಯನ್ನು ಹೊಂದಿದ್ದು, ಇವೆಲ್ಲವೂ ಎಕ್ಸ್ ಶೋರೂಂ ಬೆಲೆಗಳಾಗಿವೆ.

ಕಂಪನಿಯು 'ಟ್ರ್ಯಾಕ್ ಮತ್ತು ಟ್ರೇಸ್' ವೈಶಿಷ್ಟ್ಯವನ್ನು ಪರಿಚಯಿಸಿದೆ, ಇದರಿಂದಾಗಿ ಖರೀದಿದಾರರು ತಮ್ಮ ಫೋನ್‌ಗಳಲ್ಲಿ ಬುಕಿಂಗ್ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಅನುಮತಿಸುತ್ತದೆ. MG ಕಾಮೆಟ್ ಸಣ್ಣ ಗಾತ್ರದಲ್ಲಿದ್ದರೂ ಕೆಲವು ಸುಧಾರಿತ ವೈಶಿಷ್ಟ್ಯಗಳನ್ನು ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಡಿಸ್ಪ್ಲೇ ಒಳಗೊಂಡಿರುವ ಡ್ಯುಯಲ್ 10.25 ಇಂಚಿನ ಸ್ಕ್ರೀನ್ ಅನ್ನು ಒಳಗೊಂಡಿದೆ.
ಟರ್ನ್ ಬೈ ಟರ್ನ್ ನ್ಯಾವಿಗೇಷನ್, ರಿಯಲ್ ಟೈಮ್ ಟ್ರಾಫಿಕ್ ಅಪ್‌ಡೇಟ್‌ಗಳು, ಹವಾಮಾನ ಮಾಹಿತಿಯನ್ನು ಒಳಗೊಂಡಿವೆ. ಬಣ್ಣಗಳ ಆಯ್ಕೆಗಳನ್ನು ನೊಡುವುದಾದರೆ ಬೀಚ್ ಬೇ (ನೀಲಿ), ಸೆರೆನಿಟಿ (ಹಸಿರು), ಸಂಡೌನರ್ (ಕಿತ್ತಳೆ) ಮತ್ತು ಫ್ಲೆಕ್ಸ್ (ಕೆಂಪು) ಸೇರಿವೆ. MG ಕಾಮೆಟ್ EV ಉತ್ಪಾದನೆಯು ಗುಜರಾತ್‌ನ ಹಲೋಲ್‌ನಲ್ಲಿರುವ ಕಂಪನಿಯ ಸೌಲಭ್ಯದಲ್ಲಿ ಪ್ರಾರಂಭವಾಗಿದೆ.


Click it and Unblock the Notifications








