Ashok leyland: ದೇಶೀಯ ಬ್ರಾಂಡ್‌ಗಳಂದ್ರೆ ಸುಮ್ನೇನಾ! ರಣಭೀಕರ ದೈತ್ಯಗಳಿಗಾಗಿ ಸೇನೆಯಿಂದ ಬಹುಕೋಟಿ ಆರ್ಡರ್
ಹಿಂದೂಜಾ ಗ್ರೂಪ್‌ನ ಭಾರತೀಯ ಪ್ರಮುಖ ಸಂಸ್ಥೆ ಮತ್ತು ಭಾರತೀಯ ಸೇನೆಗೆ ಲಾಜಿಸ್ಟಿಕ್ ವಾಹನಗಳ ಅತಿದೊಡ್ಡ ಪೂರೈಕೆದಾರ Ashok leyland, ಇಂದು ಭಾರತೀಯ ರಕ್ಷಣಾ ವಲಯದಿಂದ ಬರೋಬ್ಬರಿ 800 ಕೋಟಿ ರೂ. ಮೌಲ್ಯದ ಮಹತ್ವದ ಆರ್ಡರ್‌ಗಳನ್ನು ದಕ್ಕಿಸಿಕೊಂಡಿರುವುದಾಗಿ ಘೋಷಿಸಿದೆ.
ಭಾರತೀಯ ರಕ್ಷಣಾ ವಲಯದಿಂದ ನೀಡಲಾದ ಒಪ್ಪಂದಗಳಲ್ಲಿ ಫೀಲ್ಡ್ ಆರ್ಟಿಲರಿ ಟ್ರಾಕ್ಟರ್ (FAT 4x4) ಮತ್ತು ಗನ್ ಟೋವಿಂಗ್ ವೆಹಿಕಲ್ (GTV 6x6) ಸಂಗ್ರಹಣೆಯೂ ಸೇರಿರುವುದಾಗಿ ಕಂಪನಿ ತಿಳಿಸಿದೆ. FAT 4x4 ಮತ್ತು GTV 6x6 ಗಳು ಅನುಕ್ರಮವಾಗಿ ಹಗುರ ಮತ್ತು ಮಧ್ಯಮ ಬಂದೂಕುಗಳನ್ನು ಎಳೆಯಲು ಫಿರಂಗಿಯಿಂದ ನೇಮಿಸಲ್ಪಟ್ಟ ವಿಶೇಷ ವಾಹನಗಳಾಗಿವೆ.

ಭಾರತ ಸರ್ಕಾರವು ಘೋಷಿಸಿದ ಆರಂಭಿಕ ಧನಾತ್ಮಕ ಸ್ವದೇಶೀಕರಣ ಪಟ್ಟಿಯಲ್ಲಿ ಈ ಎರಡೂ ವೇದಿಕೆಗಳು ಪ್ರಮುಖವಾಗಿ ಕಾಣಿಸಿಕೊಂಡಿವೆ. ಈ ನಿರ್ಣಾಯಕ ರಕ್ಷಣಾ ಒಪ್ಪಂದಗಳಿಗೆ ಅಶೋಕ್ ಲೇಲ್ಯಾಂಡ್‌ನ ಆಯ್ಕೆಯು ಭಾರತೀಯ ಸಶಸ್ತ್ರ ಪಡೆಗಳಿಗೆ ವಿಶ್ವಾಸಾರ್ಹ ಪಾಲುದಾರನಾಗಿರುವುದು ಹೆಮ್ಮೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಈ ಕುರಿತು ಮಾತನಾಡಿದ ಅಶೋಕ್ ಲೇಲ್ಯಾಂಡ್‌ನ ಸಿಇಒ ಶೇನು ಅಗರ್ವಾಲ್, "ಭಾರತೀಯ ಸೇನೆಯಿಂದ ಈ ಆದೇಶಗಳನ್ನು ಪಡೆದುಕೊಂಡಿರುವುದಕ್ಕೆ ನಮಗೆ ಅಪಾರ ಹೆಮ್ಮೆಯಿದೆ. ರಕ್ಷಣಾ ವ್ಯವಹಾರವು ನಮಗೆ ಬೆಳವಣಿಗೆಯ ಬಲವಾದ ಆಧಾರಸ್ತಂಭವಾಗಿದ್ದು, ಇದೀಗ ಈ ಗೆಲುವು ನಮ್ಮ ಕಂಪನಿಗೆ ಮತ್ತಷ್ಟು ಬೆಳವಣಿಗೆಯಾಗಿದೆ. ಜೊತೆಗೆ ರಕ್ಷಣಾ ಚಲನಶೀಲ ವಾಹನಗಳ ವ್ಯವಹಾರದಲ್ಲಿ ನಮ್ಮ ನಾಯಕತ್ವವನ್ನು ಸ್ಥಾಪಿಸುತ್ತದೆ ಎಂದರು.

ಇದು ನಮ್ಮ ಸಶಸ್ತ್ರ ಪಡೆಗಳಿಗೆ ಸುಧಾರಿತ ಚಲನಶೀಲತೆ ಪರಿಹಾರಗಳನ್ನು ಒದಗಿಸುವ ನಮ್ಮ ದೃಢವಾದ ಬದ್ಧತೆಗೆ ಸಾಕ್ಷಿಯಾಗಿದೆ. ಭಾರತ ಸರ್ಕಾರವು ಅಶೋಕ್ ಲೇಲ್ಯಾಂಡ್‌ನಲ್ಲಿ ಇರಿಸಿರುವ ನಂಬಿಕೆಗೆ ನಾವು ಕೃತಜ್ಞರಾಗಿದ್ದೇವೆ. ದೇಶದ ಸ್ವದೇಶೀಕರಣದ ಪ್ರಯತ್ನಗಳು ಮತ್ತು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಗಾಗಿ ಕೊಡುಗೆ ನೀಡಲು ನಾವು ಸಮರ್ಪಿತರಾಗಿದ್ದೇವೆ ಎಂದರು.
ಅಶೋಕ್ ಲೇಲ್ಯಾಂಡ್ ಡಿಫೆನ್ಸ್ ಬ್ಯುಸಿನೆಸ್ ಅಧ್ಯಕ್ಷ ಅಮನ್‌ದೀಪ್ ಸಿಂಗ್ ಮಾತನಾಡಿ, ಕಂಪನಿಯ ವಿಶ್ವಾಸಾರ್ಹ ಚಲನಶೀಲತೆ ಪರಿಹಾರಗಳು ಸತತವಾಗಿ ರಕ್ಷಣಾ ವಲಯದಲ್ಲಿ ಅಸಾಧಾರಣ ಆಸ್ತಿಯಾಗಿ ಉಳಿದಿವೆ. ಸಶಸ್ತ್ರ ಪಡೆಗಳಾದ್ಯಂತ ಸಿಬ್ಬಂದಿ ಮತ್ತು ಲಾಜಿಸ್ಟಿಕ್‌ಗಳ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುತ್ತಿದ್ದೇವೆ. ನಮ್ಮ ಪಡೆಗಳೊಂದಿಗೆ ಸೇವೆ ಸಲ್ಲಿಸುವ ಮೂಲಕ ನಾವು 'ಆತ್ಮನಿರ್ಭರ ಭಾರತ'ದ ಪ್ರಮುಖ ಉದಾಹರಣೆಯಾಗಿದ್ದೇವೆ ಎಂದು ಹೇಳಲು ಹೆಮ್ಮೆಪಡುತ್ತೇವೆ ಎಂದರು.
ಅಶೋಕ್ ಲೇಲ್ಯಾಂಡ್ 4x4, 6x6, 8x8, 10x10 ಮತ್ತು 12x12 ವರೆಗಿನ ಮೊಬಿಲಿಟಿ ಪ್ಲಾಟ್‌ಫಾರ್ಮ್‌ಗಳ ಅಭಿವೃದ್ಧಿಯಲ್ಲಿ ವಿವಿಧ ಅಪ್ಲಿಕೇಶನ್‌ಗಳು ಮತ್ತು ಭಾರತೀಯ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಅವಶ್ಯಕತೆಗಳಿಗಾಗಿ ಹೂಡಿಕೆ ಮಾಡಿದೆ. ಈ ಪ್ಲಾಟ್‌ಫಾರ್ಮ್‌ಗಳನ್ನು ಅಶೋಕ್ ಲೇಲ್ಯಾಂಡ್‌ನಿಂದ ಸ್ಥಳೀಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ ಎಂದರು.
ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಮ್ಮ 75 ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುವ ಸಮಯದಲ್ಲಿ ಈ ಗೆಲುವು ಬಂದಿರುವುದು ನಮಗೆ ಇನ್ನಷ್ಟು ವಿಶೇಷವಾಗಿದೆ. ಮುಂದಿನ 12 ತಿಂಗಳ ಅವಧಿಯಲ್ಲಿ, ಭಾರತೀಯ ಸೇನೆಯ ಅವಶ್ಯಕತೆಗಳನ್ನು ಪೂರೈಸಲು ಅಶೋಕ್ ಲೇಲ್ಯಾಂಡ್ ಈ ಅತ್ಯಾಧುನಿಕ ವಾಹನಗಳನ್ನು ಶ್ರದ್ಧೆಯಿಂದ ತಲುಪಿಸುತ್ತದೆ ಎಂದರು.
ಅದರ ಲಾಜಿಸ್ಟಿಕ್ಸ್ ಅಗತ್ಯಗಳಿಗಾಗಿ ಭಾರತೀಯ ಸೇನೆಯೊಂದಿಗೆ ಪಾಲುದಾರಿಕೆ ಮಾಡುವ ಮೂಲಕ ಮತ್ತು ಶ್ರೇಷ್ಠತೆಯ ಪರಂಪರೆ ಮತ್ತು ನಾವೀನ್ಯತೆಗೆ ಬದ್ಧತೆಯ ಮೇಲೆ ದೃಢವಾದ ಅಡಿಪಾಯವನ್ನು ನಿರ್ಮಿಸುವುದರ ಮೂಲಕ, ಅಶೋಕ್ ಲೇಲ್ಯಾಂಡ್ ಭಾರತೀಯ ಸಶಸ್ತ್ರ ಪಡೆಗಳ ಪಾಲುದಾರನಾಗಿ ತನ್ನ ಸ್ಥಾನವನ್ನು ಬಲಪಡಿಸುವುದನ್ನು ಮುಂದುವರೆಸಿದೆ ಎಂಬುದೇ ನಮಗೆ ಹೆಮ್ಮೆ ಎಂದರು.


Click it and Unblock the Notifications








