Ashok Leyland: ದುಡಿಯುವ ಜನರಿಗೆ ಅಶೋಕ್ ಲೇಲ್ಯಾಂಡ್ ಉಡುಗೊರೆ, ಎಲೆಕ್ಟ್ರಿಕ್ ಪಿಕಪ್ ಟ್ರಕ್ ಬಂದ್ವು

ದೇಶದ ಪ್ರಮುಖ ವಾಣಿಜ್ಯ ವಾಹನ ತಯಾರಕ ಕಂಪನಿಯಾಗಿ ಅಶೋಕ್ ಲೇಲ್ಯಾಂಡ್ (Ashok Leyland) ಜನಪ್ರಿಯತೆ ಗಳಿಸಿದೆ. ಅದರ ಅಂಗಸಂಸ್ಥೆ ಸ್ವಿಚ್ ಮೊಬಿಲಿಟಿ (Switch Mobility), ಎರಡು ಎಲೆಕ್ಟ್ರಿಕ್ ಪಿಕಪ್ ಟ್ರಕ್ ಬಿಡುಗಡೆಗೊಳಿಸಿದೆ. ಈ ಮೂಲಕ ದುಡಿಯುವ ವರ್ಗಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದೆ.

ಸ್ವಿಚ್ ಮೊಬಿಲಿಟಿ ಕಂಪನಿಯು ಹೊಸ ಪ್ಲಾಟ್‌ಫಾರ್ಮ್ ಆಧರಿತ ಎಲ್ಇವಿ3 (IeV3) ಹಾಗೂ ಎಲ್ಇವಿ4 (IeV4) ಹೆಸರಿನ ಎಲೆಕ್ಟ್ರಿಕ್ ಲಘು ವಾಣಿಜ್ಯ ವಾಹನಗಳನ್ನು (commercial vehicles) ಪರಿಚಯಿಸಿದೆ. ಮುಂದಿನ ಐದು ವರ್ಷದಲ್ಲಿ ಅನೇಕ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ಅಭಿವೃದ್ಧಿಪಡಿಸುವುದಾಗಿ ಕಂಪನಿ ಹೇಳಿದ್ದು, ಹೊಸ ಎಲ್ಇವಿ ಸರಣಿ ವಾಹನಗಳನ್ನು ತಯಾರಿಸಲು 100 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದೆ.

Ashok Leyland: ದುಡಿಯುವ ಜನರಿಗೆ ಅಶೋಕ್ ಲೇಲ್ಯಾಂಡ್ ಉಡುಗೊರೆ, ಎಲೆಕ್ಟ್ರಿಕ್ ಪಿಕಪ್ ಟ್ರಕ್ ಬಂದ್ವು

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು, ಈ ಎಲೆಕ್ಟ್ರಿಕ್ ಪಿಕಪ್ ಟ್ರಕ್‌ಗಳನ್ನು ಅನಾವರಣಗೊಳಿಸಿದ್ದಾರೆ. ನೇರವಾಗಿ, ಎಲ್ಇವಿ3 ಹಾಗೂ ಎಲ್ಇವಿ4 ವಾಹನಗಳ ವಿನ್ಯಾಸದ ಬಗ್ಗೆ ಮಾತನಾಡೋಣ. ಇವುಗಳ ಡಿಸೈನ್ ಇಂಧನ ಚಾಲಿತ ಅಶೋಕ್ ಲೇಲ್ಯಾಂಡ್ ದೋಸ್ತ್ ಹಾಗೂ ಬಡಾ ದೋಸ್ತ್ ಪಿಕಪ್ ಟ್ರಕ್‌ಗಳಿಗೆ ಹೋಲಿಕೆಯಾಗುತ್ತದೆ. ಆದರೂ ಇವೆರೆಡು ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿವೆ.

ಈ ಎಲೆಕ್ಟ್ರಿಕ್ ಪಿಕಪ್ ಟ್ರಕ್‌ಗಳ ಒಳಭಾಗದ ವಿನ್ಯಾಸ ಹಾಗೂ ವೈಶಿಷ್ಟ್ಯದ ಬಗ್ಗೆ ತಿಳಿಯುವುದಾದರೆ, ಎರಡು ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿವೆ. ಜೊತೆಯಲ್ಲಿ ಡ್ಯುಯಲ್ - ಟೋನ್ ಡ್ಯಾಶ್‌ಬೋರ್ಡ್ ಒಳಗೊಂಡಿವೆ. ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಹಿಲ್ ಹೋಲ್ಡ್ ಅಸಿಸ್ಟ್, ಸ್ಲೈಡಿಂಗ್, ರಿಕ್ಲೈನಿಂಗ್ ಡ್ರೈವರ್ ಸೀಟ್, ಮೊಬೈಲ್ ಚಾರ್ಜಿಂಗ್‌ಗಾಗಿ ಯುಎಸ್‌ಬಿ ಪೋರ್ಟ್‌ ಸೇರಿದಂತೆ ವಿವಿಧ ಫೀಚರ್ಸ್ ಇವೆ.

Ashok Leyland: ದುಡಿಯುವ ಜನರಿಗೆ ಅಶೋಕ್ ಲೇಲ್ಯಾಂಡ್ ಉಡುಗೊರೆ, ಎಲೆಕ್ಟ್ರಿಕ್ ಪಿಕಪ್ ಟ್ರಕ್ ಬಂದ್ವು

ಇದರೊಟ್ಟಿಗೆ, ಲಾಕ್ ಮಾಡಬಹುದಾದ ಗ್ಲೋವ್ ಬಾಕ್ಸ್, ರಿವರ್ಸ್ ಪಾರ್ಕಿಂಗ್ ಸೆನ್ಸರ್ಸ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿವೆ. ಪ್ರಮುಖವಾಗಿ, ಸ್ವಿಚ್ ಐಯಾನ್ ಕನೆಕ್ಟ್ದ್ ಟೆಕ್ನಲಾಜಿ ಪಡೆದಿದೆ. ಇದು, ವೆಹಿಕಲ್ ಟ್ರ್ಯಾಕಿಂಗ್, ರಿಯಲ್ - ಟೈಮ್ ಇಂಫಾರ್ಮೇಶನ್, ಜಿಯೋ - ಫೆನ್ಸಿಂಗ್, ಟ್ರಿಯೋ ಹಿಸ್ಟರಿ ಸೇರಿದಂತೆ ವಿವಿಧ ಮಾಹಿತಿಯನ್ನು ಒದಗಿಸುತ್ತದೆ.

ಮೊದಲಿಗೆ, ಎಲ್ಇವಿ3 (IeV3) ಎಲೆಕ್ಟ್ರಿಕ್ ಪಿಕಪ್ ಟ್ರಕ್ ಬಗ್ಗೆ ತಿಳಿಯೋಣ. ಇದು, 25.6 kWh LFP ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಇದರ ಎಲೆಕ್ಟ್ರಿಕ್ ಮೋಟಾರ್ 40 kW ಗರಿಷ್ಠ ಪವರ್ ಹಾಗೂ 190 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, ಸಂಪೂರ್ಣ ಚಾರ್ಜಿಯಲ್ಲಿ 120 Km ಕ್ರಮಿಸುವ ಸಾಮರ್ಥ್ಯ ಒಳಗೊಂಡಿದೆ.

ಈ ಎಲ್ಇವಿ3 ಎಲೆಕ್ಟ್ರಿಕ್ ಪಿಕಪ್ ಟ್ರಕ್ ಆಗಿದ್ದರೂ ಯಾವುದೇ ಸಾಮಾನ್ಯ ಟ್ರಕ್‌ಗೂ ಕಮ್ಮಿ ಇಲ್ಲದೆಯೇ ಭಾರವನ್ನು ಎಳೆಯುವ ಸಾಮರ್ಥ್ಯವನ್ನು ಹೊಂದಿದೆ. 1200 ಕೆಜಿ ತೂಕವನ್ನು ಸಾಗಿಸಬಲ್ಲದು. ಮನೆಯ ವಿದ್ಯುತ್ ಬಳಕೆಯ 3.3 kW ಎಸಿ ಚಾರ್ಜಿಂಗ್ ಆಯ್ಕೆಯಲ್ಲಿ 6 ಗಂಟೆ ತೆಗೆದುಕೊಳ್ಳುತ್ತದೆ. ಡಿಸಿ ಫಾಸ್ಟ್ ಚಾರ್ಜರ್ ವ್ಯವಸ್ಥೆಯಲ್ಲಿ ಕೇವಲ 60 ನಿಮಿಷದಲ್ಲಿ ಚಾರ್ಜ್ ಆಗುತ್ತದೆ.

ಎಲ್ಇವಿ4 ಎಲೆಕ್ಟ್ರಿಕ್ ಪಿಕಪ್ ಟ್ರಕ್, 32.2 kWh LFP ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದರಲ್ಲಿ ಬಳಕೆ ಮಾಡಿರುವ ಮೋಟಾರ್ 60 kW ಗರಿಷ್ಠ ಪವರ್ ಹಾಗೂ 230 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಇದು ಕೂಡ ಫುಲ್ ಚಾರ್ಜಿನಲ್ಲಿ 120 Km ರೇಂಜ್ ನೀಡುವುದು ಒಳ್ಳೆಯ ವಿಚಾರವಾಗಿದೆ.

ಆದರೆ, ಕೊಂಚ ಅಧಿಕ ತೂಕ (1700 ಕೆಜಿ) ಸಾಗಿಸುವ ಸಾಮರ್ಥ್ಯ ಹೊಂದಿದೆ. ಮನೆಯ ವಿದ್ಯುತ್ ಉಪಯೋಗದ 3.3 kW ಎಸಿ ಚಾರ್ಜರ್ ಆಯ್ಕೆಯಲ್ಲಿ 8 ಗಂಟೆಗೆ ಚಾರ್ಜ್ ಆಗುತ್ತದೆ. ಕಂಪನಿಯು ಈ ಎಲೆಕ್ಟ್ರಿಕ್ ಟ್ರಕ್‌ಗಳಿಗೆ 3 3-ವರ್ಷ ಅಥವಾ 1.5 ಲಕ್ಷ ಕಿಲೋಮಿಟರ್ ವಾರಂಟಿ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಬೆಲೆ ಘೋಷಣೆ ಮಾಡಲಾಗುತ್ತದೆ. 2024 ಜನವರಿಯಲ್ಲಿ ವಿತರಣೆ ಶುರುವಾಗಲಿದೆ.

More from DriveSpark

Article Published On: Friday, September 8, 2023, 13:28 [IST]
English summary
Ashok leyland switch mobility unveils iev series electric pickup trucks
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+