Auto Expo 2023: 600ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ ಹ್ಯುಂಡೈ Ioniq 6 ಎಲೆಕ್ಟ್ರಿಕ್ ಕಾರು ಅನಾವರಣ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ 2023ರ ಆಟೋ ಎಕ್ಸ್‌ಪೋದಲ್ಲಿ ಜಾಗತಿಕ Ioniq 6 ಎಲೆಕ್ಟ್ರಿಕ್ ಸೆಡಾನ್ ಅನ್ನು ಪ್ರದರ್ಶಿಸಿದೆ. ಕೇವಲ Ioniq 6 ಅಲ್ಲ, ಹ್ಯುಂಡೈ ಹೊಸ Ioniq 5 ಎಲೆಕ್ಟ್ರಿಕ್ ಕ್ರಾಸ್‌ಒವರ್ ಅನ್ನು ಭಾರತೀಯ ಆಟೋ ಎಕ್ಸ್‌ಪೋದ 16 ನೇ ಆವೃತ್ತಿಯಲ್ಲಿ ಸಾರ್ವಜನಿಕರಿಗೆ ಪರಿಚಯಿಸಿದೆ.
ಹ್ಯುಂಡೈನ ಪ್ರೊಫೆಸಿ EV ಕಾನ್ಸೆಪ್ಟ್ ನಿಂದ ಸ್ಫೂರ್ತಿ ಪಡೆದ ಹೊಸ ಹ್ಯುಂಡೈ Ioniq 6 ಎಲೆಕ್ಟ್ರಿಕ್ ಸೆಡಾನ್ ಅನ್ನು 2022ರ ಜೂನ್ ತಿಂಗಳಿನಲ್ಲಿ ದಕ್ಷಣ ಕೊರಿಯಾದಲ್ಲಿಯು ಬಿಡುಗಡೆ ಮಾಡಲಾಯಿತು. ನಾಲ್ಕು-ಡೋರಿನ ಎಲೆಕ್ಟ್ರಿಕ್ ಸೆಡಾನ್ 340 ಮೈಲುಗಳು ಅಥವಾ 547 ಕಿಮೀಗಳ ಅಂದಾಜು ರೇಂಜ್ ಅನ್ನು ಹೊಂದಿದೆ. ಈ ಹೊಸ ಹ್ಯುಂಡೈ Ioniq 6 ಎಲೆಕ್ಟ್ರಿಕ್ ಕಾರು ಕೇವಲ 18 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದಾದ ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಅನ್ನು ನೀಡುತ್ತದೆ.

ಈ ಹೊಸ ಹ್ಯುಂಡೈ ಎಲೆಕ್ಟ್ರಿಕ್ ಕಾರು ಡ್ಯುಯಲ್ ಮೋಟಾರ್‌ಗಳು, ವಿಶಾಲವಾದ ಕ್ಯಾಬಿನ್ ಮತ್ತು ಹೆಚ್ಚಿನ ಕಾರ್ಯಕ್ಷಮತೆಗಾಗಿ ಹೊಂದುವಂತೆ ಹ್ಯುಂಡೈನ ವಿಶೇಷವಾದ ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (E-GMP) ಅನ್ನು ಆಧರಿಸಿದ ಬ್ರ್ಯಾಂಡ್‌ನ ಎರಡನೇ ಮಾದರಿಯಾಗಿದೆ. ಸ್ಕೇಟ್‌ಬೋರ್ಡ್ ಆರ್ಕಿಟೆಕ್ಚರ್ ಸ್ಕೇಲೆಬಲ್ ಬ್ಯಾಟರಿ ಗಾತ್ರಗಳು, ಹಿಂಬದಿ ಅಥವಾ ಆಲ್-ವೀಲ್ ಡ್ರೈವ್ ಲೇಔಟ್, ಗರಿಷ್ಠ ಆಂತರಿಕ ಸ್ಥಳಕ್ಕಾಗಿ ಫ್ಲಾಟ್ ಫ್ಲೋರ್ ಮತ್ತು EV ನಿರ್ದಿಷ್ಟ ಆಯಾಮಗಳನ್ನು ಸರಿಹೊಂದಿಸಲು ಸಾಕಷ್ಟು ಹೊಂದಿಕೊಳ್ಳುತ್ತದೆ.
ಈ ಹೊಸ ಹುಂಡೈ Ioniq 6 ಎಲೆಕ್ಟ್ರಿಕ್ ಸೆಡಾನ್ ಅನ್ನು 0.22 ರ ಅಲ್ಟ್ರಾ-ಲೋ ಡ್ರ್ಯಾಗ್ ಗುಣಾಂಕವನ್ನು ಹೊಂದಿರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಕಡಿಮೆ ಡ್ರ್ಯಾಗ್ ಗುಣಾಂಕವು ಏರ್ ಫ್ಲಾಪ್‌ಗಳು, ವೀಲ್ ಗ್ಯಾಪ್ ರಿಡ್ಯೂಸರ್‌ಗಳು, ವಿಂಗ್ಲೆಟ್‌ನೊಂದಿಗೆ ಕಾಂಪ್ಯಾಕ್ಟ್ ವಿಂಗ್-ಪ್ರೇರಿತ ಸ್ಪಾಯ್ಲರ್, ಸ್ವಲ್ಪ ಬೋಟ್‌ಟೈಲ್ ರಚನೆ, ಹಿಂಭಾಗದ ಬಂಪರ್‌ನ ಎರಡೂ ಬದಿಗಳಲ್ಲಿ ಬೇರ್ಪಡಿಸುವ ಬಲೆಗಳ ಅಂಶ, ಸಂಪೂರ್ಣ ಒಳಭಾಗದ ಕವರ್, ಡಿಫ್ಲೆಕ್ಟರ್‌ಗಳು ಮತ್ತು ವ್ಹೀಲ್ ಅರ್ಚ್ ಅಂತರಗಳನ್ನು ಹೊಂದಿವೆ.

ಈ ಹೊಸ ಹ್ಯುಂಡೈ Ioniq 6 ಎಲೆಕ್ಟ್ರಿಕ್ ಸೆಡಾನ್ ಸಾಂಪ್ರದಾಯಿಕ ಹೊರಗಿನ ಹಿಂಬದಿಯ ಮೀರರ್ ಬದಲಿಗೆ ಫ್ಲಶ್ ಡೋರ್ ಹ್ಯಾಂಡಲ್‌ಗಳು ಮತ್ತು ಕ್ಯಾಮೆರಾಗಳೊಂದಿಗೆ ಬರುತ್ತದೆ. ಹೆಡ್‌ಲ್ಯಾಂಪ್‌ಗಳಲ್ಲಿ 700 ಕ್ಕೂ ಹೆಚ್ಚು ಪ್ಯಾರಾಮೆಟ್ರಿಕ್ ಪಿಕ್ಸೆಲ್‌ಗಳು ಕಂಡುಬರುತ್ತವೆ. ಇದು ಪಿಕ್ಸಲ್-ಶೈಲಿಯ LED ಟೈಲ್-ಲೈಟ್‌ಗಳು, ಮುಂಭಾಗದ ಕೆಳಗಿನ ಸೆನ್ಸರ್ ಗಳು, ಏರ್ ವೆಂಟ್ ಗಾರ್ನಿಶ್‌ಗಳು ಮತ್ತು ಡೋರುಗಳಲ್ಲಿ ಲೈನ್ ಗಳನ್ನು ಪಡೆಯುತ್ತದೆ. ಸೆಡಾನ್ ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಹ್ಯುಂಡೈ 'H' ಬ್ಯಾಡ್ಜ್ ಅನ್ನು ಸಹ ಹೊಂದಿದೆ.
ಇನ್ನು ಈ ಹೊಸ ಎಲೆಕ್ಟ್ರಿಕ್ ಕಾರಿನಲ್ಲಿ 18- ಅಥವಾ 20-ಇಂಚಿನ ವ್ಹೀಲ್ ಗಳನ್ನು ಹೊಂದಿರಲಿದೆ. ಅನುಪಾತದಲ್ಲಿ, ಹೊಸ ಹ್ಯುಂಡೈ Ioniq 6 ಎಲೆಕ್ಟ್ರಿಕ್ ಕಾರು 488 5mm ಉದ್ದ, 1880 mm ಅಗಲ ಮತ್ತು 149 5mm ಎತ್ತರವನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಕಾರು 2950 mm ವ್ಹೀಲ್ ಬೇಸ್ ಅನ್ನು ಹೊಂದಿದೆ. ಇದು ಮಾಡ್ಯುಲರ್ ಟಚ್‌ಸ್ಕ್ರೀನ್ ಡ್ಯಾಶ್‌ಬೋರ್ಡ್‌ನೊಂದಿಗೆ ಬರುತ್ತದೆ ಅದು 12.3-ಇಂಚಿನ ಪೂರ್ಣ-ಟಚ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ ಮತ್ತು 12.3-ಇಂಚಿನ ಡಿಜಿಟಲ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಇನ್ನು ಸೆಂಟರ್ ಕನ್ಸೋಲ್, ಡ್ಯುಯಲ್-ಕಲರ್ ಆಂಬಿಯೆಂಟ್ ಲೈಟಿಂಗ್ ಮತ್ತು ಸ್ಟೀರಿಂಗ್ ವೀಲ್‌ನಲ್ಲಿ ನಾಲ್ಕು-ಡಾಟ್ ಪಿಕ್ಸೆಲ್ ಲ್ಯಾಂಪ್ ಗಳನ್ನು ಹೊಂದಿರುತ್ತದೆ. ಅದು ವಾಯ್ಸ್ ಗುರುತಿಸುವಿಕೆಯನ್ನು ಸಕ್ರಿಯಗೊಳಿಸಿದಾಗ ಬೆಳಗುತ್ತದೆ ಮತ್ತು ಚಾರ್ಜಿನ್ ಸ್ಥಿತಿಯನ್ನು ಸೂಚಿಸುತ್ತದೆ. ಈ Ioniq 6 ಎಲೆಕ್ಟ್ರಿಕ್ ಸೆಡಾನ್ ಎರಡು ಬ್ಯಾಟರಿ ಗಾತ್ರದ ಆಯ್ಕೆಗಳೊಂದಿಗೆ ಲಭ್ಯವಿದೆ. ಇದು 53kWh ಮತ್ತು 77kWh ಆಗಿದೆ. ಈ ಕಾರಿನ ಟಾಪ್-ಸ್ಪೆಕ್ ರೂಪಾಂತರವು ಡ್ಯುಯಲ್ ಮೋಟಾರ್ AWD ಆಯ್ಕೆಯೊಂದಿಗೆ ಬರುತ್ತದೆ.
ಡ್ಯುಯಲ್ ಮೋಟಾರ್ 302 ಬಿಹೆಚ್‍ಪಿ ಪವರ್ ಮತ್ತು 605 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ RWD ಸೆಟಪ್ 228 ಬಿಹೆಚ್‍ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 53kWh ಬ್ಯಾಟರಿಯೊಂದಿಗೆ RWD ಆವೃತ್ತಿಯು 429 ರೇಂಜ್ ಅನ್ನು ನೀಡುತ್ತದೆ. ಇನ್ನು 77.4kWh ಹೊಂದಿರುವ RWD ಆವೃತ್ತಿಯು 614 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇನ್ನು AWD ಆವೃತ್ತಿಯು 583 ಕಿ.ಮೀ ರೇಂಜ್ ಅನ್ನು ನೀಡುತ್ತದೆ.


Click it and Unblock the Notifications








