Auto Expo 2023: ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಫ್ಲೆಕ್ಸ್‌-ಇಂಧನದ Maruti WagonR ಪ್ರದರ್ಶನ

ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ವ್ಯಾಗನ್ಆರ್ ಫ್ಲೆಕ್ಸ್ ಇಂಧನದ ಮೂಲಮಾದರಿಯನ್ನು 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿದೆ. ಈ ಮಾದರಿಯನ್ನು 2022ರ ಡಿಸೆಂಬರ್ ತಿಂಗಳಿನಲ್ಲಿ ನಡೆದ ಎಥೆನಾಲ್ ಟೆಕ್ನಾಲಜಿ ಪ್ರದರ್ಶನದಲ್ಲಿ ಮೊದಲು ಅನಾವರಣಗೊಳಿಸಲಾಯಿತು.

ಮಾರುತಿ ಸುಜುಕಿಯ ಹೇಳಿಕೆಯ ಪ್ರಕಾರ, ವ್ಯಾಗನ್ಆರ್ ಫ್ಲೆಕ್ಸ್ ಇಂಧನ ಆವೃತ್ತಿಯನ್ನು ಸುಜುಕಿ ಮೋಟಾರ್ ಕಾರ್ಪೊರೇಷನ್‌ನ ಬೆಂಬಲದೊಂದಿಗೆ ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಹ್ಯಾಚ್‌ಬ್ಯಾಕ್‌ನ ಮೂಲಮಾದರಿಯು 20 ಪ್ರತಿಶತ (E20) ಮತ್ತು 85 ಪ್ರತಿಶತ (E85) ನಡುವಿನ ಎಥೆನಾಲ್ ಮತ್ತು ಪೆಟ್ರೋಲ್‌ನ ಮಿಶ್ರಣದ ಮೇಲೆ ಚಲಿಸಬಹುದು. ಫ್ಲೆಕ್ಸ್ ಫ್ಯೂಯೆಲ್ ಅಂದರೆ, ಫ್ಲೆಕ್ಸಿಬಲ್ ಇಂಧನ (Flexible Fuel) ಎಂದರ್ಥ. ಇದು ಕೂಡ ಪೆಟ್ರೋಲ್‌ ಇಂಧನ ಬಳಸಿ ಚಲಿಸುವಂತಹ ಮಾದರಿಯದ್ದೇ ಇಂಜಿನ್‌ ಆಗಿದೆ.

Auto Expo 2023: ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಫ್ಲೆಕ್ಸ್‌-ಇಂಧನದ Maruti WagonR ಪ್ರದರ್ಶನ

ಈ ಇಂಜಿನ್‌ ಎಥೆನಾಲ್‌ ಬಳಸಿಯೂ ಕಾರ್ಯನಿರ್ವಹಿಸಲಿದೆ. ಎಥೆನಾಲ್‌ ಮತ್ತು ಪೆಟ್ರೋಲ್‌ ಎರಡರ ಮಿಶ್ರಣದಲ್ಲಿಯೂ ಕಾರ್ಯನಿರ್ವಹಿಸಲಿದೆ.ಫ್ಲೆಕ್ಸ್ ಇಂಧನ ವಾಹನಗಳು ಅಷ್ಟೇ ಮುಖ್ಯವಾಗಿದೆ, ಜಪಾನ್‌ನ ಸುಜುಕಿ ಮೋಟಾರ್ ಕಾರ್ಪೊರೇಷನ್‌ನ ಬೆಂಬಲದೊಂದಿಗೆ ಮಾರುತಿ ಸುಜುಕಿ ಎಂಜಿನಿಯರ್‌ಗಳು ಈ ಮೂಲಮಾದರಿಯನ್ನು ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸಗೊಳಿಸಿದ್ದಾರೆ. ಈ ಎಂಜಿನ್ ಅನ್ನು ಎಥೆನಾಲ್ ಮಿಶ್ರಿತ ಇಂಧನಗಳಲ್ಲಿ ಶೇಕಡ 85 ವರೆಗೆ ಚಾಲನೆ ಮಾಡಲು ಕಾರಿನ ಬಾನೆಟ್ ಅಡಿಯಲ್ಲಿ ವ್ಯಾಪಕವಾದ ಬದಲಾವಣೆಗಳನ್ನು ಮಾಡಿದೆ.

ಈ ಫ್ಲೆಕ್ಸ್‌-ಇಂಧನದ ವ್ಯಾಗನ್ಆರ್ ಕಾರಿನಲ್ಲಿ ಇಂಧನದ ಸಂಯೋಜನೆ ಮತ್ತು ಎಥೆನಾಲ್‌ನ ಶೇಕಡಾವಾರು ಪ್ರಮಾಣವನ್ನು ಪತ್ತೆಹಚ್ಚುವ ಎಥೆನಾಲ್ ಸೆನ್ಸರ್ ಗಳನ್ನು ಕೂಡ ಸಂಯೋಜಿಸಲಾಗಿದೆ. ಇದರೊಂದಿಗೆ, ಇಂಧನ ಪಂಪ್‌ಗಳು, ಎಂಜಿನ್ ನಿರ್ವಹಣಾ ವ್ಯವಸ್ಥೆಗಳು ಮತ್ತು ಇಂಧನ ಇಂಜೆಕ್ಟರ್‌ಗಳು ಮತ್ತು ಹೆಚ್ಚಿನ ಘಟಕಗಳನ್ನು ಹೊಸ ವೈವಿಧ್ಯಮಯ ಇಂಧನದೊಂದಿಗೆ ಹೊಂದಿಕೊಳ್ಳಬೇಕು. ಈ ಎಲ್ಲಾ ಬದಲಾವಣೆಗಳು ಒಟ್ಟಾರೆಯಾಗಿ ಕಟ್ಟುನಿಟ್ಟಾದ BS6 ಹಂತ-II ಮಾನದಂಡಗಳಿಗೆ ಬದ್ಧವಾಗಿರುತ್ತವೆ. ಭಾರತೀಯ ಸಮೂಹ ಮಾರುಕಟ್ಟೆಗೆ ಕಾರ್ಯಸಾಧ್ಯತೆಗಾಗಿ ಈ ತಂತ್ರಜ್ಞಾನದ ವ್ಯಾಪಕ ಮೌಲ್ಯಮಾಪನವನ್ನು ಮಾಡುವ ಯೋಜನೆಯನ್ನು ಹೊಂದಿದೆ ಎಂದು ಮಾರುತಿ ಸುಜುಕಿ ಬಹಿರಂಗಪಡಿಸಿದೆ.

Auto Expo 2023: ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಫ್ಲೆಕ್ಸ್‌-ಇಂಧನದ Maruti WagonR ಪ್ರದರ್ಶನ

2023ರ ಮಾರ್ಚ್ ವೇಳೆಗೆ ಮಾರುತಿ ಸುಜುಕಿ ತನ್ನ ಸಂಪೂರ್ಣ ಉತ್ಪನ್ನ ಶ್ರೇಣಿಯನ್ನು E20 ಇಂಧನವನ್ನು ಅನುಸರಿಸಲು ಘೋಷಿಸಿದೆ. ವ್ಯಾಗನ್ಆರ್ ಫ್ಲೆಕ್ಸ್ ಇಂಧನ ಮೂಲಮಾದರಿ ವಾಹನವು ಭಾರತ ಸರ್ಕಾರದ 'ಮೇಕ್ ಇನ್ ಇಂಡಿಯಾ' ಪ್ರಯತ್ನಗಳನ್ನು ಉತ್ತೇಜಿಸುತ್ತದೆ. ಈ ಹೊಸ ಮಾರುತಿ ವ್ಯಾಗನ್ಆರ್ ಫ್ಲೆಕ್ಸ್ ಇಂಧನ ಮೂಲಮಾದರಿಯ ಪವರ್‌ಟ್ರೇನ್ ಸೆಟಪ್ 1.2 ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿದೆ. ಇದು E20 ರಿಂದ E85 ವರೆಗಿನ ಫ್ಲೆಕ್ಸ್ ಇಂಧನ ಶ್ರೇಣಿಯೊಂದಿಗೆ ಚಲಿಸಬಹುದು.

ಗ್ಯಾಸೋಲಿನ್ ಯುನಿಟ್ 88.5 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ ಎಥೆನಾಲ್ ಶೇಕಡಾವಾರು ಪತ್ತೆಗಾಗಿ ಎಥೆನಾಲ್ ಸೆನ್ಸರ್ ಮತ್ತು ಕೋಲ್ಡ್ ಸ್ಟಾರ್ಟ್ ಅಸಿಸ್ಟ್‌ಗಾಗಿ ಹಿಟೇಡ್ ಫ್ಯೂಯಲ್ ರೈಲುಗಳಂತಹ ಹೊಸ ಇಂಧನ ಸಿಸ್ಟಂ ತಂತ್ರಜ್ಞಾನಗಳನ್ನು ಮೋಟಾರ್ ಹೊಂದಿದೆ. ಇನ್ನು ಅದರ ಎಂಜಿನ್ ನಿರ್ವಹಣಾ ವ್ಯವಸ್ಥೆ, ಇಂಧನ ಇಂಜೆಕ್ಟರ್ ಮತ್ತು ಇಂಧನ ಪಂಪ್ ಜೊತೆಗೆ ಇತರ ಯುನಿಟ್ ಗಳನ್ನು ನವೀಕರಿಸಲಾಗಿದೆ. ಈ ಪವರ್‌ಟ್ರೇನ್ ಕಟ್ಟುನಿಟ್ಟಾದ BS6 ಹೊರಸೂಸುವಿಕೆಯ ಮಾನದಂಡಗಳನ್ನು ಸಹ ಪೂರೈಸುತ್ತದೆ.

Auto Expo 2023: ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಫ್ಲೆಕ್ಸ್‌-ಇಂಧನದ Maruti WagonR ಪ್ರದರ್ಶನ

ಮೂಲಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಎಥೆನಾಲ್ ಇಂಧನ ಆಧಾರಿತ ವ್ಯಾಗನ್ಆರ್ ಸಾಮಾನ್ಯ ICE-ಚಾಲಿತ ಆವೃತ್ತಿಗಿಂತ 79 ಪ್ರತಿಶತದಷ್ಟು ಟೈಲ್‌ಪೈಪ್ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಕಂಪನಿ ಹೇಳಿದೆ. ಇದರ ಪವರ್ ಮತ್ತು ಕಾರ್ಯಕ್ಷಮತೆ ಸಾಮಾನ್ಯ ಪೆಟ್ರೋಲ್ ಆವೃತ್ತಿಯಂತೆಯೇ ಇರಲಿದೆ. ಈ ಮಾರುತಿ ಸುಜುಕಿ ಕಂಪನಿಯು ತನ್ನ ಮೊದಲ ಫ್ಲೆಕ್ಸ್ ಇಂಧನ ಮಾದರಿಯು ಕಾಂಪ್ಯಾಕ್ಟ್ ವಿಭಾಗದಲ್ಲಿರಲಿದೆ ಮತ್ತು 2025ರ ವೇಳೆಗೆ ಬಿಡುಗಡೆಯಾಗಲಿದೆ ಎಂದು ದೃಢಪಡಿಸಿದೆ.

ದೇಶದಲ್ಲಿ ಏರುತ್ತಲೇ ಇರುವ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆಯನ್ನು ಕಂಡು ಗ್ರಾಹಕ ಅಸಹಾಯಕನಂತೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಈ ಪರಿಸ್ಥಿತಿಯಲ್ಲಿ ಸರಕಾರ ಕೂಡ ಇಂಧನ ದರ ನಿಯಂತ್ರ ಕಷ್ಟ ಎಂದು ಕೈಚೆಲ್ಲಿ ಕುಳಿತಿದೆ. ಇದಕ್ಕೊಂದು ಬೇರೆಯೇ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯ ಇಂಧನ ಹುಡುಕಬೇಕಾಗಿದೆ. ಹೀಗಾಗಿಯೇ ಪೆಟ್ರೋಲ್ ಜಾಗಕ್ಕೆ ಇಥೆನಾಲ್ ಬರಬಹುದು. ಮುಂದಿನ ಕೆಲವು ದಿನಗಳಲ್ಲಿ ಸರ್ಕಾರ ಫ್ಲೆಕ್ಸ್ ಫ್ಯೂಯೆಲ್ ಇಂಜಿನ್ (flex-fuel engines) ಅನ್ನು ಮಾರುಕಟ್ಟೆಗೆ ತರಲಿದೆ.

More from DriveSpark

Article Published On: Thursday, January 12, 2023, 18:25 [IST]
English summary
Auto expo 2023 maruti wagonr flex fuel showcased details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+