Best Selling Cars: ಜನಪ್ರಿಯ ಎಸ್‍ಯುವಿಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಕಾಯ್ದುಕೊಂಡ ಮಾರುತಿಯ ಸಣ್ಣ ಕಾರುಗಳು

ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ಸ್ ಅಥವಾ ಎಸ್‌ಯುವಿಗಳು ಪಾರುಪತ್ಯ ಸಾಧಿಸುತ್ತಿದೆ. ಎಸ್‍ಯುವಿಗಳು ಭಾರತೀಯ ಆಟೋ ಉದ್ಯಮದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದೆ. ಬಹುತೇಕ ಎಲ್ಲಾ ಜನಪ್ರಿಯ ಕಾರು ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಈ ವಿಭಾಗದಲ್ಲಿ ಬಿಡುಗಡೆಗೊಳಿಸಲಾಗಿವೆ.

ಆದರೆ ಕಳೆದ ವರ್ಷದ ಏಪ್ರಿಲ್ ಮತ್ತು ಈ ವರ್ಷದ ಮಾರ್ಚ್ ನಡುವೆ, ದೇಶದಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸಣ್ಣ ಕಾರುಗಳು ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಈ ಹೆಚ್ಚು ಮಾರಾಟವಾದ ಪಟ್ಟಿಯಲ್ಲಿ ಮಾರುತಿ ವ್ಯಾಗನ್ಆರ್ ಅಗ್ರ ಸ್ಥಾನದಲ್ಲಿದೆ. ಮಾರುತಿ ವ್ಯಾಗನ್ಆರ್ ಕಳೆದ 12 ತಿಂಗಳ ಅವಧಿಯಲ್ಲಿ ಈ ಕಾರು ಭಾರತದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ಕಂಡುಕೊಂಡಿದೆ.

Best Selling Cars

ಮಾರುತಿ ವ್ಯಾಗನ್ಆರ್ ಕಾರು AGS ರೂಪಾಂತರಗಳಲ್ಲಿ ಹಿಲ್ ಹೋಲ್ಡ್ ಅಸಿಸ್ಟ್, ನಾಲ್ಕು ಸ್ಪೀಕರ್‌ಗಳೊಂದಿಗೆ ಸ್ಮಾರ್ಟ್‌ಫೋನ್ ನ್ಯಾವಿಗೇಷನ್‌ನೊಂದಿಗೆ 7-ಇಂಚಿನ ಸ್ಮಾರ್ಟ್‌ಪ್ಲೇ ಸ್ಟುಡಿಯೊದಂತಹ ಫೀಚರ್ಸ್ ಗಳನ್ನು ಹೊಂದಿವೆ.ಒಟ್ಟಾರೆಯಾಗಿ, ಈ ಅವಧಿಯಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳಲ್ಲಿ ಮಾರುತಿಯ ಏಳು ಕಾರುಗಳು ಸೇರಿವೆ, ಅವುಗಳಲ್ಲಿ ನಾಲ್ಕು ಸಣ್ಣ ಕಾರುಗಳಾಗಿವೆ. ಪಟ್ಟಿಯಲ್ಲಿ ನಾಲ್ಕು ಎಸ್‍ಯುವಿಗಳು ಸ್ಥಾನವನ್ನು ಪಡೆದುಕೊಂಡಿದೆ.

ಪಟ್ಟಿಯಲ್ಲಿ ಮೊದಲ ನಾಲ್ಕು ಹೆಸರುಗಳು ಸಣ್ಣ ಕಾರುಗಳಾಗಿವೆ. ವ್ಯಾಗನ್ಆರ್ ನಂತರ, ಕಳೆದ 12 ತಿಂಗಳುಗಳಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಮಾದರಿಗಳು ಕ್ರಮವಾಗಿ ಮಾರುತಿ ಆಲ್ಟೊ, ಮಾರುತಿ ಬಲೆನೊ ಮತ್ತು ಮಾರುತಿ ಸ್ವಿಫ್ಟ್. ಮಾರುತಿ ವ್ಯಾಗನ್ಆರ್ ನ 2.12 ಲಕ್ಷ ಯುನಿಟ್ ಗಳನ್ನು ಮಾರಾಟ ಮಾಡಿದ್ದು, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆವ್ಯಾಗನ್‌ಆರ್‌ ಕಾರಿನ ಮಾರಾಟವು ಇಡೀ ವರ್ಷದಲ್ಲಿ ಇತರ ಕೆಲವು ಕಾರು ತಯಾರಕರ ಒಟ್ಟಾರೆ ಅಂಕಿಅಂಶಗಳಿಗಿಂತ ಹೆಚ್ಚು.

Best Selling Cars

ವ್ಯಾಗನ್ಆರ್ಭಾರತದಲ್ಲಿ 1999 ರಲ್ಲಿ ಪಾದಾರ್ಪಣೆ ಮಾಡಿದ ನಂತರ ಮಾರುತಿಯ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಆಲ್ಟೊ ಜೊತೆಗೆ, ವ್ಯಾಗನ್ಆರ್ ಎರಡು ದಶಕಗಳಿಂದ ಮಾರುಕಟ್ಟೆಯಲ್ಲಿ ಉಳಿದಿರುವ ಅತ್ಯಂತ ಹಳೆಯ ಮಾದರಿಗಳಲ್ಲಿ ಒಂದಾಗಿದೆ. ಅದರ ಯಶಸ್ಸಿನ ಹಿಂದಿನ ಪ್ರಮುಖ ಕಾರಣವೆಂದರೆ ಹೆಚ್ಚಿನ ಕಾರು ತಯಾರಕರು ಪೂರೈಕೆ ಸಮಸ್ಯೆಗಳಿಂದಾಗಿ ಬಾಕಿ ಉಳಿದಿರುವ ಆದೇಶಗಳೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ ತ್ವರಿತ ಡೆಲಿವರಿ ಟೈಮ್‌ಲೈನ್ ಆಗಿದೆ.

ಇತರ ಅಂಶಗಳ ಪೈಕಿ ಮಾರುತಿಯ ಬಿಡಿಭಾಗಗಳ ಲಭ್ಯತೆ, ಅದರ ಸೇವಾ ಜಾಲ ಮತ್ತು ಮಾಲೀಕತ್ವದ ವೆಚ್ಚ. ಈ ಮಾರುತಿ ವ್ಯಾಗನ್ಆರ್ ಕಾರಿನಲ್ಲಿ 1.0 ಲೀಟರ್ ಎಂಜಿನ್ 67 ಬಿಹೆಚ್‍ಪಿ ಪವರ್ ಮತ್ತು 89 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 90 ಬಿಹೆಚ್‍ಪಿ ಪವರ್ ಮತ್ತು 113N ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಎರಡೂ ಎಂಜಿನ್‌ಗಳು ಡ್ಯುಯಲ್‌ಜೆಟ್, ಡ್ಯುಯಲ್ ವಿವಿಟಿ (ವೇರಿಯಬಲ್ ವಾಲ್ವ್ ಟೈಮಿಂಗ್), ಐಎಸ್‌ಎಸ್ (ಐಡಲ್ ಸ್ಟಾರ್ಟ್ ಸ್ಟಾಪ್) ಮತ್ತು ಕೂಲ್ಡ್ ಇಜಿಆರ್ (ಎಕ್ಸಾಸ್ಟ್ ಗ್ಯಾಸ್ ರಿಸರ್ಕ್ಯುಲೇಷನ್) ತಂತ್ರಜ್ಞಾನವನ್ನು ಒಳಗೊಂಡಿದ್ದು ಅದು ಉತ್ತಮ ಇಂಧನ ದಕ್ಷತೆ ಮತ್ತು ಕಡಿಮೆ ಹೊರಸೂಸುವಿಕೆಯನ್ನು ಖಚಿತಪಡಿಸುತ್ತದೆ. ಹಾಗೆಯೇ 1.2 ಲೀಟರ್ ಪೆಟ್ರೋಲ್ ಕಾರಿನ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 23.56 ಕಿ.ಮೀ ಮೈಲೇಜ್ ನೀಡಿದರೆ ಆಟೋಮ್ಯಾಟಿಕ್ ಮಾದರಿಯು ಪ್ರತಿ ಲೀಟರ್‌ಗೆ 24.43 ಕಿ.ಮೀ ಮೈಲೇಜ್ ನೀಡುತ್ತದೆ.

ವ್ಯಾಗನ್ಆರ್ ಸಿಎನ್‌ಜಿ ಮಾದರಿಯು ಸಹ ತನ್ನ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚು ಮೈಲೇಜ್ ಖಾತ್ರಿಪಡಿಸಿದೆ. ಈ ವ್ಯಾಗನ್‍ಆರ್ ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ ದೇಶದಲ್ಲಿ ಪ್ರಾರಂಭಿಸಿದಾಗಿನಿಂದಲೂ ಕೂಡ ಉತ್ತಮ ಬೇಡಿಕೆಯಿಂದ ಮಾರಾಟವಾಗುತ್ತಿದೆ. ಈಗ ಮೂರನೇ ತಲೆಮಾರಿನ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. 2019 ರಲ್ಲಿ, ಎತ್ತರದ ರೈಡಿಂಗ್ ಹ್ಯಾಚ್‌ಬ್ಯಾಕ್ ಹೊಸ ಪ್ಲಾಟ್‌ಫಾರ್ಮ್, ಹೊಚ್ಚ ಹೊಸ ವಿನ್ಯಾಸ ಮತ್ತು ಹೆಚ್ಚು ವಿಶಾಲವಾದ ಒಳಾಂಗಣದ ಉಪಸ್ಥಿತಿಯೊಂದಿಗೆ ತನ್ನ ಅತಿದೊಡ್ಡ ನವೀಕರಣವನ್ನು ಪಡೆದುಕೊಂಡಿತು.

Article Published On: Friday, April 21, 2023, 11:13 [IST]
English summary
Best selling cars list 2022 23 small cars beat suvs details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+