ಕೊನೆಗೂ ಪರೀಕ್ಷಾ ಹಂತ ತಲುಪಿದ ಟೊಯೊಟಾ-BMW ಪಾಲುದಾರಿಕೆಯ ಹೈಡ್ರೋಜನ್ ಕಾರು

ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೆಲವು ಪ್ರಮುಖ ಕಂಪನಿಗಳು ಹೈಡ್ರೋಜನ್ ವಾಹನಗಳ ತಯಾರಿಯಲ್ಲೂ ತೊಡಗಿಸಿಕೊಂಡಿವೆ. ಸದ್ಯ BMW iX5 ಹೈಡ್ರೋಜನ್ ಚಾಲಿತ SUV ಈಗ ತನ್ನ ಮುಂದಿನ ಹಂತವನ್ನು ಪ್ರವೇಶಿಸಲು ಸಜ್ಜಾಗಿರುವುದಾಗಿದೆ ಕಂಪನಿ ಘೋಷಿಸಿದ್ದು, iX5 ವಿವಿಧ ಪರೀಕ್ಷೆಗಳನ್ನು ಇದೀಗ ಎದುರಿಸಲಿದೆ.

ಕಂಪನಿಯ ಪ್ರಕಾರ ಮೊದಲಿಗೆ 100 ಘಟಕಗಳ ಕಡಿಮೆ ಪ್ರಮಾಣದ ಉತ್ಪಾದನೆ ಮಾಡುವುದಾಗಿ ಹೇಳಿದೆ. ಬಿಎಂಡಬ್ಲ್ಯು ಈ ಹೊಸ ಹೈಡ್ರೋಜನ್ ಕಾರಿಗಾಗಿ ತನ್ನ ಜನಪ್ರಿಯ ಮಾದರಿಯಾದ X5 ಅನ್ನು ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ICE ವಿಭಾಗದಲ್ಲಿ ಈ ಮಾದರಿಗೆ ಉತ್ತಮ ಬೇಡಿಕೆಯಿದೆ. ಅಲ್ಲದೇ ಈ ಎಸ್‌ಯುವಿ ವಿನ್ಯಾಸ ಕೂಡ ತುಂಬಾ ಆಕರ್ಷಣೀಯವಾಗಿರುವುದರಿಂದ ಕಂಪನಿಯು X5 ಮಾದರಿಯನ್ನು iX5 ಹೈಡ್ರೋಜನ್ ಎಸ್‌ಯುವಿ ಆಗಿ ತರಲು ಯೋಜಿಸಿದೆ.

ಕೊನೆಗೂ ಪರೀಕ್ಷಾ ಹಂತ ತಲುಪಿದ ಟೊಯೊಟಾ-BMW ಪಾಲುದಾರಿಕೆಯ ಹೈಡ್ರೋಜನ್ ಕಾರು

ಪ್ರಸ್ತುತ ಜನ್ X5 ಮಾದರಿಯನ್ನು ಆಧರಿಸಿದ ಈ ಹೈಡ್ರೋಜನ್ ಇಂಧನ ಸೆಲ್ ಆವೃತ್ತಿಯನ್ನು ಮೊದಲು 2019 ರ ಫ್ರಾಂಕ್‌ ಫರ್ಟ್ ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಗಿತ್ತು. ಈ ಸರಣಿಯ ಉತ್ಪಾದನೆಯ ಮೊದಲು, ಮ್ಯೂನಿಚ್‌ನಲ್ಲಿರುವ BMW ಗ್ರೂಪ್‌ನ ಸಂಶೋಧನೆ ಮತ್ತು ನಾವೀನ್ಯತೆ ಕೇಂದ್ರದಲ್ಲಿ iX5 ಮೂಲ ಮಾದರಿಯನ್ನು ನಿರ್ಮಿಸಲಾಯಿತು. ಈಗ iX5 ಗಾಗಿ, BMW ಗ್ರೂಪ್ ಟೊಯೋಟಾ ಮೋಟಾರ್ ಕಾರ್ಪೊರೇಶನ್‌ನಿಂದ ಪ್ರತ್ಯೇಕ ಇಂಧನ ಕೋಶಗಳನ್ನು ಕೂಡ ಪಡೆಯುತ್ತಿದೆ.

ಈ ಹೈಡ್ರೋಜನ್ ಚಾಲಿತ ಮಾದರಿಯ ಪವರ್ ಔಟ್‌ಗಳನ್ನು ನೋಡುವುದಾದರೆ 401bhp ನಲ್ಲಿ ಹೊಂದಿಸಲಾಗಿದೆ. ಹಾಗೆಯೇ WLTP (ವಿಶ್ವಾದ್ಯಂತ ಸಮನ್ವಯಗೊಳಿಸಿದ ಲಘು ವಾಹನ ಪರೀಕ್ಷಾ ವಿಧಾನ) ಅಡಿಯಲ್ಲಿ ಕ್ಲೈಮ್ ಮಾಡಲಾದ ರೇಂಜ್ ನೋಡುವುದಾದರೆ 504 ಕಿಲೋಮೀಟರ್ ಇದೆ. ಇದು ಕಾರ್ಬನ್ ಫೈಬರ್ ಬಲವರ್ಧಿತ ಪ್ಲಾಸ್ಟಿಕ್ (CFRP) ನಿಂದ ಮಾಡಲ್ಪಟ್ಟ ಎರಡು 700 ಬಾರ್ ಟ್ಯಾಂಕ್‌ಗಳನ್ನು ಒಳಗೊಂಡಿದೆ. ಇವು ಒಟ್ಟಿಗೆ ಸುಮಾರು ಆರು ಕೆ.ಜಿಯಷ್ಟು ಹೈಡ್ರೋಜನ್ ಅನ್ನು ಹಿಡಿದಿಟ್ಟುಕೊಳ್ಳುತ್ತವೆ.

ಕೊನೆಗೂ ಪರೀಕ್ಷಾ ಹಂತ ತಲುಪಿದ ಟೊಯೊಟಾ-BMW ಪಾಲುದಾರಿಕೆಯ ಹೈಡ್ರೋಜನ್ ಕಾರು

ಈ ಬೃಹತ್ ಟ್ಯಾಂಕ್‌ಗಳನ್ನು ತುಂಬಲು ಮೂರರಿಂದ ನಾಲ್ಕು ನಿಮಿಷಗಳ ಸಮಯ ತೆಗೆದುಕೊಳ್ಳುತ್ತದೆ. BMW eDrive ಪವರ್‌ಟ್ರೇನ್‌ನ ಐದನೇ ತಲೆಮಾರಿನ ಮಾದರಿಯು ಆರು ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. iX5 ಜೊತೆಗಿನ ಹೈಡ್ರೋಜನ್ ಫ್ಯೂಯಲ್ ಸೆಲ್ ಪೈಲಟ್ ಪ್ರೋಗ್ರಾಂ BMW ಗ್ರೂಪ್‌ನ CO2 ಹೊರಸೂಸುವಿಕೆಯನ್ನು 2030 ರ ವೇಳೆಗೆ ಶೇ 40 ರಷ್ಟು ಕಡಿಮೆ ಮಾಡುವ ಯೋಜನೆಯ ಭಾಗವಾಗಿದೆ.

ಈ ಕಾರುಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವಷ್ಟು ಇಂಧನ ಕೋಶ ತಂತ್ರಜ್ಞಾನವನ್ನು ಇನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಹಾಗಾಗಿ ಅನೇಕ ಕಾರು ಕಂಪನಿಗಳು ಈ ತಂತ್ರಜ್ಞಾನವನ್ನು ಕೈಗೆಟುಕುವಂತೆ ಮಾಡುವಲ್ಲಿ ಕೆಲಸ ಮಾಡುತ್ತಿವೆ. ಇತ್ತೀಚೆಗೆ BMW ಇಂಧನ ಸೆಲ್ ಕಾರುಗಳನ್ನು ಅಭಿವೃದ್ಧಿಪಡಿಸಲು ಟೊಯೋಟಾ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ. ಇಂಧನ ಕೋಶ ವಾಹನಗಳು ಯಾವುದೇ ರೀತಿಯ ಹೊರಸೂಸುವಿಕೆಯನ್ನು ಉಂಟುಮಾಡುವುದಿಲ್ಲ ಮತ್ತು ಅವುಗಳ ಇಂಧನ ತುಂಬುವಿಕೆಯು ತುಂಬಾ ಸುಲಭವಾಗಿರುತ್ತದೆ ಎಂದು ಹೇಳಲಾಗಿದೆ.

ಕೊನೆಗೂ ಪರೀಕ್ಷಾ ಹಂತ ತಲುಪಿದ ಟೊಯೊಟಾ-BMW ಪಾಲುದಾರಿಕೆಯ ಹೈಡ್ರೋಜನ್ ಕಾರು

ಎಲೆಕ್ಟ್ರಿಕ್ ಕಾರುಗಳು ಚಾರ್ಜ್ ಮಾಡಲು ಕೆಲ ಗಂಟೆಗಳನ್ನು ತೆಗೆದುಕೊಳ್ಳುತ್ತವೆ, ಆದರೆ ಹೈಡ್ರೋಜನ್ ಇಂಧನ ಸೆಲ್ ವಾಹನಗಳು ನಿಮಿಷಗಳಲ್ಲಿ ಇಂಧನ ತುಂಬಿಸಬಹುದು. ಟೊಯೋಟಾ ಕೂಡ ತನ್ನದೇ ಆದ ಇಂಧನ ಸೆಲ್ ಕಾರನ್ನು ಸಹ ಅಭಿವೃದ್ಧಿಪಡಿಸಿದೆ. ಟೊಯೋಟಾ ಮಿರಾಯ್ ಬ್ರ್ಯಾಂಡ್‌ನ ಮೊದಲ ಇಂಧನ ಸೆಲ್ ಕಾರಾಗಿದೆ. ಈ ಕಾರನ್ನು ಭಾರತದಲ್ಲಿಯೂ ಬಿಡುಗಡೆ ಮಾಡಲಾಗಿದ್ದು, ಆ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಆಗಮಿಸಿದ್ದರು. ಆದರೆ ಕಂಪನಿಯು ಈ ಕಾರಿನ ವಾಣಿಜ್ಯ ಉತ್ಪಾದನೆಯನ್ನು ಮಾಡುತ್ತಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Tuesday, February 28, 2023, 18:06 [IST]
English summary
Bmw hydrogen car has finally reached the test stage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+