ಇತ್ತೀಚೆಗೆ ಬಿಡುಗಡೆಯಾದ BMW iX1 xDrive30 ಐಷಾರಾಮಿ ಎಲೆಕ್ಟ್ರಿಕ್ ಎಸ್‌ಯುವಿ ವಿಶೇಷತೆಗಳು!
BMW ಇಂಡಿಯಾ ಭಾರತದಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದ ಹೊಸ BMW iX1 xDrive30 ಎಲೆಕ್ಟ್ರಿಕ್ SUV ಭಾರತದಲ್ಲಿ ಕಂಪನಿಯ ನಾಲ್ಕನೇ ಇವಿಯಾಗಿದೆ. ಈ ಪ್ರೀಮಿಯಂ 5-ಆಸನಗಳ ಐಷಾರಾಮಿ SUV ಟಾಪ್ ವಿಶೇಷತೆಗಳನ್ನು ಇಲ್ಲಿ ನೋಡೋಣ.
ವಿನ್ಯಾಸ: ಹೊಸ BMW iX1 xDrive30 ಎಲೆಕ್ಟ್ರಿಕ್ SUV ವಿನ್ಯಾಸದಲ್ಲಿ ಬಹುತೇಕ BMW X1 SUV ಗೆ ಹೋಲುತ್ತದೆ. ಮುಂಭಾಗದ ಗ್ರಿಲ್‌ನಲ್ಲಿ ಅಳವಡಿಸಲಾಗಿರುವ 'i' ಲೊಗೊದಲ್ಲಿ ಮಾತ್ರ ತುಸು ವ್ಯತ್ಯಾಸ ಬರುತ್ತದೆ. ಹೊಸ BMW iX1 xDrive30 ಎಲೆಕ್ಟ್ರಿಕ್ SUV ಗ್ರೇ, ಸಿಲ್ವರ್, ಬ್ಲಾಕ್ ಮತ್ತು ವೈಟ್ ಸೇರಿದಂತೆ 4 ಮೊನೊಟೋನ್ ಬಣ್ಣಗಳಲ್ಲಿ ಲಭ್ಯವಿದ್ದು 18-ಇಂಚಿನ ಆಕರ್ಷಕ ಅಲಾಯ್ ವೀಲ್‌ಗಳನ್ನು ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್: ಹೊಸ BMW iX1 xDrive30 ಎಲೆಕ್ಟ್ರಿಕ್ SUV, 66.4kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಈ ದೊಡ್ಡ ಬ್ಯಾಟರಿ ಪ್ಯಾಕ್ ಸಮರ್ಥವಾದ ರೇಂಜ್ ನೀಡಲಿದ್ದು, ಸಂಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿ ಪ್ಯಾಕ್‌ನಲ್ಲಿ 440 ಕಿ.ಮೀ ಪ್ರಭಾವಶಾಲಿ ರೇಂಜ್ ನೀಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.
BMW ಪ್ರಕಾರ, ಹೊಸ iX1 xDrive30 ಎಲೆಕ್ಟ್ರಿಕ್ SUV ಅದರ ಸ್ಟ್ಯಾಂಡರ್ಡ್ 11kW AC ಚಾರ್ಜರ್‌ನೊಂದಿಗೆ ಸುಮಾರು 6.3 ಗಂಟೆಗಳಲ್ಲಿ ಶೇ 100 ರಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದು. ಹಾಗೆಯೇ ಇದರ 130kW DC ವೇಗದ ಚಾರ್ಜರ್‌ನೊಂದಿಗೆ, ಬ್ಯಾಟರಿಯು ಕೇವಲ 30 ನಿಮಿಷಗಳಲ್ಲಿ ಶೇ 80 ರಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ವೈಶಿಷ್ಟ್ಯಗಳು: ಹೊಸ BMW iX1 xDrive 30 ಎಲೆಕ್ಟ್ರಿಕ್ SUV 10.7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, 10.25-ಇಂಚಿನ ಡಿಜಿಟಲ್ ಇನ್ಫೋ ಡಿಸ್ಪ್ಲೇ, ರಿಕ್ಲೈನೇಶನ್ ವೈಶಿಷ್ಟ್ಯದೊಂದಿಗೆ ಹಿಂಭಾಗದ ಬೆಂಚ್ ಸೀಟ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್‌ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ.
ಇವಿಷ್ಟೇ ಅಲ್ಲದೇ ಮಸಾಜ್ ಫಂಕ್ಷನ್‌ನೊಂದಿಗೆ ಮುಂಭಾಗದ ಸೀಟ್‌ಗಳು, 6 ವಿಭಿನ್ನ ಆಂಬಿಯೆಂಟ್ ಲೈಟಿಂಗ್ ಮೋಡ್‌ಗಳು, ಅಡಾಪ್ಟಿವ್ ಸಸ್ಪೆನ್ಷನ್, ಪನಾರಮಿಕ್ ಸನ್‌ರೂಫ್ ಮತ್ತು ಪಾರ್ಕ್ ಅಸಿಸ್ಟ್, ಆಟೋ ಟೈಲ್‌ಗೇಟ್ ಆಪರೇಟಿಂಗ್ ಸಿಸ್ಟಮ್ ವೈಶಿಷ್ಟ್ಯವನ್ನು ಹೊಂದಿದೆ. ಸುರಕ್ಷತೆಯ ವಿಷಯದಲ್ಲಿ, ABS, ESP, ಟ್ರಾಕ್ಷನ್ ಕಂಟ್ರೋಲ್, ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಅಡಾಪ್ಟಿವ್ LED ಹೆಡ್‌ಲೈಟ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಹೆಚ್ಚುವರಿ ಸುರಕ್ಷತೆಯಾಗಿ ADAS ತಂತ್ರಜ್ಞಾನವನ್ನು ಸಹ ನೀಡಲಾಗಿದೆ.

ಪವರ್‌ಟ್ರೇನ್ ಮತ್ತು ಪರ್ಫಾಮೆನ್ಸ್: ಹೊಸ BMW iX1 xDrive30 ಎರಡು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಬರುತ್ತದೆ. ಇದು ಆಲ್ ವೀಲ್ ಡ್ರೈವ್ ಎಲೆಕ್ಟ್ರಿಕ್ SUV ಆಗಿದೆ. ಸಂಯೋಜಿತ ರೂಪದಲ್ಲಿ, ಈ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳು ಒಟ್ಟು 313bhp ಪವರ್ ಮತ್ತು 494 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕೇವಲ 5.6 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪಬಲ್ಲದು. ಇದರ ಗರಿಷ್ಠ ವೇಗವು 180km/h ಗೆ ಸೀಮಿತವಾಗಿದೆ.
ಬೆಲೆ ಮತ್ತು ಸ್ಪರ್ಧಿಗಳು: ಹೊಸ BMW iX1 xDrive30 ಎಲೆಕ್ಟ್ರಿಕ್ SUV ಕೇವಲ ಒಂದು ರೂಪಾಂತರದಲ್ಲಿ ಲಭ್ಯವಿದೆ. ಈ ರೂಪಾಂತರವು ರೂ. 66.90 ಲಕ್ಷ(ಎಕ್ಸ್ ಶೋ ರೂಂ) ಬೆಲೆ ಹೊಂದಿದೆ. ಮರ್ಸಿಡಿಸ್ EQB SUV, Volvo XC40 ರೀಚಾರ್ಜ್, Volvo C40 Recharge, Hyundai Ioniq 5, ಮತ್ತು Kia EV6 ಗಳು ಲಭ್ಯವಿದ್ದು, ಇವೆಲ್ಲವು BMW iX1 xDrive30 ನೇರ ಪ್ರತಿಸ್ಪರ್ಧಿಗಳಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








