333 ಕಿ.ಮೀ ರೇಂಜ್, ಬೆಡ್ ರೂಂನಂತಹ ಸೌಕರ್ಯ ಹೊಂದಿರುವ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲಿದೆ ಚೀನಾ ಕಂಪನಿ

ಇತ್ತೀಚೆಗೆ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಹೆಚ್ಚಿನ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಬಹುತೇಕ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಪಡಿಸುವಲ್ಲಿ ನಿರತರಾಗಿದ್ದಾರೆ.

ಎಲೆಕ್ಟ್ರಿಕ್ ಕಾರುಗಳು ಸಾಮಾನ್ಯವಾಗಿ ಹೆಚ್ಚಿನ ಫೀಚರ್ಸ್ ಗಳನ್ನು ಒಳಗೊಂಡಿರುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಾರ್ ಫೀಚರ್ಸ್ ಗಳು ಸಾಮಾನ್ಯವಾಗಿದೆ. ಕಾರು ತಯಾರಕರು ಸಿಟಿ ಗ್ರಾಹಕರನ್ನು ಗುರಿಯಾಗಿಸಿ ಇದೇ ರೀತಿಯ ಆಕರ್ಷಕ ಫೀಚರ್ಸ್ ಹೊಂದಿರುವ ಹ್ಯಾಚ್ ಬ್ಯಾಕ್ ಎಲೆಕ್ಟ್ರಿಕ್ ಕಾರನ್ನು ಹೆಚ್ಚು ಬಿಡುಗಡೆಗೊಳಿಸುತ್ತಿದ್ದಾರೆ. ಇದೇ ರೀತಿ ಚೀನಾದ ಕಾರು ತಯಾರಕರಾದ ವುಲಿಂಗ್ ತಮ್ಮ ಹೊಸ ಎಲೆಕ್ಟ್ರಿಕ್ ಕಾರಿನಲ್ಲಿ jaw-dropping ಫೀಚರ್ಸ್ ಅನ್ನು ನೀಡಿದ್ದಾರೆ.

ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲಿದೆ ಚೀನಾ ಕಂಪನಿ

ಈ ಹೊಸ ವುಲಿಂಗ್ ಬಿಂಗೊ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಗಾಳಿ ತುಂಬಬಹುದಾದ ಏರ್‌ಬೆಡ್‌ನೊಂದಿಗೆ ಬರುತ್ತದೆ. ಈ ಹೊಸ ಫೀಚರ್ ವುಲಿಂಗ್ ಬಿಂಗೊ ಎಲೆಕ್ಟ್ರಿಕ್ ಕಾರಿನಲ್ಲಿರುವ ಅತ್ಯುತ್ತಮ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ICE ವಾಹನವನ್ನು ಇಂಧನ ತುಂಬಿಸುವುದಕ್ಕೆ ಹೋಲಿಸಿದರೆ ಬ್ಯಾಟರಿ ಪ್ಯಾಕ್ ಅನ್ನು ಚಾರ್ಜ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಹೊಸ ವುಲಿಂಗ್ ಬಿಂಗೊ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಚೀನಾದಲ್ಲಿ ನಗರ ಮಹಿಳಾ ಖರೀದಿದಾರರನ್ನು ಗುರಿಯಾಗಿಸಿಕೊಂಡಿದೆ.

ಇದಲ್ಲದೆ, ಮುಂಬರುವ ಶಾಂಘೈ ಆಟೋ ಶೋದಲ್ಲಿ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ತನ್ನ ಸಾರ್ವಜನಿಕ ಚೊಚ್ಚಲ ಪ್ರವೇಶವನ್ನು ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ವುಲಿಂಗ್ ಬಿಂಗೊ ಎಲೆಕ್ಟ್ರಿಕ್ ಕಾರಿನ ಇತರ ಫೀಚರ್ಸ್ ಬಗ್ಗೆ ಹೇಳುವುದಾದರೆ. ಈ ವುಲಿಂಗ್ ಬಿಂಗೊ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಡ್ಯುಯಲ್ ಸ್ಕ್ರೀನ್‌ಗಳು, ಲೆದರ್ ಅಪ್ಹೋಲ್ಸ್ಟರಿ, ಎಲೆಕ್ಟ್ರಾನಿಕ್ ಹ್ಯಾಂಡ್‌ಬ್ರೇಕ್ ಮತ್ತು ಹೆಚ್ಚಿನವುಗಳೊಂದಿಗೆ ಆಕರ್ಷಕವಾಗಿ ಕಾಣುವ ಕ್ಯಾಬಿನ್ ಅನ್ನು ಒಳಗೊಂಡಿದೆ.

ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲಿದೆ ಚೀನಾ ಕಂಪನಿ

ಇದರೊಂದಿಗೆ ಚೀನಾ ಕಂಪನಿಯು ಗಾಳಿ ತುಂಬಬಹುದಾದ ಏರ್‌ಬೆಡ್, ಕ್ಯಾಂಪಿಂಗ್ ಸೆಟ್‌ಗಳು, ಲ್ಯಾಂಪ್‌ಗಳು, ರೇಡಿಯೋಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವ್ಯಾಪಕ ಸರಣಿಯ ಅಕ್ಸೆಸರೀಸ್ ಅನ್ನು ನೀಡುತ್ತದೆ. ಈ ವುಲಿಂಗ್ ಬಿಂಗೊ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಕಾರು ಸಿಂಗಲ್ ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದ್ದು, ಇದು 40 bhp ಬಿಹೆಚ್‍ಪಿ ಪವರ್ ಮತ್ತು 110 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ 17.3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಇದು ಚೀನಾ ಲೈಟ್-ಡ್ಯೂಟಿ ವೆಹಿಕಲ್ ಟೆಸ್ಟ್ ಸೈಕಲ್ (CLTC) ಪ್ರಕಾರ 203 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ವುಲಿಂಗ್ ಬಿಂಗೊ ಎಂಬುವುದು ಕಡಿಮೆ ಪವರ್ ಹೊಂದಿರುವ ಕಾರು ಭಾವಿಸಿದರೆ, ಕಂಪನಿಯು 67 bhp ಶಕ್ತಿ ಮತ್ತು 150 Nm ಟಾರ್ಕ್ ಅನ್ನು ಉತ್ಪಾದಿಸುವ ಹೆಚ್ಚು ಪವರ್ ಫುಲ್ ಆವೃತ್ತಿಯನ್ನು ಕೂಡ ಪರಿಚಯಿಸಿದ್ದಾರೆ.

ಈ ಆವೃತ್ತಿಯು ದೊಡ್ಡ 31.9kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಇದು CLTC ಪ್ರಕಾರ, 333 ಕಿ.ಮೀ ರೇಂಜ್ ಅನ್ನು ನೀಡುತ್ತದೆ. Wuling Bingo ಯಾವುದೇ ಖರೀದಿದಾರರನ್ನು ಆಕರ್ಷಿಸಲು ಸಾಕಷ್ಟು ತಂತ್ರಗಳನ್ನು ಹೊಂದಿರುವ ಅತ್ಯಂತ ಸಮರ್ಥವಾದ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಎಂದು ತೋರುತ್ತದೆ. ಇದಲ್ಲದೆ, ವುಲಿಂಗ್ ಬಿಂಗೊ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಹೆಚ್ಚು ಪವರ್ ಫುಲ್ ಆವೃತ್ತಿಯು ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅತ್ಯಂತ ಯಶಸ್ವಿ ಮಾದರಿಗಲಿದೆ ಎಂದು ಹೇಳಲಾಗುತ್ತಿದೆ.

ನಗರ ಖರೀದಿದಾರರನ್ನು ಗುರಿಯಾಗಿಸಿಕೊಂಡು ಸಣ್ಣ ಎಲೆಕ್ಟ್ರಿಕ್ ವಾಹನಗಳಿಗೆ ಚೀನಾದಲ್ಲಿ ಮಾರುಕಟ್ಟೆ ವುಲಿಂಗ್ ಹಾಂಗ್‌ಗುವಾಂಗ್ ಮಿನಿ ಇವಿ ಮತ್ತು ಎಂಜಿ ಏರ್‌ನಂತಹ ಕಾರುಗಳು ಚೀನಾದಲ್ಲಿ ಮಾರಾಟದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತವೆ. ಈ ಕಾರುಗಳು ಅನೇಕ ವಿಧಗಳಲ್ಲಿ ಮೋಹಕವಾದ ವಿನ್ಯಾಸವನ್ನು ಹೊಂದಿದೆ. ಈ ಕಾರು ಆಕರ್ಷಕ ಮತ್ತು ವಿಭಿನ್ನ ವಿನ್ಯಾಸವನ್ನು ಹೊಂದಿರುವುದರಿಂದ ಹೆಚ್ಚು ಯುವ ಗ್ರಾಹಕರನ್ನು ಗುರಿಯಾಗಿಸುತ್ತದೆ. ಆ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿದ್ದಾರೆ.

More from DriveSpark

Article Published On: Monday, February 27, 2023, 12:20 [IST]
English summary
Check this new ev with inflatable bed 333km range details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+