ರಸ್ತೆಗಳಲ್ಲಿ ಈ ಚಿಹ್ನೆ ಕಂಡರೇ ಯಾವುದೇ ಕಾರಣಕ್ಕೂ ವಾಹನ ನಿಲ್ಲಿಸಬೇಡಿ... ಅರ್ಥ ತಿಳಿಸಿದ NHAI

ರಸ್ತೆಗಳಲ್ಲಿ ಎಚ್ಚರಿಕೆಯ ಮಾಹಿತಿ ನೀಡಲು ಸರ್ಕಾರ ವಿವಿಧೆಡೆ ಟ್ರಾಫಿಕ್ ಸಿಗ್ನಲ್ ಬೋರ್ಡ್ಗಳನ್ನು ಹಾಕಿದೆಯಾರೂ ಹಲವರಿಗೆ ಇದರಲ್ಲಿನ ಅರ್ಥವೇ ತಿಳಿದಿಲ್ಲ. ಜೊತೆಗೆ ಅವುಗಳನ್ನು ನಿರ್ಲಕ್ಷಿಸಿದರೆ ಆಗುವ ಅನಾಹುತದ ಬಗ್ಗೆ ಚಿಂತೆಯೂ ಇಲ್ಲ. ಅಂಥವರಿಗಾಗಿಯೇ ಗಂಭೀರ ಚಿಹ್ನೆಯೊಂದರ ಕುರಿತು NHAI ವಿವರಿಸಿ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದೆ.

ರಸ್ತೆ ಚಿಹ್ನೆಗಳು ಪ್ರತಿ ರಸ್ತೆ ಬಳಕೆದಾರರು ಅರ್ಥಮಾಡಿಕೊಳ್ಳಲು ಅಗತ್ಯವಿರುವ ಮಾಹಿತಿಯನ್ನು ಹೊಂದಿರುವ ಚಿತ್ರಾತ್ಮಕ ನಿರೂಪಣೆಗಳಾಗಿವೆ. ವಾಹನದಲ್ಲಿರುವ ವ್ಯಕ್ತಿಯಾಗಿರಲಿ ಅಥವಾ ಪಾದಚಾರಿಯಾಗಿರಲಿ, ಟ್ರಾಫಿಕ್ ಚಿಹ್ನೆಗಳ ಉತ್ತಮ ಜ್ಞಾನವು ಅತ್ಯಗತ್ಯವಾಗಿರುತ್ತದೆ. ನಿಮಗೆಲ್ಲರಿಗೂ ತಿಳಿದಿರುವಂತೆ, ಅಪಘಾತಗಳನ್ನು ಕಡಿಮೆ ಮಾಡಲು ಮತ್ತು ನಿಮ್ಮ ಜೀವವನ್ನು ರಕ್ಷಿಸಲು ರಸ್ತೆ ಸುರಕ್ಷತೆ ಚಿಹ್ನೆಗಳನ್ನು ಪಾಲಿಸುವುದು ತುಂಬಾ ಮುಖ್ಯವಾಗಿದೆ. ಹಾಗಾಗಿ ಪ್ರತಿಯೊಂದು ಚಿಹ್ನೆಯ ಅರ್ಥ ಮತ್ತು ಪ್ರಾಮುಖ್ಯತೆಯನ್ನು ತಿಳಿದುಕೊಳ್ಳುವುದು ನಮ್ಮ ಜವಾಬ್ದಾರಿ ಆಗಿದೆ.

If you see this sign on the roads, do not stop... NHAI explained the meaning

ವಾಹನ ನಿಲುಗಡೆಗೆ ಅವಕಾಶವಿಲ್ಲ, ವೇಗದ ಮಿತಿ, ರಸ್ತೆ ಕಿರಿದಾಗುವ ಮುನ್ನೆಚ್ಚರಿಕೆ ಸೇರಿದಂತೆ ವಿವಿಧ ಫಲಕಗಳು ರಸ್ತೆಯ ಮೇಲೆ ಇರುತ್ತವೆ. ಇವುಗಳ ಕುರಿತು ಬಹುತೇಕ ಎಲ್ಲರಿಗೂ ತಿಳಿದಿದೆ, ಆದರೆ ಕೆಲವೊಂದಷ್ಟು ಚಿಹ್ನೆಗಳ ಕುರಿತು ಎಲ್ಲರಿಗೂ ತಿಳಿದಿರುವುದಲ್ಲ. ಜವಾಬ್ದಾರಿಯುತ ವಾಹನ ಸವಾರರು ಇವುಗಳನ್ನು ಗೂಗಲ್ ಮಾಡಿಯಾದ್ರು ತಿಳಿದುಕೊಳ್ಳುತ್ತಾರೆ. ಉಳಿದವರು ಇದನ್ನು ಕ್ಯಾರೆ ಎನ್ನುವುದಿಲ್ಲ, ಇಂಥವರಿಗಾಗಿ ಇತ್ತೀಚೆಗಷ್ಟೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟ್ವಿಟ್ಟರ್‌ನಲ್ಲಿ ಚಿಹ್ನೆಯೊಂದರ ಕುರಿತು ಪೋಸ್ಟ್ ಹಾಕಿದೆ.

ಈ ಹಿಹ್ನೆಯು ನೀಲಿ ಬಣ್ಣದ ಬೋರ್ಡ್‌ ಮೇಲೆ ಮೇಲ್ಮುಖವಾಗಿ ಸೂಚಿಸುವ ಬಾಣದ ಗುರುತನ್ನು ಹೊಂದಿದೆ. NHAI ಪ್ರಕಾರ ಈ ಚಿಹ್ನೆಯ ಅರ್ಥ "ಕಂಪಲ್ಸರಿ ಅಹೆಡ್" ಅಂದರೆ ನೇರವಾಗಿ ಮುಂದುವರಿಯಬೇಕು ಅಥವಾ ಒಂದು ನೇರ ದಿಕ್ಕಿನಲ್ಲಿ ಹೋಗಬೇಕೆಂದು ಚಿಹ್ನೆ ಸೂಚಿಸುತ್ತದೆ. ಈ ಚಿಹ್ನೆ ಹಳೆಯದೇನಲ್ಲ ಈಗಾಗಲೇ ಬಳಕೆಯಲ್ಲಿದೆ, ಆದರೆ ಹಲವರಿಗೆ ತಿಳಿಯದ ಕಾರಣ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚು. ಹಾಗಾಗಿಯೇ NHAI ಇದರ ಕುರಿತು ಟ್ವಿಟ್ಟರ್‌ನಲ್ಲಿ ವಿವರಿಸಿ ಪೋಸ್ಟ್‌ ಮಾಡಿದೆ.

If you see this sign on the roads, do not stop... NHAI explained the meaning

ಈ ಫಲಕಗಳು ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಂಡುಬರುತ್ತವೆ. ಈ ಚಿಹ್ನೆ ಹೊಂದಿರುವ ಬೋರ್ಡ್‌ಗಳನ್ನು ಹೆಚ್ಚು ವೇಗವಾಗಿ ಚಲಿಸಬಹುದಾದ ಹೆದ್ದಾರಿ ರಸ್ತೆಗಳಲ್ಲಿ ನೋಡಬಹುದು. ಈ ರಸ್ತೆಗಳಲ್ಲಿ ಯಾವುದೇ ವಾಹನವು ರಸ್ತೆಯನ್ನು ನಿರ್ಬಂಧಿಸಿ ನಿಲ್ಲಿಸಿದರೆ ಅಥವಾ ತಿರುಗಲು ಪ್ರಯತ್ನಿಸಿದರೆ, ಅದು ಹಿಂಬದಿ ಬರುವ ವಾಹನ ಸವಾರರಿಗೆ ಅಡ್ಡಿಯಾಗುತ್ತದೆ. ಅಲ್ಲದೇ ಈ ಚಿಹ್ನೆಯ ಬಗ್ಗೆ ತಿಳಿದವರು ನಿಲ್ಲಸದೇ ಮುಂದೆ ಸಾಗುವುದರಿಂದ ತಿಳಿಯದವರು ವಾಹನ ನಿಲ್ಲಿಸಿದರೆ, ಹಿಂಬದಿಯವರು ತಕ್ಷಣ ವಾಹನವನ್ನು ನಿಲ್ಲಿಸಲಾಗದೇ ಗಂಭಿರ ಅಪಘಾತಗಳಿಗೆ ಕಾರಣವಾಗುತ್ತದೆ.

ಹಾಗಾಗಿ ಹೆದ್ದಾರಿಗಳಲ್ಲಿ ಇಂತಹ ಬೋರ್ಡ್‌ಗಳನ್ನು ಕಂಡರೆ ನಿಲ್ಲಸಬಾರದು. ಈ ಸಿಗ್ನಲ್ ಇರುವ ಜಾಗದಲ್ಲಿ ಮಾತ್ರ ವಾಹನಗಳು ಮುಂದೆ ಸಾಗಬೇಕು. ಯಾವುದೇ ಕಾರಣಕ್ಕು ವಾಹನವನ್ನು ನಿಲ್ಲಿಸಬೇಡಿ ಅಥವಾ ತಿರುಗಿಸಬೇಡಿ. ಒಂದು ವೇಳೆ ಇದನ್ನು ಉಲ್ಲಂಘಿ ವಾಹನಗಳನ್ನು ನಿಲ್ಲಿಸುವವರಿಗೆ ದಂಡ ವಿಧಿಸಲಾಗುವುದು ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಚಿಹ್ನೆಯ ಬಗ್ಗೆ ಮೊದಲೇ ತಿಳಿದವರು ಇದ್ದರೆ ಕಮೆಂಟ್ ನಲ್ಲಿ ತಿಳಿಸಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.

If you see this sign on the roads, do not stop... NHAI explained the meaning

ಇನ್ನು ನಾವು ಹಲವು ಬಾರಿ ರಸ್ತೆಯಲ್ಲಿ ಚಲಿಸುವಾಗ ಈ ಚಿಹ್ನೆಯನ್ನು ಹೊಂದಿರುವ ಬೋರ್ಡ್‌ಗನ್ನು ನೋಡಿದ್ದೇವೆ ಆದರೆ ಇದರ ಅರ್ಥವೇನೆಂದು ಅನೇಕರಿಗೆ ತಿಳಿದೇ ಇಲ್ಲ. ಮೇಲೆ ತಿಳಿಸಿದಂತೆ ಈ ಚಿಹ್ನೆಯ ಬಗ್ಗೆ ತಿಳಿಯದೇ ಅನಾಹುತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುವುದರಿಂಲೇ NHAI ಕೂಡ ಇದರ ಕುರಿತು ಟ್ವಿಟ್ಟರ್‌ನಲ್ಲಿ ವಿವರಿಸಿ ಪೋಸ್ಟ್‌ ಮಾಡಿದೆ. ಈ ಮಾಹಿತಿಯು ನಿಮಗೆ ಹೊಸ ಮತ್ತು ಉಪಯುಕ್ತವಾಗಿದ್ದರೆ, ದಯವಿಟ್ಟು ನಿಮಗೆ ತಿಳಿದಿರುವ ಜನರೊಂದಿಗೆ ಹಂಚಿಕೊಳ್ಳಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Monday, April 24, 2023, 13:29 [IST]
English summary
Compulsory ahead sign explained nhai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+