ಕ್ರ್ಯಾಶ್ ಟೆಸ್ಟ್: ಗ್ಲೋಬಲ್ NCAPಯಿಂದ 5-ಸ್ಟಾರ್ ರೇಟಿಂಗ್ ಪಡೆದ ಸ್ಕೋಡಾ ಸ್ಲಾವಿಯಾ, ಪೋಕ್ಸ್‌ವ್ಯಾಗನ್ ವರ್ಟಸ್

ಹೊಸ ಕಾರು ಖರೀದಿಸುವವರೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅದರಂತೆ ಕೊಂಚ ಬೆಲೆ ಹೆಚ್ಚಾದರೂ ಉತ್ತಮ ಸೇಫ್ಟಿ ಹೊಂದಿರುವ ಹ್ಯಾಚ್‌ಬ್ಯಾಕ್, ಸೆಡಾನ್ ಹಾಗೂ ಎಸ್‌ಯುವಿ ಖರೀದಿಸಲು ಬಯಸುತ್ತಾರೆ. ಸದ್ಯ, ಗ್ಲೋಬಲ್ NCAPಯಿಂದ ಸ್ಕೋಡಾ ಸ್ಲಾವಿಯಾ, ಪೋಕ್ಸ್‌ವ್ಯಾಗನ್ ವರ್ಟಸ್ ಕಾರುಗಳು 5-ಸ್ಟಾರ್ ರೇಟಿಂಗ್ ಪಡೆದಿಕೊಂಡಿವೆ.

ನೂತನ ಪರೀಕ್ಷಾ ಮಾರ್ಗಸೂಚಿಗಳಾಡಿ ನಡೆಸಿದ ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಯಲ್ಲಿ ವಯಸ್ಕ ಹಾಗೂ ಮಕ್ಕಳ ರಕ್ಷಣೆ ವಿಭಾಗದಲ್ಲಿ ಮಿಡ್-ಸೈಜ್ ಸೆಡಾನ್ ಗಳಾದ ಸ್ಲಾವಿಯಾ ಹಾಗೂ ವರ್ಟಸ್ 5 ಸ್ಟಾರ್ ರೇಟಿಂಗ್ ಗಳಿಸಿರುವುದು ದೊಡ್ಡ ಮಟ್ಟದ ಸಾಧನೆಯಾಗಿದೆ. ಈ ಮೊದಲು ಸ್ಕೋಡಾ ಕುಶಾಕ್, ಪೋಕ್ಸ್‌ವ್ಯಾಗನ್ ಟೈಗುನ್ ಹಾಗೂ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿಗಳು ಈ ರೇಟಿಂಗ್ ಪಡೆದಿದ್ದವು.

ಕ್ರ್ಯಾಶ್ ಟೆಸ್ಟ್: ಗ್ಲೋಬಲ್ NCAPಯಿಂದ 5-ಸ್ಟಾರ್ ರೇಟಿಂಗ್ ಪಡೆದ ಸ್ಕೋಡಾ ಸ್ಲಾವಿಯಾ, ಪೋಕ್ಸ್‌ವ್ಯಾಗನ್ ವರ್ಟಸ್

ಸ್ಕೋಡಾ ಹಾಗೂ ಪೋಕ್ಸ್‌ವ್ಯಾಗನ್ ನ ಈ ಸೆಡಾನ್ ಗಳು ವಯಸ್ಕರ ರಕ್ಷಣೆ ವಿಭಾಗದಲ್ಲಿ 34ಕ್ಕೆ 29.71 ಅಂಕಗಳನ್ನು ಪಡೆಯುವ ಮೂಲಕ 5 ಸ್ಟಾರ್ ರೇಟಿಂಗ್ ಗಳಿಸಿವೆ. ಪರೀಕ್ಷೆಯ ಭಾಗವಾಗಿ ವಿರೂಪಗೊಳಿಸಬಹುದಾದ ತಡೆಗೋಡೆ (deformable barrier)ಗೆ ಕಾರುಗಳನ್ನು ಗುದ್ದಿಸಲಾಗಿದ್ದು, ಅಲ್ಲಿ ಸ್ಲಾವಿಯಾ ಮತ್ತು ವರ್ಟಸ್ ಸೆಡಾನ್ ಗಳು 17ಕ್ಕೆ 14.2 ಅಂಕಗಳನ್ನು ಗಳಿಸಿವೆ. ಸೈಡ್ ಇಂಪ್ಯಾಕ್ಟ್ ಟೆಸ್ಟ್ ನಲ್ಲಿ 'OK' ರೇಟಿಂಗ್ ಪಡೆದುಕೊಂಡಿವೆ.

ಮಕ್ಕಳ ರಕ್ಷಣೆ ವಿಭಾಗದಲ್ಲಿಯೂ ಸ್ಕೋಡಾ ಸ್ಲಾವಿಯಾ, ಪೋಕ್ಸ್‌ವ್ಯಾಗನ್ ವರ್ಟಸ್ ಕಾರುಗಳು ಉತ್ತಮ ಸ್ಕೂರ್ ಮಾಡಿವೆ. 49ಕ್ಕೆ 42 ಅಂಕಗಳನ್ನು ಪಡೆಯುವ ಮೂಲಕ 5 ಸ್ಟಾರ್ ರೇಟಿಂಗ್ ಅನ್ನು ತನ್ನದಾಗಿಸಿಕೊಂಡಿವೆ. ಗ್ಲೋಬಲ್ ಎನ್‌ಸಿಎಪಿಯ ಹೊಸ ಮಾರ್ಗಸೂಚಿಗಳಾಡಿ 5 ಸ್ಟಾರ್ ರೇಟಿಂಗ್ ಗಳಿಸಿವುದು ಅಷ್ಟು ಸುಲಭವಲ್ಲ. ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಪಾದಚಾರಿ ರಕ್ಷಣೆ (pedestrian protection), ಪೋಲ್ ಸೈಡ್ ಇಂಪ್ಯಾಕ್ಟ್ ನಲ್ಲಿ ಉತ್ತಮ ಅಂಕ ಪಡೆದರೆ ಈ ರೇಟಿಂಗ್ ಸಿಗುತ್ತದೆ.

ಕ್ರ್ಯಾಶ್ ಟೆಸ್ಟ್: ಗ್ಲೋಬಲ್ NCAPಯಿಂದ 5-ಸ್ಟಾರ್ ರೇಟಿಂಗ್ ಪಡೆದ ಸ್ಕೋಡಾ ಸ್ಲಾವಿಯಾ, ಪೋಕ್ಸ್‌ವ್ಯಾಗನ್ ವರ್ಟಸ್

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಸ್ಕೋಡಾ ಸ್ಲಾವಿಯಾ ಬಗ್ಗೆ ಹೇಳುವುದಾದರೆ, ಇದು ರೂ.11.39-18.45 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. 1 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 115 PS ಪವರ್, 178 Nm ಪೀಕ್ ಟಾರ್ಕ್, 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 150 PS ಪವರ್, 250 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ವೀಡ್ ಮ್ಯಾನುವಲ್ ಸೇರಿದಂತೆ ವಿವಿಧ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಈ ಕಾರಿನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆಟೋಮೆಟಿಕ್ ಕ್ಲೇಮೇಟ್ ಆಕರ್ಷಕ ಸನ್ ರೂಫ್ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), TPMS (ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.

ಪೋಕ್ಸ್‌ವ್ಯಾಗನ್ ವರ್ಟಸ್ ಸೆಡಾನ್ ಕೂಡ ರೂ.11.48 ಲಕ್ಷದಿಂದ ರೂ.18.57 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 1-ಲೀಟರ್, 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಜೊತೆಗೆ 18.12 - 19.4 kmpl ಮೈಲೇಜ್ ನೀಡಲಿದೆ. 6 ಏರ್ ಬಾಗ್ಸ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಗ್ಲೋಬಲ್ ಎನ್‌ಸಿಎಪಿ ಪರೀಕ್ಷೆಯಲ್ಲಿ ಸ್ಕೋಡಾ ಸ್ಲಾವಿಯಾ, ಪೋಕ್ಸ್‌ವ್ಯಾಗನ್ ವರ್ಟಸ್ ಕಾರುಗಳು ಉತ್ತಮ ರೇಟಿಂಗ್ ಪಡೆದರೆ, ಮಾರುತಿ ಸುಜುಕಿಯ ಆಲ್ಟೊ ಕೆ10 2-ಸ್ಟಾರ್ ಹಾಗೂ ವ್ಯಾಗನ್ ಆರ್ 1-ಸ್ಟಾರ್ ರೇಟಿಂಗ್ ಪಡೆಯುವ ಮೂಲಕ ಕಳಪೆ ಸಾಧನೆ ಮಾಡಿವೆ. ಸ್ಕೋಡಾ ಕುಶಾಕ್, ಪೋಕ್ಸ್‌ವ್ಯಾಗನ್ ಟೈಗುನ್ ಹಾಗೂ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿ ಬಳಿಕ, ಇವೆರೆಡು ಕಾರುಗಳು 5-ಸ್ಟಾರ್ ರೇಟಿಂಗ್ ಗಳಿಸಿರುವುದು ಉತ್ತಮ ಬೆಳವಣಿಗೆಯೇ ಸರಿ.

More from DriveSpark

Article Published On: Tuesday, April 4, 2023, 18:19 [IST]
English summary
Crash test skoda slavia volkswagen virtus get 5 star rating from globa ncap details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+