ಒಂದೇ ದಿನ 10 ಇನ್ನೋವಾ ಹೈಕ್ರಾಸ್ MPV ಗಳನ್ನು ಗ್ರಾಹಕರಿಗೆ ವಿತರಿಸಿದ ಡೀಲರ್‌

ಟೊಯೊಟಾ ಇನ್ನೋವಾ ಹೈಕ್ರಾಸ್ ಡೀಲರ್‌ಶಿಪ್‌ಗಳನ್ನು ತಲುಪಲು ಪ್ರಾರಂಭಿಸಿದ್ದು, ವಿತರಣೆಗಳು ಸಹ ನಡೆಯುತ್ತಿವೆ. ಕಳೆದ ವಾರ, ಗ್ರಾಹಕರೊಬ್ಬರು ಭಾರತದ ಮೊದಲ ಇನ್ನೋವಾ ಹೈಕ್ರಾಸ್ ಅನ್ನು ಡೆಲಿವರಿ ಪಡೆಯವ ವಿಡಿಯೋ ವೈರಲ್ ಆಗಿತ್ತು. ಇದೀಗ ಸಾಮೂಹಿಕ ವಿತರಣೆಗಳು ಪ್ರಾರಂಭವಾಗಿದ್ದು, ಮಹಾರಾಷ್ಟ್ರದ ಡೀಲರ್‌ಶಿಪ್‌ನಲ್ಲಿ ಒಂದೇ ದಿನ 10 ಇನ್ನೋವಾ ಹೈಕ್ರಾಸ್‌ಗಳನ್ನು ಡೆಲಿವರಿ ನೀಡುವ ವಿಡಿಯೋ ಸದ್ದು ಮಾಡುತ್ತಿದೆ.

ವಿತರಕರು ಒಂದೇ ದಿನದಲ್ಲಿ 10 ಇನ್ನೋವಾ ಹೈಕ್ರಾಸ್ MPV ಗಳನ್ನು ಗ್ರಾಹಕರಿಗೆ ತಲುಪಿಸಿದ್ದಾರೆ. ಈ ವಿಡಿಯೋವನ್ನು ಕಾರ್ ಜಿಜ್ಞಾಸು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ನಾವು ಮಹಾರಾಷ್ಟ್ರದ ಡೀಲರ್‌ಶಿಪ್‌ನ ಹೊರಗೆ ಸುಮಾರು 10 ಟೊಯೋಟಾ ಇನ್ನೋವಾ ಹೈಕ್ರಾಸ್ MPV ಗಳನ್ನು ನಿಲ್ಲಿಸಿರುವುದನ್ನು ನೋಡಬಹದು. ಗ್ರಾಹಕರನ್ನು ಆಕರ್ಷಿಸಲು ಮತ್ತು ಅವರಿಗೆ ವಿಶೇಷ ಅನುಭವ ನೀಡಲು ವಿತರಕರು ಇಂತಹ ಸಾಮೂಹಿಕ ವಿತರಣಾ ಕಾರ್ಯಕ್ರಮಗಳನ್ನು ಮಾಡುತ್ತಾರೆ.

ಒಂದೇ ದಿನ 10 ಇನ್ನೋವಾ ಹೈಕ್ರಾಸ್ MPV ಗಳನ್ನು ಗ್ರಾಹಕರಿಗೆ ವಿತರಿಸಿದ ಡೀಲರ್‌

ಎಲ್ಲಾ ದಾಖಲಾತಿಗಳ ಪ್ರಕ್ರಿಯೆ ಮುಗಿದ ನಂತರ ಗ್ರಾಹಕರು ಡೀಲರ್‌ಶಿಪ್‌ನಿಂದ ಹೊರ ಬಂದು ಅವರು ಬುಕ್ ಮಾಡಿದ ಕಾರಿನ ಪಕ್ಕದಲ್ಲಿ ನಿಂತು ಡೀಲರ್‌ಗಳಿಂದ ತಮ್ಮ ಹೊಸ ಕಾರಿನ ಕೀಲಿಯನ್ನು ಪಡೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ಭಾರೀ ನಿರೀಕ್ಷೆಗಳಿಂದ ಮಾರುಕಟ್ಟೆಗೆ ಬಂದ ಹೈಕ್ರಾಸ್ ಮಾದರಿಯು ಇನ್ನೋವಾ ಕ್ರಿಸ್ಟಾದ ಮುಂದಿನ ತಲೆಮಾರಿನ ಮಾದರಿಯಾದ್ದರಿಂದ ಸಖತ್ ಬೇಡಿಕೆಯನ್ನು ಹುಟ್ಟಿಹಾಕಿತ್ತು. ಇದೀಗ ಡೆಲಿವರಿಯಾಗುತ್ತಿರುವುದು ಗ್ರಾಹಕರಲ್ಲಿ ಖುಷಿ ತಂದಿದೆ.

ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ ಬೆಲೆಯು 18. 30 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಿ 28. 97 ಲಕ್ಷದವರೆಗೆ ಹೋಗುತ್ತದೆ. ಹೊಸ ಹೈಕ್ರಾಸ್ ಸೂಪರ್ ವೈಟ್, ಪ್ಲಾಟಿನಂ ವೈಟ್ ಪರ್ಲ್, ಸಿಲ್ವರ್ ಮೆಟಾಲಿಕ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಪರ್ಲ್ ಕ್ರಿಸ್ಟಲ್ ಶೈನ್, ಅವಂತ್ ಗ್ರೇಡ್ ಬ್ರೋಂಜ್ ಮೆಟಾಲಿಕ್ ಮತ್ತು ಹೊಸ ಬಣ್ಣದ ಬ್ಲ್ಯಾಕ್‌ಸಿಶ್ ಅಗೆಹಾ ಗ್ಲಾಸ್ ಫ್ಲೇಕ್ ಬಣ್ಣಗಳಲ್ಲಿ ಲಭ್ಯವಿದೆ.

ಟೊಯೊಟಾ ಚೆಸ್ಟ್ನಟ್ ಬ್ಲಾಕ್ ಮತ್ತು ಡಾರ್ಕ್ ಚೆಸ್ಟ್ನಟ್ ಎಂಬ ಎರಡು ಹೊಸ ಬಣ್ಣದ ಆಯ್ಕೆಗಳಲ್ಲಿ ಇಂಟೀರಿಯರ್ ನೀಡುತ್ತಿದೆ. ನಾವು ಈಗಾಗಲೇ ತಿಳಿದಿರುವಂತೆ, ಲ್ಯಾಡರ್-ಆನ್-ಫ್ರೇಮ್ ನಿರ್ಮಾಣವನ್ನು ಆಧರಿಸಿರದ ಮೊದಲ ಇನ್ನೋವಾ ಇದಾಗಿದೆ. ಇದು ಮೊನೊಕಾಕ್ MPV ಮತ್ತು ಟೊಯೊಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್ (TNGA) ಅನ್ನು ಆಧರಿಸಿದೆ. ಇನ್ನೋವಾ ಕ್ರಿಸ್ಟಾಗೆ ಹೋಲಿಸಿದರೆ, ಹೈಕ್ರಾಸ್ ಹೆಚ್ಚು ಪ್ರೀಮಿಯಂ ಆಗಿ ಕಾಣುವುದರ ಜೊತೆಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ.

ಟೊಯೊಟಾ Innova HyCross ಪೆಟ್ರೋಲ್ ಅನ್ನು G (7 ಸೀಟರ್), G (8 ಸೀಟರ್), GX (7S), GX (8S) ರೂಪಾಂತರಗಳಲ್ಲಿ ನೀಡುತ್ತಿದೆ. ಆಟೋಮ್ಯಾಟಿಕ್ ಚಾರ್ಜಿಂಗ್ ಹೈಬ್ರಿಡ್ ಅಥವಾ ಹೈಕ್ರಾಸ್‌ನ ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಯು VX (7S), VX(8S), ZX ಮತ್ತು ZX(O) ರೂಪಾಂತರಗಳಲ್ಲಿ ಲಭ್ಯವಿದೆ. ಇವೆಲ್ಲವೂ ಆಯಾ ವೈಶಿಷ್ಟ್ಯಗಳಿಗೆ ತಕ್ಕಂತೆ ಬೆಲೆಗಳನ್ನು ಹೊಂದಿರಲಿವೆ. ಜೊತೆಗೆ ಟ್ರಿಮ್‌ಗಳನ್ನು ಆಧರಿಸಿ ಡೆಲಿವರಿ ಸಮಯ ನಿಗದಿಯಾಗಲಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಫ್ಲೋಟಿಂಗ್ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಲೆದರ್ ಅಪ್ಹೋಲ್ಸ್ಟರಿ, ಫ್ರಂಟ್ ವೆಂಟಿಲೇಟೆಡ್ ಸೀಟ್‌ಗಳು, ಆಂಬಿಯೆಂಟ್ ಲೈಟ್‌ಗಳು, ಪನೋರಮಿಕ್ ಸನ್‌ರೂಫ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್ ಮತ್ತು ಮುಂತಾದ ವೈಶಿಷ್ಟ್ಯಗಳನ್ನು ನೀಡುತ್ತದೆ. ಟೊಯೊಟಾ ADAS ಅನ್ನು ಸಹ ನೀಡುತ್ತಿದ್ದು, ಭಾರತದಲ್ಲಿ ಟೋಯೋಟಾ ಈ ವರೆಗೂ ಈ ವೈಶಿಷ್ಟ್ಯವನ್ನು ನೀಡಿಲ್ಲ, ಇದನ್ನು ಪಡೆದ ಮೊದಲ ಟೊಯೊಟಾ ಕಾರು ಇದಾಗಿದೆ.

ಹೆಚ್ಚಿನ ಇಂಧನ ದಕ್ಷತೆಯಿಂದಾಗಿ ಅನೇಕ ಜನರು ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಯನ್ನು ಆರಿಸಿಕೊಳ್ಳಬಹುದು. ಇನ್ನೋವಾ ಹೈಕ್ರಾಸ್‌ನ ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಯು ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಯಾಗಿರುವ 2.0 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿದೆ. ಈ ಸೆಟಪ್ 183 Ps ನ ಸಂಯೋಜಿತ ಪವರ್ ಔಟ್‌ಪುಟ್ ನೀಡಲಿದೆ. ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಯು 23.24 kmpl ನಷ್ಟು ಮೈಲೇಜ್ ನೀಡುತ್ತದೆ. ಇದು ಅದರ ವಿಭಾಗದಲ್ಲಿ ಈ ವರೆಗಿನ ಅತ್ಯಧಿಕ ಇಂಧನ ದಕ್ಷತೆ ನೀಡುವ ಕಾರಾಗಿದೆ.

ಮತ್ತೊಂದೆಡೆ ಸಾಮಾನ್ಯ ಪೆಟ್ರೋಲ್ ಆವೃತ್ತಿಯು 2.0 ಲೀಟರ್ ಪೆಟ್ರೋಲ್ ಎಂಜಿನ್ 171 Ps ಪವರ್ ನೀಡುತ್ತದೆ. ಇದು 16.13 kmpl ನಷ್ಟು ಮೈಲೇಜ್ ಹೊಂದಿದೆ. ಸಾಮಾನ್ಯ ಪೆಟ್ರೋಲ್ ಆವೃತ್ತಿಯು G ಮತ್ತು GX ರೂಪಾಂತರಗಳಲ್ಲಿ ಲಭ್ಯವಿದೆ. ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಯು VX, ZX ಮತ್ತು ZX(O) ರೂಪಾಂತರಗಳಲ್ಲಿ ಬರುತ್ತದೆ. ಟೊಯೊಟಾ ಇನ್ನೋವಾ ಹೈಕ್ರಾಸ್‌ನೊಂದಿಗೆ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ನೀಡುವುದಿಲ್ಲ. ಸಾಮಾನ್ಯ ಪೆಟ್ರೋಲ್ ಆವೃತ್ತಿಯು CVT ಗೇರ್‌ಬಾಕ್ಸ್ ಅನ್ನು ಪಡೆದರೆ ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಯು e-CVT ಯೊಂದಿಗೆ ಬರುತ್ತದೆ.

More from DriveSpark

Article Published On: Monday, February 6, 2023, 16:05 [IST]
English summary
Dealers delivered 10 innova Hicross mpvs to customers in a single day
Read more on ಟೊಯೋಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+