ಸೆಡಾನ್ ಕಾರು ಪ್ರಿಯರಿಗೆ ಸಿಹಿಸುದ್ದಿ ನೀಡಿದ ಹೋಂಡಾ: ಸಿಟಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಅತ್ಯಂತ ಜನಪ್ರಿಯ ಸಿಟಿ ಸೆಡಾನ್‌ಗೆ ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದಕ್ಕೂ ಮುನ್ನ ಹೋಂಡಾ ಕಂಪನಿಯು ಮಾರಾಟದಲ್ಲಿರುವ ಹೋಂಡಾ ಸಿಟಿ ಕಾರಿನ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡಲಾಗಿದೆ.

2023ರ ಹೋಂಡಾ ಸಿಟಿ ಕಾರು ರಸ್ತೆಗಿಳಿಯುವ ಮುನ್ನ ಪ್ರಸ್ತುತ ಸಿಟಿ ಕಾರಿನ ಮೇಲೆ ರೂ.70,000 ಕ್ಕಿಂತ ಹೆಚ್ಚಿನ ರಿಯಾಯಿತಿಯನ್ನು ನೀಡುತ್ತಿದೆ. ಹೋಂಡಾ ಕಾರ್ಸ್ ಕಂಪನಿಯು ಸಿಟಿ ಸೆಡಾನ್‌ನ ಮ್ಯಾನುವಲ್ ಮತ್ತು ಸಿವಿಟಿ ಎರಡರಲ್ಲೂ ರಿಯಾಯಿತಿಗಳನ್ನು ನೀಡುತ್ತಿದೆ. ಈ ಸಿಟಿ ಕಾರಿನ ಮ್ಯಾನುವಲ್ ರೂಪಾಂತರಗಳಲ್ಲಿ ಗರಿಷ್ಠ ಆಫರ್ ಅನ್ನು ನೀಡಲಾಗಿದೆ, ಹೋಂಡಾ ಸಿಟಿ ಕಾರು ರೂ.30,000 ವರೆಗೆ ನಗದು ರಿಯಾಯಿತಿ ಅಥವಾ ರೂ.32,493 ಮೌಲ್ಯದ ಉಚಿತ ಬಿಡಿಭಾಗಗಳನ್ನು ನೀಡುತ್ತಿದೆ.

ಸಿಟಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಇವುಗಳ ಜೊತೆಗೆ ಹೋಂಡಾ ಕಂಪನಿಯು ಸಿಟಿ ಕಾರಿನ ಮೇಲೆ ರೂ.20,000 ವಿನಿಮಯ ಬೋನಸ್ ಅನ್ನು ಸಹ ನೀಡುತ್ತಿದೆ. ಇನ್ನು ಇತರ ಪ್ರಯೋಜನಗಳ ಪೈಕಿ ರೂ.5,000 ಮೌಲ್ಯದ ಲಾಯಲ್ಟಿ ಬೋನಸ್, ರೂ.8,000 ಮೌಲ್ಯದ ಕಾರ್ಪೊರೇಟ್ ರಿಯಾಯಿತಿ ಮತ್ತು ರೂ.7,000 ಮೌಲ್ಯದ ಹೋಂಡಾ ಕಾರ್ ಎಕ್ಸ್‌ಚೇಂಜ್ ಬೋನಸ್ ಅನ್ನು ನೀಡಲಾಗಿದೆ. ಇನ್ನು ಸಿಟಿ ಕಾರಿನ ಸಿವಿಟಿ ರೂಪಾಂತರಗಳ ಮೇಲೆ ರೂ.20,000 ಮೌಲ್ಯದ ನಗದು ರಿಯಾಯಿತಿಗಳೊಂದಿಗೆ ನೀಡಲಾಗುತ್ತಿದೆ.

ಇನ್ನು ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ಗ್ರಾಹಕರು ರೂ.21,643 ಮೌಲ್ಯದ ಉಚಿತ ಪರಿಕರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ರೂಪಾಂತರಗಳು ಕಾರ್ಪೊರೇಟ್ ರಿಯಾಯಿತಿಗಳು ಮತ್ತು ಇತರ ಲಾಯಲ್ಟಿ ಪ್ರಯೋಜನಗಳ ಜೊತೆಗೆ ರೂ,20,000 ಮೌಲ್ಯದ ವಿನಿಮಯ ಬೋನಸ್ ಅನ್ನು ಸಹ ನೀಡುತ್ತವೆ. ರಿಯಾಯಿತಿ ಕೊಡುಗೆಗಳು ಈ ತಿಂಗಳ ಅಂತ್ಯದವರೆಗೆ ಮಾನ್ಯವಾಗಿರುತ್ತವೆ. ವರದಿಗಳ ಪ್ರಕಾರ, ಹೊಸ 2023ರ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರು ಈ ವರ್ಷದ ಮಾರ್ಚ್ 2 ರಂದು ಬಿಡುಗಡೆಯಾಗಲಿದೆ

ಈ ಹೊಸ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರು ಕಾಸ್ಮೆಟಿಕ್ ವಿನ್ಯಾಸ ಬದಲಾವಣೆಗಳೊಂದಿಗೆ ಬರುತ್ತದೆ. ಈ ಹೊಸ ಸಿಟಿ ಕಾರಿನ ಲೀಕ್ ಆದ ಚಿತ್ರದ ಪ್ರಕಾರ, ಈ ಹೊಸ ಕಾರಿನಲ್ಲಿ ಸ್ವಲ್ಪ ಪರಿಷ್ಕೃತ ಬಂಪರ್ ಮತ್ತು ಗ್ರಿಲ್ ವಿಭಾಗಕ್ಕೆ ಸ್ಲಿಮ್ಮರ್ ಕ್ರೋಮ್ ಬಾರ್ ಅನ್ನು ಒಳಗೊಂಡಿದೆ. ಈ ಹೊಸ ಕಾರು ಅಗ್ರೇಸಿವ್ ಶೈಲಿಯ ಹೆಡ್‌ಲ್ಯಾಂಪ್‌ಗಳ ಸುತ್ತ ಗ್ರಿಲ್ ಅನ್ನು ಹೊಂದಿದೆ. ಗ್ರಿಲ್ ಈಗ ಹೆಚ್ಚಿನ ರೂಪಾಂತರಗಳಲ್ಲಿ ಹನಿಕಾಂಬ್ ಮಾದರಿಯನ್ನು ಹೊಂದಿದೆ.

ಈ ಹೊಸ ಕಾರಿನ ಲೋ ವೆರಿಯೆಂಟ್ ಗಳು, ಲಂಬವಾದ ಸ್ಲ್ಯಾಟ್‌ಗಳನ್ನು ಹೊಂದಿವೆ. ಲೀಕ್ ಆದ ಚಿತ್ರಗಳಲ್ಲಿ ಈ ಹೊಸ ಹೋಂಡಾ ಸಿಟಿ ಕಾರು ನೀಲಿ ಬಣ್ಣವನ್ನು ಹೊಂದಿದೆ. ಈ ಹೊಸ ಕಾರಿನ ಸೈಡ್ ಪ್ರೊಫೈಲ್ ಪ್ರಸ್ತುತ ಮಾರಾಟವಾಗುತ್ತಿರುವ ಮಾದರಿಗೆ ಹೋಲುತ್ತದೆ. ಈ ಹೊಸ ಕಾರಿನ ಹಿಂಭಾಗದಲ್ಲಿ ಹೊಸ ಬಂಪರ್‌ಗಳನ್ನು ಹೊಂದಿವೆ. ಈ 2023ರ ಹೋಂಡಾ ಸಿಟಿ ಫೇಸ್‌ಲಿಫ್ಟ್ ಪ್ರಸ್ತುತ ಮಾರಾಟದಲ್ಲಿರುವ ಮಾದರಿಯಂತೆಯೇ ಕಾಣುತ್ತದೆ.

ಈ ಹೊಸ ಹೋಂಡಾ ಸಿಟಿ ಕಾರಿನಲ್ಲಿ ವೈರ್‌ಲೆಸ್ ಚಾರ್ಜರ್ ಮತ್ತು ವೆಂಟಿಲೇಟೆಡ್ ಸೀಟ್‌ಗಳಂತಹ ಹೊಸ ಫೀಚರ್ಸ್ ಗಳನ್ನು ಪಡೆದುಕೊಂದಿವೆ. ಈ ಹೋಂಡಾ ಕಂಪನಿಯು ಸಿಟಿ ಸೆಡಾನ್‌ನ ವೇರಿಯಂಟ್ ಲೈನ್-ಅಪ್ ಅನ್ನು ಮತ್ತೆ ಪರಿಚಯಿಸಬಹುದು. ಇದಲ್ಲದೆ ಹೊಸ ಕಾರಿನಲ್ಲಿ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗೆ ಪರಿಷ್ಕೃತ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್ ಅನ್ನು ಪಡೆಯಬಹುದು. ಇನ್ನು ಹೊಸ ಕಾರಿನ ಹೈಬ್ರಿಡ್ ಪವರ್‌ಟ್ರೇನ್ ಹೊಂದಿರುವ ಮಾದರಿಯು ಟಾಪ್-ಸ್ಪೆಕ್ ZX ಟ್ರಿಮ್‌ನಲ್ಲಿ ಮಾತ್ರ ಲಭ್ಯವಿರುತ್ತದೆ.

ಇನ್ನು ಈ ಹೋಂಡಾ ಸಿಟಿ ಹೈಬ್ರಿಡ್‌ ಮಾದರಿಯನ್ನು ಹೊಸ ಕೈಗೆಟುಕುವ ರೂಪಾಂತರವನ್ನು ಪರಿಚಯಿಸಲಿದೆ ಎಂದು ವರದಿಯಾಗಿದೆ, ಇದು ಪೆಟ್ರೋಲ್ ಮತ್ತು ಬಲವಾದ ಹೈಬ್ರಿಡ್ ರೂಪಾಂತರಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹೊಸ ಹೋಂಡಾ ಸಿಟಿ ಸೆಡಾನ್ ಅನ್ನು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ನೀಡಲಾಗುವುದಿಲ್ಲ, ವರದಿಗಳ ಪ್ರಕಾರ, ಪ್ರಸ್ತುತ 1.5 ಲೀಟರ್ ಎಂಜಿನ್ ಮುಂಬರುವ ರಿಯಲ್ ಡ್ರೈವಿಂಗ್ ಎಮಿಷನ್ಸ್ (RDE) ಮಾನದಂಡಗಳನ್ನು ಪೂರೈಸಲು ನವೀಕರಿಸಲಾಗುವುದಿಲ್ಲ.

Article Published On: Friday, February 24, 2023, 19:12 [IST]
English summary
Discount on outgoing model before new honda city facelift launch details in kannada
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+