Maruti Suzuki: ದೀಪಾವಳಿ ವಿಶೇಷ.. ಈ ಮಾರುತಿ ಸುಜುಕಿ ಕಾರುಗಳಿಗೆ ಬಿಗ್ ಡಿಸ್ಕೌಂಟ್

ದೇಶದ ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಖ್ಯಾತಿಗಳಿಸಿದೆ. ಅದರ ಕಾರುಗಳು ಆಕರ್ಷಕ ವೈಶಿಷ್ಟ್ಯ, ವಿನ್ಯಾಸ ಹಾಗೂ ಕೈಗೆಟುಕುವ ಬೆಲೆಯಲ್ಲಿ ಸಿಗುವುದರಿಂದ ಬಹುತೇಕರು ಇಷ್ಟಪಟ್ಟ ಖರೀದಿಸುತ್ತಾರೆ. ಈ ದೀಪಾವಳಿಗೆ ಅರೆನಾ (Arena) ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸುವ ವಿವಿಧ ಮಾದರಿಗಳಿಗೆ ಭರ್ಜರಿ ರಿಯಾಯಿತಿ ನೀಡಿದೆ.

ಮೊದಲಿಗೆ ಮಾರುತಿ ಸುಜುಕಿ ವ್ಯಾಗನ್ ಆರ್ (Maruti Suzuki WagonR) ಪಡೆದುಕೊಂಡಿರುವ ರಿಯಾಯಿತಿ ಪ್ರಯೋಜನಗಳ ಬಗ್ಗೆ ಮಾತನಾಡೋಣ. ಈ ಕಾರು, ಒಟ್ಟು ರೂ.49,000 ವರೆಗೆ ರಿಯಾಯಿತಿ ಪ್ರಯೋಜನಗಳನ್ನು ಒಳಗೊಂಡಿದೆ. ಅದರಲ್ಲಿ ರೂ.25,000 ನಗದು ರಿಯಾಯಿತಿ, ರೂ.20,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.4,000 ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಒಳಗೊಂಡಿದೆ. ಈ ಕಾರು, ರೂ.5.54 - ರೂ.7.42 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

Maruti Suzuki: ದೀಪಾವಳಿ ವಿಶೇಷ.. ಈ ಮಾರುತಿ ಸುಜುಕಿ ಕಾರುಗಳಿಗೆ ಬಿಗ್ ಡಿಸ್ಕೌಂಟ್

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಕೂಡ ಭರ್ಜರಿ ರಿಯಾಯಿತಿ ಪ್ರಯೋಜನವನ್ನು ಹೊಂದಿದ್ದು, ಒಟ್ಟು ರೂ. 49,000 ಡಿಸ್ಕೌಂಟ್ ಲಭ್ಯವಿದೆ. ರೂ.25,000 ಮುಂಗಡ ರಿಯಾಯಿತಿ (upfront discount), ರೂ.20,000 ಎಕ್ಸ್ಚೇಂಜ್ ಬೋನಸ್, ರೂ.4,000 ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದೆ. ಸ್ವಿಫ್ಟ್ ಸಿಎನ್‌ಜಿ ಮಾದರಿಗಳು ರೂ.25,000 ನಗದು ರಿಯಾಯಿತಿಗಳನ್ನು ಹೊಂದಿದೆ. ಈ ಕಾರು, ರೂ.5.99 ಲಕ್ಷ ಆರಂಭಿಕ ಬೆಲೆಗೆ ಗ್ರಾಹಕರಿಗೆ ಸಿಗುತ್ತದೆ.

ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಅತಿಹೆಚ್ಚು ಮಾರಾಟವಾಗುವ ಕಾಂಪ್ಯಾಕ್ಟ್ ಸೆಡಾನ್‌ ಆಗಿದೆ. ಇದರ ಪೆಟ್ರೋಲ್ ರೂಪಾಂತರಗಳು ರೂ.10,000 ಎಕ್ಸ್ಚೇಂಜ್ ಬೋನಸ್ ಪಡೆದಿವೆ. ಈ ಕಾರು, ರೂ.6.51 ಲಕ್ಷದಿಂದ ರೂ.9.39 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಯಲ್ಲಿ ಸಿಗುತ್ತದೆ. 22.41 - 22.61 kmpl ಮೈಲೇಜ್ ನೀಡುತ್ತದೆ.

Maruti Suzuki: ದೀಪಾವಳಿ ವಿಶೇಷ.. ಈ ಮಾರುತಿ ಸುಜುಕಿ ಕಾರುಗಳಿಗೆ ಬಿಗ್ ಡಿಸ್ಕೌಂಟ್

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಕಂಪನಿಯ ಎಂಟ್ರಿ ಲೆವೆಲ್ ಕಾರಾಗಿದ್ದು, ಒಟ್ಟು ರೂ.49,000 ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಅದರಲ್ಲಿ ರೂ.25,000 ಕ್ಯಾಶ್ ಡಿಸ್ಕೌಂಟ್, ರೂ.20,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.4,000 ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದೆ. ಸಿಎನ್‌ಜಿ ರೂಪಾಂತರಗಳು ರೂ.20,000 ನಗದು ರಿಯಾಯಿತಿಯನ್ನು ಪಡೆದಿದೆ. ಈ ಕಾರು, ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಖರೀದಿಗೆ ಲಭ್ಯವಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಕಾರಿನ ಸಿಎನ್‌ಜಿ ರೂಪಾಂತರಗಳು ಹೊರತುಪಡಿಸಿ, ಉಳಿದೆಲ್ಲ ಮಾದರಿಗಳು ರೂ.54,000 ವರೆಗೆ ವಿವಿಧ ರಿಯಾಯಿತಿ ಪ್ರಯೋಜನವನ್ನು ಹೊಂದಿವೆ. ಈ ಕಾರು, ರೂ.4.26 ಲಕ್ಷದಿಂದ ರೂ.6.12 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಯಲ್ಲಿ ದೊರೆಯಲಿದ್ದು, 24.12 - 25.3 kmpl ಮೈಲೇಜ್ ನೀಡುತ್ತದೆ.

Maruti Suzuki: ದೀಪಾವಳಿ ವಿಶೇಷ.. ಈ ಮಾರುತಿ ಸುಜುಕಿ ಕಾರುಗಳಿಗೆ ಬಿಗ್ ಡಿಸ್ಕೌಂಟ್

ಮಾರುತಿ ಸುಜುಕಿ ಸೆಲರಿಯೊ (Maruti Suzuki Celerio) ವಿವಿಧ ರೂಪಾಂತರಗಳು ರೂ.59,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಅದರಲ್ಲಿ ರೂ.35,000 ನಗದು ರಿಯಾಯಿತಿ, ರೂ.20,000 ಎಕ್ಸ್ಚೇಂಜ್ ಬೋನಸ್ ಹಾಗೂ ರೂ.4,000 ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಒಳಗೊಂಡಿದೆ. ಈ ಕಾರು, ರೂ.5.37 ಲಕ್ಷ ಪ್ರಾರಂಭಿಕ ಬೆಲೆಯಲ್ಲಿ ಸಿಗುತ್ತದೆ. ನಿಮಗೆ ಗೊತ್ತಿರಲಿ.. ಈ ರಿಯಾಯಿತಿ ಪ್ರಯೋಜನಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಡೀಲರ್ ಶಿಪ್ ಸಂಪರ್ಕಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, November 12, 2023, 10:30 [IST]
English summary
Diwali maruti suzuki cars big discounts upto rs 59000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+