Volvo: ದೀಪಾವಳಿ ಬೊಂಬಾಟ್ ಆಫರ್: ಈ ಕಾರಿನ ಮೇಲೆ ಬರೋಬ್ಬರಿ 7 ಲಕ್ಷ ರೂ. ಡಿಸ್ಕೌಂಟ್
ದೀಪಾವಳಿ ಹಬ್ಬಕ್ಕೆ ಹೊಸ ವಸ್ತುಗಳನ್ನು ಮನೆಗೆ ತರುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದಲೇ ಕೇವಲ ಎಲೆಕ್ಟ್ರಾನಿಕ್ಸ್ ಮಾತ್ರವಲ್ಲದೇ ಆಟೋ ವಲಯದಲ್ಲೂ ಕಾರು ತಯಾರಕರು ಭರ್ಜರಿ ಆಫರ್‌ಗಳನ್ನು ನೀಡುತ್ತಾರೆ. ಇದೀಗ ವೋಲ್ವೊ ಬ್ರಾಂಡ್ ಕೂಡ ತನ್ನ ಎರಡು ಕಾರುಗಳ ಮೇಲೆ ಭರ್ಜರಿ ಪ್ರಯೋಜನಗಳನ್ನು ನೀಡುತ್ತಿದೆ.
ವೊಲ್ವೊ ಕಾರು ತಯಾರಕರು ತಮ್ಮ ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಲಾಭದಾಯಕ ವ್ಯವಹಾರಗಳನ್ನು ನೀಡಲು ಒಲವು ತೋರುತ್ತಿದ್ದಾರೆ. ಈ ದೀಪಾವಳಿಯಲ್ಲಿ ಪ್ರಸ್ತುತ ತನ್ನ ಕಾರುಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿರುವ ವೋಲ್ವೋ ಇಂಡಿಯಾ, ಸುಮಾರು ರೂ. 7 ಲಕ್ಷದವರೆಗಿನ ಪ್ರಯೋಜನಗಳನ್ನು ನೀಡುತ್ತಿದೆ. ತನ್ನ 'ಫೆಸ್ಟಿವ್ ಡಿಲೈಟ್' ಕೊಡುಗೆಯ ಭಾಗವಾಗಿ, ವೋಲ್ವೋ ತನ್ನ ಎರಡು ಮಾದರಿಗಳ ಮೇಲೆ ರಿಯಾಯಿತಿಗಳನ್ನು ದೇಶದಲ್ಲಿ ಘೋಷಿಸಿದೆ.

ವೋಲ್ವೊ XC40 ರೀಚಾರ್ಜ್ EV ಮತ್ತು XC60 SUV ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದೆ. ಮೊದಲಿಗೆ ವೋಲ್ವೊ XC40 ನಲ್ಲಿನ ಪ್ರಯೋಜನಗಳನ್ನು ನೋಡುವುದಾದ್ರೆ ಪೂರಕ ಮೂರು ವರ್ಷಗಳ ರಸ್ತೆಬದಿಯ ನೆರವು (Complimentary three years roadside assistance), ಮೂರು ವರ್ಷಗಳ ಸಮಗ್ರ ಕಾರು ಖಾತರಿ (Three year comprehensive car warranty)ಯನ್ನು ನೀಡುತ್ತಿದೆ.
ಹಾಗೆಯೇ 3 ವರ್ಷಗಳ ವೋಲ್ವೋ ಕಾರ್ ಸೇವಾ ಯೋಜನೆ (3 years Volvo car service plan), ನಾಲ್ಕು ವರ್ಷಗಳ ಡಿಜಿಟಲ್ ಸೇವೆಗಳು (Four years of digital services), ಎಂಟು ವರ್ಷಗಳ ಬ್ಯಾಟರಿ ವಾರಂಟಿ (Eight year battery warranty), 11 kW ವಾಲ್ ಬಾಕ್ಸ್ ಚಾರ್ಜರ್ ಮತ್ತು Tre Kronor ಸವಲತ್ತುಗಳನ್ನು ಒಳಗೊಂಡಿದೆ.

ಇವಿಷ್ಟೇ ಅಲ್ಲದೇ ವೊಲ್ವೊ XC40 ರೀಚಾರ್ಜ್ ಎಲೆಕ್ಟ್ರಿಕ್ SUV ಯ ಹಿಂದಿನ ಬೆಲೆಯು ರೂ. 56.90 ಲಕ್ಷವಿದ್ದು, ಈಗ ಆ ಬೆಲೆಯನ್ನು ರೂ. 55.12 ಲಕ್ಷಕ್ಕೆ ಇಳಿಸಲಾಗಿದೆ(ಎರಡೂ ಬೆಲೆಗಳು, ಎಕ್ಸ್ ಶೋರೂಂ), ಅಂದರೆ XC40 ರೀಚಾರ್ಜ್ ಕಾರಿನ ಮೇಲೆ ಕಂಪನಿಯು 1,78,500 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ.
ವೊಲ್ವೊ XC60 ಮೇಲೆ 7 ಲಕ್ಷ ರೂ. ಕಡಿತ: ಮತ್ತೊಂದೆಡೆ, XC60 ಐಷಾರಾಮಿ SUV ಯ ಬೆಲೆಯನ್ನು 67.85 ಲಕ್ಷದಿಂದ 60.90 ಲಕ್ಷಕ್ಕೆ (ಎಕ್ಸ್-ಶೋರೂಂ) ಕಡಿತಗೊಳಿಸಲಾಗಿದೆ. ಅಂದರೆ 6.95 ಲಕ್ಷದ ಭಾರಿ ರಿಯಾಯಿತಿಯನ್ನು ದೀಪಾವಳಿ ಹಬ್ಬಕ್ಕೆ ಘೋಷಿಸಲಾಗಿದೆ. ಈ ವಿಶೇಷ ಬೆಲೆಯ ಹೊರತಾಗಿ ವೋಲ್ವೋ XC60 ಜೊತೆಗೆ ಯಾವುದೇ ಹೆಚ್ಚುವರಿ ಪ್ರಯೋಜನಗಳನ್ನು ನೀಡಲಾಗುತ್ತಿಲ್ಲ.

ಫೆಸ್ಟಿವ್ ಡಿಲೈಟ್ ಕೊಡುಗೆಗಳು ಸ್ಟಾಕ್ ಇರುವವರೆಗೆ ಸೀಮಿತ ಅವಧಿಗೆ ಲಭ್ಯವಿವೆ ಎಂಬುದನ್ನು ಗಮನಿಸಬೇಕಾದ ಸಂಗತಿ. ಈ ಎರಡು SUVಗಳನ್ನು ಹೊರತುಪಡಿಸಿ, Volvo India ಪ್ರಸ್ತುತ ದೀಪಾವಳಿಗೆ ತನ್ನ ಇತರ ಕಾರುಗಳೊಂದಿಗೆ ರಿಯಾಯಿತಿಗಳು ಅಥವಾ ಯಾವುದೇ ಪ್ರಯೋಜನಗಳನ್ನು ನೀಡುತ್ತಿಲ್ಲ. ಈ ಎರಡು SUV ಗಳ ಭರ್ಜರಿ ಕೊಡುಗೆಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications








