ಎಲೆಕ್ಟ್ರಿಕ್ ಟಾಟಾ ನ್ಯಾನೋ: 150 ಕಿ.ಮೀ ರೇಂಜ್‌ನ ಪರಿಪೂರ್ಣ ಸಿಟಿ ಕಾರು

ಟಾಟಾ ನ್ಯಾನೋ ಬಹುಶಃ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಅತ್ಯಂತ ಮಹತ್ವಾಕಾಂಕ್ಷೆಯ ಕಾರುಗಳಲ್ಲಿ ಒಂದಾಗಿದೆ. ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಕುಟುಂಬಗಳಿಗೆ ಕೈಗೆಟಕುವ ದರದಲ್ಲಿ ಕಾರನ್ನು ನೀಡುವ ಉದ್ದೇಶದಿಂದ ಈ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಕಾರು ರತನ್ ಟಾಟಾ ಅವರ ಮೆದುಳಿನಿಂದ ಹೊರಬಂದ ಕೂಸಾಗಿದೆ.

ಇತ್ತೀಚೆಗೆ ನಾವು ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಸಾಕಷ್ಟು ಕೇಳುತ್ತಿದ್ದೇವೆ. ಈ ಪಟ್ಟಿಯಲ್ಲಿ ಟಾಟಾ ನ್ಯಾನೋ ಹೆಸರು ಕೂಡ ಕೇಳಿಬಂದಿದೆ. ಆದರೆ ಇದನ್ನು ಎಂದೂ ಕೂಡ ಎಲೆಕ್ಟ್ರಿಕ್ ಕಾರೆಂದು ಉದ್ದೇಶಿಸಿರಲಿಲ್ಲ. ಆದರೂ ನಮ್ಮ ದೇಶದಲ್ಲಿ ಇದನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಿದ ಕೆಲವು ಉದಾಹರಣೆಗಳಿವೆ. Tiago JTP ಮತ್ತು Tigor JTP ನಿರ್ಮಿಸಿದ ಕೊಯಮತ್ತೂರು ಮೂಲದ ಜಯಮ್ ಆಟೋಮೋಟಿವ್, ಫ್ಲೀಟ್ ಖರೀದಿದಾರರಿಗಾಗಿ ಟಾಟಾ ನ್ಯಾನೋದ ಎಲೆಕ್ಟ್ರಿಕ್ ಆವೃತ್ತಿಯನ್ನು ನಿರ್ಮಿಸಿದ್ದು, ಈ ಕುರಿತ ವಿಡಿಯೋವೊಂದು ಇಲ್ಲಿದೆ.

ಎಲೆಕ್ಟ್ರಿಕ್ ಟಾಟಾ ನ್ಯಾನೋ: 150 ಕಿ.ಮೀ ರೇಂಜ್‌ನ ಪರಿಪೂರ್ಣ ಸಿಟಿ ಕಾರು

ಈ ವಿಡಿಯೋವನ್ನು ಟಾಕಿಂಗ್ ಕಾರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ಕಂಡುಬರುವ ಕಾರು ವಾಸ್ತವವಾಗಿ ಜಯಮ್ ಆಟೋಮೋಟಿವ್ ತಯಾರಿಸಿದ ಟಾಟಾ ನ್ಯಾನೋದ ಎಲೆಕ್ಟ್ರಿಕ್ ಆವೃತ್ತಿಯಾಗಿದೆ. ಕಾರಿನ ಹೆಸರನ್ನು ಬದಲಾಯಿಸಲಾಗಿದ್ದು ಜಯಮ್ ನಿಯೋ ಎಂದು ಕರೆಯಲಾಗುತ್ತಿದೆ. ಇದರ ಬಾಡಿ ಪ್ಯಾನೆಲ್‌ಗಳಿಂದ ಟಾಟಾ ಮತ್ತು ನ್ಯಾನೋ ಬ್ಯಾಡ್ಜ್‌ಗಳನ್ನು ತೆಗೆದುಹಾಕಲಾಗಿದೆ. ಈ ಕಾರು ನ್ಯಾನೊದ XM ರೂಪಾಂತರವನ್ನು ಆಧರಿಸಿದ್ದು, ಕಾರು ಇತರ ಸಾಮಾನ್ಯ ನ್ಯಾನೋಗಳಂತೆಯೇ ಕಾಣುತ್ತದೆ.

ಉದ್ದಳತೆ, ವಿನ್ಯಾಸ ಮತ್ತು ಕಾರಿನ ಒಳಭಾಗವು ಒಂದೇ ಆಗಿರುತ್ತದೆ. ಕ್ಯಾಬಿನ್‌ನಲ್ಲಿನ ಗಮನಾರ್ಹ ಬದಲಾವಣೆಯೆಂದರೆ ಈ ಕಾರಿಗೆ ಅಭಿವೃದ್ಧಿಪಡಿಸಲಾದ ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್. ಟಾಟಾ ಅವರು ಮೂಲ ಶೆಲ್ ಮತ್ತು ಅಗತ್ಯ ಎಲೆಕ್ಟ್ರಿಕಲ್‌ಗಳು ಮತ್ತು ಮೆಕ್ಯಾನಿಕಲ್‌ಗಳನ್ನು ಜಯಮ್‌ಗೆ ನೀಡಿದ್ದು, ಅವರು ಕಾರಿನಲ್ಲಿ EV ಕಿಟ್ ಅನ್ನು ಸ್ಥಾಪಿಸಿದ್ದಾರೆ. ಜಯಮ್ ಆಟೋಮೋಟಿವ್ ಅವರು ಈ ಮಾದರಿಯನ್ನು ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಜನಪ್ರಿಯವಾಗುವ ಮೊದಲೇ ಪ್ರಾರಂಭಸಿದ್ದ ಯೋಜನೆಯಾಗಿದೆ.

ಆದರೆ ಆ ಸಮಯದಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಸಹಾಯಧನ ಲಭ್ಯವಿರಲಿಲ್ಲ. ಸಾರ್ವಜನಿಕರಿಗೆ ಈ ರೀತಿಯ ಕಾರನ್ನು ಬಿಡುಗಡೆ ಮಾಡುವುದರಿಂದ ಅದು ಹೆಚ್ಚಿನ ಬೆಲೆಯನ್ನು ಹೊಂದಿರುತ್ತದೆ. ಯಾವುದೇ ರೀತಿಯಲ್ಲಿ ಗ್ರಾಹಕರನ್ನು ಆಕರ್ಷಿಸುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ, ಅವರು ಈ ಕಾರುಗಳನ್ನು ಟ್ಯಾಕ್ಸಿ ವಾಹನಗಳಾಗಿ ಬಳಸುವ ಉದ್ದೇಶದಿಂದ ಫ್ಲೀಟ್ ಖರೀದಿದಾರರನ್ನು ಸಂಪರ್ಕಿಸಿದರು. ಜಯಮ್ ಅವರು ಸುಮಾರು 400-450 ವಾಹನಗಳಿಗೆ ಆರ್ಡರ್ ಪಡೆದಿದ್ದರು. ದುಃಖಕರ ವಿಷಯವೆಂದರೆ ಈ ವಾಹನಗಳನ್ನು ಕೋವಿಡ್ ಸಮಯದಲ್ಲಿ ವಿತರಿಸಲಾಯಿತು.

ಇದರಿಂದಾಗಿ ಈ ರೀತಿಯ ಕಾರು ಅಸ್ತಿತ್ವದಲ್ಲಿದೆ ಎಂದು ಅನೇಕರಿಗೆ ತಿಳಿದೇ ಇರಲಿಲ್ಲ. ಜಯಮ್ ನಿಯೋ ಅಥವಾ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಕಡಿಮೆ-ಶಕ್ತಿಯ EV ಆಗಿದ್ದು, ಇದು 17.7 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಬ್ಯಾಟರಿ ಪ್ಯಾಕ್ ಅನ್ನು ನ್ಯಾನೊದ ಚಾಲಕ ಮತ್ತು ಸಹ-ಪ್ರಯಾಣಿಕರ ಸೀಟಿನ ಅಡಿಯಲ್ಲಿ ಇರಿಸಲಾಗಿದೆ. ಸಂಭವನೀಯ ಅಪಘಾತಗಳನ್ನು ತಪ್ಪಿಸಲು ಬ್ಯಾಟರಿಯನ್ನು ಮೆಟಲ್ ಕೇಸ್‌ನಲ್ಲಿ ಸುರಕ್ಷಿತವಾಗಿ ಮುಚ್ಚಲಾಗಿದ್ದು, ಕಾರು ಪ್ರಮಾಣಿತವಾಗಿರುತ್ತದೆ.

ನ್ಯಾನೋ EV ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇದು GBT ಪೋರ್ಟ್ ಅನ್ನು ಬಳಸುತ್ತದೆ ಮತ್ತು 15 AMP ಚಾರ್ಜರ್ ಸಾಮಾನ್ಯ ಪೋರ್ಟ್ ಅನ್ನು ಹೊಂದಿದೆ. ಈ ಎರಡೂ ಪೋರ್ಟ್‌ಗಳನ್ನು ಬಾನೆಟ್ ಅಡಿಯಲ್ಲಿ ಇರಿಸಲಾಗಿದೆ. ಕಾರಿನಲ್ಲಿ ಪೆಟ್ರೋಲ್ ಎಂಜಿನ್ ಇಲ್ಲದಿರುವುದರಿಂದ ಕಾರು ಹೆಚ್ಚು ಪರಿಷ್ಕೃತವಾಗಿದೆ ಎಂದು ವೀಡಿಯೊದಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ ಇತ್ತಿಚಿಗಿನ ಆಧುನಿಕ ಕಾರುಗಳಲ್ಲಿ ನಾವು ನೋಡುವ ಪೋರ್ಟ್ ವಿಭಿನ್ನವಾಗಿರುತ್ತದೆ.

ಈ ಕಾರು ಸುಮಾರು 80-85 kmph ವೇಗವನ್ನು ಹೊಂದಿದೆ, ಹಾಗಾಗಿ ನೀವು ನಗರದೊಳಗೆ ಓಡಿಸಿದರೆ ಸಾಕು. ಟಾಟಾ ನ್ಯಾನೋ EV ಒಂದು ಪರಿಪೂರ್ಣ ಸಿಟಿ ಕಾರ್ ಆಗಿದ್ದು, ಎಲೆಕ್ಟ್ರಿಕ್ ಮೋಟಾರ್ ಅನ್ನು ಹಿಂಭಾಗದಲ್ಲಿ ಜೋಡಿಸಲಾಗಿದೆ. 15 Kw ಮೋಟಾರ್ ಸುಮಾರು 23 bhp ಮತ್ತು ಸುಮಾರು 45 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಾರು 200 ಕಿ.ಮೀ ಪ್ರಮಾಣೀಕೃತ ವ್ಯಾಪ್ತಿಯನ್ನು ಹೊಂದಿದೆ. ಆದರೆ, ಸಂಪೂರ್ಣ ಚಾರ್ಜ್ ಮಾಡಿದಾಗ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಸುಮಾರು 164 ಕಿ.ಮೀ ತೋರಿಸುತ್ತದೆ. ರಿಯಲ್ ವರಲ್ಡ್‌ನಲ್ಲಿ ನ್ಯಾನೋ EV ಸುಮಾರು 150 ಕಿ.ಮೀ ರೇಂಜ್ ಅನ್ನು ಹಿಂದಿರುಗಿಸುತ್ತದೆ.

More from DriveSpark

Article Published On: Thursday, February 9, 2023, 15:10 [IST]
English summary
Electric tata nano the perfect city car with a range of 150 km
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+