EV Car Sales: ಎಲೆಕ್ಟ್ರಿಕ್ ವಲಯದಲ್ಲೂ ಟಾಟಾಗಿಲ್ಲ ಸಾಟಿ... ಜೋರಾಯ್ತು MG ಕಾಮೆಟ್ ಪೈಪೋಟಿ
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ಹೆಚ್ಚಾಗುತ್ತಿದ್ದು, EV ಚಾರ್ಜಿಂಗ್ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಭಾರತವು ಇನ್ನೂ ಅಭಿವೃದ್ಧಿ ಹೊಂದಬೇಕಿದೆ. ಈ ವಿಷಯದಲ್ಲಿ ಎಲೆಕ್ಟ್ರಿಕ್ ವಾಹನ ಮಾಲೀಕರು ತಮ್ಮ ನಿರಾಶೆ ವ್ಯಕ್ತಪಡಿಸುತ್ತಿದ್ದಾರೆ. ಈ ಅಸಂತೃಪ್ತಿಯ ನಡುವೆಯೂ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಭಾರೀ ಏರಿಕೆ ಕಾಣುತ್ತಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ಮಾರಾಟವಾದ ಎಲೆಕ್ಟ್ರಿಕ್ ವಾಹನಗಳಿಗೆ ಹೋಲಿಸಿಕೊಂಡರೆ ಈ ವರ್ಷ ಮೇ ತಿಂಗಳ ಮಾರಾಟದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಮೇ 2023 ರಲ್ಲಿ 7,437 ಯುನಿಟ್‌ಗಳು ಮಾರಾಟವಾಗಿದ್ದರೇ ಕಳೆದ ವರ್ಷ ಮೇ ತಿಂಗಳಲ್ಲಿ 2,961 ಯೂನಿಟ್‌ಗಳು ಮಾರಾಟವಾಗಿದ್ದವು, ಹಾಗೆಯೇ ಏಪ್ರಿಲ್ 2023 ರಲ್ಲಿ 5,834 ಯುನಿಟ್‌ಗಳು ಮಾರಾಟವಾಗಿವೆ.

ಇನ್ನೂ ವಿವರವಾಗಿ ಹೇಳಬೇಕೆಂದರೆ ವಾರ್ಷಿಕ ಮಾರಾಟ ಬೆಳವಣಿಗೆಯು ಶೇ 151.17 ರಷ್ಟಿದ್ದರೇ, ತಿಂಗಳ ಬೆಳವಣಿಗೆ ಶೇ 27.48 ರಷ್ಟಿದೆ. ಕಳೆದ ವರ್ಷ ಮೇ ತಿಂಗಳಿಗೆ ಹೊಲಿಸಿಕೊಂಡರೆ ಈ ವರ್ಷ ಮೇ ತಿಂಗಳಲ್ಲಿ 4,457 ಯುನಿಟ್‌ಗಳು ಹಾಗೂ ಕಳೆದ ಏಪ್ರಿಲ್ ತಿಂಗಳಿಗೆ ಹೋಲಿಸಿಕೊಂಡರೆ ಮೇ ತಿಂಗಳಲ್ಲಿ 1,603 ಯುನಿಟ್‌ಗಳ ಮಾರಾಟ ಬೆಳವಣಿಗೆಯಾಗಿದೆ.
ಇದನ್ನು ಗಮನಿಸಿದರೆ ನಿಮಗೆ ಅರ್ಥವಾಗಬಹುದು ಭಾರತದಲ್ಲಿ ಯಾವ ಮಟ್ಟಿಗೆ ಎಲೆಕ್ಟ್ರಿಕ್ ವಾಹನಗಳು ಜನಪ್ರಿಯತೆ ಪಡೆಯುತ್ತಿವೆ ಎಂದು. ಇನ್ನು ಈ ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಟಾಟಾ ಮೋಟಾರ್ಸ್ ಅಗ್ರ ಸ್ಥಾನದಲ್ಲಿದೆ. ಶೇ 78.28 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಎಂಜಿ ಮೋಟಾರ್ ಇದ್ದು, ಮೂರನೇ ಸ್ಥಾನದಲ್ಲಿ ಮಹೀಂದ್ರಾ ಇದೆ.

ಟಾಟಾ ಕಂಪನಿಯು ಕಳೆದ ಮೇ ತಿಂಗಳಲ್ಲಿ 5,822 ಇವಿ ಯುನಿಟ್‌ಗಳನ್ನು ಮಾರಾಟ ಮಾಡಿದೆ. ಟಾಟಾ ಕಳೆದ ವರ್ಷ ಮೇನಲ್ಲಿ 2,501 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಏಪ್ರಿಲ್ 2023 ರಲ್ಲಿ 4,392 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಪರಿಣಾಮವಾಗಿ, ಟಾಟಾ ಶೇ 132 ರಷ್ಟು ವಾರ್ಷಿಕ ಮಾರಾಟ ಬೆಳವಣಿಗೆ ಮತ್ತು ಶೇ 32.56 ರಷ್ಟು ತಿಂಗಳ ಬೆಳವಣಿಗೆಯನ್ನು ದಾಖಲಿಸಿದೆ.
MG ಮೋಟಾರ್ಸ್ ಮೇನಲ್ಲಿ 437 ಘಟಕಗಳ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ. ಈ ಮೂಲಕ ಶೇ 74.80 ರಷ್ಟು ವಾರ್ಷಿಕ ಬೆಳವಣಿಗೆ ಮತ್ತು ಶೇ 30.45 ರಷ್ಟು ತಿಂಗಳ ಬೆಳವಣಿಗೆಯನ್ನು ದಾಖಲಿಸಿದೆ. MG ಕಾಮೆಟ್‌ನ ಬಿಡುಗಡೆಯೊಂದಿಗೆ, ಮುಂಬರುವ ತಿಂಗಳುಗಳಲ್ಲಿ ಮಾರಾಟವು ಹೆಚ್ಚಾಗುವ ನಿರೀಕ್ಷೆಯಿದೆ. ಇನ್ನೆರಡು ತಿಂಗಳಲ್ಲಿ ಎಂಜಿ ಕೂಡ ಉತ್ತಮ ಮಾರಾಟ ಕಾಣಲಿದೆ ಎಂದು ಹೇಳಲಾಗುತ್ತಿದೆ.

ಮಹೀಂದ್ರಾ ಪ್ರಸ್ತುತ ತನ್ನ ಇವಿ ಸಾಲಿನಲ್ಲಿ ಕೇವಲ ಒಂದು ಎಲೆಕ್ಟ್ರಿಕ್ ವಾಹನವನ್ನು ಹೊಂದಿದೆ. ಮಹೀಂದ್ರಾ ಕಳೆದ ತಿಂಗಳು 363 XUV400 ಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 9 EV ಗಳಿಗೆ ಹೋಲಿಸಿಕೊಂಡರೆ ಶೇ 3933.33 ರಷ್ಟು ವಾರ್ಷಿಕ ಬೆಳವಣಿಗೆ ಸಾಧಿಸಿದೆ. ತಿಂಗಳ ಮಾರಾಟದಲ್ಲಿ ಶೇ 28.12 ರಷ್ಟು ಕುಸಿತವನ್ನು ದಾಖಲಿಸಿದೆ.
ಇನ್ನು ಸಿಟ್ರನ್ ಕಂಪನಿಯ ಇತ್ತಿಚಿನ ಬಿಡುಗಡೆಯಾದ eC3 ಒಳ್ಳೆಯ ಮಾರಾಟ ದಾಖಲಿಸಿದೆ. 308 ಯುನಿಟ್ eC3 ಕಾರುಗಳನ್ನು ಮಾರಾಟ ಮಾಡಿದೆ. ಏಪ್ರಿಲ್ 2023 ರಲ್ಲಿ ಮಾರಾಟವಾದ 229 ಘಟಕಗಳಿಗೆ ಹೋಲಿಸಿದರೆ ಸಿಟ್ರನ್ ಶೇ34.50 ರಷ್ಟು ತಿಂಗಳ ಮಾರಾಟ ಬೆಳವಣಿಗೆ ಸಾಧಿಸಿದೆ. ಇನ್ನು ಮುಂದಿನ ಸಾಲಿನಲ್ಲಿ ಹುಂಡೈ ಇದ್ದು, ಪ್ರಸ್ತುತ ಭಾರತದಲ್ಲಿ Kona EV ಮತ್ತು Ioniq 5 ಮಾರಾಟದಲ್ಲಿವೆ.
ಹ್ಯುಂಡೈ ಕೋನಾ ಶೇ503.7 ರಷ್ಟು ವಾರ್ಷಿಕ ಬೆಳವಣಿಗೆ ಮತ್ತು ಶೇ219.61 ರಷ್ಟು ತಿಂಗಳ ಬೆಳವಣಿಗೆಯೊಂದಿಗೆ 163 ಘಟಕಗಳನ್ನು ಮಾರಾಟ ಮಾಡಿದೆ. ಚೀನಾದ EV ದೈತ್ಯ BYD ಭಾರತದಲ್ಲಿ ಶೇ 228.57 ರಷ್ಟು ವಾರ್ಷಿಕ ಬೆಳವಣಿಗೆ ಮತ್ತು ಶೇ 10.39 ರಷ್ಟು ತಿಂಗಳ ಕುಸಿತದೊಂದಿಗೆ 138 ಘಟಕಗಳನ್ನು ಖಾತ್ರಿಪಡಿಸುವ ಸೀಮಿತ ಬಂಡವಾಳವನ್ನು ಹೊಂದಿದೆ.
ಇನ್ನು BMW ಇಂಡಿಯಾ i4 ಮತ್ತು iX EVಗಳನ್ನು ಮಾರಾಟ ಮಾಡುತ್ತಿದ್ದು, ಕಳೆದ ತಿಂಗಳು ಒಟ್ಟು 70 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಈ ಮೂಲಕ BMW ಶೇ677.78 ರಷ್ಟು ವಾರ್ಷಿಕ ಮತ್ತು ಶೇ16.67 ರಷ್ಟು ತಿಂಗಳ ಬೆಳವಣಿಗೆ ಸಾಧಿಸಿದೆ. Kia ಭಾರತದಲ್ಲಿ EV6 ನ 45 ಯೂನಿಟ್‌ಗಳನ್ನು ಮಾರಾಟ ಮಾಡಿ ಶೇ32.35 ರಷ್ಟು ತಿಂಗಳ ಬೆಳವಣಿಗೆ ಸಾಧಿಸಿದೆ.


Click it and Unblock the Notifications








