ಎಲ್ಲರ ಫೇವರೆಟ್ ಮಾರುತಿ ಸುಜುಕಿ ಫ್ರಾಂಕ್ಸ್ 5 ರೂಪಾಂತರಗಳಲ್ಲಿ ಲಭ್ಯ
ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಕಂಪನಿಯ ಕಾರುಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅವುಗಳ ಕೈಗೆಟುಕುವ ಬೆಲೆ, ಆಕರ್ಷಕ ವಿನ್ಯಾಸ, ವೈಶಿಷ್ಟ್ಯ ಹಾಗೂ ಕಾರ್ಯಾಕ್ಷಮತೆ ಪ್ರತಿಯೊಬ್ಬರನ್ನು ಸೆಳೆಯುತ್ತದೆ ಎಂದು ಹೇಳಬಹುದು. ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಕಂಪನಿಯು ಹಲವಾರು ಕಾರುಗಳನ್ನು ಪ್ರದರ್ಶನ/ಬಿಡುಗಡೆ ಮಾಡಿದೆ.
ಮಾರುತಿ ಸುಜುಕಿ ಆಟೋ ಎಕ್ಸ್‌ಪೋದಲ್ಲಿ ಫ್ರಾಂಕ್ಸ್ ಎಸ್‌ಯುವಿಯನ್ನು ಅನಾವರಣಗೊಳಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು. ಫ್ರಾಂಕ್ಸ್ ಎಸ್‌ಯುವಿಯನ್ನು ಭಾರತದಾದ್ಯಂತ ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಈ ಎಸ್‌ಯುವಿ, 5 ಟ್ರಿಮ್ ಗಳಲ್ಲಿ ಲಭ್ಯವಿರಲಿವೆ. ಅವುಗಳೆಂದರೇ ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ. ಇವುಗಳಲ್ಲಿ 'ಸಿಗ್ಮಾ' ಬೇಸ್ ಟ್ರಿಮ್ ಲೆವೆಲ್ ನಲ್ಲಿದ್ದರೆ, 'ಆಲ್ಫಾ' ಟಾಪ್-ಸ್ಪೆಕ್ ಟ್ರಿಮ್ ಲೆವೆಲ್ ನಲ್ಲಿದೆ. ಫ್ರಾಂಕ್ಸ್ ಎಸ್‌ಯುವಿ ಬೆಲೆ ರೂ.10 ಲಕ್ಷದಿಂದ ರೂ.14 ಲಕ್ಷ ಇರಬಹುದು.

ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ಎಂಜಿನ್ ಬಗ್ಗೆ ಹೇಳುವುದಾದರೆ, ಇದು 1.2-ಲೀಟರ್, ನ್ಯಾಚುರಲ್-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 88.5 bhp ಗರಿಷ್ಠ ಪವರ್ ಮತ್ತು 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ 5-ಸ್ಪೀಡ್ AMT ಯುನಿಟ್ ನೊಂದಿಗೆ ಸಂಪರ್ಕಿಸಲಾಗುತ್ತದೆ. 1.0-ಲೀಟರ್, ಟರ್ಬೋಚಾರ್ಜ್ಡ್ ಎಂಜಿನ್ 98.6 bhp ಪವರ್ ಮತ್ತು 147.6Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿರುತ್ತದೆ.
ಮಾರುತಿ ಸುಜುಕಿ ಫ್ರಾಂಕ್ಸ್ ಸಿಗ್ಮಾ:
ಮಾರುತಿ ಸುಜುಕಿ ಫ್ರಾಂಕ್ಸ್ ಸಿಗ್ಮಾ ಎಸ್‌ಯುವಿ 'ಬೇಸ್' ರೂಪಾಂತರವಾಗಿದೆ. ಇದು ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ವೀಲ್ ಕವರ್‌ಗಳೊಂದಿಗೆ ಸ್ಟೀಲ್ ವೀಲ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು, ಕೀಲೆಸ್ ಎಂಟ್ರಿ, ಡ್ಯುಯಲ್-ಟೋನ್ ಇಂಟೀರಿಯರ್, ಟಿಲ್ಟ್ ಅಡ್ಜಸ್ಟಬಲ್ ಸ್ಟೀರಿಂಗ್, ಹಿಲ್-ಹೋಲ್ಡ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ. ಇಷ್ಟೇಅಲ್ಲದೆ, ಇಎಸ್‌ಪಿ, ರಿಯರ್ ಡಿಫಾಗರ್, ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಹೊಂದಿದೆ ಎಂದು ಹೇಳಬಹುದು.
ಮಾರುತಿ ಸುಜುಕಿ ಫ್ರಾಂಕ್ಸ್ ಡೆಲ್ಟಾ:
ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿಯ ಡೆಲ್ಟಾ ರೂಪಾಂತರವು ಫ್ರಂಟ್ ಗ್ರಿಲ್‌ನಲ್ಲಿ ಕ್ರೋಮ್ ಗಾರ್ನಿಶ್, ಟರ್ನ್ ಇಂಡಿಕೇಟರ್‌ನೊಂದಿಗೆ ಎಲೆಕ್ಟ್ರಿಕಲ್ ಅಡ್ಜೆಸ್ಟ್ ಮಾಡಬಹುದಾದ ಒಆರ್‌ವಿಎಂಗಳು, ರೇರ್ ಪಾರ್ಸೆಲ್ ಟ್ರೇ, 7-ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ವಾಯ್ಸ್ ಅಸಿಸ್ಟೆಂಟ್ ವೈಶಿಷ್ಟ್ಯಗಳನ್ನು ಹೊಂದಿದೆ. USB, ಬ್ಲೂಟೂತ್, OTA ಅಪ್‌ಡೇಟ್, 4-ಸ್ಪೀಕರ್ ಆಡಿಯೊ ಸಿಸ್ಟಮ್ ಮತ್ತು ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳನ್ನು ಪಡಿದಿದೆ.
ಮಾರುತಿ ಸುಜುಕಿ ಫ್ರಾಂಕ್ಸ್ ಡೆಲ್ಟಾ ಪ್ಲಸ್:
ಸಿಗ್ಮಾ ಮತ್ತು ಡೆಲ್ಟಾ ರೂಪಾಂತರಗಳಲ್ಲಿ ಲಭ್ಯವಿರುವ ಎಲ್ಲಾ ವೈಶಿಷ್ಟ್ಯಗಳ ಜೊತೆಗೆ, ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿಯ ಡೆಲ್ಟಾ ಪ್ಲಸ್ ರೂಪಾಂತರವು LED DRLS ಮತ್ತು 16-ಇಂಚಿನ ಅಲಾಯ್ ವೀಲ್ಸ್ ಗಳಂದಿಗೆ ಆಟೋಮೆಟಿಕ್ LED ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಇದು 1.0-ಲೀಟರ್ ಬೂಸ್ಟರ್‌ಜೆಟ್ ಎಂಜಿನ್ ಹೊಂದಿರುವ ಫ್ರಾಂಕ್ಸ್ ಎಸ್‌ಯುವಿಗೆ ಎಂಟ್ರಿ ಲೆವೆಲ್ ರೂಪಾಂತರವಾಗಿದೆ. ಈ ಎಸ್‌ಯುವಿ ಗ್ರಾಹಕರಿಗೆ ತುಂಬಾ ಇಷ್ಟವಾಗುತ್ತದೆ ಎಂದು ಹೇಳಬಹುದು.
ಮಾರುತಿ ಸುಜುಕಿ ಫ್ರಾಂಕ್ಸ್ ಝೀಟಾ:
ಈ ಝೀಟಾ ರೂಪಾಂತರವು ಟೈಲ್‌ಗೇಟ್‌ನಲ್ಲಿ ಎಲ್ಇಡಿ ಲೈಟ್ ಬಾರ್, ರಿಯರ್ ವ್ಯೂ ಕ್ಯಾಮೆರಾ, ಡೋರ್ ಹ್ಯಾಂಡಲ್‌ಗಳಲ್ಲಿ ಕ್ರೋಮ್ ಟ್ರಿಮ್, ರಿಯರ್ ವಾಷರ್ ಮತ್ತು ವೈಪರ್, ಟಿಲ್ಟ್ ಮತ್ತು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅಲ್ಲದೆ, ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್, ವೈರ್‌ಲೆಸ್ ಚಾರ್ಜರ್, 6-ಸ್ಪೀಕರ್ ಆಡಿಯೊ ಸಿಸ್ಟಮ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಸಿಸ್ಟಂ, ಹೈಟ್-ಅಡ್ಜಸ್ಟ್ ಡ್ರೈವರ್ ಸೀಟ್, ಫುಟ್‌ವೆಲ್ ಇಲ್ಯುಮಿನೇಷನ್, ರಿಯರ್ ಎಸಿ ವೆಂಟ್‌ಗಳು, ಸೆಂಟರ್ ಆರ್ಮ್‌ರೆಸ್ಟ್, ಕಲರ್ ಎಂಐಡಿ ಡಿಸ್ಪ್ಲೇ, 6 ಏರ್‌ಬ್ಯಾಗ್‌ಗಳು ಮತ್ತು ಫಾಸ್ಟ್ ಚಾರ್ಜಿಂಗ್ USB ಪೋರ್ಟ್ ಅನ್ನು ಹೊಂದಿದೆ.
ಮಾರುತಿ ಸುಜುಕಿ ಫ್ರಾಂಕ್ಸ್ ಆಲ್ಫಾ:
ಇದು ಟಾಪ್-ಸ್ಪೆಕ್ ರೂಪಾಂತವಾಗಿದ್ದು, 16-ಇಂಚಿನ ಡೈಮಂಡ್ - ಕಟ್ ಅಲಾಯ್ ವೀಲ್‌ಗಳು, ಡ್ಯುಯಲ್-ಟೋನ್ ಎಕ್ಸ್‌ಟೀರಿಯರ್, ಲೆದರ್-ವ್ರ್ಯಾಪ್ಡ್ ಸ್ಟೀರಿಂಗ್‌ನಂತಹ ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದಿದೆ. ಜೊತೆಗೆ ಕ್ರೂಸ್ ಕಂಟ್ರೋಲ್, ಹೆಡ್-ಅಪ್ ಡಿಸ್ಪ್ಲೇ, 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾವನ್ನು ಹೊಂದುವ ಮೂಲಕ ಆಕರ್ಷಕವಾಗಿದೆ. ಮಾರುತಿ ಸುಜುಕಿ ರೆಡಿ ಮಾಡಿರುವ ಈ ಫ್ರಾಂಕ್ಸ್ ಎಸ್‌ಯುವಿ ಬಲೆನೊ ಹ್ಯಾಚ್‌ಬ್ಯಾಕ್ ಆಧಾರಿತವಾಗಿದ್ದರೂ, ಹಲವು ನವೀನ ವಿನ್ಯಾಸಗಳನ್ನು ಹೊಂದಿದ್ದು, ಗ್ರಾಹಕರು ಇಷ್ಟಪಡುತ್ತಾರೆ ಎಂದು ಹೇಳಬಹುದು.


Click it and Unblock the Notifications