Mahindra Thar: ಈ ನವೆಂಬರ್ ತಿಂಗಳಲ್ಲಿಯೂ ಮಹೀಂದ್ರಾ ಥಾರ್‌ಗೆ ಭಾರೀ ಬೇಡಿಕೆ, ಪ್ರತಿಸ್ಪರ್ಧಿಗಳಿಗೆ ನಡುಕ!
ಮಹೀಂದ್ರಾ ಥಾರ್ (Mahindra Thar) ಜನಪ್ರಿಯ ಆಫ್ - ರೋಡ್ ಎಸ್‌ಯುವಿಯಾಗಿದೆ. ಇದರ ನೋಟ ಹೆಚ್ಚಿನ ಯುವಕರನ್ನು ಸೆಳೆದಿದ್ದು, ಇಷ್ಟಪಟ್ಟು ಖರೀದಿಸುತ್ತಾರೆ. ಅದಕ್ಕೆ ತಕ್ಕಂತೆ ಭಾರೀ ಬೇಡಿಕೆಯನ್ನು ಹೊಂದಿದೆ. ಈ ನವೆಂಬರ್ ತಿಂಗಳಲ್ಲಿಯೂ ಈ ಎಸ್‌ಯುವಿಗೆ ಸಖತ್ ಡಿಮ್ಯಾಂಡ್ ಇದೆ.
ದೇಶೀಯ ಮಾರುಕಟ್ಟೆಯಲ್ಲಿ 2020ರ ಅಕ್ಟೋಬರ್ (October 2020) ತಿಂಗಳಲ್ಲಿ ಬಿಡುಗಡೆಯಾದ 3 - ಡೋರ್ ಮಹೀಂದ್ರಾ ಥಾರ್, ಆಫ್-ರೋಡ್ ವಿಭಾಗದಲ್ಲಿ ತನ್ನದೇ ಆದ ಹೆಸರನ್ನು ಗಳಿಸಿದೆ. ಈ ತಿಂಗಳು ಕೂಡ 76,000 ಯುನಿಟ್‌ಗಳಷ್ಟು ಓಪನ್ ಬುಕ್ಕಿಂಗ್ ಒಳಗೊಂಡಿದೆ. ಈಗಲೂ ಪ್ರತಿ ತಿಂಗಳು 10,000 ಹೆಚ್ಚಿನ ಗ್ರಾಹಕರು ಆರ್ಡರ್ ಮಾಡುತ್ತಿದ್ದಾರೆ. ಒಂದೊಮ್ಮೆ ನೀವು ಈ ಎಸ್‌ಯುವಿಯನ್ನು ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆ ಪಡೆಯಲು 70 ವಾರ ಕಾಯಬೇಕು.

ಭಾರತದಲ್ಲಿ ಖರೀದಿಗೆ ಸಿಗುವ 3 - ಡೋರ್ ಮಹೀಂದ್ರಾ ಥಾರ್, ರೂ.10.98 ಲಕ್ಷದಿಂದ ರೂ.16.94 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 4 ಆಸನ ಆಯ್ಕೆಯಲ್ಲಿ ದೊರೆಯುತ್ತದೆ. ಜೊತೆಗೆ ಎಎಕ್ಸ್ (ಒ) ಮತ್ತು ಎಲ್ಎಕ್ಸ್ ರೂಪಾಂತರದೊಂದಿಗೆ ಗ್ರಾಹಕರಿಗೆ ಲಭ್ಯವಿದ್ದು, ಎವರೆಸ್ಟ್ ವೈಟ್, ಅಕ್ವಾಮರೀನ್, ರೆಡ್ ರೇಜ್, ನಪೋಲಿ ಬ್ಲಾಕ್ ಸೇರಿದಂತೆ ಆರು ಬಣ್ಣದೊಂದಿಗೆ ಸಿಗುತ್ತದೆ.
ಮಹೀಂದ್ರಾ ಥಾರ್ ಮೂರು ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. 1.5 ಲೀಟರ್ ಡೀಸೆಲ್ ಎಂಜಿನ್, 117 hp ಪವರ್ ಹಾಗೂ 300 Nm ಪೀಕ್ ಟಾರ್ಕ್, 2.2 - ಲೀಟರ್ ಡೀಸೆಲ್ ಎಂಜಿನ್ 128 hp ಗರಿಷ್ಠ ಪವರ್, 300 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ.

ಇನ್ನೊಂದು, 2.0 - ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 150 hp ಪವರ್ ಮತ್ತು 320 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 - ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿದ್ದು, 4WD (ಫೋರ್ ವೀಲ್ ಡ್ರೈವ್), RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.
ಮಹೀಂದ್ರಾ ಥಾರ್, 15.2 kmpl ಮೈಲೇಜ್ ನೀಡುತ್ತದೆ. 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಕ್ರೂಸ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಪಡೆದಿದೆ.
ಮಹೀಂದ್ರಾ, 5 ಡೋರ್ ಮಾರುತಿ ಸುಜುಕಿ ಜಿಮ್ನಿಗೆ ಪೈಪೋಟಿ ನೀಡಲು 5 ಡೋರ್ ಆಯ್ಕೆಯಲ್ಲಿ ಥಾರ್ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ, ದೇಶದ ರಸ್ತೆಯಲ್ಲಿ ಹಲವು ಬಾರಿ ಪ್ರಾಯೋಗಿಕ ಸಂಚಾರ ನಡೆಸುವಾಗ ಕಂಡುಬಂದಿದ್ದು, ಆ ಚಿತ್ರಗಳು ಇಂಟರ್ನೆಟ್ ನಲ್ಲಿ ಸೋರಿಕೆಯಾಗಿವೆ. ಈ ಥಾರ್, ರೂ.15.00 - 16.00 ಲಕ್ಷ ಬೆಲೆಗೆ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಸಿಗಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








