ಪವರ್‌ಫುಲ್ ಟರ್ಬೋ ಎಂಜಿನ್‌, ಆಕರ್ಷಕ ವಿನ್ಯಾಸದ ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯ ವಿಶೇಷತೆಗಳು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ನವೀಕರಿಸಿದ ಅಲ್ಕಾಜರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು ಈ ಹೊಸ ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.16.74 ಲಕ್ಷವಾಗಿದೆ. ಈ ಅಲ್ಕಾಜರ್ ಎಸ್‍ಯುವಿಯು ಪವರ್‌ಫುಲ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಎಂಜಿನ್: ಈ ಹೊಸ 2023ರ ಹ್ಯುಂಡೈ ಅಲ್ಕಾಜರ್ ಎಸ್‍ಯುವಿ ಹೊಸ 1.5-ಲೀಟರ್ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ನೀಡಿದೆ. ಈ ಎಸ್‍ಯುವಿಯಿಂದ ಹಳೆಯ 2.0-ಲೀಟರ್ ನ್ಯಾಚುರಲ್-ಆಸ್ಪೈರರ್ಡ್ ಪೆಟ್ರೋಲ್ ಎಂಜಿನ್ ಅನ್ನು ತೆಗೆದು ಹಾಕಿದೆ. 2023ರ ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯು ವಿಪ್ರೆಸ್ಟೀಜ್ ಮತ್ತು ಪ್ಲಾಂಟಿನಮ್ 7-ಸೀಟರ್ ರೂಪಾಂತರಗಳನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ನೀಡಲಾಗುತ್ತದೆ.

ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯ ವಿಶೇಷತೆಗಳು

ಈ ಎಸ್‍ಯುವಿಯ ಟಾಪ್-ಸ್ಪೆಕ್ ಪ್ಲಾಟಿನಂ (O) ಮತ್ತು ಸಿಗ್ನೇಚರ್ (O) ಆರು-ಆಸನಗಳ ಲೇಔಟ್‌ಗಳು ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತವೆ. ಹೊಸ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 158 bhp ಮತ್ತು 253 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ 1.5 ಲೀಟರ್ ಪೆಟ್ರೋಲ್ ಎಂಜಿನ್ RDE (ರಿಯಲ್ ಡ್ರೈವಿಂಗ್ ಎಮಿಷನ್) ಕಂಪ್ಲೈಂಟ್ ಮತ್ತು E20 (ಎಥೆನಾಲ್) ಇಂಧನವನ್ನು ಸಹ ಬೆಂಬಲಿಸುತ್ತದೆ.

ಈ ಎಂಜಿನ್ ಆಯ್ಕೆಗಳಲ್ಲಿ 6-ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಹೊಸ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್ ಅಥವಾ DCT ಸೇರಿವೆ. ಈ ಹೊಸ ಎಂಜಿನ್ ಇಂಟಿಗ್ರೇಟೆಡ್ ಸ್ಟಾರ್ಟ್-ಸ್ಟಾಪ್ ಟೆಕ್ ಅನ್ನು ಸಹ ಪಡೆಯುತ್ತದೆ. DCT ಆವೃತ್ತಿಯು 18 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಮ್ಯಾನುವಲ್ ಆವೃತ್ತಿಯು 17.5 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ನೀಡಲಾಗಿದೆ.

ಈ ಎಂಜಿನ್ 115 bhp ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನ್ವಾಟರ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಹೊಸ ಎಸ್‍ಯುವಿಯು ಸ್ಟ್ಯಾಂಡರ್ಡ್ ಆಗಿ ಸೈಡ್ ಮತ್ತು ಕರ್ಟನ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಂತೆ ಆರು ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ. ಇನ್ನು ಈ ಹೊಸ ಎಸ್‍ಯುವಿಯು ಗ್ರಿಲ್ ಮತ್ತು ಹೊಸ ಪಡೆಲ್ ಲ್ಯಾಂಪ್ ಗಳನ್ನು ಒಳಗೊಂಡಿದೆ.

ಬೆಲೆ: 2023ರ ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯ ಎಂಟ್ರಿ ಲೆವೆಲ್ 7-ಸೀಟರ್ ಪ್ರೆಸ್ಟೀಜ್ ಮ್ಯಾನುವಲ್ ರೂಪಾಂತರದ ಬೆಲೆಯು ರೂ,16.74 ಲಕ್ಷವಾದರೆ, ಇದು ಟಾಪ್-ಸ್ಪೆಕ್ ಅಲ್ಕಾಜರ್ ಸಿಗ್ನೇಚರ್ (O) 6-ಸೀಟರ್ ಆಟೋಮ್ಯಾಟಿಕ್‌ ಮಾದರಿಯ ಬೆಲೆಯು ರೂ.20.25 ಲಕ್ಷವಾಗಿದೆ. ಈ ಹೊಸ ಹ್ಯುಂಡೈ ಅಲ್ಕಾಜರ್ ಎಸ್‍ಯುವಿ ಖರೀದಿಗಾಗಿ ಆಸಕ್ತ ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ಹ್ಯುಂಡೈ ಸಿಗ್ನೇಚರ್ ಡೀಲರ್‌ಶಿಪ್‌ಗಳಲ್ಲಿ ಬುಕ್ ಮಾಡಬಹುದು.

ಸುರಕ್ಷತಾ ಫಿಚರ್ಸ್: ಈ ಹೊಸ ಹ್ಯುಂಡೈ ಅಲ್ಕಾಜರ್ ಮಾದರಿಯು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ (VSM), ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC) ಮತ್ತು ಎಲ್ಲಾ ವ್ಹೀಲ್ ಗಳಿಗೆ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಹ್ಯುಂಡೈ ಅಲ್ಕಾಜಾರ್ ಕ್ರೆಟಾವನ್ನು ಆಧರಿಸಿದೆ ಆದರೆ, ಅದರ ಕೆಲವು ಸ್ಪರ್ಧಿಗಳಿಗಿಂತ ಭಿನ್ನವಾಗಿ, ಹ್ಯುಂಡೈ ಎರಡೂ ಎಸ್‌ಯುವಿಗಳನ್ನು ಪ್ರತ್ಯೇಕಿಸಲು ಕಾರಿನಲ್ಲಿ ಕೆಲವು ವಿನ್ಯಾಸ ಮತ್ತು ಯಾಂತ್ರಿಕ ಬದಲಾವಣೆಗಳನ್ನು ಮಾಡಿದೆ.

ಇನ್ನು ಈ ಹೊಸ ಹ್ಯುಂಡೈ ಅಲ್ಕಾಜರ್ ಮಾದರಿಯನ್ನು 6 ಮತ್ತು 7 ಸೀಟುಗಳ ಸಂರಚನೆಗಳಲ್ಲಿ ಅನ್ನು ನೀಡುತ್ತದೆ. ಈ ಅಲ್ಕಾಜಾರ್ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳನ್ನು ಸೆಂಟರ್ ಕನ್ಸೋಲ್‌ನೊಂದಿಗೆ ಪಡೆಯುತ್ತದೆ, ಇದರಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕಪ್‌ಹೋಲ್ಡರ್‌ಗಳಿವೆ. ಇನ್ನು ಈ ಎಸ್‍ಯುವಿಯ ಡೈವಿಂಗ್ ಸೀಟ್ ಎಲೆಕ್ಟ್ರಿಕ್ ಆಗಿ ಅಡೆಜಸ್ಟ್ ಮಾಡಿಕೊಳ್ಳಬಹುದು. ಈ ಹೊಸ ಮಾದರಿಯ ವಿತರಣೆಯು ಈ ತಿಂಗಳ ಅಂತ್ಯದ ಮೊದಲು ಪ್ರಾರಂಭವಾಗುವ ಸಾಧ್ಯತೆಯಿದೆ.

Article Published On: Friday, March 10, 2023, 8:30 [IST]
English summary
Find here some top highlights of 2023 hyundai alcazar details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+