Fisker EV: ಅಂತರಾಷ್ಟ್ರೀಯ ಬ್ರಾಂಡ್‌ಗಳಿಗೆ ಭಾರತವೆ ಫೆವರೆಟ್... 563 ಕಿ.ಮೀ ರೇಂಜ್, ಎಂಟ್ರಿಗೆ ಸರ್ವಂ ಸಿದ್ಧ

ಭಾರತವು ಆಟೋ ವಲಯದಲ್ಲಿ ಮುನ್ನುಗ್ಗುತ್ತಿದೆ ಎಂಬುದಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಅಂತರಾಷ್ಟೀಯ ಕಾರು ಕಂಪನಿಗಳು ಭಾರತಕ್ಕೆ ಎಂಟ್ರಿ ಕೊಡಲು ತುದಿಗಾಲಲ್ಲಿ ನಿಂತಿವೆ. ಮೊನ್ನೆಯಷ್ಟೇ ಟೆಸ್ಲಾ ಭಾರತಕ್ಕೆ ಬರುವ ಕುರಿತು ವರದಿಯಾದ ಬೆನ್ನಲ್ಲೇ ಈಗ ಮತ್ತೊಂದು ಅಮೆರಿಕಾ ಕಂಪನಿ ಭಾರತದಲ್ಲಿ ತಮ್ಮ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಅಮೆರಿಕಾ ಮೂಲದ ಹೊಸ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಯಾದ Fisker EV, ಮುಂದಿನ ಕೆಲವೇ ತಿಂಗಳುಗಳಲ್ಲಿ ತನ್ನ ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿಯೊಂದಿಗೆ ಭಾರತಕ್ಕೆ ಪಾದಾರ್ಪಣೆ ಮಾಡುವುದಾಗಿ ಹೇಳಿಕೊಂಡಿದೆ. ಫಿಸ್ಕರ್ ಎಲೆಕ್ಟ್ರಿಕ್ SUV ಯ ಸೀಮಿತ ಆವೃತ್ತಿಯನ್ನು ಮಾತ್ರ ಮಾರಾಟ ಮಾಡಲಿದ್ದು ಇವೆಲ್ಲವನ್ನು ಆಮದು ಮಾಡಿಕೊಳ್ಳಲಾಗುತ್ತದೆ.

fisker-ev-ocean-all-set-entry-india-563-km-range

ಫಿಸ್ಕರ್ ಅವರ ಹೊಸ ಎಸ್‌ಯುವಿಯನ್ನು ಓಷನ್ ಎಂಬ ಹೆಸರಿನೊಂದಿಗೆ ತರಲಾಗುತ್ತಿದೆ. ಇದು ಟೆಸ್ಲಾ ಮಾಡೆಲ್ Y ಗೆ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಸೆಪ್ಟೆಂಬರ್‌ನಲ್ಲಿ ಪರಿಚಯಿಸುವುದಾಗಿ ತಯಾರಕರು ಈಗ ದೃಢಪಡಿಸಿದ್ದಾರೆ. ಓಷನ್ ಎಲೆಕ್ಟ್ರಿಕ್ ಎಸ್‌ಯುವಿಯ 100 ಯುನಿಟ್‌ಗಳನ್ನು ಮಾತ್ರ ಆರಂಭಿಕವಾಗಿ ಮಾರಾಟ ಮಾಡುವುದಾಗಿ ಕಂಪನಿ ಹೇಳಿಕೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಫಿಸ್ಕರ್ ಓಷನ್ ಎಸ್‌ಯುವಿಗಳನ್ನು ಆಸ್ಟ್ರಿಯಾದಲ್ಲಿ ತಯಾರಿಸಲಾಗುವುದು. ನಂತರ ಸಣ್ಣ ಐದು ಆಸನಗಳ ಎಲೆಕ್ಟ್ರಿಕ್ ಕಾರ್ PEAR ಅನ್ನು ಭಾರತದಲ್ಲಿ ಫಾಕ್ಸ್‌ಕಾನ್‌ನೊಂದಿಗೆ ತಯಾರಿಸಲು ಯೋಜಿಸಿದೆ. ಈ ಮೂಲಕ ಮುಂಬರುವ ವರ್ಷಗಳಲ್ಲಿ ಸ್ಥಳೀಯವಾಗಿ ಉತ್ಪಾದನೆ ಆರಂಭಿಸುವುದಾಗಿ ಕಂಪನಿ ತಿಳಿಸಿದೆ. ವರ್ಷದ ನಾಲ್ಕನೇ ತ್ರೈಮಾಸಿಕದಿಂದ ಭಾರತದಲ್ಲಿ ಓಷನ್ EV ಯ ವಿತರಣೆಯನ್ನು ಪ್ರಾರಂಭಿಸಬಹುದು.

fisker-ev-ocean-all-set-entry-india-563-km-range

ಫಿಸ್ಕರ್ ಓಷನ್ ವಿಶೇಷತೆಗಳು: ಈ SUV ಓಷನ್ ಎಕ್ಸ್‌ಟ್ರೀಮ್, ಓಷನ್ ಅಲ್ಟ್ರಾ, ಓಷನ್ ಸ್ಪೋರ್ಟ್ ಎಂಬ ಮೂರು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿರಲಿದೆ. ಓಷನ್ ಹೈ-ರೇಂಜ್ ಮಾದರಿಗಳು ಪ್ರಮಾಣಿತ ವೈಶಿಷ್ಟ್ಯವಾಗಿ ಆಲ್-ವೀಲ್ ಡ್ರೈವ್‌ನೊಂದಿಗೆ ಬರುತ್ತವೆ. ದೊಡ್ಡ 17.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಲ್ಯಾಂಡ್‌ಸ್ಕೇಪ್‌ನಿಂದ ಪೋರ್ಟ್ರೇಟ್ ಓರಿಯಂಟೇಶನ್‌ಗೆ ತಿರುಗಿಸುತ್ತದೆ.

ಓಷನ್ ಎಕ್ಸ್‌ಟ್ರೀಮ್ ಎಸ್‌ಯುವಿ ಒಂದೇ ಚಾರ್ಜ್‌ನಲ್ಲಿ 563 ಕಿ.ಮೀ ರೇಂಜ್ ನೀಡುತ್ತದೆ, ಹಾಗೆಯೇ ಓಷನ್ ಅಲ್ಟ್ರಾ 547 ಕಿ.ಮೀ ರೇಂಜ್ ನೀಡಿದ್ರೆ, ಓಷನ್ ಸ್ಪೋರ್ಟ್ ಪ್ರತಿ ಚಾರ್ಜ್‌ಗೆ 402 ಕಿ.ಮೀ ರೇಂಜ್ ನೀಡುವುದಾಗಿ ಕಂಪನಿ ತಿಳಿಸಿದೆ. ಇನ್ನು ಇದರ ಪ್ರಮುಖ ಪ್ರತಿಸ್ಪರ್ಧಿ ಟೆಸ್ಲಾ ಮಾಡೆಲ್ Y ಒಂದೇ ಚಾರ್ಜ್‌ನಲ್ಲಿ 531 ಕಿ.ಮೀ ರೇಂಜ್ ನೀಡುತ್ತದೆ.

fisker-ev-ocean-all-set-entry-india-563-km-range

ಎಕ್ಸ್‌ಟ್ರೀಮ್ ಮತ್ತು ಅಲ್ಟ್ರಾ ಉನ್ನತ-ಶ್ರೇಣಿಯ ಮಾದರಿಗಳಲ್ಲಿ ನಿಕಲ್ ಆಧಾರಿತ ಬ್ಯಾಟರಿಯನ್ನು ಬಳಸಲಾಗಿದ್ದು, ಬೇಸ್ ರೂಪಾಂತರವಾದ ಓಷನ್ ಸ್ಪೋರ್ಟ್ ಕಬ್ಬಿಣ ಆಧಾರಿತ ಬ್ಯಾಟರಿಯನ್ನು ಬಳಸಲಾಗಿದೆ. ಮೊದಲೇ ಹೇಳಿದಂತೆ ಭಾರತಕ್ಕೆ ಬರುವ ಸೀಮಿತ ಘಟಕಗಳು ಯುರೋಪಿಯನ್ ಮಾರುಕಟ್ಟೆಗೆ ಹೊಂದಿಕೆಯಾಗುವ ಬೆಲೆಯನ್ನು ಹೊಂದಿರುತ್ತವೆ ಎನ್ನಲಾಗಿದೆ.

ಈ ಎಲೆಕ್ಟ್ರಿಕ್ SUV ಬೆಲೆ 69,950 ಯುರೋಗಳು, ಅಂದರೆ ಯಾವುದೇ ತೆರಿಗೆಗಳಿಲ್ಲದೆ ಭಾರತದಲ್ಲಿ ಸುಮಾರು ₹65 ಲಕ್ಷಕ್ಕೆ ಸಮನಾಗಿರುತ್ತದೆ. ಅದೆ ಅಮೆರಿಕಾದಲ್ಲಿ ನೋಡುವುದಾದರೆ ಈ ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆಗಳು $37,499 (ಸುಮಾರು ₹31 ಲಕ್ಷ) ರಿಂದ ಪ್ರಾರಂಭವಾಗುತ್ತವೆ. ಒಟ್ಟಾರೆ ಭಾರತಕ್ಕೆ ಈ ವರ್ಷ ಅಂತರಾಷ್ಟ್ರೀಯ ಎಲೆಕ್ಟ್ರಿಕ್ ಕಾರುಗಳು ಎಂಟ್ರಿ ಕೊಡುವುದು ಖಚಿತವಾಗಿದೆ.

More from DriveSpark

Article Published On: Tuesday, July 18, 2023, 13:43 [IST]
English summary
Fisker ev ocean all set entry india 563 km range
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+