ಇಷ್ಟು ವರ್ಷ ಶಬರಿಯಂತೆ ಕಾದಿದ್ದು ಸಾಕು: ಆಗಸ್ಟ್ 15ರಂದು ಬಹುನಿರೀಕ್ಷಿತ ಐದು ಡೋರ್ ಥಾರ್ ಅನಾವರಣ
ಮಹೀಂದ್ರಾ ಥಾರ್ ಗೆ (Mahindra Thar) ಭಾರತೀಯ ಆಫ್‌ರೋಡ್ ವಾಹನ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನಮಾನ ಇದೆ. ಈ ವಾಹನದ ಡಿಸೈನ್, ಆಫ್‌ರೋಡ್ ಪರ್ಫಾಮೆನ್ಸ್ ಇದಕ್ಕೆ ಕಾರಣ. ಮಹೀಂದ್ರಾ ಥಾರ್ ಸದ್ಯಕ್ಕೆ ಮೂರು ಡೋರ್‌ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದರ ಐದು ಡೋರ್‌ಗಳ ಥಾರ್ ಮಾರುಕಟ್ಟೆಗೆ ಕಾಲಿಡಲಿದೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು.
ಐದು ಡೋರ್‌ನ ಥಾರ್ (Mahindra Thar) ಯಾವಾಗ ಲಾಂಚ್ ಬರಲಿದೆ ಎಂದು ಕಾತುರದಿಂದ ಕಾಯುತ್ತಿದ್ದ ಥಾರ್ ಪ್ರೇಮಿಗಳ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ದಿನ 5 ಡೋರ್ ನ ಥಾರ್ ಅನ್‌ವೀಲ್ ಗೊಳ್ಳಲಿದೆ. ಅಂದರೆ 15 ಆಗಸ್ಟ್ 2023 ಕ್ಕೆ ಹೊಸ ಥಾರ್ ರಿವೀಲ್ ಆಗಲಿದ್ದು ದಕ್ಷಿಣ ಆಫ್ರಿಕಾದಲ್ಲಿ ಈ ಸಮಾರಂಭ ನಡೆಯಲಿದೆ ಎಂದು ತಿಳಿದು ಬಂದಿದೆ.

ಇನ್ನು ಈ ಹೊಸ ಥಾರ್ ಮುಂದಿನ ವರ್ಷದಲ್ಲಿ ಮಾರಾಟ ಆರಂಭಿಸಲಿದ್ದು ಎರಡು ಇಂಜಿನ್ ಆಯ್ಕೆಯಲ್ಲಿ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ. ಮಾಹಿತಿಗಳ ಪ್ರಕಾರ 2.2 ಲೀಟರ್ ಡೀಸೆಲ್ ಎಂಜಿನ್ ಮತ್ತು 2.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆವೃತ್ತಿಗಳಲ್ಲಿ ಮಹೀಂದ್ರಾ ಫೈವ್ ಡೋರ್ ಥಾರ್ ಲಭ್ಯವಾಗಲಿದೆ.
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗ್ಲೋಬಲ್ ರಿವೀಲ್ ಆಗುವ ಮಹೀಂದ್ರಾ ಕಂಪನಿಯ ನಾಲ್ಕನೇ ವಾಹನ ಇದಾಗಲಿದ್ದು 2020 ರ ಸ್ವಾತಂತ್ರ್ಯ ದಿನದಲ್ಲಿ ಈಗಿರುವ ಮಹೀಂದ್ರಾ ಥಾರ್, 2021 ರ ಸ್ವಾತಂತ್ರ್ಯ ದಿನದಲ್ಲಿ ಮಹೀಂದ್ರಾ ಎಕ್ಸ್‌ಯುವಿ 700 ಮತ್ತು ಕಳೆದ ವರ್ಷದ ಸ್ವಾತಂತ್ರ್ಯ ದಿನದಲ್ಲಿ ಮಹೀಂದ್ರಾ ಅವರು ಯುಕೆಯಲ್ಲಿ ನಡೆದ ಸಮಾರಂಭದಲ್ಲಿ ಎಲೆಕ್ಟ್ರಿಕ್ ಕಾನ್ಸೆಪ್ಟ್‌ಗಳನ್ನು ಬಿಡುಗಡೆ ಮಾಡಿದ್ದರು.
ಇನ್ನು ದಕ್ಷಿಣ ಆಫ್ರಿಕಾದಲ್ಲಿ ಹೊಸ ಥಾರ್ ನ ಗ್ಲೋಬಲ್ ಅನ್‌ವೀಲ್ ನಡೆಯಲಿದ್ದು, ಮಹೀಂದ್ರಾ ಥಾರ್‌ನ ಜಾಗತಿಕ ಮಾರುಕಟ್ಟೆಯಲ್ಲಿ ದಕ್ಷಿಣ ಆಫ್ರಿಕಾ ಸಹ ಒಂದು. ಸದ್ಯ ಮಹೀಂದ್ರಾ ದಕ್ಷಿಣ ಆಫ್ರಿಕಾ ದೇಶಗಳಲ್ಲಿ ತನ್ನ ಎಕ್ಸ್‌ಯುವಿ 300, ಎಕ್ಸ್‌ಯುವಿ 700 ಮತ್ತು ಸ್ಕಾರ್ಪಿಯೋ ಎನ್ ಕಾರುಗಳನ್ನು ಮಾರಾಟ ಮಾಡುತ್ತಿದೆ.
ಹೊಸದಾಗಿ ಬಿಡುಗಡೆಗೊಳ್ಳಲಿರುವ ಫೈವ್ ಡೋರ್ ಥಾರ್ ಈಗಿರುವ ಮೂರು ಡೋರ್ ಥಾರ್‌ನ ಮುಂದುವರೆದ ಆವೃತ್ತಿಯಾಗಿದ್ದು ಹೆಚ್ಚಿನ ಜನರನ್ನು ತನ್ನತ್ತ ಸೆಳೆಯುವ ನಿರೀಕ್ಷೆಯಿದೆ. ಕೆಲವೇ ತಿಂಗಳ ಹಿಂದೆ ಮಾರುತಿ ಸುಜುಕಿಯ ಐದು ಡೋರ್ ನ ಆಫರ್‌ರೋಡರ್ ಜಿಮ್ನಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು ಈ ಹೊಸ ಥಾರ್‌ನಿಂದ ಜಿಮ್ನಿ ಭಾರೀ ಪೈಪೋಟಿ ಎದುರಿಸಬೇಕಾಗುತ್ತದೆ.
ಹೊಸ ಥಾರ್‌ನಲ್ಲಿ ಈಗಿರುವ ಥಾರ್‌ನಲ್ಲಿ ಇರುವಂತೆ ನಾಲ್ಕು ಜನ ಕುಳಿತುಕೊಳ್ಳುವ ವ್ಯವಸ್ಥದಯ ಬದಲು ಐದು ಜನ ವಿಶಾಲವಾಘಿ ಕುಳಿತುಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ಬರಲಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದ್ದು, ಒಂದೊಮ್ಮೆ ಇದರಲ್ಲಿ ಪ್ರಯಾಣಿಕರಿಗೆ ಮೂರನೇ ಸಾಲು ಸಹ ಲಭ್ಯವಾಗಬಹುದು ಎಂಬ ಶಂಕೆಗಳು ವ್ಯಕ್ತವಾಗುತ್ತಿದೆ. ಹೀಗಾದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಥಾರ್ ಭಾರೀ ಸದ್ದು ಮಾಡಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications