ತೀರಾ ಅಗ್ಗದ ಬೆಲೆಯಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಭಾರತ ನಿರ್ಮಿತ ಇವಿ ಕಾರು: ಚಿತ್ರಗಳು ಬಿಡುಗಡೆ!
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಟಾಟಾ ಹಾಗೂ ಮಹೀಂದ್ರಾ ಬಿಟ್ಟರೇ ಬಹುತೇಕ ವಿದೇಶಿ ಬ್ರಾಂಡ್‌ಗಳ ಎಲೆಕ್ಟ್ರಿಕ್ ಕಾರುಗಳೇ ದೇಶದಲ್ಲಿ ಹೆಚ್ಚಾಗಿವೆ. ಇದೀಗ ಸ್ವದೇಶಿ ನಿರ್ಮಿತ ಅಗ್ಗದ ಬೆಲೆಯ ಹೊಸ ಎಲೆಕ್ಟ್ರಿಕ್ ಕಾರನ್ನು ನಾವು ಶೀಘ್ರದಲ್ಲೇ ನೋಡಲಿದ್ದೇವೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿ ನೋಡೋಣ.
ಜೆನ್ಸೊಲ್ ಇವಿ, ಜೆನ್ಸೊಲ್ ಎಂಜಿನೀಯರಿಂಗ್ ಲಿಮಿಟೆಡ್ (Gensol EV, Gensol Engineering Ltd)ನ ಹೊಸ ಅಂಗಸಂಸ್ಥೆ - ಅಹಮದಾಬಾದ್ ಮೂಲದ ಸೋಲಾರ್ ಕಂಪನಿ, ತನ್ನ ಮೊದಲ ಸಂಪೂರ್ಣ - ಎಲೆಕ್ಟ್ರಿಕ್ ಕಾರಿನ ಟೀಸರ್ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ಸಂಪೂರ್ಣ ಭಾರತ ನಿರ್ಮಿತ ಎಲೆಕ್ಟ್ರಿಕ್ ಕಾರನ್ನು ಶೀಘ್ರದಲ್ಲೇ ಅನಾವರಣಗೊಳಿಸುವುದಾಗಿ ಕಂಪನಿ ಹೇಳಿದೆ.

ಎಲೆಕ್ಟ್ರಿಕ್ ವೆಹಿಕಲ್ ರೈಡ್ ಹೇಲಿಂಗ್ ಸ್ಟಾರ್ಟ್ಅಪ್ ಬ್ಲೂಸ್ಮಾರ್ಟ್ ಸಂಸ್ಥಾಪಕರಿಂದ ಈ ಎಲೆಕ್ಟ್ರಿಕ್ ಕಾರಿನ ಪ್ರಚಾರ ಮಾಡಲಾಗಿದ್ದು, ಜೆನ್ಸೋಲ್ ಈಗ ವಾಹನ ತಯಾರಿಕಾ ಕ್ಷೇತ್ರವನ್ನು ಪ್ರವೇಶಿಸುತ್ತಿದೆ. ಅದರ ಮೊದಲ ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಕಾರನ್ನು ಮಾರ್ಚ್ 2024 ರಲ್ಲಿ ಸಂಪೂರ್ಣವಾಗಿ ಅನಾವರಣಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ.
ಅನಾವರಣಕ್ಕೆ ಇನ್ನೂ ಸುಮಾರು ಮೂರು ತಿಂಗಳುಗಳ ಬಾಕಿ ಇದ್ದು, ಈಗ ಹೊರಬಂದಿರುವ Gensol EV ಎಲೆಕ್ಟ್ರಿಕ್ ಕಾರಿನ ಟೀಸರ್ ಚಿತ್ರಗಳನ್ನು ಆಧರಿಸಿ ಏನೆಲ್ಲಾ ನಿರೀಕ್ಷಿಸಬಹುದು ಎಂಬುದನ್ನು ಇಲ್ಲಿ ನೋಡೋಣ. ಟೀಸರ್ ಚಿತ್ರದಲ್ಲಿ ಕಾರನ್ನು ನೋಡಿದ್ರೆ ಈಗ ಅಸ್ತಿತ್ವದಲ್ಲಿರುವ ಹೊಸ ಎಲೆಕ್ಟ್ರಿಕ್ ಕಾರುಗಳಂತೆಯೇ ಅತ್ಯಾಧುಕಿನ ವೈಶಿಷ್ಟ್ಯಗಳು ಹಾಗೂ ಆಧುನಿಕ ಡಿಸೈನ್ ಅನ್ನು ಹೊಂದಿರುವಂತಿದೆ.

ಹೊಸ Gensol EV ಕಾರು LED ಹೆಡ್‌ಲೈಟ್‌ಗಳು, ಅಲಾಯ್ ವೀಲ್‌ಗಳು, ಸಾಂಪ್ರದಾಯಿಕ ಡೋರ್ ಹ್ಯಾಂಡಲ್‌ಗಳು, ಬ್ಲ್ಯಾಕ್ಡ್ ಔಟ್ ರೂಫ್ ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ಹೊಂದಿದೆ. ಒಳಭಾಗದಲ್ಲಿ ಆಂಡ್ರಾಯ್ಡ್ ಓಎಸ್‌ನಂತೆ ಕಾಣುವ ದೊಡ್ಡ ಫ್ರೀ-ಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು EV ಪಡೆದಿರುವಂತೆ ತೋರುತ್ತಿದೆ.
ಕೆಲ ವಿಶೇಷತೆಗಳು ಬಹಿರಂಗ: ಮುಂಬರುವ Gensol EV ಕಾರಿನ ಕೆಲವು ವೈಶಿಷ್ಟ್ಯಗಳನ್ನು ಟೀಸರ್ ಚಿತ್ರಗಳಲ್ಲಿ ಬಹಿರಂಗಪಡಿಸಲಾಗಿದೆ. ಹೊಸ ಇವಿ ಕಾರು 80 kmph ಗರಿಷ್ಠ ವೇಗದ ಜೊತೆಗೆ 200 km ರೇಂಜ್ ನೀಡುತ್ತದೆ ಎಂದು ಹೇಳಲಾಗಿದೆ. ಜೆನ್ಸೋಲ್ ಎಲೆಕ್ಟ್ರಿಕ್ ಕಾರ್ ಆಗಮನದ ನಂತರ ಭಾರತದಲ್ಲಿ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರ್ ಆಗಬಹುದು ಎಂದು ಈ ವಿಶೇಷಣಗಳು ಸೂಚಿಸುತ್ತಿವೆ.

ಬ್ಲೂಸ್ಮಾರ್ಟ್ ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಜೆನ್ಸೋಲ್ ರಿನ್ಯೂವಬಲ್ ಎನರ್ಜಿ ಗ್ರೂಪ್‌ನ ಸಂಸ್ಥಾಪಕ ಅನ್ಮೋಲ್ ಸಿಂಗ್ ಜಗ್ಗಿ ಈ ಹಿಂದೆ ಎಲೆಕ್ಟ್ರಿಕ್ ಕಾರಿನ ಬೆಲೆ ಸುಮಾರು 5 ರಿಂದ 6 ಲಕ್ಷ ರೂ. ನಡುವೆ ಇರಲಿದೆ ಎಂದು ತಿಳಿಸಿದ್ದರು. ಅಲ್ಲದೇ ಜೆನ್ಸೋಲ್ ಎಲೆಕ್ಟ್ರಿಕ್ ಕಾರು ಮಾರುತಿ ಸುಜುಕಿ ವ್ಯಾಗನ್ಆರ್ ನಂತಹ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್‌ನೊಂದಿಗೆ ಮುಂದುವರಿಯುತ್ತದೆ ಎಂದು ಹೇಳಿದ್ದರು.
2022 ರಲ್ಲಿ ನಡೆದ ಹೂಡಿಕೆದಾರರ ಸಭೆಯಲ್ಲಿ, ಈ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸಲು ತಾಂತ್ರಿಕ ಪರಿಣತಿಯನ್ನು ಒದಗಿಸುವ ಯುಎಸ್ ಮೂಲದ ಎಲೆಕ್ಟ್ರಿಕ್ ವಾಹನ ತಯಾರಿಕಾ ಸ್ಟಾರ್ಟ್ ಅಪ್ ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಜೆನ್ಸೋಲ್ ಘೋಷಿಸಿತ್ತು. ಆ ವೇಳೆ ರೂ. 5 ರಿಂದ 6 ಲಕ್ಷದ ಬೆಲೆಯಲ್ಲಿ ಇವಿ ಕಾರನ್ನು ನಿರ್ಮಿಸುವುದು ಕಷ್ಟವೇನಲ್ಲ ಎಂದು ಹೇಳಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








