Goodyear: ಗುಡ್ಇಯರ್ ಟೈರ್‌ಗೆ 125 ವರ್ಷಗಳ ಸಂಭ್ರಮ, ಆಕರ್ಷಕ 4 ಟೈರ್ ಬಿಡುಗಡೆ.. ವಿಶೇಷತೆಗಳೇನು?
ಅಮೆರಿಕ ಮೂಲದ ಟೈರ್ ತಯಾರಕ ಕಂಪನಿ ಗುಡ್‌ಇಯರ್ (Goodyear) 125ನೇ ವರ್ಷಾಚರಣೆ ಸಂಭ್ರಮದಲ್ಲಿದೆ. ಮಲೇಷ್ಯಾದಲ್ಲಿ ಅದ್ದೂರಿ ಸಮಾರಂಭ ಆಯೋಜಿಸಿದೆ. ವಾರ್ಷಿಕೋತ್ಸವ ಸ್ಮರಣಾರ್ಥ ನಾಲ್ಕು ಆಕರ್ಷಕ ಟೈರ್‌ಗಳನ್ನು ಏಷ್ಯಾ - ಪೆಸಿಫಿಕ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಆ ಬಗ್ಗೆ ಸಂಪೂರ್ಣ ವಿವರ ತಿಳಿಯೋಣ ಬನ್ನಿ.
ಗುಡ್‌ಇಯರ್ ಕಂಪನಿ, ವಿವಿಧ ವಾಹನ ಮಾದರಿಗಳಿಗೆ ಅನುಕೂಲವಾಗುವ ಸಲುವಾಗಿ ಈಗಲ್ ಎಫ್1 ಅಸಿಮ್ಮೆಟ್ರಿಕ್ 6 (Eagle F1 Asymmetric 6) ಎಲೆಕ್ಟ್ರಿಕ್‌ಡ್ರೈವ್ (Electricdrive), ರಾಂಗ್ಲರ್ ಡ್ಯುರಾಟೆಕ್ ಆರ್‌ಟಿ (Wrangler Duratec RT) ಹಾಗೂ ಅಶ್ಯೂರೆನ್ಸ್ ಮ್ಯಾಕ್ಸ್‌ಗಾರ್ಡ್ (Assurance Maxguard) ಹೆಸರಿನ ಟೈರ್‌ನ್ನು ಮಾರುಕಟ್ಟೆಗೆ ತಂದಿದೆ.

ಈಗಲ್ ಎಫ್1 ಟೈರ್‌ಗಳನ್ನು ಸ್ಪೋರ್ಟ್ಸ್ ಕಾರು ಹಾಗೂ ಐಷಾರಾಮಿ ಕಾರುಗಳಲ್ಲಿ ಬಳಕೆ ಮಾಡಲು ಸಾಧ್ಯವಾಗುತ್ತದೆ. ಎಲೆಕ್ಟ್ರಿಕ್‌ಡ್ರೈವ್ ಟೈರ್‌ಗಳನ್ನು ಎಲೆಕ್ಟ್ರಿಕ್ ವಾಹನಗಳಲ್ಲಿ (ಇವಿ) ಉಪಯೋಗ ಮಾಡಬಹುದು. ಹೊಸದಾದ ರಾಂಗ್ಲರ್ ಡ್ಯುರಾಟೆಕ್ ಆರ್‌ಟಿ ಟೈರ್‌ನ್ನು ಎಸ್‌ಯುವಿ ಹಾಗೂ ಪಿಕಪ್ ಟ್ರಕ್‌ಗಳಲ್ಲಿ ಬಳಸಬಹುದು. ಅಶ್ಯೂರೆನ್ಸ್ ಮ್ಯಾಕ್ಸ್‌ಗಾರ್ಡ್ ಟೈರ್‌ಗಳು ಕಾಂಪ್ಯಾಕ್ಟ್, ಮಿಡ್ ಸೈಜ್, ಎಂಟ್ರಿ ಲೆವೆಲ್ & ಐಷಾರಾಮಿ ಸೆಡಾನ್ ಗಳಿಗೆ ಸೂಕ್ತವಾಗಿವೆ.
ಹೊಚ್ಚ ಹೊಸ ಟೈರ್‌ಗಳ ಬಗ್ಗೆ ಕೊಂಚ ಕೂಲಂಕುಷವಾಗಿ ತಿಳಿಯೋಣ. 'ಎಲೆಕ್ಟ್ರಿಕ್‌ಡ್ರೈವ್' ಗುಡ್‌ಇಯರ್ ಕಂಪನಿಯ ಮೊದಲ ಇವಿ ಟೈರ್ ಆಗಿದೆ. ಇದು, ಹೆಚ್ಚು ಲೋಡ್ - ಬೇರಿಂಗ್ ಕೆಪ್ಯಾಸಿಟಿ. ಶಬ್ದ ಕಡಿತ (noise reduction) ಸೇರಿದಂತೆ ಹೆಚ್ಚು ಆಕರ್ಷಣೀಯ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಟೈರ್ ಅಳವಡಿಕೆ ಮಾಡಿದರೆ ಎಲೆಕ್ಟ್ರಿಕ್ ವಾಹನಗಳನ್ನು ಸುಲಭವಾಗಿ ಚಾಲನೆ ಮಾಡಬಹುದು. ಪ್ರಮುಖವಾಗಿ, ಇವುಗಳ ಬಳಕೆಯಿಂದ ಬಾಡಿ ರೋಲಂಗ್ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ.

ಗುಡ್ಇಯರ್ ಅಶ್ಯೂರೆನ್ಸ್ ಮ್ಯಾಕ್ಸ್‌ಗಾರ್ಡ್ ಟೈರ್ ಕುರಿತು ಹೇಳುವುದಾದರೆ, ಇದು ಗ್ರಿಪ್ ಪ್ರೊಟೆಕ್ಷನ್ ಆಗಿದೆ. ಈ ಟೈರ್ ಬಳಕೆ ಮಾಡಿ, ವಾಹನಗಳನ್ನು ಚಲಾಯಿಸಿದಾಗ ರಸ್ತೆಯ ಮೇಲೆ ಬಲವಾದ ಹಿಡಿತ ಹೊಂದಲು ಸಾಧ್ಯವಾಗುತ್ತದೆ. ಇದರೊಟ್ಟಿಗೆ, ಡ್ಯುರಾಗಾರ್ಡ್ ತಂತ್ರಜ್ಞಾನವನ್ನು ಒಳಗೊಂಡಿರುವುದರಿಂದ ಹೆಚ್ಚು ದೃಢವಾಗಿದ್ದು, ಎಂತಹ ಅನಿರಿಕ್ಷಿತ ಸನ್ನಿವೇಶದಲ್ಲೂ ವಾಹನಗಳನ್ನು ಓಡಿಸಲು ನೇರವಾಗುತ್ತದೆ.
ಹೊಸ ಈಗಲ್ ಎಫ್1 ಅಸಿಮ್ಮೆಟ್ರಿಕ್ 6 ಟೈರ್‌ಗಳನ್ನು ಸ್ಪೋರ್ಟ್ಸ್ ಮತ್ತು ಐಷಾರಾಮಿ ಕಾರುಗಳಿಗೆ ಅನುಕೂಲವಾಗುವ ಸಲುವಾಗಿಯೇ ವಿನ್ಯಾಸ ಮಾಡಲಾಗಿದೆ. ಈ ಟೈರ್ ಉಪಯೋಗಿಸಿ, ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಅವುಗಳಿಂದ ಯಾವುದೇ ರೀತಿಯ ಶಬ್ದ ಬರುವುದಿಲ್ಲ. ವಿವಿಧ ಹವಾಮಾನ ಪರಿಸ್ಥಿತಿಯಲ್ಲೂ ವಾಹನಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯವಾಗಿದ್ದು, ಐಷಾರಾಮಿ ಕಾರುಗಳಿಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ.

ಅಂತಿಮವಾಗಿ, ಗುಡ್‌ಇಯರ್ ರಾಂಗ್ಲರ್ ಡ್ಯುರಾಟ್ರಾಕ್ ಆರ್‌ಟಿ ಟೈರ್‌ಗಳ ಬಗ್ಗೆ ಮಾತನಾಡೋಣ. ಇದನ್ನು ಕಂಪನಿಯು ಪ್ರತ್ಯೇಕವಾಗಿ, ಎಸ್‌ಯುವಿ ಹಾಗೂ ಪಿಕಪ್ ಟ್ರಕ್‌ಗಳ ಬಳಕೆಗಾಗಿಯೇ ಡಿಸೈನ್ ಮಾಡಿದೆ. ಇದರಲ್ಲಿ ಟ್ರೈ-ಶೀಲ್ಡ್ ತಂತ್ರಜ್ಞಾನವಿದ್ದು, ಯಾವುದೇ ರಸ್ತೆಯಲ್ಲೂ ವಾಹನ ಚಲಾಯಿಸಲು ಅನುವು ಮಾಡಿಕೊಡುತ್ತದೆ. ಮುಖ್ಯವಾಗಿ ಆಫ್-ರೋಡ್ ನಲ್ಲಿಯೂ ಸುಲಭವಾಗಿ ವಾಹನಗಳನ್ನು ಓಡಿಸಬಹುದು. ಇನ್ನು, 125ನೇ ವರ್ಷಾಚರಣೆ ಸಂಭ್ರಮದಲ್ಲಿರುವ ಕಂಪನಿಯು, ನಾಲ್ಕು ಟೈರ್ ಮೂಲಕ ಅಬ್ಬರಿಸಲು ಸಿದ್ದವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








