Honda Amaze: ಹೊಸ ನವೀಕರಣಗಳೊಂದಿಗೆ ಬೆಲೆ ಏರಿಕೆ ಪಡೆದುಕೊಂಡ ಈ ಜನಪ್ರಿಯ ಹೋಂಡಾ ಕಾರು

Honda Amaze (ಹೋಂಡಾ ಅಮೇಜ್) ಕಾರಿನ ಬೆಲೆಯನ್ನು ಏಪ್ರಿಲ್ 1 ರಿಂದ ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಹೆಚ್ಚಿಸಲಿದೆ, ಹೋಂಡಾ ಅಮೇಜ್ BS6 ಹಂತ 2 ಎಂಜಿನ್ ನವೀಕರಣವನ್ನು ಪಡೆದುಕೊಳ್ಳಲಿದೆ. ಇದರ ಜೊತೆ ಈ ಜನಪ್ರಿಯ ಹೋಂಡಾ ಅಮೇಜ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ,

ಹೋಂಡಾ ಕಂಪನಿಯು ತನ್ನ ಅಮೇಜ್ ಕಾರಿನ ಬೆಲೆಯು ರೂ.12,000 ವರೆಗೆ ಬೆಲೆ ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆಯು ರೂಪಾಂತರವನ್ನು ಅವಲಂಭಿಸಿ ಹೆಚ್ಚಿಸಲಾಗುತ್ತದೆ. ಅಮೇಜ್ ಕಾರಿನಲ್ಲಿ ನೀಡಲಾದ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು BS6 ಹಂತ 2 ಅಥವಾ RDE ಮಾನದಂಡಗಳನ್ನು ಪೂರೈಸಲು ನವೀಕರಿಸಲಾಗುತ್ತದೆ. ಪೆಟ್ರೋಲ್ ಎಂಜಿನ್ 89 ಬಿಹೆಚ್‍ಪಿ ಪವರ್ ಮತ್ತು 110 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೋಂಡಾ ಕಾರು

ಪ್ರಸ್ತುತ, ಇದು ಭಾರತದಲ್ಲಿ ಅತ್ಯಂತ ಕೈಗೆಟುಕುವ ಹೋಂಡಾ ಕಾರು ಆಗಿದೆ. ಹೋಂಡಾ ಕಾಂಪ್ಯಾಕ್ಟ್-ಸೆಡಾನ್ ಹಳೆಯ ಮಾದರಿಯ ಮೇಲೆ ಅಮೇಜ್ ಫೇಸ್‌ಲಿಫ್ಟ್‌ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿದೆ. ಹೊಸ ಮುಂಭಾಗದ ಬಂಪರ್, ಹೊಸ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಸಿ-ಆಕಾರದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳನ್ನು ಹೊಂದಿವೆ.

ಹೋಂಡಾ ಕಾಂಪ್ಯಾಕ್ಟ್-ಸೆಡಾನ್ ಹಳೆಯ ಮಾದರಿಯ ಮೇಲೆ ಅಮೇಜ್ ಫೇಸ್‌ಲಿಫ್ಟ್‌ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಗಳನ್ನು ಈ ಹಿಂದಿದೆ ಮಾಡಿದೆ. ಹೊಸ ಮುಂಭಾಗದ ಬಂಪರ್, ಹೊಸ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಸಿ-ಆಕಾರದ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳನ್ನು ಹೊಂದಿವೆ. ಇದರ ಒಳಭಾಗದಲ್ಲಿ ಶುದ್ಧ ಗಾಳಿಗಾಗಿ ಅಪ್‌ಗ್ರೇಡ್ ಕ್ಯಾಬಿನ್ ಫಿಲ್ಟರ್ ಅನ್ನು ಸೇರಿಸಿದೆ.

ಹೋಂಡಾ ಕಾರು

ಡ್ಯಾಶ್‌ಬೋರ್ಡ್‌ನಲ್ಲಿ ಸ್ಯಾಟಿನ್ ಸಿಲ್ವರ್ ಅಸ್ಸೆಂಟ್, ಕ್ಲೈಮೇಂಟ್ ಕಂಟ್ರೋಲ್, ಹೋಂಡಾ ಸ್ಮಾರ್ಟ್ ಕೀ ಮತ್ತು ಪುಶ್-ಬಟನ್ ಸ್ಟಾರ್ಟ್ ಅನ್ನು ಹೊಂದಿದೆ. ಇದರೊಂದಿಗೆ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವಾಯ್ಸ್ ಕಮಾಂಡ್‌ಗಳು ಸೇರಿದಂತೆ ಇತರ ಫೀಚರ್ಸ್ ಗಳನ್ನು ಕೂಡ ಒಳಗೊಂಡಿದೆ, ಈ ಹೋಂಡಾ ಅಮೇಜ್ ಕಾರಿನಲ್ಲಿ ಸುರಕ್ಷತೆಗಾಗಿ ಹಲವಾರು ಫೀಚರ್ಸ್ ಗಳನ್ನು ನೀಡಿದ್ದಾರೆ.

ಸುರಕ್ಷತೆಗಾಗಿ ಇಬಿಡಿ, ISOFIX ಚೈಲ್ಡ್ ಸೀಟ್ ಆಂಕರ್‌ಗಳೊಂದಿಗೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಸೀಟ್-ಬೆಲ್ಟ್ ರಿಮೈಂಡರ್ ಗಳನ್ನು ಹೊಂದಿದೆ. ಈ ಹೋಂಡಾ ಅಮೇಜ್ ಕಾರು ಮೆಟಿರಾಯ್ಡ್ ಗ್ರೇ, ಪ್ಲಾಟಿನಂ ಪರ್ಲ್ ವೈಟ್, ಲೂನಾರ್ ಸಿಲ್ವರ್, ಗೋಲ್ಡನ್ ಬ್ರೌನ್ ಮತ್ತು ರೇಡಿಯಂಟ್ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಹೋಂಡಾ ಕಾರು

ಹಿಂದಿನ ಮಾದರಿಗೆ ಹೋಲಿಸಿದರೆ ಪ್ರಸ್ತುತ ಹೋಂಡಾ ಅಮೇಜ್ ಫೇಸ್‌ಲಿಫ್ಟ್‌ ಕಾರಿನ ಆಯಾಮದಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ, ಇದು ಒಟ್ಟಾರೆ 3,995 ಮಿಮೀ ಉದ್ದ, 1,695 ಮಿಮೀ ಅಗಲ ಮತ್ತು 1,498 ಮಿಮೀ ಎತ್ತರವನ್ನು ಉಳಿಸಿಕೊಂಡಿದೆ. ಇನ್ನು ಈ ಕಾರು 2,470 ಮಿಮೀ ವ್ಹೀಲ್‌ಬೇಸ್ ಉದ್ದವನ್ನು ಹೊಂದಿದೆ. ಹೋಂಡಾ ಅಮೇಜ್ ಕಾರಿನ ಹೊರಭಾಗವನ್ನು ಹೊಳೆಯುವ ಕ್ರೋಮ್ ಹೈಲೈಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಇವುಗಳನ್ನು ORVM ಗಳು, ಟೈಲ್ ಲ್ಯಾಂಪ್‌ಗಳು, ಟ್ರಂಕ್, ಡೋರ್ ವಿಸರ್, ವಿಂಡೋ ಲೈನ್ ಮತ್ತು ಡೋರುಗಳ ಕೆಳಗಿನ ಭಾಗದಲ್ಲಿ ಹೊಂದಬಹುದು.. ಸೊಗಸಾದ ಟ್ರಂಕ್ ಸ್ಪಾಯ್ಲರ್, ಬಾಡಿ ಸೈಡ್ ಮೋಲ್ಡಿಂಗ್, ಡೋರ್ ಹ್ಯಾಂಡಲ್ ಪ್ರೊಟೆಕ್ಟರ್, ಮಡ್ ಫ್ಲಾಪ್ಸ್ ಮತ್ತು ಬಂಪರ್ ಪ್ರೊಟೆಕ್ಟರ್‌ಗಳನ್ನು ಕೂಡ ಆಯ್ಕೆ ಮಾಡಬಹುದು. ಈ ಕಾರಿನ ಒಳಬಾಗಕ್ಕೆ ಆರು ಸೀಟ್ ಕವರ್‌ಗಳು ಮತ್ತು ಮೂರು ಮ್ಯಾಟ್‌ಗಳನ್ನು ಆಯ್ಕೆ ಮಾಡಬಹುದು.

Article Published On: Monday, March 27, 2023, 11:07 [IST]
English summary
Honda amaze price hike from april 2023 details
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+