ಪ್ರಮುಖ ಕಾರು ತಯಾರಕ ಹೋಂಡಾದಿಂದ ಬಿಗ್ ಅನೌನ್ಸ್‌ಮೆಂಟ್
'ಹೋಂಡಾ' ಜಪಾನ್ ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದ್ದು, ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅಮೇಜ್, ಸಿಟಿ ಮತ್ತು WR-V ಕಾರುಗಳ ಮೇಲೆ ಈ ಮಾರ್ಚ್ ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ರಿಯಾಯಿತಿಯನ್ನು ಘೋಷಿಸಿದೆ. ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಮೊದಲಿಗೆ ಹೋಂಡಾ ಅಮೇಜ್ ಕಾಂಪ್ಯಾಕ್ಟ್ ಸೆಡಾನ್ ಉತ್ತಮ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಒಟ್ಟು ರೂ.26,000 ಡಿಸ್ಕೌಂಟ್ ಪಡೆದಿದೆ. ಅದರಲ್ಲಿ ರೂ.10,000 ನಗದು ರಿಯಾಯಿತಿ, ರೂ.10,000 ಎಕ್ಸ್ಚೇಂಜ್ ಬೋನಸ್, ಹಾಗೂ ರೂ.6,000 ಕಾರ್ಪೊರೇಟ್ ರಿಯಾಯಿತಿ ದೊರೆಯಲಿದೆ. ಇದು ಕೈಗೆಟುಕುವ ಬೆಲೆಯ ಕಾರಾಗಿರುವುದರಿಂದ ರೂ.6.89 ಲಕ್ಷದಿಂದ ರೂ.9.48 ಲಕ್ಷ ಎಕ್ಸ್ ಶೋ ರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದೆ.

ಈ ಹೋಂಡಾ ಅಮೇಜ್, 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 90 PS ಗರಿಷ್ಠ ಪವರ್ ಹಾಗೂ 110 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ CVT ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿದೆ. E, S, ಹಾಗೂ VX ಎಂಬ ಮೂರು ರೂಪಾಂತರಗಳಲ್ಲಿ ಖರೀದಿಗೆ ದೊರೆಯಲಿದ್ದು, 18.3 - 18.6 kmpl ಮೈಲೇಜ್ ನೀಡುತ್ತದೆ.
ಈ ಸೆಡಾನ್, ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ ಸೇರಿದಂತೆ ಐದು ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ. ಜೊತೆಗೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. 7 ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್ಸ್ ಹೊಂದಿದೆ. ಸುರಕ್ಷತೆ ದೃಷ್ಟಿಯಿಂದ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ಸ್, ABS, EBD, ರೇರ್ ಪಾರ್ಕಿಂಗ್ ಸೆನ್ಸರ್ಸ್ ಹಾಗೂ ರೇರ್ ವ್ಯೂ ಕ್ಯಾಮೆರಾವನ್ನು ಹೊಂದಿದೆ.
ದೇಶಾದ್ಯಂತ ಮುಂಬರಲಿರುವ ಕಟ್ಟುನಿಟ್ಟಿನ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಹೋಂಡಾ ಕಂಪನಿ WR-V ಉತ್ಪಾದನೆಯಲ್ಲಿ ನಿಲ್ಲಿಸಿದೆ. ಹಳೆಯ ಸ್ಟಾಕ್ ಖಾಲಿ ಮಾಡಲು ರೂ.70,000 ವರೆಗೆ ರಿಯಾಯಿತಿ ನೀಡುತ್ತಿದೆ. ಇದು 2022ರ ಮಾದರಿಗಳಿಗೆ ಮಾತ್ರ ಅನ್ವಯಿಸುತ್ತದೆ. ಆದರೆ, 2023ರ ಮಾದರಿ ಮೇಲೆ ಯಾವುದೇ ರಿಯಾಯಿತಿ ನೀಡಿಲ್ಲ. ಈ ಹೋಂಡಾ WR-V ಸೆಡಾನ್ ರೂ.9.11 ಲಕ್ಷದಿಂದ ರೂ.12.31 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಈ ಕಾರು, ಎರಡು ರೂಪಾಂತರಗಳಲ್ಲಿ ದೊರೆಯಲಿದೆ. ಅವುಗಳೆಂದರೆ, SV ಹಾಗೂ VX. ಇದರ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, 1.2 ಲೀಟರ್ ಪೆಟ್ರೋಲ್ ಎಂಜಿನ್ 90 PS ಪವರ್, 110 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 1.5 ಲೀಟರ್ ಡೀಸೆಲ್ಎಂಜಿನ್ 100 PS ಗರಿಷ್ಠ ಪವರ್, 200 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದ್ದು, 16.5 - 23.7 kmpl ಮೈಲೇಜ್ ನೀಡುತ್ತದೆ.
ಹೋಂಡಾ WR-V ವೈಶಿಷ್ಟ್ಯಗಳನ್ನು ನೋಡುವುದಾದರೆ, ಇದು 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಕ್ರೂಸ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಹಾಗೂ ಆಕರ್ಷಕ ಸನ್‌ರೂಫ್ ಪಡೆದುಕೊಂಡಿದೆ. ಸುರಕ್ಷತೆಗಾಗಿ ಡ್ಯೂಯಲ್ ಏರ್ ಬಾಗ್ಸ್, ABS, EBD ಹಾಗೂ ರೇರ್ ಪಾರ್ಕಿಂಗ್ ಸೆನ್ಸಾರ್ಸ್ ಅನ್ನು ಪಡೆದಿದೆ.
5ನೇ ಜನರೇಷನ್ ನ ಹೋಂಡಾ ಸಿಟಿ ಫೇಸ್‌ಲಿಫ್ಟ್, ರೂ.1.3 ಲಕ್ಷಗಳ ರಿಯಾಯಿತಿಯನ್ನು ಪಡೆದುಕೊಂಡಿದೆ. ಆದರೆ, 2022ರ ಮಾದರಿಗಳಿಗೆ ಮಾತ್ರ ಅನ್ವಯವಾಗಲಿದೆ. ಹತ್ತಿರದ ಡೀಲರ್‌ಶಿಪ್‌ಗೆ ಭೇಟಿ ನೀಡುವ ಮೂಲಕ ರಿಯಾಯಿತಿ ಸೌಲಭ್ಯದ ಬಗ್ಗೆ ಮಾಹಿತಿ ಪಡೆಯಬಹುದು. ವರದಿ ಪ್ರಕಾರ, ಹೋಂಡಾ, ಜಾಝ್ ಕಾರಿನ ಉತ್ಪಾದನೆಯನ್ನು ಈಗಾಗಲೇ ಸ್ಥಗಿತಗೊಳಿಸಿದೆ. ಹಳೆಯ ಸ್ಟಾಕ್ ಮಾತ್ರ ಮಾರಾಟವಾಗುತ್ತಿದ್ದು, ಸ್ಥಳೀಯ ಶೋರೂಂಗೆ ತೆರಳಿ, ರಿಯಾಯಿತಿ ಕುರಿತಂತೆ ವಿಚಾರಿಸಬಹುದು.


Click it and Unblock the Notifications