ಕಳೆದ ತಿಂಗಳ ಕಾರು ಮಾರಾಟದಲ್ಲಿ ಕುಸಿತ ಕಂಡ ಹೋಂಡಾ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ 2023ರ ಫೆಬ್ರವರಿ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, ಕಳೆದ ತಿಂಗಳು ಹೋಂಡಾ ಕಂಪನಿಯು ಒಟ್ಟು 7,059 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಆದರೂ ಹೋಂಡಾ ಕಾರುಗಳ ಮಾರಾಟದಲ್ಲಿ ಕುಸಿತವನ್ನು ಕಂಡಿದೆ.
ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 6,086 ವಾಹನಗಳು ಮಾರಾಟವಾಗಿದ್ದರೆ, ಉಳಿದ 973 ಯುನಿಟ್‌ಗಳನ್ನು ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡಲಾಗಿದೆ. ವಾರ್ಷಿಕ ಪ್ರಮಾಣದಲ್ಲಿ, ಮಾರಾಟವು ಶೇಕಡಾ 15 ರಷ್ಟು ಕಡಿಮೆಯಾಗಿದೆ, ಇನ್ನು ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ 9,524 ಯುನಿಟ್‌ಗಳನ್ನು ಮಾರಾಟ ಮಾಡಿದ್ದರು. ಹಲವು ಕಾರಣಗಳಿಂದ ಹೋಂಡಾ ಕಾರುಗಳ ಮಾರಾಟದಲ್ಲಿ ಕುಸಿತವನ್ನು ಕಂಡಿದೆ.

ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಮಾರಾಟದ ನಿರ್ದೇಶಕ ಯುಯಿಚಿ ಮುರಾಟಾ, "ಫೆಬ್ರವರಿ 2023 ರಲ್ಲಿ ನಮ್ಮ ಮಾರಾಟದ ಕಾರ್ಯಕ್ಷಮತೆಯು ನಮ್ಮ ಮಾದರಿಗಳನ್ನು ಹೊಸ ಹೊರಸೂಸುವಿಕೆಗೆ ತಡೆರಹಿತವಾಗಿ ಪರಿವರ್ತಿಸುವ ನಮ್ಮ ಯೋಜನೆಯ ಭಾಗವಾಗಿದೆ. ನಾವು ಪ್ರಸ್ತುತ ಹೊಸ ಹೋಂಡಾ ಸಿಟಿ ಕಾರು ಮೂಲಕ ಗ್ರಾಹಕರಿಗೆ ಹೊಸ ಉತ್ಸಾಹ ಮತ್ತು ಆಕರ್ಷಕ ಆಯ್ಕೆಗಳನ್ನು ಸೃಷ್ಟಿಸುತ್ತದೆ ಎಂದು ನಾವು ನಂಬುತ್ತೇವೆ ಎಂದು ಹೇಳಿದರು.
ಹೋಂಡಾ ಕಾರ್ಸ್ ತನ್ನ ಬಹುನಿರೀಕ್ಷಿತ 2023ರ ಸಿಟಿ ಫೇಸ್‌ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಹೋಂಡಾ ಸಿಟಿ ಸೆಡಾನ್‌ನ ನವೀಕರಿಸಿದ ಮಾದರಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.11.49 ಲಕ್ಷದಿಂದ ಪ್ರಾರಂಭವಾಗುತ್ತವೆ. ಹೋಂಡಾ ಎರಡು ಹೊಸ ಎಂಟ್ರಿ ಲೆವೆಲ್ ಟ್ರಿಮ್‌ಗಳನ್ನು ಫೇಸ್‌ಲಿಫ್ಟೆಡ್ ಆವೃತ್ತಿಯೊಂದಿಗೆ ಪರಿಚಯಿಸಿದೆ. ಜಪಾನಿನ ವಾಹನ ತಯಾರಕರು ಸಿಟಿ ಸೆಡಾನ್ ಕಡಿಮೆ ವೆಚ್ಚದಲ್ಲಿ ADAS ತಂತ್ರಜ್ಞಾನವನ್ನು ಪರಿಚಯಿಸಿದೆ.
ಈ ಹೊಸ 2023ರ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರಿನ ಹೈಬ್ರಿಡ್ ರೂಪಾಂತರದ ಲೈನ್‌ನ ಬೆಲೆಯು ರೂ.20.39 ಲಕ್ಷವಾಗಿದೆ, ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಈ ಬೆಲೆಯು ಸಿಟಿ ಕಾರಿನ ಹಿಂದಿನ ಮಾದರಿಗಿಂತ 35 ಸಾವಿರ ರೂ. ದುಬಾರಿಯಾಗಿದೆ. ಈ ಹೊಸ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರು SV, V, VX ಮತ್ತು ZX ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ.
ಹೊಸ ನವೀಕರಣದೊಂದಿಗೆ ಸೆಡಾನ್ ವಿಭಾಗದಲ್ಲಿ ಜನಪ್ರಿಯ ಸಿಟಿ ಕಾರಿನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಹೋಂಡಾ ಪ್ರಯತ್ನಿಸುತ್ತಿದೆ. ವಿಶಿಷ್ಟವಾದ ಹೋಂಡಾ ಶೈಲಿಯಲ್ಲಿ, ಸಿಟಿ ಫೇಸ್‌ಲಿಫ್ಟ್‌ನಲ್ಲಿನ ಬದಲಾವಣೆಗಳು ಬಹಳ ಸೂಕ್ಷ್ಮವಾಗಿದೆ. ಹೋಂಡಾ ಕಂಪನಿಯು ಈ ಕಾರಿನಲ್ಲಿ ಕೆಲವು ಫೀಚರ್ಸ್ ಮತ್ತು ಹೊಸ ತಂತ್ರಜ್ಞಾನವನ್ನು ಪರಿಚಯಿಸುವಲ್ಲಿ ಹೆಚ್ಚು ಗಮನಹರಿಸಿದ್ದಾರೆ. ಈ ಹೊಸ ಹೋಂಡಾ ಸಿಟಿ ಫೇಸ್‌ಲಿಫ್ಟ್‌ನೊಂದಿಗೆ, ಹೋಂಡಾದ ಪ್ರಮುಖ ಬದಲಾವಣೆಯು ಅದರ ಮುಂಭಾಗದ ಬಂಪರ್‌ನಲ್ಲಿದೆ.
ಅದರ ಹೊರತಾಗಿ, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಲ್ಲಿ ಕೆಲವು ಕೃತಕ ಕಾರ್ಬನ್ ಫೈಬರ್ ಬಿಟ್‌ಗಳನ್ನು ಅಳವಡಿಸಿದೆ. ಈ ಹೊಸ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರಿನಲ್ಲಿ ಮುಂಭಾಗದಲ್ಲಿ, ಬಂಪರ್ ಅನ್ನು ಈಗ ಸ್ವಲ್ಪ ಸ್ಪೋರ್ಟಿಯರ್ ಮಾಡಲಾಗಿದೆ. ಅದರ ಬಾನೆಟ್ ಶಟ್ ಲೈನ್‌ನ ಕೆಳಗಿರುವ ದಪ್ಪ ಕ್ರೋಮ್ ಸ್ವಲ್ಪ ಚಿಕ್ಕದಾಗಿದೆ. ಇದು ಸಿಟಿ ಕಾರಿನ ಮುಂಭಾಗವನ್ನು ಮತ್ತಷ್ಟು ಸ್ಪೋರ್ಟಿ ಆಗಿ ಕಾಣುವಂತೆ ಮಾಡಿದೆ.
ಈ ಕಾರಿನಲ್ಲಿ ಸ್ವಲ್ಪ ದೊಡ್ಡದಾದ ಗ್ರಿಲ್ ಅನ್ನು ನೀಡಿದೆ. ಈ ಕಾರಿನ ಬಂಪರ್‌ನ ಕೆಳಗಿನ ಅರ್ಧವನ್ನು ಸ್ವಲ್ಪಮಟ್ಟಿಗೆ ಪರಿಷ್ಕರಿಸಲಾಗಿದೆ. ಈ ಹೊಸ ಸಿಟಿ ಫೇಸ್‌ಲಿಫ್ಟ್ ಕಾರಿನಲ್ಲಿ 1.5-ಲೀಟರ್, ನ್ಯಾಚುರಲ್-ಆಸ್ಪೈರಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 120 bhp ಪವರ್ ಮತ್ತು 145 Nm ಟಾರ್ಕ್ ಅನ್ನು ಉತ್ಪಾದಿಸುವುದನ್ನು ಮುಂದುವರೆಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು CVT ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.


Click it and Unblock the Notifications