Honda Elevate: ಒಂದೇ ದಿನದಲ್ಲಿ ಬರೋಬ್ಬರಿ 100 ಹೋಂಡಾ ಎಲಿವೇಟ್ ಎಸ್‌ಯುವಿಗಳ ವಿತರಣೆ

ಹೋಂಡಾ ಕಾರ್ಸ್ ಇಂಡಿಯಾ ತನ್ನ ಹೊಸ ಮಧ್ಯಮ ಗಾತ್ರದ SUV ಎಲಿವೇಟ್‌ನ ವಿತರಣೆಯನ್ನು ಪ್ರಾರಂಭಿಸಿದೆ. ಹೈದರಾಬಾದ್‌ನಲ್ಲಿ ಇತ್ತೀಚೆಗೆ ಬೃಹತ್ ಕಾರ್ಯಕ್ರಮ ನಡೆಸಿ ಬರೋಬ್ಬರಿ 100 ಎಸ್‌ಯುವಿಗಳನ್ನು ವಿತರಿಸಲಾಗಿದೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ SUV ವಿಭಾಗಕ್ಕೆ ಹೋಂಡಾ ಎಲಿವೇಟ್ ಅನ್ನು ಪ್ರಮುಖ ಮಾದರಿಯಾಗಿ ತಯಾರಕರು ಬಿಡುಗಡೆ ಮಾಡಿದ್ದಾರೆ.

ಇದು ಕಂಪನಿಯ ಭಾರತದ ಪೋರ್ಟ್‌ಫೋಲಿಯೊದಲ್ಲಿ ಹೋಂಡಾ ಅಮೇಜ್ ಮತ್ತು ಹೋಂಡಾ ಸಿಟಿ ಮಾದರಿಗಳನ್ನು ಸೇರುತ್ತದೆ. ರೂ. 11 ಲಕ್ಷ ಮತ್ತು ರೂ. 16 ಲಕ್ಷ (ಎಕ್ಸ್ ಶೋ ರೂಂ, ದೆಹಲಿ) ಬೆಲೆ ಶ್ರೇಣಿಯಲ್ಲಿ ಲಭ್ಯವಿರುವ ಹೋಂಡಾ ಎಲಿವೇಟ್ ಮುಂಬರುವ ಹಬ್ಬದ ಸೀಸನ್‌ನಲ್ಲಿ ವಾಹನ ತಯಾರಕರ ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

honda-elevate-100-suvs-delivery-in-one-day

ಹೋಂಡಾ ಎಲಿವೇಟ್ ಎಸ್‌ಯುವಿಗಾಗಿ ಮುಂದಿನ ಕೆಲವು ವಾರಗಳಲ್ಲಿ ದೇಶದ ವಿವಿಧ ಪ್ರದೇಶಗಳಲ್ಲಿ ಹಲವಾರು ಮೆಗಾ ಡೆಲಿವರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಾರು ತಯಾರಕರು ತಿಳಿಸಿದ್ದಾರೆ. ಇದು ಹೋಂಡಾ ಎಲಿವೇಟ್‌ಗೆ ಗ್ರಾಹಕರಿಂದ ವ್ಯಕ್ತವಾಗಿರುವ ಪ್ರತಿಕ್ರಿಯೆ ಎಂಬುದನ್ನು ತೋರಿಸಲು ಕಂಪನಿಯು ಈ ರೀತಿಯ ದೊಡ್ಡ ಮಟ್ಟದ ಡೆಲಿವರಿ ಕಾರ್ಯಕ್ರಮಗಳನ್ನು ಯೋಜಿಸಿದೆ.

ಹೊಸ ಹೋಂಡಾ ಎಲಿವೇಟ್ (Honda Elevate) ಎಸ್‍ಯುವಿಯನ್ನು ಭಾರತಿಯ ಮಾರುಕಟ್ಟೆಯಲ್ಲಿ ರೂ.10,99,900 (ಎಕ್ಸ್ ಶೋರೂಂ) ಆರಂಭಿಕ ಬೆಲೆಗೆ ಪರಿಚಯಿಸಲಾಗಿದೆ. ಇದರ ಟಾಪ್ ಎಂಡ್ ವೆರಿಯಂಟ್ ಬೆಲೆಯು (ಎಕ್ಸ್ ಶೋರೂಂ) ರೂ.16 ಲಕ್ಷವಿದೆ. ಈ ಹೊಸ ಎಸ್‍ಯುವಿ SV, V, VX ಮತ್ತು ZX ಎಂಬ ನಾಲ್ಕು ಟ್ರಿಮ್ ಹಂತಗಳಲ್ಲಿ ಲಭ್ಯವಿದೆ.

honda-elevate-100-suvs-delivery-in-one-day

ಹೊಸ ಹೋಂಡಾ ಎಲಿವೇಟ್ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಫೋಕ್ಸ್‌ವ್ಯಾಗನ್ ಟೈಗುನ್ ಮತ್ತು ಸ್ಕೋಡಾ ಕುಶಾಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಇತ್ತಿಚೆಗಷ್ಟೇ ಬಿಡುಗಡೆಯಾಗಿರುವುದರಿಂದ ಮುಂಬರುವ ತಿಂಗಳುಗಳ ಮಾರಾಟದ ಮೂಲಕ ಎಷ್ಟು ಬೇಡಿಕೆಯಿದೆ ಎಂಬುದು ತಿಳಿದುಬರಲಿದೆ.

ಹೊಸ ಹೋಂಡಾ ಎಲಿವೇಟ್ 1.5-ಲೀಟರ್, ಡಿಒಹೆಚ್‌ಸಿ, 4-ಸಿಲಿಂಡರ್, ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಮೇಲೆ ತಿಳಿಸಿದಂತೆ ಈ ಎಂಜಿನ್ 5ನೇ ತಲೆಮಾರಿನ ಹೋಂಡಾ ಸಿಟಿಯಲ್ಲೂ ಲಭ್ಯವಿದೆ. ಹೋಂಡಾ ಪ್ರಕಾರ, ಹೋಂಡಾ ಎಲಿವೇಟ್ ಎಸ್‍ಯುವಿ ಮ್ಯಾನುವಲ್ ರೂಪಾಂತರವು 15.31 ಕಿ.ಮೀ ಮೈಲೇಜ್ ನೀಡಿದರೆ, CVT ರೂಪಾಂತರವು 16.92 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

honda-elevate-100-suvs-delivery-in-one-day

ಎಸ್‌ಯುವಿಯು ರೂಪಾಂತರಗಳ ಅನುಗುಣವಾಗಿ ಫಿಚರ್ಸ್ ಗಳನ್ನು ಒಳಗೊಂಡಿದೆ. SV ರೂಪಾಂತರದಲ್ಲಿ, ಬೀಜ್ ಫ್ಯಾಬ್ರಿಕ್ ಅಪ್ಹೋಲ್ಸ್ಟರಿ ಮತ್ತು 60:40 ಸ್ಪ್ಲಿಟ್ ಹಿಂಬದಿ ಸೀಟುಗಳನ್ನು ಹೊಂದಿವೆ. ಇದರೊಂದಿಗೆ ಆಟೋ AC ವಿಟ್ hPM 2.5 ಕ್ಯಾಬಿನ್ ಏರ್ ಪ್ಯೂರಿಫೈಯಿಂಗ್ ಫಿಲ್ಟರ್, ಎಂಜಿನ್ ಪುಶ್ ಬಟನ್ ಜೊತೆಗೆ ಹೋಂಡಾ ಸ್ಮಾರ್ಟ್ ಎಂಟ್ರಿ ಸಿಸ್ಟಮ್, ಡ್ಯುಯಲ್ ಫ್ರಂಟ್ SRS ಏರ್‌ಬ್ಯಾಗ್‌ಗಳು, LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು LED ಟೈಲ್‌ಲ್ಯಾಂಪ್‌ಗಳಿವೆ.

ಈ ಹೊಸ ಎಸ್‍ಯುವಿಯ V ರೂಪಾಂತರದಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ವೈರ್‌ಲೆಸ್ ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಹೋಂಡಾ ಕನೆಕ್ಟ್ ಹೊಂದಿದೆ. ಇದರೊಂದಿಗೆ 8-ಸ್ಪೀಕರ್ ಆಡಿಯೊ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಮತ್ತು HFT ಸ್ವಿಚ್‌ಗಳು, ಮಲ್ಟಿ-ಆಂಗಲ್ ರಿಯರ್ ವ್ಯೂ ಕ್ಯಾಮೆರಾ ಮತ್ತು ಇತರ ಫೀಚರ್ಸ್ ಗಳನ್ನು ಹೊಂದಿವೆ.

ಹೋಂಡಾ ಎಲಿವೇಟ್ ಎಸ್‍ಯುವಿಯ VX ರೂಪಾಂತರದಲ್ಲಿ 7 ಇಂಚಿನ HD ಬಣ್ಣದ TFT ಮೀಟರ್ ಕ್ಲಸ್ಟರ್, ವೈರ್‌ಲೆಸ್ ಸ್ಮಾರ್ಟ್‌ ಫೋನ್ ಚಾರ್ಜರ್, 6 ಸ್ಪೀಕರ್ ಆಡಿಯೊ ಸಿಸ್ಟಮ್, ಲೇನ್ ವಾಚ್ ಕ್ಯಾಮೆರಾ ಮತ್ತು ಒನ್ ಟಚ್ ಎಲೆಕ್ಟ್ರಿಕ್ ಸನ್‌ರೂಫ್ ಆಟೋವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

More from DriveSpark

Article Published On: Monday, September 11, 2023, 11:58 [IST]
English summary
Honda elevate 100 suvs delivery in one day
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+