Hondaದ ಕಡಿಮೆ ಬೆಲೆಯ ಹೊಸ SUV ಹೆಸರು ಬಹಿರಂಗ: ಇದಕ್ಕೆ ಸವಾಲ್ ಹಾಕಲು ಸಾಧ್ಯವೇ?

ಭಾರತದಲ್ಲಿ 'ಹೋಂಡಾ' ಕಾರುಗಳು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿವೆ. ಕಂಪನಿಯು ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಮಾದರಿಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಸದ್ಯ, ಮುಂಬರುವ ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿರುವ ಹೊಸ ಮಿಡ್ ಸೈಜ್ ಎಸ್‌ಯುವಿ ಹೆಸರನ್ನು ಬಹಿರಂಗಪಡಿಸಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಹೋಂಡಾ ಕಾರ್ಸ್ ಇಂಡಿಯಾ, ನೂತನ ಮಿಡ್ ಸೈಜ್ ಎಸ್‌ಯುವಿಗೆ ಎಲಿವೇಟ್ (Elevate) ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದೆ. ಈ ಬಗ್ಗೆ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಿದ್ದು, ಹೊಸ ಎಸ್‌ಯುವಿ ಮುಂದಿನ ತಿಂಗಳು ಜಾಗತಿಕವಾಗಿ ಅನಾವರಣಗೊಳ್ಳಲಿದ್ದು, ವರ್ಷಾಂತ್ಯದಲ್ಲಿ ಮಾರಾಟ ಶುರುವಾಗಲಿದೆ. ಇದು, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಸೇರಿದಂತೆ ವಿವಿಧ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

Hondaದ ಕಡಿಮೆ ಬೆಲೆಯ ಹೊಸ SUV ಹೆಸರು ಬಹಿರಂಗ: ಇದಕ್ಕೆ ಸವಾಲ್ ಹಾಕಲು ಸಾಧ್ಯವೇ?

ಹೊಂಡದ ಹೊಸ ಎಲಿವೇಟ್ ಎಸ್‌ಯುವಿ ಎಂಜಿನ್ ಬಗ್ಗೆ ಹೇಳುವುದಾದರೆ, ಇದು 1.5 ಲೀಟರ್ 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 121 PS ಗರಿಷ್ಠ ಪವರ್ ಹಾಗೂ 145 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿರಲಿದೆ. 6 ಸ್ವೀಡ್ ಮ್ಯಾನುವಲ್ ಹಾಗೂ CVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು.

ಈ ಬಾರಿ ಹೋಂಡಾ ಕಂಪನಿಯು ಬಹುತೇಕ ಗ್ರಾಹಕರು ಇಷ್ಟಪಡುವ ಡೀಸೆಲ್ ಎಂಜಿನ್ ಆಯ್ಕೆಯನ್ನು ಈ ಕಾರಿನಲ್ಲಿ ನೀಡುತ್ತಿಲ್ಲ ಎಂದು ವರದಿಯಾಗಿದೆ. ಇದು ಕೊಂಚ ಮಟ್ಟಿಗೆ ಗ್ರಾಹಕರಿಗೆ ಬೇಸರ ತರಿಸಬಹುದು. ಆದರೂ, ಹೊಸ ಎಸ್‌ಯುವಿಯನ್ನು ಹೆಚ್ಚಿನ ಮೈಲೇಜ್ ನೀಡಲು ಸಾಧ್ಯವಾಗುವಂತೆ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ನೊಂದಿಗೆ ನವೀಕರಿಸಿ, ಲಾಂಚ್ ಮಾಡಬಹುದು. ಆ ಬಗ್ಗೆ ಖಚಿತತೆ ಇಲ್ಲ.

ಈಗಾಗಲೇ ಭಾರತದ ರಸ್ತೆಗಳಲ್ಲಿ ಹೊಸ ಎಸ್‌ಯುವಿಯನ್ನು ಹಲವಾರು ಬಾರಿ ಪರೀಕ್ಷಿಸಲಾಗಿದೆ. ಆದರೆ, ವಿನ್ಯಾಸದ ಬಗ್ಗೆ ಅಷ್ಟಾಗಿ ಮಾಹಿತಿ ಲಭ್ಯವಾಗಿಲ್ಲ. ಇದು ಐದನೇ ತಲೆಮಾರಿನ ಹೋಂಡಾ ಸಿಟಿ ಸೆಡಾನ್ ಪ್ಲಾಟ್‌ಫಾರ್ಮ್ ಅನ್ನೇ ಆಧರಿಸಿರಲಿದ್ದು, ಆಕರ್ಷಕ LED ಹೈಡ್ ಲೈಟ್ಸ್, LED DRLs ಹಾಗೂ ದೊಡ್ಡದಾದ ಗ್ರೀಲ್ ಹೊಂದಿರುವ ಸಾಧ್ಯತೆ ಇದ್ದು, ಈ ಕಾರು, 4.2 ರಿಂದ 4.3 ಮೀಟರ್ ಉದ್ಧವಿರಬಹುದು.

ಹೋಂಡಾದ ಎಲಿವೇಟ್ ಎಸ್‌ಯುವಿ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಪ್ರಮುಖವಾಗಿ 10 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆತ್ಯಾಧುನಿಕ ಸನ್ ರೊಫ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ವೈರ್ ಲೆಸ್ ಚಾರ್ಜಿಂಗ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್ ಪಡೆದಿರಲಿದೆ.

ನೂತನ ಎಸ್‌ಯುವಿ ಬೆಲೆ ಬಗ್ಗೆ ಒಂದಷ್ಟು ವಿಚಾರಗಳನ್ನು ಹೇಳುವುದಾದರೆ, ಇದು ಗ್ರಾಹಕರ ಕೈಗೆಟುಕುವ ದರದಲ್ಲಿ ಖರೀದಿಗೆ ಲಭ್ಯವಾಗಲಿದೆ. ಬಹುತೇಕ ರೂ.8 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಸಿಗಬಹುದು. ಮುಂದಿನ ತಿಂಗಳು ಅಂದರೆ, ಜೂನ್ 6ರಂದು ಜಾಗತಿಕವಾಗಿ ಪ್ರದರ್ಶನಗೊಳ್ಳಲಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಕಂಪನಿ ಕಡೆಯಿಂದ ಅಧಿಕೃತ ಮಾಹಿತಿ ಬಂದಿಲ್ಲ.

ಒಟ್ಟಾರೆ, ಹೋಂಡಾ ತನ್ನ ಮುಂಬರಲಿರುವ ಮಿಡ್ ಸೈಜ್ ಎಸ್‌ಯುವಿಗೆ ಎಲಿವೇಟ್ ಎಂದು ಹೆಸರಿಡುವ ಮೂಲಕ ಪ್ರತಿಸ್ಪರ್ಧಿ ಕಂಪನಿ ಕಾರುಗಳಿಗೆ ಪ್ರಬಲ ಸವಾಲ್ ಒಡ್ಡಲು ಪ್ರಯತ್ನಿಸುತ್ತಿದೆ. ಈಗಾಗಲೇ ಈ ವಿಭಾಗದಲ್ಲಿ ಮಾರುತಿ ಸುಜುಕಿಯ ಗ್ರ್ಯಾಂಡ್ ವಿಟಾರಾ ವೇಗವಾಗಿ ಮುನ್ನುಗುತ್ತಿದ್ದು, ಅದಕ್ಕೆ ಯಾವ ರೀತಿಯಲ್ಲಿ ಪೈಪೋಟಿ ನೀಡಲಿದೆ ಎಂಬುದು ಕೆಲವೇ ತಿಂಗಳಲ್ಲಿ ತಿಳಿಯಲಿದೆ.

Article Published On: Wednesday, May 3, 2023, 18:15 [IST]
English summary
Honda elevate name confirmed new suv details
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+