ಭರ್ಜರಿ ಮೈಲೇಜ್‌ನೊಂದಿಗೆ ಧೂಳಿಬ್ಬಿಸಲು ಸಜ್ಜಾದ ಹೊಸ ಹೋಂಡಾ ಎಸ್‍ಯುವಿ: ಮಾರುತಿ-ಟೊಯೊಟಾಗೆ ಆತಂಕ ಶುರು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ ತನ್ನ ಹೊಸ ಮಿಡ್ ಸೈಜ್ ಎಸ್‍ಯುವಿಯನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಹೊಸ ಹೋಂಡಾ ಎಲಿವೇಟ್ ಎಸ್‍ಯುವಿಯು ಜೂನ್ 6 ರಂದು ನವ ದೆಹಲಿಯಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ. ಐದು-ಸೀಟರ್ ಬ್ರ್ಯಾಂಡ್‌ನ ಪರಿಮಾಣದ ಮಾರಾಟಕ್ಕೆ ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ.

ಹೋಂಡಾ ಎಲಿವೇಟ್ ಐದನೇ ತಲೆಮಾರಿನ ಸಿಟಿಯೊಂದಿಗೆ ಹಲವಾರ ಸಾಮ್ಯತೆಗಳನ್ನು ಹೊಂದಿರುತ್ತದೆ. ಹೋಂಡಾ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಅಮೇಜ್ ಮತ್ತು ಸಿಟಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಮಿಡ್ ಸೈಜ್ ಎಸ್‍ಯುವಿಯು ಈಗಾಗಲೇ ಸ್ಪಾಟ್ ಟೆಸ್ಟ್ ನಡೆಸುತ್ತಿರುವಾಗ ಹಲವು ಬಾರಿ ಕಾಣಿಸಿಕೊಂಡಿದೆ. ಈ ಹೊಸ ಹೋಂಡಾ ಎಲಿವೇಟ್ ಎಸ್‍ಯುವಿಯಲ್ಲಿ ಸಿಟಿ ಸೆಡಾನ್‌ನಿಂದ ಎರವಲು ಪಡೆದ 1.5 ಲೀಟರ್, ನ್ಯಾಚುರಲ್ ಆಸ್ಪರರ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಇದನ್ನು ನೀಡಬಹುದು ಎಂದು ಹೇಳಲಾಗುತ್ತಿದೆ.

Honda Elevate

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು CVT ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಎಂಜಿನ್ 126 bhp ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಾರು ತಯಾರಕರು ಎಸ್‍ಯುವಿಯನ್ನು ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ತರಬಹುದು ಎಂದು ಹೇಳಲಾಗುತ್ತಿದೆ. ಇನ್ನು 1.5 ಲೀಟರ್ ಪೆಟ್ರೋಲ್ ಅಟ್ಕಿನ್ಸನ್ ಸೈಕಲ್, ಮತ್ತು eCVT ಗೇರ್‌ಬಾಕ್ಸ್. ಸಿಟಿ ಹೈಬ್ರಿಡ್‌ನಲ್ಲಿ, ಸೆಟಪ್ 126 bhp ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೋಂಡಾ ಎಲಿವೇಟ್ ಕಾರು 25 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಎರಡೂ ಪವರ್‌ಟ್ರೇನ್‌ಗಳು RDE ಮಾನದಂಡಗಳನ್ನು ಮತ್ತು E20 ಕಂಪ್ಲೈಂಟ್‌ಗಳನ್ನು ಪೂರೈಸುತ್ತವೆ. NA ಪೆಟ್ರೋಲ್ ಯುನಿಟ್ 17.8 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಇದರ ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಯು 27.13 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಮಾರುತಿ-ಟೊಯೋಟಾ ಸೋದರಸಂಬಂಧಿಗಳಾದ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್ ಸ್ಟ್ರಾಂಗ್ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿವೆ.

ಈ ಮಾರುತಿ-ಟೊಯೋಟಾ ಸೋದರಸಂಬಂಧಿಗಳು 1.5-ಲೀಟರ್ ಪೆಟ್ರೋಲ್-ಹೈಬ್ರಿಡ್ ಎಂಜಿನ್ ಅನ್ನು ಪಡೆಯುತ್ತವೆ, ಇದು 27.97 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇನ್ನು ಹೋಂಡಾ ಮಿಡ್ ಸೈಜ್ ಎಸ್‍ಯುವಿಯು ಈಗಾಗಲೇ ಸ್ಪಾಟ್ ಟೆಸ್ಟ್ ನಡೆಸುತ್ತಿರುವಾಗ ಹಲವು ಬಾರಿ ಕಾಣಿಸಿಕೊಂಡಿದೆ. ಇದು ಸುಮಾರು 4.2-4.3 ಮೀಟರ್ ಉದ್ದವನ್ನು ಹೊಂದಿದೆ. ಹೋಂಡಾ ಎಲಿವೇಟ್ ಕಳೆದ ವರ್ಷ ಪರಿಚಯಿಸಲಾದ ಇತ್ತೀಚಿನ CR-V ಮತ್ತು ಹೊಸ ತಲೆಮಾರಿನ WR-V ನಂತಹ ಎಸ್‍ಯುವಿಗಳಂತಹ ಜಾಗತಿಕ ಮಾದರಿಗಳ ಪ್ರೇರಣೆಯನ್ನು ಪಡೆದುಕೊಂಡಿದೆ.

ಈ ಹೊಸ ಹೋಂಡಾ ಎಲಿವೇಟ್ ಎಸ್‌ಯುವಿಯನ್ನು ಭಾಗಶಃ ಎಲ್‌ಇಡಿ ಡಿಆರ್‌ಎಲ್‌ಗಳು, ಸನ್‌ರೂಫ್, ಶಾರ್ಕ್ ಫಿನ್ ಆಂಟೆನಾ ಮತ್ತು ಸ್ಪೋರ್ಟಿ ರಿಯರ್ ವಿಭಾಗದೊಂದಿಗೆ ಅದರ ನಯವಾದ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಂತೆ ಬಹಿರಂಗಪಡಿಸಿದೆ. ಈ ಎಸ್‍ಯುವಿಯು ದಪ್ಪವಾದ ಬಾಡಿ ಕ್ಲಾಡಿಂಗ್, ಬ್ಲ್ಯಾಕ್ಡ್-ಔಟ್ ಪಿಲ್ಲರ್‌ಗಳು, ಪ್ರಮುಖ ವ್ಹೀಲ್ ಅರ್ಚಾರ್, ಅಲಾಯ್ ವ್ಹೀಲ್ಸ್ ಮತ್ತು ಹೊಸ-ಜನ್ WR-V (ಗ್ಲೋಬಲ್-ಸ್ಪೆಕ್) ಅನ್ನು ಹೋಲುವ ಟೈಲ್‌ಲ್ಯಾಂಪ್‌ಗಳನ್ನು ಹೊಂದಿರುತ್ತದೆ ಎಂದು ಸ್ಪೈ ಚಿತ್ರಗಳು ಬಹಿರಂಗಪಡಿಸಿದೆ..

ಇನ್ನು ಈ ಹೊಸ ಹೋಂಡಾ ಎಲಿವೇಟ್ ಐದನೇ-ಜನರೇಷನ್ ಸಿಟಿಯಂತೆಯೇ ಅದೇ ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿರುತ್ತದೆ. ಇನ್ನು ಈ ಹೋಂಡಾ ಎಲಿವೇಟ್ ಎಸ್‍ಯುವಿ ಹಿಂಭಾಗವು WR-V ಅನ್ನು ಹೋಲುವಂತೆ ಕಾಣುತ್ತದೆ ಮತ್ತು ಸುತ್ತುವ ಟೈಲ್ ಲ್ಯಾಂಪ್‌ಗಳು ಮತ್ತು ಸ್ವಲ್ಪ ಮಸ್ಕಲರ್ ಟೈಲ್‌ಗೇಟ್. ಹೋಂಡಾ ಎಲಿವೇಟ್ ಐದನೇ ಜನರೇಷನ್ ಸಿಟಿಯಂತೆಯೇ ಅದೇ ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿರುತ್ತದೆ. ಬೆಲೆಗೆ ಸಂಬಂಧಿಸಿದಂತೆ, ಇದರ ಎಂಟ್ರಿ ಲೆವೆಲ್ ರೂಪಾಂತರವು ಸುಮಾರು 12 ಲಕ್ಷ ರೂಪಾಯಿಗಳಾಗಿರುತ್ತದೆ.

ಈ ಹೊಸ ಹೋಂಡಾ ಎಲಿವೇಟ್ ಎಸ್‍ಯುವಿಯಲ್ಲಿ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಇಂಟಿಗ್ರೇಷನ್‌ನೊಂದಿಗೆ ದೊಡ್ಡ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.ಈ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು ಮತ್ತು ADAS ನ ಸೂಟ್ ಅನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಡ್ರೈವರ್ ಅಸಿಸ್ಟ್ ಮತ್ತು ಇತರ ಸುರಕ್ಷತಾ ತಂತ್ರಜ್ಞಾನಗಳನ್ನು ಹೊಂದಿರುವುದಿಲ್ಲ,

More from DriveSpark

Article Published On: Thursday, May 25, 2023, 8:30 [IST]
English summary
Honda elevate suv coming with more fuel efficient details
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+