Honda Elevate: ಬಿಡುಗಡೆಗೂ ಮುನ್ನವೇ ಬಹುನೀರಿಕ್ಷಿತ ಹೋಂಡಾ ಎಲಿವೇಟ್ ಕಾರಿನ ಮೈಲೇಜ್ ಬಹಿರಂಗ!

ಭಾರತದಲ್ಲಿ ಹೋಂಡಾ (Honda) ಕಾರುಗಳಿಗೆ ದೊಡ್ಡಮಟ್ಟದ ಅಭಿಮಾನಿ ಬಳಗವಿದೆ. ಕಂಪನಿಯು ತನ್ನ ಬಹುನೀರಿಕ್ಷಿತ ಮಿಡ್ ಸೈಜ್ ಎಸ್‌ಯುವಿ ಎಲಿವೇಟ್ (Elevate) ಬಿಡುಗಡೆಗೆ ಎಲ್ಲ ರೀತಿಯ ಸಿದ್ದತೆಯನ್ನು ನಡೆಸುತ್ತಿದ್ದು, ಎಲ್ಲರಿಗೂ ಕುತೂಹಲವಿರುವ ಈ ಕಾರಿನ ಮೈಲೇಜ್ (mileage) ಬಗ್ಗೆ ಒಂದಷ್ಟು ವಿವರಗಳು ಲಭ್ಯವಾಗಿವೆ.

ಹೋಂಡಾ ಕಾರ್ ಇಂಡಿಯಾ, ಭಾರೀ ನಿರೀಕ್ಷೆಯೊಂದಿಗೆ ಜೂನ್ 6ರಂದು ದೇಶೀಯ ಮಾರುಕಟ್ಟೆಯಲ್ಲಿ ಎಲಿವೇಟ್ ಎಸ್‌ಯುವಿಯನ್ನು ಅನಾವರಣಗೊಳಿಸಿತ್ತು. ಈಗಾಗಲೇ, ಕಂಪನಿಯ ಸಿಟಿ ಹಾಗೂ ಅಮೇಜ್ ಕಾರುಗಳು ಯಶಸ್ವಿಯಾಗಿ ಮಾರಾಟವಾಗುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಎಲಿವೇಟ್ ಬರುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಆ ಬಳಿಕ ಒಂದೆರೆಡು ವಾರಗಳಲ್ಲಿ ವಿತರಣೆ ಶುರುವಾಗಲಿದೆ.

Honda Elevate: ಬಿಡುಗಡೆಗೂ ಮುನ್ನವೇ ಬಹುನೀರಿಕ್ಷಿತ ಹೋಂಡಾ ಎಲಿವೇಟ್ ಕಾರಿನ ಮೈಲೇಜ್ ಬಹಿರಂಗ!

ನೂತನ ಹೋಂಡಾ ಎಲಿವೇಟ್, ಸಿಟಿ ಸೆಡಾನ್ ಆಧಾರಿತ 1.5 ಲೀಟರ್ ಗ್ಯಾಸೋಲಿನ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 119 bhp ಗರಿಷ್ಠ ಪವರ್ ಮತ್ತು 145 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 6 ಸ್ಪೀಡ್ ಮ್ಯಾನುವಲ್ ಅಥವಾ CVT ಗೇರ್‌ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.

ಎಲ್ಲರೂ ನೀರಿಕ್ಷೆಯಿಟ್ಟುಕೊಂಡಿರುವ ಮೈಲೇಜ್ ವಿಷಯವಾಗಿ ಮಾತನಾಡುವುದಾದರೆ, ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿರುವ ಹೋಂಡಾ ಎಲಿವೇಟ್, 15.31 kmpl ಹಾಗೂ CVT ಗೇರ್‌ಬಾಕ್ಸ್ ಹೊಂದಿರುವ ಕಾರು, 16.92 kmpl ಮೈಲೇಜ್ ನೀಡುತ್ತದೆ ಎಂದು ವರದಿಯಾಗಿದೆ. ಬೆಲೆ ವಿಚಾರವಾಗಿ ಹೇಳುವುದಾದರೆ, ಎಲಿವೇಟ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದ್ದು, ರೂ.12 ಲಕ್ಷ ಆಸುಪಾಸಿನಲ್ಲಿ ಸಿಗಬಹುದು ಎಂದು ಅಂದಾಜಿಸಲಾಗಿದೆ.

Honda Elevate: ಬಿಡುಗಡೆಗೂ ಮುನ್ನವೇ ಬಹುನೀರಿಕ್ಷಿತ ಹೋಂಡಾ ಎಲಿವೇಟ್ ಕಾರಿನ ಮೈಲೇಜ್ ಬಹಿರಂಗ!

ಹೋಂಡಾ ಎಲಿವೇಟ್ ಎಸ್‌ಯುವಿ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಮುಂಭಾಗ ಎಲ್ಇಡಿ DRLs, ಫಾಕ್ಸ್ ಸ್ಕಿಡ್ ಪ್ಲೇಟ್‌ಗಳೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್ಸ್ ಪಡೆದಿದೆ. ಜೊತೆಗೆ ಬ್ಲ್ಯಾಕ್ ಫಿನಿಶ್ ಹೊಂದಿರುವ ಮಲ್ಟಿ ಸ್ಪೋಕ್ ಅಲಾಯ್ ವೀಲ್ಸ್, ಶಾರ್ಕ್ ಫಿನ್ ಆಂಟೆನಾವನ್ನು ಒಳಗೊಂಡಿದೆ. ಹಿಂಭಾಗ ಬಂಪರ್ ಮೌಂಟೆಡ್ ರಿಫ್ಲೆಕ್ಟರ್ಸ್, ವೈಪರ್ & ವಾಷರ್, ಟೈಲ್‌ಗೇಟ್ ಮೌಂಟೆಡ್ ನಂಬರ್ ಪೇಟ್ ಹೋಲ್ಡರ್‌ ಅನ್ನು ಹೊಂದಿದೆ.

ನೂತನ ಹೋಂಡಾ ಎಲಿವೇಟ್ ಭರ್ಜರಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ, 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 ಇಂಚಿನ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಫೋನ್ ಚಾರ್ಜರ್, ಕನೆಕ್ಟೆಡ್ ಕಾರ್ ಟೆಕ್, ಎಲೆಕ್ಟ್ರಿಕ್ ಸನ್‌ರೂಫ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಹಾಗೂ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿಂದಂತೆ ಹತ್ತಾರು ಫೀಚರ್ಸ್ ಹೊಂದಿದೆ.

Honda Elevate: ಬಿಡುಗಡೆಗೂ ಮುನ್ನವೇ ಬಹುನೀರಿಕ್ಷಿತ ಹೋಂಡಾ ಎಲಿವೇಟ್ ಕಾರಿನ ಮೈಲೇಜ್ ಬಹಿರಂಗ!

ಸುರಕ್ಷತೆಯ ದೃಷ್ಟಿಯಿಂದಲ್ಲೂ ಈ ಕಾರು ಅತ್ಯುತ್ತಮವಾಗಿದ್ದು, ಏರ್ ಬಾಗ್ಸ್, ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಹೊಂದಿದೆ. ಫೀನಿಕ್ಸ್ ಆರೆಂಜ್ ಪರ್ಲ್, ಅಬ್ಸಿಡಿಯನ್ ಬ್ಲೂ, ರೇಡಿಯಂಟ್ ರೆಡ್, ಪ್ಲಾಟಿನಂ ವೈಟ್, ಗೋಲ್ಡನ್ ಬ್ರೌನ್, ಲೂನಾರ್ ಸಿಲ್ವರ್ ಮತ್ತು ಮೆಟಿರೊಯ್ಡ್ ಗ್ರೇ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.

ಇನ್ನು, ಬಹುನೀರಿಕ್ಷಿತ ಹೋಂಡಾ ಎಲಿವೇಟ್ ಕಾರಿನ ಮೈಲೇಜ್ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ ಎಂದು ಹೇಳಬಹುದು. ಈ ಕಾರಿಗೆ ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್‌ಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.

More from DriveSpark

Article Published On: Tuesday, July 25, 2023, 12:07 [IST]
English summary
Honda elevate suv mileage revealed details
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+