ಜಪಾನ್‌ ಬೀದಿಗಳಲ್ಲಿ ಧೂಳೆಬ್ಬಿಸಲಿದೆ ಮೇಡ್ ಇನ್ ಇಂಡಿಯಾ ಕಾರು... 5 ಜನರಿಗೆ ಬೆಸ್ಟ್ SUV!

ಭಾರತದಲ್ಲಿ ತಯಾರಾದ ಕಾರುಗಳನ್ನು ಇಂದು ಜಾಗತಿಕವಾಗಿ ಮಾರಾಟ ಮಾಡಲಾಗುತ್ತಿದೆ. ಹಲವು ಕಾರು ಕಂಪನಿಗಳು ಭಾರತದಲ್ಲಿ ತಯಾರಾದ ಕಾರುಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡುತ್ತಿವೆ. ವಿಶ್ವಾದ್ಯಂತ ಆಟೋಮೊಬೈಲ್ ಕಂಪನಿಗಳಿಗೆ ಭಾರತವು ಉತ್ಪಾದನಾ ಕೇಂದ್ರವಾಗಿದ್ದು, ಹೋಂಡಾ ಕೂಡ ತನ್ನ ಹೊಸ ಮಾದರಿಯನ್ನು ಜಪಾನ್‌ಗೆ ರಫ್ತು ಮಾಡಲಿದೆ.

ಹೌದು ಶೀಘ್ರದಲ್ಲೇ ಹೋಂಡಾ ಕಾರ್ಸ್ ಇಂಡಿಯಾ ತನ್ನ ಹೊಸ SUV ಅನ್ನು ಭಾರತದಿಂದ ರಫ್ತು ಮಾಡಲಿದೆ ಎಂದು ವರದಿಯಾಗಿದೆ. ಭಾರತದಲ್ಲಿ ತಯಾರಿಸಿದ ಕಾರನ್ನು ವಿದೇಶಕ್ಕೆ ರಫ್ತು ಮಾಡುವ ಕ್ರಮವು ಭಾರತೀಯ ಕಾರ್ಯಾಚರಣೆಗಳ ಉತ್ಪಾದನಾ ಸಾಮರ್ಥ್ಯಗಳ ಬಲವಾದ ಪ್ರತಿಬಿಂಬವಾಗಿದೆ ಮತ್ತು ಭಾರತವನ್ನು ತನ್ನ ವ್ಯಾಪಾರಕ್ಕಾಗಿ ಪ್ರಮುಖ ರಫ್ತು ಕೇಂದ್ರವನ್ನಾಗಿ ಮಾಡುವ ಹೋಂಡಾದ ದೃಷ್ಟಿಯನ್ನು ಬಲಪಡಿಸುತ್ತದೆ ಎಂದು ಕಂಪನಿ ಹೇಳಿದೆ.

honda-elevate-to-be-launched-soon-in-japan-details

ಕಂಪನಿಯು ತನ್ನ ರಾಜಸ್ಥಾನದ ತಪುಕರ ಸ್ಥಾವರದಿಂದ ದೇಶೀಯ ಮತ್ತು ವಿದೇಶಿ ರಫ್ತು ಅಗತ್ಯಗಳನ್ನು ಪೂರೈಸಬಹುದು. ಹೋಂಡಾ ಕಾರ್ಸ್ ಇಂಡಿಯಾ ಈ ವರ್ಷದ ಸೆಪ್ಟೆಂಬರ್‌ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಎಲಿವೇಟ್ ಅನ್ನು ಬಿಡುಗಡೆ ಮಾಡಿತು. ಇದಕ್ಕೆ ಉನ್ನತ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದ್ದರಿಂದ ಈ ಎಸ್‌ಯುವಿಯನ್ನು ಹೊರ ದೇಶಗಳಿಗೆ ರಫ್ತು ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ.

ಹೋಂಡಾ ಎಲಿವೇಟ್ ರಫ್ತು: ಭಾರತ-ನಿರ್ಮಿತ ಹೋಂಡಾ ಎಲಿವೇಟ್ ಅನ್ನು ಜಪಾನ್‌ನಲ್ಲಿ WR-V ಎಂದು ಬಿಡುಗಡೆ ಮಾಡಲು ಹೋಂಡಾ ಸಜ್ಜಾಗುತ್ತಿದೆ ಎಂದು ತಿಳಿದುಬಂದಿದೆ. ಹೋಂಡಾ WR-V ಬಗ್ಗೆ ಮಾತನಾಡುವುದಾದ್ರೆ, ಈ ಎಸ್‌ಯುವಿ ಒಟ್ಟಾರೆ ವಿನ್ಯಾಸವು ಹೋಂಡಾ ಎಲಿವೇಟ್ ಅನ್ನು ಹೋಲುತ್ತದೆ. ಕಾರಿನ ಒಳಭಾಗ ಹಾಗೂ ಅದರ ಎತ್ತರದಲ್ಲಿ ಯಾವುದೇ ಬದಲಾವಣೆ ಇಲ್ಲದೇ ಹಾಗೇ ಇರಲಿದೆ.

honda-elevate-to-be-launched-soon-in-japan-details

ಜಪಾನ್‌ನಲ್ಲಿ ಬಿಡುಗಡೆಯಾಗಲಿರುವ WR-V ನ ಒಳಭಾಗವು ಸಂಪೂರ್ಣವಾಗಿ ಬ್ಲಾಕ್-ಔಟ್ ಥೀಮ್ ಅನ್ನು ಹೊಂದಿರುತ್ತದೆ. ಜೊತೆಗೆ ಹೊಸ ಇನ್ಫೋಟೈನ್‌ಮೆಂಟ್ ಸಿಸ್ಟಂ ಕೂಡ ಇದರಲ್ಲಿ ಅಳವಡಿಸಲಿದ್ದಾರೆ. ಈ SUV 1.5 ಲೀಟರ್ (1500cc)ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, ಎಲಿವೇಟ್‌ನಲ್ಲೂ ಅದೇ ಎಂಜಿನ್ ಬಳಸಲಾಗಿದೆ. ಈ ಎಂಜಿನ್ ಅನ್ನು ಸಿವಿಟಿ ಗೇರ್ ಬಾಕ್ಸ್ ಗೆ ಜೋಡಿಸಲಾಗುವುದು. ಇದನ್ನು 5-ಆಸನಗಳ SUV ಆಗಿ ಪರಿಚಯಿಸಲಾಗುವುದು.

ಹೋಂಡಾ ಎಲಿವೇಟ್ ಜೂನ್-ಜುಲೈ 2024 ರಲ್ಲಿ ಜಪಾನೀಸ್ ಮಾರುಕಟ್ಟೆಯನ್ನು ಪ್ರವೇಶಿಸಬಹುದು. ಭಾರತದಲ್ಲಿ ಹೋಂಡಾ ಎಲಿವೇಟ್ ಬೆಲೆ ರೂ.11 ಲಕ್ಷದಿಂದ ರೂ. 16.20 ಲಕ್ಷ (ಎಕ್ಸ್ ಶೋ ರೂಂ) ವಿದೆ. ಈ SUV ಫಾರ್ವರ್ಡ್ ವೀಲ್ ಡ್ರೈವ್ ಕಾರ್ಯದೊಂದಿಗೆ ಬರುತ್ತದೆ. ಕಂಪನಿಯು ಇದನ್ನು 3 ಡ್ಯುಯಲ್ ಟೋನ್ ಮತ್ತು 7 ಮೊನೊಟೋನ್ ಬಣ್ಣಗಳಲ್ಲಿ ಮಾರಾಟ ಮಾಡುತ್ತಿದೆ.

honda-elevate-to-be-launched-soon-in-japan-details

ಹೋಂಡಾ ಎಲಿವೇಟ್ ಎಸ್‌ಯುವಿಯ ರಿಯಲ್ ವರ್ಲ್ಡ್ ಮೈಲೇಜ್ ವಿಷಯಕ್ಕೆ ಬಂದರೆ ನಗರ ಪ್ರದೇಶದಲ್ಲಿ ಎಲಿವೇಟ್ ಪೆಟ್ರೋಲ್ MT ಮಾದರಿಯು 11.36 ಕಿ.ಮೀ ಮೈಲೇಜ್ ನೀಡುತ್ತದೆ. ಇನ್ನು ಹೆದ್ದಾರಿಯಲ್ಲಿ 18.50 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಹೋಂಡಾ ಎಲಿವೇಟ್ ಎಸ್‍ಯುವಿಯನ್ನು ಹೋಂಡಾ ಆರ್&ಡಿ ಏಷ್ಯಾ ಪೆಸಿಫಿಕ್, ಥೈಲ್ಯಾಂಡ್ ಅಭಿವೃದ್ಧಿಪಡಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

More from DriveSpark

Article Published On: Monday, November 27, 2023, 18:43 [IST]
English summary
Honda elevate to be launched soon in japan details
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+