ಹೋಂಡಾದಿಂದ ಬರಲಿದೆ 2 ಬೈಕ್, 1 ಕಾರು.. ಆ ಮೋಟಾರ್ ಸೈಕಲ್ ಬೆಲೆ ಭಾರೀ ಅಗ್ಗ

ಜಪಾನಿನ ಪ್ರಮುಖ ವಾಹನ ತಯಾರಕ ಕಂಪನಿ ಹೋಂಡಾ, ಅತುತ್ತಮ ಕಾರ್ಯಕ್ಷಮತೆ ಹೊಂದಿರುವ ವಿವಿಧ ಮಾದರಿ ವಾಹನಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವ ಮೂಲಕ ಅನೇಕರ ಮನಗೆದ್ದಿದೆ. ಶೀಘ್ರದಲ್ಲೇ ಎರಡು ಬೈಕ್ ಹಾಗೂ ಒಂದು ಕಾರನ್ನು ಲಾಂಚ್ ಮಾಡಲು ಸಿದ್ಧವಾಗಿದೆ. ಹೆಚ್ಚಿನ ಮಾಹಿತಿ ತಿಳಿಯೋಣ.

ಹೋಂಡಾ ಸಿಟಿ ಫೇಸ್‌ಲಿಫ್ಟ್: ಈ ಕಾರು, ಈಗಾಗಲೇ ದೇಶಾದ್ಯಂತ ಶೋರೊಂ ತಲುಪಿದ್ದು, ಕೊಂಚ ಮಟ್ಟಿಗೆ ನವೀಕರಣಗಳನ್ನು ಪಡೆದುಕೊಂಡಿದೆ. ಬುಕಿಂಗ್ ಕೂಡ ಆರಂಭವಾಗಿದ್ದು, ಆಸಕ್ತ ಗ್ರಾಹಕರು ಅಧಿಕೃತ ಡೀಲರ್‌ಶಿಪ್‌ ಅಥವಾ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಬಹುದು. ಈ ನೂತನ ಹೋಂಡಾ ಸಿಟಿ ಫೇಸ್‌ಲಿಫ್ಟ್ ಹೊರಭಾಗದಲ್ಲಿ ಗ್ರೀಲ್, ಫಾಗ್ ಲ್ಯಾಂಪ್ಸ್ ಹಾಗೂ ಬಂಪರ್ ಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಪಡೆದುಕೊಂಡು ಆಕರ್ಷಕವಾಗಿ ಕಾಣಿಸುತ್ತಿದೆ ಎಂದು ಹೇಳಬಹುದು.

ಹೋಂಡಾದಿಂದ ಬರಲಿದೆ 2 ಬೈಕ್, 1 ಕಾರು.. ಆ ಮೋಟಾರ್ ಸೈಕಲ್ ಬೆಲೆ ಭಾರೀ ಅಗ್ಗ

ಈ ಕಾರಿನ ಎಂಜಿನ್ ಬಹುತೇಕ ಹಿಂದಿನ ಮಾದರಿಗೆ ಹೋಲಿಕೆಯಾಗಲಿದೆ. ಆದರೆ, BSVI ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದ್ದು, 1.5 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 1.5-ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಜೊತೆಗೆ 126 hp ಗರಿಷ್ಠ ಪವರ್ ಉತ್ಪಾದಿಸಲಿದೆ. ವೈಶಿಷ್ಟ್ಯದ ವಿಚಾರಕ್ಕೆ ಬರುವುದಾದರೆ, ಇದು LED ಹೆಡ್ ಲ್ಯಾಂಪ್ಸ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ ಏರ್‌ಬ್ಯಾಗ್ಸ್ ಪಡೆದಿದೆ.

ಹೋಂಡಾ 100 ಸಿಸಿ ಬೈಕ್: ಭಾರತದ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆ ಬೈಕ್ ಲಾಂಚ್ ಮಾಡಲು ಹೋಂಡಾ ಕಂಪನಿ ಹೊರಟಿದ್ದು, ಮಾರ್ಚ್ 15ರಂದು ಮುಂಬೈನಲ್ಲಿ ಅಧಿಕೃತವಾಗಿ 100 ಸಿಸಿ ಬೈಕ್ ಅನ್ನು ಬಿಡುಗಡೆ ಮಾಡಲಿದೆ. ಇದು ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸುವ ಹೀರೋ ಸ್ಪ್ಲೆಂಡರ್ ಬೈಕ್ ಗೆ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದ್ದು, ಹೋಂಡಾದ CD 110 ಬೈಕ್ ಗಿಂತ ಕಡಿಮೆ ಬೆಲೆಯನ್ನು ಪಡೆದಿರಲಿದೆ. ವಿನ್ಯಾಸವು ಶೈನ್‌ ಬೈಕಿಗೆ ಹೋಲಿಕೆಯಾಗುತ್ತದೆ. ರೂ.74,000 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗಬಹುದು.

ಹೋಂಡಾದಿಂದ ಬರಲಿದೆ 2 ಬೈಕ್, 1 ಕಾರು.. ಆ ಮೋಟಾರ್ ಸೈಕಲ್ ಬೆಲೆ ಭಾರೀ ಅಗ್ಗ

ಈ ನೂತನ ಹೋಂಡಾ 100 ಸಿಸಿ ಬೈಕ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲ. ಆದರೆ, 97.2 ಸಿಸಿ ಸಾಮರ್ಥ್ಯದ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು. ಈ ಬೈಕ್ 65 ಕಿ.ಮೀಗಿಂತ ಹೆಚ್ಚು ಮೈಲೇಜ್ ನೀಡಲಿದೆ ಎಂದು ಅಂದಾಜಿಸಲಾಗಿದ್ದು, ಬೆಲೆಗೆ ತಕ್ಕಂತೆ ಸೆಮಿ ಡಿಜಿಟಲ್ ಕ್ಲಸ್ಟರ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ ಹಾಗೂ ಸಿಂಗಲ್ ಪೀಸ್ ಸೀಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರಬಹುದು.

ಹೋಂಡಾ CB350 ಕೆಫೆ ರೇಸರ್: ಶೀಘ್ರದಲ್ಲೇ ಈ ಬೈಕ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಗ್ಲೊಸಿ ಬ್ಲೂ/ವೈಟ್ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ವಿನ್ಯಾಸದ ದೃಷ್ಟಿಯಿಂದ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಆಕರ್ಷಕ ಹೆಡ್ ಲ್ಯಾಂಪ್, ಸಿಂಗಲ್ ಪಿಸ್ ಲೆದರ್ ಸೀಟ್ ಹಾಗೂ ಅಲಾಯ್ ವೀಲ್ಸ್ ಅನ್ನು ಹೊಂದಿದೆ. ಜೊತೆಗೆ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜರ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಈ ಬೈಕ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು BS-VI ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ 348.36 ಸಿಸಿ 4-ಸ್ಟೋಕ್ ಎಂಜಿನ್ ಹೊಂದಿದ್ದು, 21.07 PS ಗರಿಷ್ಠ ಪವರ್ ಹಾಗೂ 30 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 35 kmpl ಮೈಲೇಜ್ ನೀಡುತ್ತದೆ. ಈ ಬೈಕ್ ಬೆಲೆ ಕೊಂಚ ದುಬಾರಿಯಾಗಿದ್ದು, ರೂ.2.2 ಲಕ್ಷದಿಂದ ರೂ. 2.3 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಬಹುದು.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಹೋಂಡಾದ ಆಕ್ಟಿವಾ ಸ್ಕೂಟರ್ ಅನ್ನು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇದೀಗ, ಹೋಂಡಾ ಬಿಡುಗಡೆ ಮಾಡಲು ಹೊರಟಿರುವ ಹೋಂಡಾ 100 ಸಿಸಿ ಬೈಕ್ ಹಾಗೂ ಹೋಂಡಾ CB350 ಕೆಫೆ ರೇಸರ್ ಯುವ ಖರೀದಿದಾರರನ್ನು ಆಕರ್ಷಿಸುವ ಸಾಧ್ಯತೆ ಇದ್ದು, ಹೊಸ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರು ಉತ್ತಮವಾಗಿ ಮಾರಾಟವಾಗಬಹುದು ಎಂದು ಕಂಪನಿ ಅಂದಾಜಿಸಿದೆ.

Article Published On: Wednesday, March 1, 2023, 8:35 [IST]
English summary
Honda launches 2 bikes 1 car very soon details kannada
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+