HONDA: ಇನ್ಮುಂದೆ ಭಾರತದಲ್ಲಿ ಹೋಂಡಾದ ಈ ಕಾರುಗಳು ಖರೀದಿಗೆ ಸಿಗುವುದಿಲ್ಲ!

ಭಾರತದಲ್ಲಿ ಹೋಂಡಾ ಕಾರುಗಳಿಗೆ ತನ್ನದೇ ಆದ ವಿಶಿಷ್ಟ್ ಸ್ಥಾನವಿದೆ. ಕಳೆದ ಕೆಲ ದಶಕಗಳಿಂದ ಸಾಕಷ್ಟು ಜನಪ್ರಿಯತೆ ಪಡೆದಿರುವ ಸಿಟಿ ಸೆಡಾನ್‌ನಂತಹ ಮಾದರಿಗಳನ್ನು ಕಾಲಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದೆ. ಆದರೆ ಈಗ ಹೊಸ ನಿಯಮಗಳಿಗೆ ಅನುಗುಣವಾಗಿ ತನ್ನ ಪ್ರಮುಖ ಮಾದರಿಗಳನ್ನು ಭಾರತದಲ್ಲಿ ಕೈಬಿಟ್ಟಿದೆ.

ಹೋಂಡಾ ಜಾಝ್, ಡಬ್ಲ್ಯುಆರ್-ವಿ ಮತ್ತು ಸಿಟಿ 4 ನೇ ಜನ್ ಅನ್ನು HONDA ಕಾರ್ಸ್ ಇಂಡಿಯಾ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ. ಅಂದರೆ ಹೊಸ ಕಟ್ಟುನಿಟ್ಟಿನ ಹೊರಸೂಸುವಿಕೆ ಮಾನದಂಡಗಳಿಗೆ ಅನುಗುಣವಾಗಿ ಇವನ್ನು ಸ್ಥಗಿತಗೊಳಿಸಿದೆ ಎಂದು ಹೇಳಲಾಗುತ್ತಿದೆ. ಅಂದರೆ ಬ್ರ್ಯಾಂಡ್ ಈಗ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ ಅಮೇಜ್ ಮತ್ತು ಸಿಟಿ 5 ನೇ ಜನ್ ಅನ್ನು ಮಾತ್ರ ಮಾರಾಟ ಮಾಡಲಿದೆ ಎಂದು ಮೂಲಗಳು ಹೇಳುತ್ತಿವೆ.

HONDA: ಅಧಿಕೃತವಾಗಿ 3 ಪ್ರಮುಖ ಮಾದರಿಗಳನ್ನು ಸ್ಥಗಿತಗೊಳಿಸಿದ ಹೋಂಡಾ ಇಂಡಿಯಾ

ಕಟ್ಟುನಿಟ್ಟಾದ ಹೊರಸೂಸುವಿಕೆ ಮಾನದಂಡಗಳೊಂದಿಗೆ ಹೋಂಡಾ ತನ್ನ ಹಳೆಯ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮುಂದುವರಿಸಲು ವಿಫಲವಾಗಿದೆ ಎಂದೇ ಹೇಳಬಹುದು. ಹೋಂಡಾ 2017 ರಲ್ಲಿ ಬ್ರಿಯೊ ಮತ್ತು ಮೊಬಿಲಿಯೊವನ್ನು ಸ್ಥಗಿತಗೊಳಿಸಿತು, ನಂತರ ಅಕಾರ್ಡ್, ಸಿವಿಕ್, ಸಿಆರ್-ವಿ, ಬಿಆರ್-ವಿ ಮತ್ತು ಜಾಝ್ ಡೀಸೆಲ್ ಅನ್ನು 2020 ರಲ್ಲಿ ನಿಲ್ಲಿಸಿತು. ಒಟ್ಟಾರೆ ಕಳೆದ ಆರು ವರ್ಷಗಳಲ್ಲಿ ಒಂಬತ್ತು ಕಾರುಗಳನ್ನು ಸ್ಥಗಿತಗೊಳಿಸಿದೆ. ಆಯಾ ವಿಭಾಗಗಳಲ್ಲಿ ಇವು ಬ್ರಾಂಡ್‌ಗೆ ಅಷ್ಟೇನು ಹೆಸರು ತಂದುಕೊಟ್ಟಿಲ್ಲ.

ಎಲ್ಲಾ ವಾಹನ ತಯಾರಕರು ಉತ್ತಮ ಮಾರಾಟ ಗಳಿಸುತ್ತಿದ್ದರೇ ಹೋಂಡಾ ಕಥೆ ಇದಕ್ಕೆ ವಿರುದ್ಧವಾಗಿದೆ. ಕಳೆದ ಎರಡು ದಶಕಗಳಲ್ಲಿ ಹೋಂಡಾ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಯಶಸ್ವಿ ಓಟವನ್ನು ಕಂಡಿದೆ. ಆದರೆ ಈಗ ಎಲ್ಲವೂ ಬದಲಾಗಿವೆ, ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳು ಹೆಚ್ಚಾಗಿರುವುದು ಹಾಗೂ ಹೊಸ ಕಾರುಗಳೊಂದಿಗೆ ಹೋಂಡಾ ಪೈಪೋಟಿ ನೀಡುವಲ್ಲಿ ವಿಫಲವಾಗಿರುವ ಕಾರಣ ಭಾರತೀಯ ಮಾರುಕಟ್ಟೆಯಲ್ಲಿ ಯೋಗ್ಯವಾದ ಸಂಖ್ಯೆಗಳನ್ನು ಮಾರಾಟ ಮಾಡಲು ಬ್ರ್ಯಾಂಡ್ ಹೆಣಗಾಡುತ್ತಿದೆ ಎಂದು ಹೇಳಬಹುದು.

HONDA: ಅಧಿಕೃತವಾಗಿ 3 ಪ್ರಮುಖ ಮಾದರಿಗಳನ್ನು ಸ್ಥಗಿತಗೊಳಿಸಿದ ಹೋಂಡಾ ಇಂಡಿಯಾ

ಸದ್ಯ ಹೋಂಡಾವು ಭಾರತೀಯ ಮಾರುಕಟ್ಟೆಯಿಂದ ಡಬ್ಲ್ಯುಆರ್ ವಿ, ಜಾಝ್ ಮತ್ತು ಸಿಟಿ 4 ನೇ ಜನ್ ಅನ್ನು ಹಿಂಪಡೆದಿದೆ. ಈ ನಷ್ಟವನ್ನು ತುಂಬಲು ಕ್ರೆಟಾ ಮತ್ತು ಸೆಲ್ಟೋಸ್ ಗೆ ಪ್ರತಿಸ್ಪರ್ಧಿಯಾಗಿ ಹೋಂಡಾ ಹೊಸ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಪರಿಚಯಿಸುವ ಬಗ್ಗೆ ಸುದ್ದಿ ಹೊರಬಿದ್ದಿದೆ. ಹೋಂಡಾದ ಹೊಸ ಉತ್ಪನ್ನವು ವಾಸ್ತವವಾಗಿ ಮಾರುಕಟ್ಟೆಗೆ ಬರುವವರೆಗೆ ಹೋಂಡಾ ಕಾರ್ಸ್ ಇಂಡಿಯಾದ ವ್ಯವಹಾರಗಳ ಬಗ್ಗೆ ನಿಜವಾಗಿಯೂ ಏನನ್ನೂ ಹೇಳಲು ಸಾಧ್ಯವಿಲ್ಲ.

ಭಾರತೀಯ ಕಾರು ಮಾರುಕಟ್ಟೆಯಲ್ಲಿ ಸದ್ಯ ದೇಶಿಯ ಬ್ರಾಂಡ್‌ಗಳಿಗೆ ಅತಿಹೆಚ್ಚು ಬೇಡಿಕೆ ಬಂದೊದಗಿದೆ. ಆದರೆ ಹೋಂಡಾ ಮಾತ್ರ ಹಿಂದುಳಿದಿದೆ, ಹಾಗೆಂದು ಹೋಂಡಾವನ್ನು ಕಡಿಮೆ ಅಂದಾಜಿಸಲು ಸಾಧ್ಯವಿಲ್ಲ. ಏಕೆಂದರೆ ಹೋಂಡಾ ಅಂತರಾಷ್ಟ್ರೀಯ ಆಟೋಮೊಬೈಲ್ ದೈತ್ಯ ಆಗಿರುವುದರಿಂದ ಭಾರತೀಯ ಮಾರುಕಟ್ಟೆಗೆ ತನ್ನ ಕಾರ್ಯತಂತ್ರವನ್ನು ಮರುನಿರ್ಮಾಣ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ತನ್ನ ಗತವೈಭವವನ್ನು ಮರಳಿ ಭಾರತದಲ್ಲಿ ಪಡೆಯಲು ಎಲ್ಲಾ ರೀತಿಯಲ್ಲೂ ಯೋಜನೆಗಳನ್ನು ಹೊಂದಿರಬಹುದು. ಹಾಗಾಗಿಯೇ ಹೊಸ ಎಸ್‌ಯುವಿ ಬಿಡುಗಡೆಯು ಸದ್ದು ಮಾಡುತ್ತಿದೆ.

HONDA: ಅಧಿಕೃತವಾಗಿ 3 ಪ್ರಮುಖ ಮಾದರಿಗಳನ್ನು ಸ್ಥಗಿತಗೊಳಿಸಿದ ಹೋಂಡಾ ಇಂಡಿಯಾ

ಭಾರತದಲ್ಲಿ ಮೊದಲಿನಿಂದಲೂ ಹೋಂಡಾ ಕಾರುಗಳಿಗೆ ಪ್ರತ್ಯೇಕ ವಿಭಾಗದ ಅಭಿಮಾನಿಗಳಿದ್ದಾರೆ. ಆದರೆ ಈಗ ತಂತ್ರಜ್ಞಾನ, ಹೊಸ ವಿನ್ಯಾಸ, ಹೊಸ ಫೀಚರ್‌ಗಳು, ಕೈಗೆಟುಕುವ ಬೆಲೆಯೊಂದಿಗೆ ಎಲ್ಲಾ ವಿಭಾಗಗಳಲ್ಲೂ ಇತರ ತಯಾರಕರು ಪೈಪೋಟಿ ನೀಡುತ್ತಿರುವುದರಿಂದ ಹೋಂಡಾ ಅಭಿಮಾನಿಗಳು ಕೂಡ ಇತರ ಬ್ರಾಂಡ್‌ಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಹೋಂಡಾ ಮುಂದಿನ ದಿನಗಳಲ್ಲಿ ಈ ಸ್ಪರ್ಧೆಯನ್ನು ಹೇಗೆ ಪರಿಗಣಿಸಲಿದೆ ಹಾಗೂ ತನ್ನ ಹೊಸ ಮಾದರಿಗಳನ್ನು ಯಾವೆಲ್ಲಾ ವಿಭಾಗಗಳಲ್ಲಿ ಮಾರುಕಟ್ಟೆಗೆ ಇಳಿಸಲಿದೆ ಕಾದುನೋಡಬೇಕು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, April 4, 2023, 15:20 [IST]
English summary
Honda officially discontinued 3 models in india
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+